https://recipes.timesofindia.com/photo.cms?msid=61007802&width=800&height=800

ಊಟ ತನ್ನಿಚ್ಚೆ. ನೋಟ ಪರರಿಚ್ಚೆ ಅನ್ನೋ ಮಾತು ನಮಗೆಲ್ಲಾ ಗೊತ್ತು. ಆದ್ರೂ ಊಟ ತಿಂಡಿ ಅಂದ್ರೆ ಹೀಗೇ ಇರಬೇಕು ಅನ್ನೋ ಕಲ್ಪನೆ ಎಲ್ಲರಿಗೂ ಇದ್ದೇ ಇರತ್ತೆ. ಕೆಲವೊಂದು ದೇಶಗಳಲ್ಲಿ ತಿನ್ನೋ ಈ ಆಹಾರ ಕೇಳಿದ್ರೆ, ಹೀಗೂ ಉಂಟಾ ಅಂತ ಆಶ್ಚರ್ಯಪಡ್ತೀರಿ. ಯಾಕಂದ್ರೆ ಕೆಲವು ದೇಶದಲ್ಲಿ ಕೀಟಗಳೇ ರುಚಿಯಾದ ಆಹಾರ ಪದಾರ್ಥ. ಜೇಡ, ಚೇಳು, ರೇಷ್ಮೆಹುಳು, ಮೀಲ್ ವರ್ಮ್ ಹೀಗೆ ಸಿಕ್ಕಪಕ್ಕ ಹುಳುನೆಲ್ಲಾ ಹಿಡಿದು, ಆಹಾ ಎಂತ ರುಚಿ ಅಂತ ಆಸ್ವಾದಿಸೋ ಜನರಿದ್ದಾರೆ. ಅಂತ ಕೆಲವು ರೆಸಿಪಿಗಳು ಇಲ್ಲಿದೆ ನೋಡಿ:

1. ಜೇಡರ ಹುಳುನ ಸಕ್ಕರೆ ಜೊತೆ ಹುರಿದು ಮುಕ್ತಾರಂತೆ ಕಾಂಬೋಡಿಯಾ ಜನ!

ಹೌದು ಕಣ್ರೀ…ನಾವಂತೂ ಜೇಡ ಕಂಡ್ರೆ ಪೊರಕೆ ತೊಗೊಂಡು ಚಚ್ಚಿ ಸಾಯಿಸಿ ಬಿಸಾಕ್ತೀವಿ. ಆದ್ರೆ ಕಾಂಬೋಡಿಯಾ ಜನ ಜೊಲ್ಲು ಸುರಿಸ್ಕೊಂಡು ತಿನ್ತಾರೆ. ಸಕ್ಕರೆ, ಉಪ್ಪು, ಬೆಳ್ಳುಳ್ಳಿ ಹಾಕಿ ಹುರಿದು ಕರುಂಕುರುಂ ಅಂತ ತಿನ್ನೋದಲ್ಲದೆ, ಇದು ಆರೋಗ್ಯಕ್ಕೆ ಒಳ್ಳೇದು ಅಂತಾರಪ್ಪ. ಇದರಲ್ಲಿ ಜಿಂಕ್ ಮತ್ತು ಪ್ರೋಟಿನ್ ಅಂಶ ಜಾಸ್ತಿ ಇರತ್ತಂತೆ.

2. ರೇಷ್ಮೆಹುಳುನ ಬೀದಿಬೀದಿಲಿ ಆಹಾರವಾಗಿ ಮಾರ್ತಾರಂತೆ ಕೊರಿಯಾ ಜನ!

ಕೊರಿಯಾದ ಜನರು ಮುಕ್ಕಾಲುವಾಸಿ ಮಧ್ಯಾನದ ಊಟಕ್ಕೆ ಇದನ್ನೇ ಅಂತೆ ತಿನ್ನೋದು. ರೇಷ್ಮೆ ಹುಳು ಸ್ವಲ್ಪ ಕಹಿಯಾಗಿರತ್ತಂತೆ. ಇದಕ್ಕೆ ಮಸಾಲೆ ಸೇರಿಸಿ ಮಾಡಿದ ಪದಾರ್ಥನ ಬೀದಿಬೀದಿಯಲ್ಲಿ ಮಾರ್ತಾರಂತೆ. ನಮ್ಮ ಪಾನಿಪುರಿ, ಮಸಾಲೆಪುರಿ ತರ ಕೊರಿಯಾ ಜನರಿಗೆ ಈ ರೇಷ್ಮೆ ಹುಳು.

3. ಚೇಳನ್ನೂ ಬಿಡದೆ ತಿಂತಾರೆ ಚೈನಾ ಜನ!

https://recipes.timesofindia.com/photo.cms?msid=61007804&width=800&height=800

ಅನ್ನದ ಜೊತೆ ಎಣ್ಣೇಲಿ ಕರಿದ ಚೇಳು ಸೇರಿಸಿ ತಿನ್ನೋಕೆ ಚೀನಾ ಮತ್ತೆ ಥೈಲಾಂಡ್ ಅಲ್ಲಿ ಜನ ನಾ ಮುಂದು ತಾ ಮುಂದು ಅಂತಾರಂತೆ. ಇದನ್ನೂ ಅಷ್ಟೇ ರಸ್ತೆರಸ್ತೇಲಿ ಮಾ
ರ್ತಾರಂತೆ. ಪ್ರೋಟಿನ್ ಮತ್ತು ಕೊಬ್ಬಿನಂಶ ಜಾಸ್ತಿ ಇರತ್ತಂತೆ ಈ ಅಡುಗೇಲಿ.

4. ನಮಗೆ ಅಕ್ಕಿ, ಗೋಧಿ, ತರಕಾರಿ ಇದ್ದಂಗೆ ಮೀಲ್-ವರ್ಮ್ ತಿಂತಾರೆ ನೆದರ್ಲ್ಯಾಂಡ್ ಜನ!

https://recipes.timesofindia.com/photo.cms?msid=61007803&width=800&height=800

ದಿನ ಬೆಳಗಾದ್ರೆ ನೆದರ್ ಲ್ಯಾಂಡಿನ ಜನ ಮೀಲ್ ವರ್ಮ್ ಗಳನ್ನ ತಿಂತಾರಂತೆ. ಇದರಲ್ಲಿ ಕೂಡ ಪ್ರೋಟಿನ್ ಅಂಶ ಹೆಚ್ಚಿರತ್ತಂತೆ. 

ಅಯ್ಯಬ್ಬಾ ಈ ಅಡುಗೆ ಚಿತ್ರಗಳನ್ನ ಕಂಡ್ರೆ ನಾಲ್ಕು ದಿನ ಊಟ ಸೇರಲ್ಲ ಅಂತೀರಾ? ಪ್ರಪಂಚದಲ್ಲಿ ಏನೆಲ್ಲ ವಿಚಿತ್ರ, ವೈವಿಧ್ಯ ಇದೆ ಅನ್ನೋ ಮಾತಿಗೆ ನಾವು ಇಷ್ಟೆಲ್ಲಾ ಹೇಳಿದ್ದು. ಈಗ ಹೇಳಿ ನೀವು ಯಾವತ್ತಾದ್ರೂ ಇಂತ ಅಡುಗೆ ಮಾಡಬೋದು ಅನ್ಕೊಂಡಿದ್ರಾ?