ಎಷ್ಟು ಹಳೇದು?

ಒಂದು ದಿನ ಚೆನ್ನೈ ಮ್ಯೂಸಿಯಮ್ಮಲ್ಲಿ ಜನ ಆದಿಮಾನವನ ತಲೆಬುರುಡೆಗಳ್ನ ನೋಡ್ತಾ ಇದ್ರಂತೆ.

ಆಗ ಅಲ್ಲಿದ್ದ ಸೆಕ್ಯೂರಿಟಿಯೋನ್ನ ಒಬ್ಬ ಪ್ರವಾಸಿ ‘ಈ ಬುರುಡೆ ಅಂದಾಜು ಎಷ್ಟು ವರ್ಷ ಹಳೇದಿರಬಹುದು? ಏನಾದರೂ ಐಡಿಯಾ ಇದ್ಯಾ?’ ಅಂತ ಕೇಳಿದನಂತೆ.

ಅದಕ್ಕೆ ಸೆಕ್ಯೂರಿಟಿಯೋನು ಥಟ್ಟಂತ ‘8 ಕೋಟಿ ಮೇಲೆ 4 ವರ್ಷ 6 ತಿಂಗಳು' ಅಂದನಂತೆ.

‘ಅಬ್ಬಾ! ಅಷ್ಟು ಸರಿಯಾಗಿ ವರ್ಷ, ತಿಂಗಳು ಎಲ್ಲಾ ಹೇಗೆ ಹೇಳಿದೆ?’

‘ನಾನು ಇಲ್ಲಿ ಕೆಲಸಕ್ಕೆ ಸೇರ್ಕೊಂಡಾಗ ಈ ಬುರುಡೆ 8 ಕೋಟಿ ವರ್ಷ ಹಳೇದಾಗಿತ್ತು. ನಂಗೆ ನಾಕೂವರೆ ವರ್ಷ ಸರ್ವೀಸಾಗಿದೆ’ ಅಂದಾಗ ಜನ ಒಬ್ಬರ ಮುಖ ಒಬ್ಬು ನೋಡ್ತಾ ನಿಂತುಬಿಟ್ಟರಂತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: