ಎರಡನೇ ಅಪೆಂಡಿಕ್ಸ್

ಕೆಂಚ ರಾತ್ರಿ 2 ಗಂಟೆಗೆ ಡಾಕ್ಟರ್ಗೆ ಫೋನ್ ಮಾಡಿ, ‘ಡಾಕ್ಟ್ರೇ ನನ್ನ ಹೆಂಡ್ತೀಗೆ ತುಂಬಾ ಹೊಟ್ಟೆ ನೋವು. ಅವಳ ಅಪೆಂಡಿಕ್ಸ್ ಇರಬೇಕು.’ ಅಂತಾನೆ.

ರಾತ್ರಿ ಎದ್ದೇಳಿಸಿದ ಕೋಪದಲ್ಲಿ ಡಾಕ್ಟರ್: ‘ನಿನ್ನ ತಲೆ! 2 ವರ್ಷದ ಹಿಂದೇನೇ ನಿನ್ನ ಹೆಂಡ್ತಿ ಅಪೆಂಡಿಕ್ಸ್ ತೆಗೆದು ಹಾಕಿದೀನಿ. ಸುಮ್ನೆ ಮಲ್ಕೊ’

5 ನಿಮಿಷದ ನಂತರ ಕೆಂಚ: ‘ಡಾಕ್ಟ್ರೇ, ಗ್ಯಾರಂಟಿ ಅವಳ ಅಪೆಂಡಿಕ್ಸೇ.’

ಡಾಕ್ಟರ್: ‘ಅಯ್ಯೋ ದೇವರೆ! ಯಾರಿಗಾದರೂ 2 ಅಪೆಂಡಿಕ್ಸ್ ಇರೋದು ಕೇಳಿದ್ಯೇನೋ ಮೂರ್ಖ?!’

ಕೆಂಚ: ‘ಇಲ್ಲ, ಆದರೆ ಇಬ್ಬರು ಹೆಂಡ್ತೀರು ಇರೋದು ನೀವು ಕೇಳಿರಬೇಕಲ್ಲ?’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: