ಅಲ್ರೀ ಈ ಹಿತ್ತಲ ಗಿಡ ಮದ್ದಲ್ಲಾ ಅಂತಾರೆ… ಆದ್ರೆ ಯಾಕ್ರೀ ಹಾಗನ್ನೊದು. ಹಿತ್ತಲ ಗಿಡ ಮದ್ದೇನೆ. ಆಲ್ದಿದ್ರೂ ಅಡಿಗೆಮನೇಲಿರೊ , ಅಡುಗೆಗೆ ಬಳ್ಸೋ ವಸ್ತು ಎಲ್ಲಾ ಮದ್ದೇನೆ. ಹೇಗೆ ಅಂತೀರಾ? ಸ್ವಲ್ಪ ಕೆಳ್ಗಡೆ ಓದ್ನೋಡಿ. ಒಳ್ಳೆ ಹೆಲ್ತ್ ಕಾಪಾಡ್ಕೊಳ್ಳೋಕೆ ಏನ್ ಮಾಡ್ಬೇಕು ಅನ್ನೊದನ್ನಾ ಹೇಳ್ತಿದ್ದೀನಿ.. ಅಜ್ಜಿ ಕಾಲದ್ದು ಅನ್ಬೇಡಿ. ನಿಜವಾಗ್ಲೂ ಹೆಲ್ಪ್ ಆಗುತ್ತೆ.

1. ಡೈಯಬಿಟೀಸ್ ಕಡಿಮೆ ಆಗ್ಬೇಕು ಅಂದ್ರೆ.

1-2 ಸ್ಪೂನ್ ಮೆಂತ್ಯ ಬೀಜಗಳನ್ನಾ ನೀರಲ್ಲಿ ರಾತ್ರಿ ನೆನ್ಸಿ ಇಡ್ಬೇಕು. ಬೆಳಿಗ್ಗೆ ಎದ್ದ ಕೂಡ್ಳೇ ಖಾಲಿ ಹೊಟ್ಟೆಲಿ ಈ ನೀರನ್ನಾ ಕುಡಿಬೇಕು. ಡೈಯಬಿಟೀಸ್ ಕಂಟ್ರೋಲ್ನಲ್ಲಿರಕ್ಕೆ ಇದು ರಾಮಬಾಣ.

 

2. ಕೊಲೆಸ್ಟ್ರೋಲ್  ಮಟ್ಟ ಕಡಿಮೆ ಆಗಕ್ಕೆ.

2 ಚಮಚ ಜೇನುತುಪ್ಪ,ಮತ್ತೆ 3 ಚಮಚಾ ದಾಲ್ಚಿನ್ನಿ ಪೌಡರ್ನ್ನಾ, 475ಎಮ್ಎಲ್, ಗ್ರೀನ್ ಟೀ ನಲ್ಲಿ ಮಿಕ್ಸ್ ಮಾಡಿ ಕುಡಿದ್ರೆ, ದೇಹದಲ್ಲಿರೋ ಕೊಲೆಸ್ಟ್ರಾಲ್ ಮಟ್ಟನ್ನಾ,  2 ಗಂಟೆಲಿ 10% ಅಷ್ಟು ಕಡ್ಮೆ ಮಾಡುತ್ತಂತೆ.

 

3. ಆರ್ತ್ರೈಟಿಸ್ ಕಡ್ಮೆ ಆಗಕ್ಕೆ.

ಒಂದು ಕಪ್ ಬಿಸಿ ನೀರಲ್ಲಿ, 1 ಚಮಚಾ ಜೇನುತುಪ್ಪ, ಮತ್ತೆ ಒಂದು ಸಣ್ಣ ಚಮಚಾ ದಾಲ್ಚಿನ್ನಿ ಪೌಡರ್ ಹಾಕಿ ದಿನ ಕುಡಿದ್ರೆ, ಆರ್ತ್ರೈಟಿಸ್, ಹೇಳಹೆಸ್ರಿಲ್ಲದ ಹಾಗೆ ಕಡ್ಮೆ ಆಗುತ್ತೆ.

4. ಕೆಮ್ಮು/ ಶೀತಾ

ಒಂದು ಕಪ್ ಬೆಚ್ಚಗಿನ ನೀರಲ್ಲಿ, 1/4 ಚಮಚಾ ದಾಲ್ಚಿನ್ನಿ ಪೌಡರ್ ಹಾಕಿ 3 ದಿನ ಕುಡಿಬೇಕು. ಎಂಥಾ ಜೋರು ಕೆಮ್ಮು ಶೀತಾ ಇದ್ರೂ ಇದ್ರಿಂದ ಕಡ್ಮೆ ಆಗೇ ಆಗುತ್ತೆ.

 

5. ಹೊಟ್ಟೆ ಕೆಟ್ಟಿದ್ರೆ.

ಒಂದು ಕಪ್ ಬೆಚ್ಚಗಿನ ನೀರಲ್ಲಿ, 1/4 ಚಮಚಾ ದಾಲ್ಚಿನ್ನಿ ಪೌಡರ್ , 1 ಚಮಚ ಜೇನುತುಪ್ಪಾ, ಜೊತೆಗೆ ಒಂದುಸ್ವಲ್ಪಾ ಶುಂಠಿ ಹಾಕಿ ಕುಡಿದ್ರೆ, ಹೊಟ್ಟೆ ನೋವಿನ ಜೊತೆ, ಹೊಟ್ಟೆಲೆನಾದ್ರೂ ಅಲ್ಸರ್ ಇದ್ರೆ ಕೂಡ ಕಡ್ಮೆ ಆಗುತ್ತೆ.

 

6. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಬೇಕು ಅಂದ್ರೆ.

ದಿನಾ ಬೆಳಿಗ್ಗೆ ಎದ್ದ ಕೂಡ್ಲೆ, ಒಂದು ಚಮಚಾ ಜೇನುತುಪ್ಪಕ್ಕೆ, ಸ್ವಲ್ಪಾ ದಾಲ್ಚಿನ್ನಿ ಪೌಡರ್ ಹಾಕಿ, ಗ್ರೀನ್ ಟೀ ಜೊತೆ ಕುಡಿದ್ರೆ ಬೋಡೈಲಿ ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚಾಗುತ್ತೆ ಅಂತಾ.

 

7. ಕಿವಿ ಸರ್ಯಾಗಿ ಕೇಳ್ಸ್‌ತಿಲ್ಲವಾ?

ಜೇನುತುಪ್ಪ ಮತ್ತೆ ದಾಲ್ಚಿನ್ನಿ ಪೌಡರ್ನ್ನಾ ಮಿಕ್ಸ್ ಮಾಡಿ, ದಿನಾ ತಿಂದ್ರೆ ಬೇಡ ಅಂದ್ರೂ ಕಿವಿ ಕೇಳ್ಸುತ್ತೆ ನೋಡಿ.

8. ಪಿಂಪಲ್ಸ್ ರಾಶಿ ರಾಶಿ ಇದೆಯಾ?

3 ಚಮಚಾ ಜೇನುತುಪ್ಪಕ್ಕೆ, 1 ಚಮಚ ದಾಲ್ಚಿನ್ನಿ ಪೌಡರ್ ಹಾಕಿ, ರಾತ್ರಿ ಮಲ್ಗೊ ಮುಂಚೆ ಪಿಂಪಲ್ಸ್ ಮೇಲೆ ಹಚ್ಚಿ ಮಲ್ಕೊಳ್ಳಿ. ಬೆಳಿಗ್ಗೆ ಎದ್ದು ಬಿಸಿನೀರಲ್ಲಿ ಮುಖ ತೋಳೀರಿ. ಇದನ್ನ 2 ವಾರಾ ತಪ್ಪದೆ ಮಾಡಿ. ಬುಡದಿಂದ ಪಿಂಪಲ್ಸ್ ಹೋಗೇ ಹೋಗುತ್ತೆ.

 

9. ಬಾಯಿ ವಾಸ್ನೆ ಹೊಡಿತಿದೆಯಾ ?

ಜೇನುತುಪ್ಪ ಮತ್ತೆ ದಾಲ್ಚಿನ್ನಿ ಪೌಡರ್ ನಾ ಬಿಸಿನೀರಿಗೆ ಹಾಕಿ, ಬಾಯಿ ಮುಕ್ಕಳಿಸಿ. ಕಡ್ಮೆ ಆಗ್ದಿದ್ರೆ ನಮಗೆ ಹೇಳಿ.

10.  ಲೋ ಬ್ಲಡ್ ಪ್ರೆಶರ್ ಇದೆಯಾ?

8 ಬಾದಾಮಿನ್ನಾ, ಒಂದು ಗ್ಲಾಸ್ ನೀರಲ್ಲಿ ನೆನ್ಸಿ, ಮುಚ್ಚಿಡಿ. ಮಾರ್ನೆ ದಿನಾ, ಆದ್ರ ಸಿಪ್ಪೆ ತೆಗ್ದು, ಚೆನ್ನಾಗಿ ಅರೀರಿ. ಇದನ್ನಾ ಹಾಲಲ್ಲಿ ಹಾಕಿ, ಚೆನ್ನಾಗಿ ಕೂಡ್ಸಿ, ಬಿಸಿ ಹಾಲನ್ನ ಕುಡೀರಿ.

 

11. ಸ್ಕಿನ್ ಇನ್ಫೆಕ್ಶನ್ ಆಗ್ತಿದ್ಯಾ?

ಜೇನುತುಪ್ಪ ಮತ್ತೆ ದಾಲ್ಚಿನ್ನಿ ಪೌಡರ್ನ್ನಾ ಮಿಕ್ಸ್ ಮಾಡಿ, ಯಾವ ಏರಿಯಾ ಎಫೆಕ್ಟ್ ಆಗಿದ್ಯೋ ಅಲ್ಲಿ ಹಚ್ಚಿ. ಎಷ್ಟೊಂದು ಸ್ಕಿನ್ ಕಾಯಿಲೆಗಳೆಲ್ಲಾ ಇದ್ರಿಂದ ವಾಸಿ ಆಗುತ್ತೆ ಗೊತ್ತಾ?

 

12. ಅಸಿಡಿಟೀ ಜಾಸ್ತಿ ಆಗಿದ್ಯಾ?

1 ಚಮಚ ಬಡೇಸೊಪ್ಪನ್ನಾ, 1 ಕಪ್ ಬಿಸಿನೀರಿಗೆ ಹಾಕಿ, ಒಂದು ರಾತ್ರಿ ಹಾಗೆ ಮುಚ್ಚಿಡಿ. ಈ ನೀರಿಗೆ, 1 ಚಮಚ ಜೇನುತುಪ್ಪ ಹಾಕಿ, ದಿನಕ್ಕೆ ಮೂರ್ಸಲ ಕುಡೀರಿ.  ಇದ್ರಿಂದ ಅಸಿಡಿಟೀ ಜೊತೆ ಹೊಟ್ಟೆಲಿ ಗ್ಯಾಸ್ ಆದ್ರೂ ಕಡಿಮೆ ಆಗುತ್ತೆ.