ಕಲಿಕೆಗೆ ಅಡ್ಡಗೋಡೆಯಾಗಿರುವ ಮೌಲ್ಯಮಾಪನ
ಮೂಲ : ಆಲ್ಫೀ ಕೋಹ್ನ್ | ಕನ್ನಡಕ್ಕೆ : ಎಂ. ಜಿ. ಚೇತನ ಮತ್ತು ಎಸ್. ಎನ್. ಗಣನಾಥ

ಗ್ರೇಡ್‌ಗಳ ಬಗ್ಗೆ ಇರುವ ಅನಿಸಿಕೆಗಳನ್ನು ನಾವು ಕೇಳಿದರೆ ಶಿಕ್ಷಕರ ನಂಬಿಕೆಗಳು ಹಾಗೂ ವ್ಯಕ್ತಿತ್ವಗಳ ಬಗ್ಗೆ ಸಾಕಷ್ಟು ತಿಳಿಯಬಹುದು. ಗ್ರೇಡ್‌ಗಳನ್ನು ಸಮರ್ಥಿಸುವವರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ಗ್ರೇಡ್‌ಗಳು ಅವಶ್ಯಕವೆಂದು ಕೆಲವರು ವಾದಿಸುತ್ತಾರೆ. ಬಹಳಷ್ಟು ಮಂದಿ ಶಿಕ್ಷಕರು ವಿದ್ಯಾರ್ಥಿಗಳ ಅಂಕಗಳ ದಾಖಲೆಗಳನ್ನು ಇಡುವುದರಲ್ಲಿ ಖುಷಿಪಡುತ್ತಾರೆ. ಅಂತಹ ಶಿಕ್ಷಕರು ಈ ವಿಷಯವನ್ನು ಪರೀಕ್ಷೆಗಾಗಿ ಕಲಿಯಬೇಕು ಎಂದು ಬೆದರಿಸುವ ಮೂಲಕ ಮಕ್ಕಳ ಗಮನವನ್ನು ಸೆಳೆಯಲು ಇಲ್ಲವೇ ಕೊಟ್ಟ ಲೇಖನಗಳನ್ನೋದಲು ಪ್ರಯತ್ನಿಸುತ್ತಾರೆ. ಕೆಲವರು ಅನಿರೀಕ್ಷಿತ ಕ್ವಿಜ್‌ಗಳನ್ನೇರ್ಪಡಿಸುತ್ತಲೇ ಕೈಯಲ್ಲಿ ಗ್ರೇಡ್‌ಪುಸ್ತಕಗಳನ್ನು ಇಟ್ಟುಕೊಂಡಿರುತ್ತಾರೆ.

ನಿಜವಾಗಿ ಹೇಳುವುದಾದರೆ ನಾವು ಇಂತಹ ಶಿಕ್ಷಕರ ವಿದ್ಯಾರ್ಥಿಗಳ ಬಗ್ಗೆ ಚಿಂತಿಸಬೇಕಾಗಿದೆ. ನನ್ನ ಅನುಭವದಲ್ಲಿ ಅತಿ ಹೆಚ್ಚು ಶಕ್ತ ಶಿಕ್ಷಕರೆಂದರೆ ಗ್ರೇಡ್‌ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸುವವರು. ಅಂತಹವರ ವಿಮುಖತೆಗೆ ಬೆಂಬಲ ನೀಡುವ ವೈಜ್ಞಾನಿಕ ಪುರಾವೆ ಈಗ ದೊರೆತಿದೆ. ಹಾಗೂ ಇದು ಸಾಂಪ್ರದಾಯಿಕವಾಗಿ ನೀಡಲಾಗುತ್ತಿರುವ ಗ್ರೇಡ್‌ಗಳನ್ನೇ ಪ್ರಶ್ನಿಸಲು ಆರಂಭಿಸಿದೆ.
ಗ್ರೆಡ್‌ಗಳ ಮೂರು ಪರಿಣಾಮಗಳು
ಅಕ್ಷರ ಅಥವಾ ಸಂಖ್ಯೆಯ ಗ್ರೇಡ್‌ಗಳನ್ನು ಸತತವಾಗಿ ನೀಡುವುದರಿಂದ ಆಗುವ ಮೂರು ಪರಿಣಾಮಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

೧. ಗ್ರೇಡ್‌ಗಳು ಮಕ್ಕಳ ಕಲಿಯುವ ಆಸಕ್ತಿಯನ್ನೇ ಕುಂದಿಸುತ್ತವೆ.

ಪ್ರೇರಣಾ ಮನೋವಿಜ್ಞಾನದಲ್ಲಿ ಅತಿ ಮುಖ್ಯ ಸಂಶೋಧನಾ ಫಲಿತಾಂಶವೆಂದರೆ ಏನನ್ನಾzರೂ ಮಾಡಲು ಜನರಿಗೆ ಪುರಸ್ಕಾರ ಕೊಡುವುದನ್ನು ಹೆಚ್ಚು ಮಾಡಿದರೆ ಆ ಕಾರ್ಯದಲ್ಲಿ ಜನರು ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಮಕ್ಕಳಿಗೆ ಇಂಥ ಪರೀಕ್ಷೆಯ ಸಲುವಾಗಿ ಈ ವಿಷಯಗಳನ್ನು ತಿಳಿಯಬೇಕು ಎಂದು- ಬೇರೆ ರೀತಿಯಲ್ಲಿ ಹೇಳುವುದಾದರೆ ತಾವೇನನ್ನು ಮಾಡುತ್ತಿದ್ದಾರೋ ಅದನ್ನು ಗ್ರೇಡ್‌ಗೆ ಪರಿಗಣಿಸಲಾಗುತ್ತದೆ ಎಚಿದು ಹೇಳಿದರೆ ಆಗ ತಾವು ಮಾಡುತ್ತಿರುವ ಕೆಲಸ (ಅಥವಾ ಪುಸ್ತಕ ಅಥವ ವಿಚಾರ) ಒಂದು ಬೇಸರದ ಚಾಕರಿ ಎನಿಸಿಬಿಡುತ್ತದೆ.

ನಿಜ, ಕೊಟ್ಟ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಮತ್ತು ಆ ವಿಷಯದಲ್ಲಿ ಆಸಕ್ತಿಯನ್ನು ಉಳಿಸಿಕೊಳ್ಳುವುದು ಈ ಎರಡನ್ನೂ sಸಾಧಿಸುವುದು ಅಸಾಧ್ಯವಲ್ಲ. ಆದರೆ ಇವೆರಡೂ ಸಾಧಾರಣವಾಗಿ ನಮ್ಮನ್ನು ಬೇರೆ ಬೇರೆ ದಿಕ್ಕಿನಲ್ಲಿ ಎಳೆಯುತ್ತಿರುತ್ತವೆ. ಕೆಲವು ಶೈಕ್ಷಣಿಕ ಸಂಶೋಧನೆಗಳಂತೂ ಗ್ರೇಡ್ ಪಡೆಯುವುದು ಮತ್ತು ಕಲಿಕೆಗಳಿಗೆ ವಿಲೋಮ ಸಂಬಂಧಗಳಿವೆ ಎಂದು ಸಾಬೀತುಗೊಳಿಸಿವೆ. ಇದರ ಜೊತೆಗೆ ಸಾಕಷ್ಟು ಸಂಶೋಧನೆಗಳು – ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾನಿಲಯದವರೆಗೆ, ಭಿನ್ನ ಸಂಸ್ಕೃತಿಗಳಲ್ಲಿ ಗ್ರೇಡ್‌ಗಳ ಕಾರಣದಿಂದಲೇ ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಕಡಿಮೆಯಾದುದನ್ನು ಹೇಳುತ್ತವೆ. ಹಾಗಾಗಿ ಅಕ್ಷರ ಹಾಗೂ ಸಂಖ್ಯೆಗಳ ಗ್ರೇಡ್‌ಗಳ ಬಗ್ಗೆ ವಿದ್ಯಾರ್ಥಿಗಳ ಗಮನವನ್ನು ತರಬಯಸುವವರು ಅವರ ಕಲಿಕಾ ಸಾಧನೆಗಳನ್ನು ಬೇರೆ ರೀತಿಯಲ್ಲಿ ಮಾqಬೇಕೆಂದು ನಿರ್ಧರಿಸಲು ಮುಖ್ಯ ಕಾರಣಗಳಿವೆ.

೨. ಸವಾಲೊಡ್ಡುವ ಕಾರ್ಯಗಳಿಗೆ ಮಕ್ಕಳಿಗಿರುವ ಆದ್ಯತೆಯನ್ನು ಗ್ರೇಡ್‌ಗಳು ಕಡಿಮೆ ಮಾಡುತ್ತವೆ

ಉತ್ತಮ ಗ್ರೇಡ್ ಪಡೆಯಲು ಉತ್ಸುಕರಾಗಿರುವ ಮಕ್ಕಳು – ಎಲ್ಲ ವಯಸ್ಸಿನವರೂ – ಸಾಧ್ಯವಾದ ಮಟ್ಟಿಗೂ ಅತಿ ಸರಳವಾದ ಕೆಲಸಗಳನ್ನು ಮಾತ್ರ ಕೈಗೆತ್ತಿಕೊಳ್ಳುತ್ತಾರೆ. ಉತ್ತಮ ಗ್ರೇಡ್ ಪಡೆಯಲು ಹೆಚ್ಚು ಒತ್ತಡವಿರುವಾಗ ಮಕ್ಕಳು ಹೆಚ್ಚು ಸವಾಲುಗಳಿರುವ ಕೆಲಸಗಳನ್ನು ಆಯ್ಕೆ ಮಾಡುವುದಿಲ್ಲ. ಆದ್ದರಿಂದ ಅಡ್ಡಹಾದಿ ಹಿಡಿಯುವ ಮಕ್ಕಳು ಸೋಮಾರಿಗಳಲ್ಲ. ಬದಲಾಗಿ ಅವರು ತಾರ್ಕಿಕವಾಗಿ ಯೋಚಿಸುತ್ತಾರೆ. ಬೌದ್ಧಿಕ ಅನ್ವೇಷಣೆಯ ಬದಲಾಗಿ ಉತ್ತಮ ಗ್ರೇಡ್‌ಗಳನ್ನು ಪಡೆಯಬೇಕಾದ ವಾತಾವರಣಕ್ಕೆ ಅವರು ಹೊಂದಿಕೊಳ್ಳುತ್ತಿದ್ದಾರೆಂದು ಇದರ ಅರ್ಥ. ಅವರು ಹೀಗೆ ಹೇಳುತ್ತಿರುವರೆಂದು ಭಾವಿಸಬಹುದು. ಇಲ್ಲಿ ಉತ್ತಮ ಅಂಕ ಗಳಿಸುವುದು ನನ್ನ ಲಕ್ಷ್ಯವಿರಬೇಕೆಂದು ನೀವು ಹೇಳಿದಿರಲ್ಲವೇ? ಸರಿ. ನನಗೂ ತಲೆಯಿದೆ. ಸುಲಭವಾದ ಕೆಲಸಗಳನ್ನು ಮಾಡಿದರೆ ನಿಮಗೆ ಬೇಕಾದುದ್ದನ್ನು ನಾನು ನೀಡಬಲ್ಲೆ. ಹಾಗಾಗಿ ತುಂಬ ಸುಲಭವಾದ ಯೋಜನೆಗಳನ್ನು ಮಾತ್ರ ತೆಗೆದುಕೊಂಡು ಮುಗಿಸಿ ಅದರಿಂದ ಏನನ್ನೂ ಕಲಿಯಲಿಲ್ಲವೆಂದರೆ ನೀವು ನನ್ನನ್ನು ದೂಷಿಸಬೇಡಿ.

೩. ಗ್ರೇಡ್‌ಗಳು ಮಕ್ಕಳ ಆಲೋಚನೆಗಳ ಮಟ್ಟವನ್ನೇ ಕಡಿಮೆ ಮಾಡುತ್ತವೆ.

ಹೌದು, ಗ್ರೇಡ್‌ಗಳ ಕಾರಣದಿಂದಾಗಿ ತಾವು ಮಾಡುತ್ತಿರುವ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವುದು ನಿಜವಾದರೆ ಅವರು ಆ ಕೆಲಸಗಳಲ್ಲಿ ಆಳವಾಗಿ ಆಲೋಚಿಸುವುದನ್ನು ಮಾಡಲಾರರು. ಒಂದು ಸಂಶೋಧನೆ ಸರಣಿಯ ಫಲಿತಾಂಶದ ಪ್ರಕಾರ ಒಂದೇ ಕೆಲಸವನ್ನು ಮಾಡಿದ ಎರಡು ಗುಂಪುಗಳ ಮಕ್ಕಳಲ್ಲಿ ಗ್ರೇಡ್‌ಗಳನ್ನು ಗಳಿಸಿದ ಮಕ್ಕಳ ಸೃಜನಶೀಲತೆಯು ಗ್ರೇಡ್ ಬದಲಾಗಿ ಗುಣಮಟ್ಟದ ಹಿಮ್ಮಾಹಿತಿಯನ್ನು ಮಾತ್ರ ಪಡೆದ ಮಕ್ಕಳ ಸೃಜನಶೀಲತೆಗಿಂತ ಕಡಿಮೆಯಿತ್ತು. ಸೃಜನಶೀಲತೆಯ ಅಗತ್ಯ ಹೆಚ್ಚುತ್ತಾ ಹೋದಂತೆ ಅಂತಹ ಕೆಲಸಗಳಲ್ಲಿ ಗ್ರೇಡ್ ಪಡೆಯುವ ಗುಂಪಿನ ಸಾಧನೆಯು ಪಡೆಯದ ಗುಂಪಿನ ಸಾಧನೆಗಿಂತ ಕಳಪೆಯಾಗುತ್ತಲೇ ಹೋಯಿತು. ಗ್ರೇಡ್‌ಗಳನ್ನು ಕೊಟ್ಟು ಅವುಗಳ ಜೊತೆಗೆ ಕೆಲವು ಹಿಮ್ಮಾಹಿತಿಗಳನ್ನು ಕೊಟ್ಟಾಗಲೂ ಸನ್ನಿವೇಶ ಬದಲಾಗಲಿಲ್ಲ. ಅಂಕಗಳನ್ನು ನೀಡದೆ ಬರೀ ಹಿಮ್ಮಾಹಿತಿಯನ್ನು ನೀಡಿದಾಗ ಮಾತ್ರ ಉತ್ಕೃಷ್ಟ ಸಾಧನೆ ಸಾಧ್ಯವಾಯಿತು.
ಇನ್ನೊಂದು ಪ್ರಯೋಗದಲ್ಲಿ ಸಮಾಜ ವಿಜ್ಞಾನದ ಪಾಠವೊಂದನ್ನು ಎರಡು ಗುಂಪುಗಳಿಗೆ ಕಲಿಸಿದರು. ನಿಮಗೆ ಗ್ರೇಡ್‌ಗಳನ್ನು ಕೊಡುತ್ತೇವೆ ಎಂದು ಮೊದಲ ಗುಂಪಿಗೆ ತಿಳಿಸಿದರು. ಕೊಡುವುದಿಲ್ಲ ಎಂದು ಎರಡನೇ ಗುಂಪಿಗೆ ತಿಳಿಸಿದರು. ಈ ಎರಡು ಗುಂಪುಗಳಲ್ಲಿ ಮೊದಲನೆಯ ಗುಂಪು ಆ ಪಾಠದ ಮೂಲ ಆಶಯವನ್ನು ಅರ್ಥಮಾಡಿಕೊಳ್ಳುವಲ್ಲಿ ಕಷ್ಟಪಟ್ಟಿತು. ನೆನಪಿನ ಶಕ್ತಿಯ ವಿಚಾರಕ್ಕೆ ಬಂದಾಗಲೂ ಒಂದು ವಾರದ ನಂತರ ಮೊದಲ ಗುಂಪು ಎರಡನೆಯದಕ್ಕಿಂತ ಕಡಿಮೆ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡಿತ್ತು. ಇತ್ತೀಚಿನ ಸಂಶೋಧನೆಯೊಂದು ಹೇಳುವಂತೆ ಪ್ರಸಕ್ತ ವಿದ್ಯಾಮಾನದ ಬಗ್ಗೆ ಕಲಿತ ಎರಡು ಗುಂಪುಗಳಲ್ಲಿ ಗ್ರೇಡ್ ಪಡೆಯುವ ಗುಂಪು ಗ್ರೇಡ್‌ಗಳನ್ನು ಪಡೆಯದ ಗುಂಪಿಗಿಂತ ಕಡಿಮೆ ಮಾಹಿತಿ ಹಾಗೂ ತಿಳುವಳಿಕೆಯನ್ನು ಹೊಂದಿತ್ತು (ಉಳಿದೆಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರವೂ) .
ಗ್ರೇಡ್‌ಗಳನ್ನು ನಿರಾಕರಿಸಲು ಇರುವ ಇನ್ನಷ್ಟು ಕಾರಣಗಳು :
ಆತ್ಮಸಾಕ್ಷಿಯಿರುವ ಯಾವುದೇ ಶಿಕ್ಷಕ ಶಾಲಾ ಮಕ್ಕಳಿಗೆ ಗ್ರೇಡ್‌ಳನ್ನು ನೀಡುವುದರ ಬಗ್ಗೆ ಮರುಚಿಂತನೆ ನಡೆಸಲು ಮೇಲೆ ಹೇಳಿದ ಮೂರು ಕಾರಣಗಳೇ ಸಾಕು. ಆದರೆ ದೂರದರ್ಶನದ ಜಾಹೀರಾತುಗಳಲ್ಲಿ ಹೇಳುವಂತೆ ಇನ್ನೂ ಇದೆ.

೪. ಗ್ರೇಡ್‌ಗಳು ಸಿಂಧುವಲ್ಲ, ವಿಶ್ವಾಸಾರ್ಹವಲ್ಲ ಹಾಗೂ ವಸ್ತುನಿಷ್ಠವಲ್ಲ.

ಇಂಗ್ಲೀಷ್ ಭಾಷೆಯ ಪರೀಕ್ಷೆಯಲ್ಲಿ ಃ ಗ್ರೆಡ್ ಬಂದಿದ್ದರೆ ಅದು ಆ ಹುಡುಗಿ(ಗ) ಏನನ್ನು ಮಾಡುವ ಸಾಮರ್ಥ್ಯವಿದೆ, ಅವಳಿಗೆ ಏನು ಅರ್ಥವಾಗುತ್ತದೆ, ಅವಳಿಗೆ ಎಲ್ಲಿ ಸಹಾಯ ಬೇಕು ಎಂದು ತಿಳಿಯುವುದಿಲ್ಲ. ಅಲ್ಲದೆ ಈ ಗ್ರೇಡ್‌ನ ಆಧಾರವೇ ವ್ಯಕ್ತಿನಿಷ್ಠವಾಗಿದ್ದು ಫಲಿತಾಂಶದಿಂದ ನಮಗೆ ಉಪಯುಕ್ತ ಮಾಹಿತಿಯೇನೂ ದೊರೆಯುವುದಿಲ್ಲ. ಒಬ್ಬ ಶಿಕ್ಷಕ ಅನೇಕ ಪರೀಕ್ಷೆಗಳನ್ನು ನಡೆಸಿ ಪ್ರತಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕೂಲಂಕುಶವಾಗಿ ದಾಖಲು ಮಾಡಿ ಅವುಗಳ ಸರಾಸರಿಯನ್ನು ದಶಮಾಂಶ ಬಿಂದುವಿನವರೆಗೂ ಲೆಕ್ಕಹಾಕಿ ತಯಾರಿಸಿದರೂ ಸಹ ಅಂಕಗಳನ್ನು ನೀಡುವ ಪದ್ಧತಿಯ ನಿರಂಕುಶತೆಯನ್ನು ಬದಲಾಯಿಸುವುದಿಲ್ಲ. ಗಣಿತದ ಅಂಕಗಳೂ ಕೂಡ ಆ ಪರೀಕ್ಷೆಯಲ್ಲಿ ನೀಡಿದ ಉತ್ತರಗಳ ಪ್ರತಿಫಲನವಷ್ಟೇ. ಆಗ ಶಿಕ್ಷಕರು ಯಾವುದನ್ನು ಮೌಲ್ಯಮಾಪನ ಮಾಡಲು ನಿರ್ಧರಿಸಿದರು, ಯಾವ ಪ್ರಶ್ನೆಗಳು ಪ್ರಶ್ನೆಪತ್ರಿಕೆಯಿಂದ ಹೊರಗುಳಿದವು, ಪ್ರತಿ ವಿಭಾಗಕ್ಕೆ ಎಷ್ಟು ಮಹತ್ವ ನೀಡಲಾಯಿತು ಇತ್ಯಾದಿ.
ನಮಗೆಲ್ಲಾ ತಿಳಿದಿರುವುದನ್ನು ಖಾತರಿಪಡಿಸಲು ಸಂಶೋಧನೆಗಳು ಕೂಡ ಲಭ್ಯವಿವೆ, ಅದೇನೆಂದರೆ – ಒಂದೇ ಅರ್ಹತೆಯಿರುವ ಇಬ್ಬರು ಶಿಕ್ಷಕರು ಒಂದೇ ಕೆಲಸಕ್ಕೆ (ಂssigಟಿmeಟಿಣ) ಎರಡು ಬೇರೆ ಬೇರೆ ಗ್ರೇಡ್ ಕೊಡುವ ಸಾಧ್ಯತೆ ಇರುತ್ತದೆ. ಮೇಲಾಗಿ ಒಬ್ಬ ಶಿಕ್ಷಕ ಎರಡು ಬೇರೆ ಸಮಯಗಳಲ್ಲಿ ಅದನ್ನು ಓದಿದಾಗ ಎರಡು ಬೇರೆ ಬೇರೆ ಗ್ರೇಡ್ ನೀಡಲೂ ಸಾಧ್ಯವಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಗ್ರೇಡ್ ಪದ್ಧತಿಯಿಂದ ದೊರೆಯುವುದು ಅನುಮಾನಾಸ್ಪದ ನಿಖರತೆ. ವಸ್ತುನಿಷ್ಠ ಮೌಲ್ಯಮಾಪನದ ವೇಷದಲ್ಲಿರುವ, ವ್ಯಕ್ತಿನಿಷ್ಠ ಮೌಲ್ಯಮಾಪನ.

೫. ಗ್ರೇಡ್ ಪಠ್ಯಕ್ರಮ ವನ್ನು ವಿರೂಪಗೊಳಿಸುತ್ತದೆ.

ಶಾಲೆಗಳು ಸಂಖ್ಯೆ ಅಥವಾ ಅಕ್ಷರಗಳ ಗ್ರೇಡ್ ಬಳಸುವುದು, ಬೋಧನೆಗೆ ವಾಸ್ತವಗಳ ಗುಚ್ಚ ಎಂದು ಹೇಳಬಹುದಾದ ಮಾರ್ಗವನ್ನು ಪ್ರೋತ್ಸಾಹಿಸುವುದು, ಏಕೆಂದರೆ ಆ ರೀತಿಯ ಕಲಿಕೆಯಲ್ಲಿ ಅಂಕಗಳಿಸುವುದು ಸುಲಭ. ಹಾಗಾಗಿ ಈ ಮಾಪನ ವಿಧಾನವೆಂಬ ಬಾಲವುವು ಶಿಕ್ಷಣವೆಂಬ ನಾಯಿನ್ನು ಅಲ್ಲಾಡಿಸುತ್ತದೆ.
೬. ಕಲಿಕೆಗೆ ಬಳಸಬಹುದಾದ ಬಹುಪಾಲು ಸಮಯವನ್ನು ಗ್ರೇಡ್ ವ್ಯರ್ಥಮಾಡುತ್ತದೆ.
ವಿದ್ಯಾರ್ಥಿಗಳ ಗ್ರೇಡ್ ಪುಸ್ತಕಗಳ ಮುಂದೆ ತಲೆಕೆಡಿಸಿಕೊಂಡು ಶಿಕ್ಷಕರು ಕಳೆಯುವ ಸಮಯ, ಗ್ರೇಡ್ ಬಗ್ಗೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ನಡೆಸುವ ಸಂಭಾಷಣೆಯ (ಅಹಿತಕರ) ಸಮಯಗಳನ್ನೆಲ್ಲಾ ಲೆಕ್ಕಹಾಕಿ ನೋಡಿದಾಗ ವ್ಯರ್ಥಸಮಯದ ಅರಿವಾಗುತ್ತದೆ. ವಿದ್ಯಾರ್ಥಿಗಳ ಗೋಳನ್ನು ಎದುರಿಸುವುದು ಮತ್ತು ಅವರನ್ನು ಒಲಿಸುವುದನ್ನು ನೆನೆಸಿಕೊಂಡರೆ ತಲೆ ತಿರುಗುವ ಹಾಗೆ ಭಾಸವಾಗುತ್ತದೆ, ಅಂದರೆ ನಿಜವಾದ ತೊಂದರೆ ಇರುವುದು ಗ್ರೇಡ್ ನೀಡುವ ಪರಿಕಲ್ಪನೆಯಲ್ಲೇ.

೭. ಗ್ರೇಡ್ ಪದ್ಧತಿಯು ಮೋಸಮಾಡುವುದನ್ನು ಪ್ರೋತ್ಸಾಹಿಸುತ್ತದೆ.

ಇಲ್ಲಿ ನಾವು ಮೋಸ ಮಾಡುವಂಥ ವಿದ್ಯಾರ್ಥಿಗಳನ್ನು ನಿಂದಿಸಬಹುದು ಮತ್ತು ಶಿಕ್ಷಿಸಬಹುದು ಅಥವಾ ಇಂತಹ ನಡವಳಿಕೆಗಳಿಗೆ ಕಾರಣವಾಗಿರುವಂತಹ ಮೂಲ ಕಾರಣಗಳಿಗಾಗಿ ಹುಡುಕಬಹುದು. ಸಂಶೋಧಕರು ಗಮನಿಸಿದಂತೆ, ವಿದ್ಯಾರ್ಥಿಗಳು ಉತ್ತಮ ಗ್ರೇಡ್ ಪಡೆಯುವೆಡೆಗೆ ತಮ್ಮ ಗಮನ ಕೇಂದ್ರೀಕರಿಸುತ್ತಾ ಹೋದಂತೆ ಅವರು ಮೋಸ ಮಾಡುವ ಸಾಧ್ಯ್ಯತೆ ಹೆಚ್ಚಾಗಿರುತ್ತದೆ, ಅದೂ ಮೋಸ ಮಾಡುವುದು ತಪ್ಪು ಎಂಬ ತಿಳುವಳಿಕೆ ಅವರಿಗೆ ಇದ್ದರೂ ಸಹ.

೮. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಗ್ರೇಡ್‌ಗಳು ಹದಗೆಡಿಸುತ್ತದೆ.

ಶಿಕ್ಷಕರೊಬ್ಬರು ವ್ಯಕ್ತಪಡಿಸಿರುವಂತೆ ಈ ಹೇಳಿಕೆಗಳನ್ನು ನೋಡಿ. ನಾನು ಮಾಡುವ ಪ್ರತಿಯೊಂದೂ ಈ ಗ್ರೇಡ್‌ನ ಸುತ್ತ ಸುತ್ತುವಂತಹ ತರಗತಿಗಳನ್ನು ನಡೆಸಿ ನನಗೆ ಸಾಕಾಗಿಹೋಗಿದೆ. ವಿದ್ಯಾರ್ಥಿಗಳು ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದಾಗ, ಅವರು ತಮ್ಮ ಗ್ರೇಡ್ ಉತ್ತಮಪಡಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆಯೇ? ಎಂದು ಸಂದೇಹಾತ್ಮಕವಾಗಿ ನೋಡುವಂತೆ ಮಾಡುವ ಪರಿಸ್ಥಿತಿ ಬೇಜಾರು ತರಿಸಿದೆ. ಮೌಲ್ಯಮಾಪನವನ್ನು ಹೆಚ್ಚು ಫಲಪ್ರದ ಮತ್ತು ಖುಷಿಯಿಂದ ಮಾಡಲು ಬಹುಷಃ ಡಜ಼ನ್‌ಗೂ ಹೆಚ್ಚು ಮಾರ್ಗಗಳಿರುವಾಗ ಅಷ್ಟೊಂದು ಸಮಯ ಮತ್ತು ಶಕ್ತಿಯನ್ನು ಪೇಪರ್‌ಗಳನ್ನು ಗ್ರೇಡ್ ಮಾಡುವುದರಲ್ಲಿ ವ್ಯರ್ಥವೆನಿಸಿ ನನಗೆ ಬೇಜಾರಾಗುತ್ತಿದೆ. ಇದು ಅಗತ್ಯವೇ? ಎಂದು ನೀವು ಹೇಳುವುದನ್ನು ಕೇಳಿ ಕೇಳಿ ಸಾಕಾಗಿದೆ. ಇನ್ನು, ಮಾರ್ಕ್ಸ್ ಬಗೆಗಿನ ಸಣ್ಣಪುಟ್ಟ ವಾದವಿವಾದಗಳು, ಅಸಮ್ಮತಿಗಳು ಕಲಿಸುವ ಮತ್ತು ಕಲಿಯುವುದರಲ್ಲಿರುವ ಆನಂದವನ್ನು ಕಿತ್ತುಕೊಳ್ಳುವುದನ್ನು ಕಂಡು ನನಗೆಷ್ಟು ಅಸಮಾಧಾನವಿದೆಯೆಂದು ಆ ದೇವರಿಗೇ ಗೊತ್ತು.

೯. ಗ್ರೇಡ್‌ನ ಹೆಚ್ಚು ವಿನಾಶಕಾರಕ ಅಂಶವೆಂದರೆ, ಅದನ್ನು ಒಂದು ಸೀಮಿತ ಪರಿಧಿಯೊಳಗೆ ನೀಡುವುದು ಆ ಮೂಲಕ ಅಗ್ರ ಗ್ರೇಡ್‌ಗಳನ್ನು ಸಂಖ್ಯೆಯನ್ನು ಕೃತಕವಾಗಿ ಸೀಮಿತಗೊಳಿಸುವುದು;

ವಿದ್ಯಾರ್ಥಿಗಳು ಎಷ್ಟೇ ಚೆನ್ನಾಗಿ ಬರೆದಿದ್ದರೂ ಅಲ್ಲರೂ ಂ ಪಡೆಯುವುದು ಸಾಧ್ಯವಾಗದು. ಈ ರೀತಿಯ ಆಂತರಿಕ ಬೇಧಭಾವದ ಜೊತೆಗೆ, ಅದು ಉಂಟು ಮಾಡಬಲ್ಲ ಮತ್ತೊಂದು ಪರಿಣಾಮವೆಂದರೆ, ವಿದ್ಯಾರ್ಥಿಗಳಿಗೆ ಒಬ್ಬರಿಗೊಬ್ಬರು ತಮ್ಮ ಗೆಲುವಿಗೆ ಸಂಭವನೀಯ ಅಡೆತಡೆಗಳು ಎಂಬುದನ್ನು ಕಲಿಸುತ್ತದೆ. ಇಂತಹ ಪರಿಸರದಲ್ಲಿ, ಎಲ್ಲಾ ವಿದ್ಯಾರ್ಥಿಗಳು ಸಹಭಾಗಿತ್ವದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಲಿಯುವುದು ಅಸಾಧ್ಯ.

ಬೇಸರದ ಸಂಗತಿಯೆಂದರೆ, ಸೀಮಿತ ಪರಿಧಿಯೊಳಗೆ ಗ್ರೇಡ್ ನೀಡದ ಶಿಕ್ಷಕರೂ ಕೂಡ, ಬಹುಷಃ ಅಪ್ರಜ್ಞಾಪೂರ್ವಕವಾಗಿ ಗ್ರೇಡ್‌ಗಳು ಕರ್ತವ್ಯಬದ್ಧವಾಗಿ ಹೆಚ್ಚು ಕಡಿಮೆ ಹೀಗೆಯೇ ಇರಬೇಕೆಂದು ಊಹಿಸಿಕೊಂಡಿರುತ್ತಾರೆ : ಕೆಲವು ಅತ್ಯುತ್ತಮ ಗ್ರೇಡ್‌ಗಳು, ಕೆಲವು ಕೆಟ್ಟ ಗ್ರೇಡ್‌ಗಳು, ಉಳಿದೆಲ್ಲಾ ಬಹುಪಾಲು ಗ್ರೇಡ್‌ಗಳು ಇವೆರೆಡರ ಮಧ್ಯ ಎಲ್ಲಿಯಾದರೂ ಇರತಕ್ಕದ್ದು ಎಂದು. ಆದರೆ, ಸಂಶೋಧಕರ ತಂಡವೊಂದು ತೋರಿಸಿರುವಂತೆ ಗ್ರೇಡ್‌ಗಳ ಈ ಸಾಮಾನ್ಯ ವಿತರಣೆಯು ನಡುಕ ಹುಟ್ಟಿಸುವಂತಹದ. ಬದಲಿಗೆ, ಕಲಿಸುವುದಕ್ಕಾದ ಸೋಲು, ಪರೀಕ್ಷಿಸುವುದಕ್ಕಾದ ಸೊಲು, ಮತ್ತು ವಿದ್ಯಾರ್ಥಿಗಳ ಬೌದ್ಧಿಕತೆಯನ್ನು ಯಾವುದೇ ರೀತಿಯಲ್ಲಿ ಪ್ರಚೋದಿಸುವುದಕ್ಕೆ ಉಂಟಾದ ಸೋಲು.

ಶಾಲೆಯನ್ನು ಗೆಲುವಿನ ಅನ್ವೇಷಣೆಯನ್ನಾಗಿಸಿ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧಗಳನ್ನು ಛಿದ್ರಗೊಳಿಸುವ ಈ ಸ್ಪರ್ಧೆ ಕೇವಲ ತರಗತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಗ್ರೇಡ್ ಜೊತೆಗೆ ಶ್ರೇಣಿ (ಖಚಿಟಿಞ) ನೀಡಿದಾಗ ಈ ಪರಿಣಾಮ ಅಂತರ್‌ಶಾಲಾ ಮಟ್ಟದಲ್ಲೂ ಕಂಡುಬಂದಿರುವುದನ್ನು ಪ್ರಮಾಣೀಕರಿಸಲಾಗಿದೆ. ಇದು ಯಾವ ರೀತಿಯ ಸಂದೇಶ ರವಾನಿಸುತ್ತದೆ ಎಂದರೆ – ಕಲಿಯುವುದಾಗಲಿ, ಕಲಿಕೆಯನ್ನು ಉತ್ತಮವಾಗಿ ನಿರ್ವಹಿಸುವುದಾಗಲಿ ಮುಖ್ಯವಲ. ಬದಲಿಗೆ, ಬೇರೆಯವರನ್ನು ಸೋಲಿಸುವುದು ಮುಖ್ಯ. ಕೆಲವು ವಿಧ್ಯಾರ್ಥಿಗಳು ಉತ್ತಮ ಶ್ರೇಣಿ ಗಳಿಸುವೆಡೆಗೆ ಪ್ರೇರೇಪಿತರಾಗಬಹುದು, ಆದರೆ ಇದು ಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುವುದಕ್ಕೆ ಸಂಪೂರ್ಣ ವಿರುದ್ಧ್ದವಾಗಿರುತ್ತದೆ. ವಿವೇಕವುಳ್ಳ ಶಿಕ್ಷಕರು ಗ್ರಹಿಸುವುದೇನೆಂದರೆ, ವಿದ್ಯಾರ್ಥಿಗಳು ಎಷ್ಟರಮಟ್ಟಿಗೆ ಪ್ರೇರೇಪಿತರಾಗಿದ್ದಾರೆ ಎನ್ನುವುದಕ್ಕಿಂತ ಹೇಗೆ ಪ್ರೇರೇಪಿತರಾದರು ಎನ್ನುವುದು ಮುಖ್ಯ. ಪ್ರೇರೇಪಿಸುವ ಬಗೆ ಪ್ರಮುಖವೇ ಹೊರತು ಅದರ ಪರಿಣಾಮವಲ್ಲ.

ಗ್ರೇಡ್ ಹೆಚ್ಚಳ ಮತ್ತು ಚಿತ್ತಭಂಶ ಗಳು :
ನಮ್ಮಲ್ಲಿ ಹೆಚ್ಚಿನ ಮಂದಿಗೆ ಗ್ರೇಡ್ ಈ ತಲ್ಲಣಗೊಳಿಸುವಂತಹ ಪರಿಣಾಮಗಳ ಪರಿಚಯವಿದ್ದರೂ ವಿದ್ಯಾರ್ಥಿಗಳನ್ನು ಕೇವಲ ಸಂಖ್ಯೆ ಮತ್ತು ಅಕ್ಷರಗಳಿಗೆ ಕುಗ್ಗಿಸುವುದನ್ನು ನಾವು ನಿರಂತರವಾಗಿ ಮುಂದುವರೆಸಿದ್ದೇವೆ. ಸುಖಾಸುಮ್ಮನೆ ಇದನ್ನು ಒಪ್ಪಿಕೊಂಡು ಅದರ ಪರಿಣಾಮಗಳಿಗೆ ಬಹುಶಃ ಒಗ್ಗಿಕೊಂಡುಬಿಟ್ಟಿದ್ದೇವೆ. ಇದು ಯಾವಾಗಲೂ ಹೀಗೆಯೇ ನಡೆದುಬಂದಿದೆ. ಮತ್ತು ಹೀಗೆಯೇ ಇರಬೇಕು ಎಂದು ಊಹಿಸಿಕೊಂಡುಬಿಡುತ್ತೇವೆ. ಈ ಪರಿಸ್ಥಿತಿಯನ್ನು ಯಾವುದಕ್ಕೆ ಹೋಲಿಸಬಹುದು ಎಂದರೆ, ತಮ್ಮ ಜೀವನಪರ್ಯಂತ ತೀರಾ ಕಲುಷಿತಗೊಂಡ ನಗರದ ಪರಿಸರದಲ್ಲಿ ಬದುಕುವ ಜನರು, ಗಾಳಿ ಎಲ್ಲಾ ಕಡೆ ಇರುವುದೇ ಹೀಗೆ, ಆದ್ದರಿಂದ ಕೆಮ್ಮುವುದು ಸಹಜ ಎಂದು ಊಹಿಸಿಕೊಂಡಂತೆ.

ವಿಲಕ್ಷಣವೆಂದರೆ, ಇದು ಸರಿಯಾದ ಮಾರ್ಗವಲ್ಲವೆಂದು ಶಿಕ್ಷಕರಿಗೆ ತೋರಿಸಿಕೊಟ್ಟಾಗ, ಕೆಲವರು ಸಮಾಧಾನದ ಬದಲಾಗಿ ಸಂದೇಹಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ನೀವೇಕೆ ತೊಂದರೆ ನೀಡುತ್ತಿದ್ದೀರಿ ಎಂದು ತಿಳಿಯಬಯಸುತ್ತಾರೆ ಅಥವಾ ನೀವು ಅದರ ಋಣಾತ್ಮಕ ಅಂಶಗಳನ್ನು ಉತ್ಪ್ರೇಕ್ಷೆ ಮಾಡುತ್ತಿದ್ದೀರಿ ಎಂದು ಪ್ರತಿಪಾದಿಸುತ್ತಾರೆ ಅಥವಾ ತೋರಿಸಿದ ಪರ್ಯಾಯ ವಿಧಾನಗಳನ್ನು, ಬೇರೆ ಶಾಲೆಗಳು ಮಾಡಿದ್ದನ್ನು ನಾವೆಂದಿಗೂ ಮಾಡಲಾಗುವುದಿಲ್ಲ ಎಂದು ತಳ್ಳಿಹಾಕುತ್ತಾರೆ.

ಅಕ್ಷರಗಳ ಗ್ರೇಡ್‌ಅನ್ನು ಕೊನೆಗಾಣಿಸಲು ತೊಂದರೆಗಳಿರುವುದು ನಿಜ, ಆದರೆ, ಮುಖ್ಯ ಪ್ರಶ್ನೆಯೆಂದರೆ, ಅವನ್ನು ನಿವಾರಿಸಬಹುದಾದ ತೊಂದರೆಗಳನ್ನಾಗಿ ಪರಿಗಣಿಸಬೇಕೋ ಅಥವಾ ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಲು ಇರುವ ಸಬೂಬುಗಳನ್ನಾಗಿ ನೋಡಬೇಕೋ ಎಂಬುದು. ಇಲ್ಲಿ ಹೇಳಿದ ದತ್ತಾಂಶಗಳು ಮತ್ತು ತರ್ಕಬದ್ದ ವಾದಗಳಿಂದ ಹೇಳುವುದೇನೆಂದರೆ ಇವುಗಳಲ್ಲಿ ಕೇವಲ ಅರ್ಧದಷ್ಟಾದರೂ ನಿಜವಾಗಿದ್ದಲ್ಲಿ ನಮಗೆ ಸಾಧ್ಯವಾದಷ್ಟನ್ನಾದರೂ ಮಾಡಲೇಬೇಕು. ಆದಷ್ಟು ಬೇಗ ಈ ಸಾಂಪ್ರದಾಯಿಕ ಗ್ರೇಡ್‌ಪದ್ಧತಿಯನ್ನು ತೊಡೆದುಹಾಕಬೇಕು. ಹೀಗಿದ್ದೂ ಬಹಳಷ್ಟು ಮಂದಿ ಇದನ್ನು ಜಾರಿಗೆ ತರುವಲ್ಲಿ ಇರುವ ಸಮಸ್ಯೆಗಳಿಂದಾಗಿ ಹೇಗೆ ಪ್ರತಿಕ್ರಿಯಿಸುತ್ತಾರೆಂದರೆ ಹೌದು, ಹೌದು, ಎಲ್ಲಾ ಸರಿ, ಆದರೆ , ನಾವು ಈ ಗ್ರೇಡ್ ಕೈಯಿಂದ ಪಾರಾಗಲು ಎಂದಿಗೂ ಸಾಧ್ಯವಿಲ್ಲ. . . . . . .

ಗಮನಾರ್ಹವಾದುದೆಂದರೆ, ಎಷ್ಟು ಕಿರುಪರೀಕ್ಷೆಗಳನ್ನು ಕೊಡಬೇಕು ಅಥವಾ ಗ್ರೇಡ್ ವರದಿಯನ್ನು ಎಷ್ಟು ದಿನಗಳಿಗೊಮ್ಮೆ ಮನೆಗೆ ಕಳುಹಿಸಬೇಕು ಅಥವಾ ಯಾವ ನಿರ್ದಿಷ್ಟ ಮಟ್ಟದ ಸಾಧನೆಗೆ ಯಾವ ಗ್ರೇಡ್ ನೀಡಬೇಕು  ಅಥವಾ ಯಾವ ಅಕ್ಷರಕ್ಕೆ ಯಾವ ಸಂಖ್ಯೆ ಹೊಂದಿಕೆಯಾಗುತ್ತದೆ? ಎಷ್ಟು ಮಂದಿಯ ಶಿಕ್ಷಕರು ಈ ರೀತಿಯ ಅಮುಖ್ಯ ಪ್ರಶ್ನೆಗಳಿಗಿಂತ ಮುಂದೆ ಹೋಗುವುದೇ ಇಲ್ಲ. ಕೆಲವರಂತೂ, ತಮ್ಮ ಅಸಮಧಾನವನ್ನು ಅತಿ ಹೆಚ್ಚಿನ ವಿಧ್ಯಾರ್ಥಿಗಳು ಉತ್ತಮ ಗ್ರೇಡ್ ಪಡೆಯುವ ಸಾಧ್ಯತೆಯ ಬಗೆಗಷ್ಟೇ ಸೀಮಿತಗೊಳಿಸಿಕೊಂಡಿದ್ದಾರೆ. ಪ್ರತಿಕ್ರಿಯೆಯೊಂದರಿಂದ ತಿಳಿದುಬರುವುದೇನೆಂದರೆ ಂ ನೊಂದಿಗಿನ ಜಿಪುಣತನವನ್ನು ಬೌದ್ಧಿಕತೆಗೆ ಹಾಕಿರುವ ಚೌಕಟ್ಟು ಎಂದು ಗೊಂದಲ ಮಾಡಿಕೊಂಡಿರುವುದು. ನಿಜವಾದ ತೊಂದರೆ ಎಂದರೆ ಗ್ರೇಡ್ ಹೆಚ್ಚಳವಲ್ಲ ಬದಲಿಗೆ ಗ್ರೇಡ್‌ಗಳೇ ಎಂದು ನಿದರ್ಶನಗಳು ತೋರಿಸುತ್ತವೆ. ಅಸಮಧಾನವನ್ನು ಹೊರ ಹಾಕುವ ಸರಿಯಾದ ಸಂದರ್ಭವೆಂದರೆ ಅತಿ ಹೆಚ್ಚಿನ ವಿದ್ಯಾರ್ಥಿಗಳು ಂ ಪಡೆಯುತ್ತಿರುವುದಲ್ಲ, ಬದಲಿಗೆ ಅತಿ ಹೆಚ್ಚಿನ ವಿದ್ಯಾರ್ಥಿಗಳು ತಾವು ಶಾಲೆಗೆ ಹೋಗುವ ಉದ್ದೇಶವೇ ಂ ಪಡೆಯಲು ಎಂಬುದನ್ನು ಒಪ್ಪಿಕೊಂಡಿರುವುದು.

ಸಾಮಾನ್ಯ ಆಕ್ಷೇಪಣೆಗಳು : –

ಮೇಲಿನ ವಾದಗಳಿಗೆ ಆಗಿಂದಾಗೆ ಹೆಚ್ಚಾಗಿ ಕೇಳಿಬರುವ ಪ್ರತಿಕ್ರಿಯೆಗಳನ್ನೇ ತೆಗೆದುಕೊಂಡಾಗ ಅಂದರೆ. ಗ್ರೇಡ್ ಬೇಡ ಎಂಬ ವಾದಕ್ಕೆ ಇರುವ ಸಾಮಾನ್ಯ ಆಕ್ಷೇಪಣೆಗಳು.
ಮೊದಲನೆಯದಾಗಿ, ವಿದ್ಯಾರ್ಥಿಗಳು ಗ್ರೇಡ್ ಪಡೆಯುವುದನ್ನು ನಿರೀಕ್ಷಿಸುತ್ತಾರೆ ಎಂದು ಹೇಳಲಾಗಿದೆ. ಮತ್ತು ಇದು ಅವರಿಗೆ ಚಟದಂತೆ/ಅಭ್ಯಾಸವಾದಂತೆ ತೊರುತ್ತದೆ. ಹಲವು ಬಾರಿ ಇದು ಸತ್ಯವಾಗಿದೆ ಕೂಡ. ಗ್ರೇಡ್‌ರಹಿತ ವ್ಯವಸ್ಥೆ ಬಗ್ಗೆ ಪ್ರತಿಕ್ರಿಯಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಲೆತಿರುಗಿಸುವ ಅಸ್ತಿತ್ವ (ನಾನು ಃ+ ಅಲ್ಲದಿದರೆ ಇನ್ಯಾರು?) ಎಂದು ನಾನು ವೈಯಕ್ತಿಕವಾಗಿ ಬಣ್ಣಿಸಿದ್ದೇನೆ. ಆದರೆ, ಹೆಚ್ಚು ಪ್ರಾಥಮಿಕ ಮತ್ತು ಕೆಲವು ಮಾಧ್ಯಮಿಕ ಶಾಲೆಗಳು ಗ್ರೇಡ್ ಪದ್ದತಿಯ ಬದಲು ಮಾಹಿತಿಪೂರ್ಣ (ಕಡಿಮೆ ಹಾನಿಕಾರಕ) ಮೌಲ್ಯಮಾಪನ ಪದ್ದತಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವೆಡೆಗೆ ಹೋಗುತ್ತಿದ್ದರೂ ವಿದ್ಯಾರ್ಥಿಗಳು ಪ್ರೌಢಶಾಲೆ ಮುಟ್ಟುವವರೆಗೆ ಹಾನಿ ಪ್ರಾರಂಭವಾಗಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಗ್ರೇಡ್ ಪದ್ದತಿ ಬದಲಾಯಿಸಿಕೊಂಡಿರದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಹೇಳುವುದೇನೆಂದರೆ ಗ್ರೇಡ್‌ಗಳ ದುಷ್ಪರಿಣಾಮಗಳೇನೇ ಇರಲಿ ಹೈಸ್ಕೂಲುಗಳ ಕಾರಣದಿಂದಾಗಿಯೇ ನಾವು ಗ್ರೇಡ್‌ಗಳಿಂದ ಹೊರ ಬರುವುದು ಸಾಧ್ಯವಿಲ್ಲ. ಸಹಜವಾಗಿಯೇ ಹೈಸ್ಕೂಲ್‌ಗಳು ಕಾಲೇಜು ಕಡೆ ಬೊಟ್ಟು ಮಾಡುತ್ತವೆ.
ವಿದ್ಯಾರ್ಥಿಗಳು ಪ್ರೌಢಶಾಲೆ ತಲುಪುವ ಹೊತ್ತಿಗೆ ಗ್ರೇಡ್ ಗೆ ಹೊಂದಿಕೊಂಡುಬಿಡುತ್ತಾರೆ. ನಾವಿದನ್ನು ತಿಳಿದುಕೊಳ್ಳಬೇಕೆ? ಅಥವಾ ಂ ಪಡೆಯಲು ನಾನೇನು ಮಾಡಬೇಕು? ಎಂದು ಕೇಳುವ ಮಟ್ಟಕ್ಕೆ ತಲುಪಿರುತ್ತಾರೆ. ಇದು ದೊಡ್ಡದಾದ ತಪ್ಪೊಂದರ ಸೂಚನೆ. ಇದು ಅವರೇನು ಮಾಡುತ್ತಿದ್ದಾರೋ ಅದನ್ನು ಭವಿಷ್ಯದಲ್ಲೂ ಮುಂದುವರೆಸುವ ಬಗೆಗಿನ ವಾದಕ್ಕಿಂತ ಹೆಚ್ಚಾಗಿ ಈ ಹಿಂದೆ ಅವರೊಂದಿಗೆ ಏನು ನಡೆಯಿತು ಎಂಬುದರ ದೋಷವೇ ಸರಿ.

ಬಹುಶಃ ಈ ತರಬೇತಿಯಿಂದಾಗಿ, ಗ್ರೇಡ್ ಪದ್ದತಿಯು ವಿದ್ಯಾರ್ಥಿಗಳ ಸಮಯಪಾಲನೆ, ಕೆಲಸಗಳ ಪರಿಪಾಲನೆ ಮತ್ತು ಹೇಳಿದ ಕೆಲಸ ಮಾಡಿಸುವಲ್ಲಿ ಯಶಸ್ಸು ಕಾಣಬಹುದು. ಅನೇಕ ಶಿಕ್ಷಕರಿಗೆ ಈ ಅತ್ಯಾವಶ್ಯಕ ಹಿಡಿತದ ಸಾಧನವನ್ನು ಬಿಡಲು ಮನಸಿಲ್ಲ. ಈ ಸಾಧನ ಕೆಲಸ ಮಾಡಿದರೂ ಯಾವಾಗಲೂ ಅಲ್ಲ ಈ ವಿವೇಚನಾರಹಿತ ಅನುಸರಣೆ ನಿಜವಾಗಿಯೂ ನಮ್ಮ ಗುರಿಯೇ ಎಂದು ನಾವು ಆಲೋಚಿಸಬೇಕಾದ ಅಗತ್ಯತೆ ಇದೆ. ಗ್ರೇಡ್ ವ್ಯವಸ್ಥೆ ಇಲ್ಲದೆ ಹೋದರೆ, ಈ ಮಕ್ಕಳು ಆ ಕ್ಷಣದಲ್ಲಿಯೇ ನನ್ನ ವಿಷಯವನ್ನು ಅಲಕ್ಷ್ಯ ಮಾಡುತ್ತಾರೆ ಎಂದು ಉದ್ಧರಿಸುವ ಶಿಕ್ಷಕರು ತಮ್ಮ ವಿಷಯದ ಮೇಲೆಯೇ ಪ್ರಬಲವಾದ ಆಪಾದನೆ ಮಾಡುತ್ತಿರಬಹುದು. ಯಾರು ಗ್ರೇಡ್ ಪದ್ಧತಿಯನ್ನು ತ್ಯಜಿಸಲು ಹಿಂಜರಿಯುತ್ತಾರೆ. ಯಾರು ತಮ್ಮ ಅವಧಿಪೂರ್ತಿ ಪ್ರೋಜೆಕ್ಟರ್‌ಗೆ ಪಾರದರ್ಶಕ ಹಾಳೆಗಳನ್ನು ಬದಲಿಸುತ್ತಾ ಕಾಲ ಕಳೆಯುತ್ತಾರೋ ಮತ್ತು ರಮ್ಯಕವಿಗಳ ಬಗ್ಗೆಯೋ ಅಥವಾ ಅನುವಂಶೀಯ ಸಂಕೇತಗಳ ಬಗ್ಗೆಯೋ ವಿದ್ಯಾರ್ಥಿಗಳಿಗೆ ಕೊನೆ ಇಲ್ಲದೆ ಬೋಧಿಸುತ್ತಾರೆಯೊ ಅಂಥಹವರು. ಲಂಚ (ಂಗಳು) ಮತ್ತು ಬೆದರಿಕೆ (ಈಗಳು) ಇಲ್ಲದೆ ಆರೀತಿಯ ನಿರ್ದೇಶಿತ ಕೆಲಸ ಮಾದಲು ವಿದ್ಯಾರ್ಥಿಗಳಿಗೆ ಬೇರೆ ಯಾವುದೇ ಕಾರಣಗಳಿಲ್ಲ. ಇದರ ಅರ್ಥವೇನೆಂದರೆ ಮಕ್ಕಳಲ್ಲಿಯೇ ಏನೋ ದೋಷವಿದೆ ಎಂದು. ಗ್ರೇಡ್‌ಗಳು ಅನಿವಾರ್ಯವೆಂದರೆ ನಮ್ಮ ವರ್ಗಕೋಣೆಯ ಪದ್ಧತಿಗಳು ಹಾಗೂ ಕಲಿಕೆ ಹಾಗೂ ಬೋಧನೆಯ ಬಗ್ಗೆ ನಮ್ಮ ನಿಲುವನ್ನು ಪರೀಕ್ಷಿಸಲು ನಾವು ನಿರಾಕರಿಸುವುದು.

ಒಂದು ಮಗುವಿಗೆ ಕಲಿಯಲು ರಿಪೋರ್ಟ್ ಕಾರ್ಡಿನಲ್ಲಿ ಗ್ರೇಡ್‌ನ ಹೊರತಾಗಿ ಬೇರೊಂದು ಉತ್ತಮ ಕಾರಣ ನೀಡಲು ಸಾಧ್ಯವಾಗದೇ ಹೋದರೆ, ನಾನು ನನ್ನ ಡೆಸ್ಕ್‌ಗೆ ಬೀಗ ಮನೆಯಲ್ಲಿರುವಷ್ಟೆ ಯೋಗ್ಯ ಎಂದು ಮಿಸೌರಿಯ ಶಿಕ್ಷಕಿ ಡೋರೋಥಿ ದಿ ಜೊಚೆ ಫೆಬ್ರವರಿ ೧೯೪೫ ರಲ್ಲಿ ಪ್ರಕಟಗೊಂಡ ಅಂಕಣವೊಂದರಲ್ಲಿ ಬರೆಯುತ್ತಾರೆ. ಆದರೆ ಮಗುವಿಗೆ ಓದಲು ಒಂದು ಉತ್ತಮ ಕಾರಣ ನೀಡಬಲ್ಲ ಶಿಕ್ಷಕರಿಗೆ ಗ್ರೇಡ್ ಬೇಕಾಗುವುದಿಲ್ಲ. ಸಂಶೋಧನೆಯೊಂದು ಪ್ರಮಾಣೀಕರಿಸಿರುವಂತೆ :- ಪಠ್ಯಕ್ರಮಕ್ಕೆ ಮಕ್ಕಳನ್ನು ಹಿಡಿದಿಡುವ ಶಕ್ತಿ ಇದ್ದರೆ, ಉದಾಹರಣೆಗೆ ಕಲಿಕಾ ಚಟುವಟಿಕೆಯು ಕೈಪಿಡಿಗಳು, ಸಂವಹನ (Iಟಿಣeಡಿಚಿಛಿಣive) ಗಳನ್ನು ಒಳಗೊಂಡಿದ್ದರೆ ಗ್ರೇಡ್ ಪದ್ಧತಿಗೊಳಪಡದ ಮಕ್ಕಳೂ ಕೂಡ ಗ್ರೇಡ್ ಪದ್ಧತಿಗೆ ಒಳಪಟ್ಟ ಮಕ್ಕಳಷ್ಟೇ ಸಾಧಿಸಬಲ್ಲರು.

ಮತ್ತೊಂದು ಆಕ್ಷೇಪಣೆ :- ವಿದ್ಯ್ಯಾರ್ಥಿಗಳಿಗೆ ಗ್ರೇಡ್‌ಗಳನ್ನು ನೀಡಬೇಕು, ಏಕೆಂದರೆ ಕಾಲೇಜುಗಳು ಅದನ್ನು ಅಪೇಕ್ಷಿಸುತ್ತವೆ ಎಂದು ಹಲವೊಂದು ಬಾರಿ ವಾದಿಸಲಾಗಿದೆ. ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ವರ್ಗೀಕರಿಸಿಕೊಡುವ ಜವಾಬ್ಧಾರಿ ಪ್ರೌಢಶಾಲೆಗಳಿಗೆ ಇಲ್ಲ. ಎಂದು ಪ್ರತಿಕ್ರಿಯಿಸಬಹುದು – ವಿಶೇಷವಾಗಿ ಆ ಪ್ರಕ್ರಿಯೆ ಕಲಿಕೆಯನ್ನು ಕಡೆಗಣಿಸುವಂತಿದ್ದಾಗ ಯಾವುದೇ ಪರಿಸ್ಥಿತಿಯಲ್ಲೂ ಈ ಪೂರ್ವ ಸಿದ್ದಾಂತದ ವಾದವು ತಪ್ಪು. ಸಾಂಪ್ರದಾಯಿಕವಾಗಿ ಈ ಗ್ರೇಡ್‌ಗಳು ಕಾಲೇಜು ಅಥವಾ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಪಡೆಯಲು ಕಡ್ಡಾಯವಲ್ಲ.

ಬದಲಾವಣೆ ತರುವುದು :

ಜನರು ಬದಲಾವಣೆಯನ್ನು ಪ್ರತಿರೋಧಿಸುವುದಿಲ್ಲ ಆದರೆ ತಾವೇ ಬದಲಾವಣೆಗೆ ಒಳಪಡುವುದನ್ನು ಪ್ರತಿರೋಧಿಸುತ್ತಾರೆ. ಎಂದು ನನ್ನ ಸ್ನೇಹಿತರೊಬ್ಬರು ಹೇಳುತ್ತಾರೆ. ಕೆಲವೊಮ್ಮೆ ಅದ್ಭುತ ಹೊಳಹುಗಳು (ಶಾಲೆಯನ್ನು ಗ್ರೆಡ್ ದಿಕ್ಕಿನಿಂದ ಕಲಿಕಾ ದಿಕ್ಕಿನೆಡೆಗೆ ಪರಿವರ್ತಿಸುವುದು) ಕೂಡ ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರಿದಾಗ ತಾನಾಗಿಯೇ ನಾಶಗೊಳ್ಳುವುದು.

ಆದ್ದರಿಂದ, ಒಬ್ಬ ಆಡಳಿತಗಾರನಿಗೆ ಮೊದಲ ಹೆಜ್ಜೆ ಎಂದರೆ, ಸಂವಾದಗಳನ್ನೇರ್ಪಡಿಸಿ ಜನರನ್ನು ಉತ್ತೇಜಿಸಿ ಅವಲೋಕಿಸುವಂತೆ ಹಾಗೂ ವಿಚಾರ ವಿನಿಮಯ ನಡೆಸುವಂತೆ ಮಾಡುವುದು. ಇದನ್ನು ತರಗತಿಗಳಲ್ಲೇ ನಡೆಸಬಹುದು, ಶಿಕ್ಷಕರಾಗಿ, ಗ್ರೇಡ್ ಪದ್ದತಿಯನ್ನು ವಿದ್ಯಾರ್ಥಿಗಳು ಹೇಗೆ ಪರಿಗಣಿಸುತ್ತಾರೆಂಬ ಸಮಾಲೋಚನೆಗೆ ಅನುವು ಮಾಡಿಕೊಡಬಹುದು, ಜೊತೆಗೆ ಸಂಜೆ ವೇಳೆ ಪೋಷಕರೊಂದಿಗೆ ಅಥವಾ ಜಾಲತಾಣಗಳಲ್ಲಿ – ಸಮಂಜಸವಾದ ಪುಸ್ತಕಗಳು, ಲೇಖನಗಳು, ಭಾಷಣಗಳು ಮತ್ತು ವೀಡಿಯೋಗಳು ಹಾಗೂ ಬದಲಾವಣೆಯ ಹಾದಿಯಲ್ಲಿರುವ ಅಕ್ಕಪಕ್ಕದ ಶಾಲೆಗಳನ್ನು ಭೇಟಿ ಮಾಡುವುದರ ಮೂಲಕ ಬದಲಾವಣೆ ತರಲು ಪ್ರಯತ್ನಿಸುವುದು.

ಗ್ರೇಡ್‌ಗಳನ್ನು ತೆಗೆದುಹಾಕುವುದನ್ನು ಹಂತ ಹಂತವಾಗಿ ಮಾಡಬಹುದು. ಉದಾಹರಣೆಗೆ : ಪ್ರೌಢಶಾಲೆಯಲ್ಲಿ ೯ ತರಗತಿಯನ್ನು ಗ್ರೇಡ್ ಪದ್ಧತಿಯಿಂದ ಹೊರತುಪಡಿಸಿ, ನಂತರದಲ್ಲಿ ಮುಂದಿನ ತರಗತಿಗಳಿಗೆ ವಿಸ್ತರಿಸುವುದು. (ಮೊದಲನೇ ಹಂತಕ್ಕಿಂತ ಮುಂದೆ ಹೋಗದ ಶಾಲೆಗಳೂ ಕೂಡ ಮಕ್ಕಳಿಗೆ ಒಂದು ವರ್ಷದ ಕಾಲ ಜಿ.ಪಿ.ಎ. ಬದಲು ತಾವೇನು ಕಲಿಯುತ್ತಿದ್ದೇವೆ ಎಂದು ಎಣಿಸುವಂತೆ ಮಾಡಿದರೆ ಕಲಿಕೆಯ ಬಗ್ಗೆ ಆಲೋಚನೆ ಮಾಡುವಲ್ಲಿ ಗಣನೀಯ ಸೇವೆ ಸಲ್ಲಿಸಿದಂತಾಗುತ್ತದೆ.)

ಅನುಕ್ರಮವಾದ ಬದಲಾವಣೆಗೆ ಮತ್ತೊಂದು ಮಾರ್ಗವೆಂದರೆ, ಕೆಲವೊಂದು ಮಾರಕ ಪದ್ಧತಿಗಳನ್ನಷ್ಟೇ ತೆಗೆದುಹಾಕುವುದು. ಉದಾಹರಣೆಗೆ : ಸೀಮಿತ ಗೆರೆಯೊಳಗೆ ಗ್ರೇಡ್ ಮತ್ತು ರಾಂಕ್‌ಗಳನ್ನು ನೀಡುವ ಪದ್ಧತಿ. ಗ್ರೇಡ್‌ಗಳು ಸ್ವಲ್ಪ ಕಾಲದವರೆಗೆ ಮುಂದುವರೆದರೂ, ಇದು ಯಶಸ್ಸು ಪಡೆಯಲೇ ಹೊರತು ಒಬ್ಬರನ್ನೊಬ್ಬರು ಹೋಲಿಸಿಕೊಳ್ಳುವುದಕ್ಕಾಗಿ ಅಲ್ಲ ಎಂಬ ಸಂದೇಶವನ್ನು ಮೊದಲೇ ಸೂಚಿಸುವುದು.

ವಿಶ್ವಾಸಾರ್ಹ ಮೌಲ್ಯಮಾಪನ:- ಪದವನ್ನು ಬಲ್ಲವರಿಗೆ ಗ್ರೇಡ್ ನಿರ್ಮೂಲನೆ ಎಂದರೆ ಅದು ವಿದ್ಯಾರ್ಥಿಗಳ ಯೋಗ್ಯತೆಯ ಬಗೆಗಿನ ಮಾಹಿತಿಯ ಸಂಗ್ರಹಣೆ ಹಾಗೂ ಅದನ್ನು ಪೋಷಕರಿಗೆ ಮುಟ್ಟಿಸುವ ಪ್ರವೃತ್ತಿಯನ್ನು ನಿಷೇಧಿಸಿರುವುದು ಎಂದು ತಿಳಿದಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಗ್ರೇಡ್ ನಿರ್ಮೂಲನೆಯೊಂದಿಗೆ ಹಲವು ಅರ್ಥಪೂರ್ಣ ಮತ್ತು ರಚನಾತ್ಮಕ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಅವುಗಳೆಂದರೆ, ನಿರೂಪಣೆಗಳು (ಲಿಖಿತ ಅಭಿಪ್ರಾಯಗಳೊಂದಿಗೆ), ಕ್ರಿಯಾತ್ಮಕ ಸಂಗ್ರಹಣೆಗಳು (ಮುತುವರ್ಜಿಯಿಂದ ಸಂಗ್ರಹಿಸಲಾದ, ವಿದ್ಯಾರ್ಥಿಗಳ ಆಸಕ್ತಿ ಸಾಧನೆಗಳು ಮತ್ತು ಕಾಲಾಂತರದಲ್ಲಾದ ಪ್ರಗತಿಯನ್ನು ತೋರಿಸುವಂತಹ ವಿದ್ಯಾರ್ಥಿಗಳ ಮಾದರಿಗಳು ಮತ್ತು ಪ್ರಾಜೆಕ್ಟ್‌ಗಳು) ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಶಿಕ್ಷಕ-ಪಾಲಕರ ನಡುವೆ ಸಂವಾದ ಮತ್ತು ವಿದ್ಯಾರ್ಥಿಗಳು ತಾವೇನು ಮಾಡಬಲ್ಲರು ಎಂದು ತೋರಿಸುವ ಇತರೆ ಅವಕಾಶಗಳ ಸೃಷ್ಟಿ.

ಈ ರೀತಿಯ ಮಾಪನೆಗಳನ್ನು ಮಾಡುವುದು ಶಿಕ್ಷಕರಿಗೆ ಕಷ್ಟಸಾಧ್ಯ ಅದು ವಿದ್ಯಾರ್ಥಿಗಳ ಸಂಖ್ಯೆ ೧೫೦ ಅಥವಾ ಅದಕ್ಕಿಂತ ಹೆಚ್ಚು ಇದ್ದ ಪಕ್ಷದಲ್ಲಿ ಪ್ರತಿಯೊಬ್ಬರನ್ನೂ ೪೫ ರಿಂದ ೫೦ ನಿಮಿಷದಷ್ಟು ವೇಳೆಯನ್ನು ಗಮನಿಸಬೆಕಾದ ಅಗತ್ಯವಿರುವುದರಿಂದ. ಆದರೆ ಈ ಗ್ರೇಡ್ ಎಂಬ ಸಾಂಪ್ರದಾಯಿಕ ಪದ್ಧತಿಯನ್ನು ಮುಂದುವರೆಸಲು ನೀಡುವ ಸಮರ್ಥನೆಯಾಗಬೇಕಾಗಿಲ್ಲ. ಇದು ಪುರಾತನ ಅವಶೇಷದಂತಹ ಈ ಕೈಗಾರಿಕೆಗಳೆಡೆಗೆ ಮುಖಮಾಡಿರುವ ಕಲಿಕಾ ವ್ಯವಸ್ಥೆಗೆ ಸವಾಲಾಗಬೇಕು. ಪೌಢಶಾಲಾ ಶಿಕ್ಷಣದ ವಿನ್ಯಾಸವು ಕೆಟ್ಟದಾಗಿ ಕಾಣಲು ಅದು ಮಾಪನ ವ್ಯವಸ್ಥೆಯಲ್ಲಿನ ಲೋಪಗಳಿಗಿಂತಲೂ ಮುಂದೆ ಸಾಗಿರುವುದೇ ಕಾರಣ. ಗುಂಪಿನಲ್ಲಿ ಬೋಧನೆ, ಅಂತರ್ ವಿಷಯ ಅಧ್ಯಯನ ಹಾಗೂ ಕಡಿಮೆ ವಿದ್ಯಾರ್ಥಿಗಳೊಂದಿಗೆ ಹೆಚ್ಚು ಸಮಯ ಕಳೆಯುವಂತಹ ಪದ್ಧತಿ ರೂಢಿಸಿಕೊಂಡಿರುವ ಶಾಲೆಗಳ ಬಗ್ಗೆ ತಿಳಿದುಕೊಳ್ಳುವ ವಿಚಾರಗಳೆಡೆಗೆ ನೋಡಲು ಇರುವ ಸಮರ್ಥನೆ.
ಹೀಗೆ ಕೆಲವು ಸಮಸ್ಯೆಗಳು ಇದ್ದಾಗ್ಯೂ ಗ್ರೇಡ್‌ಗಳು ಮಕ್ಕಳ ಕಲಿಕೆಗೆ ಉಂಟುಮಾಡುತ್ತಿರುವ ಅಡೆತಡೆಗಳು ಎಷ್ಟಿವೆಯೆಂದರೆ ಆದಷ್ಟು ಬೇಗ ಗ್ರೇಡ್‌ಅನ್ನು ಸಂಪೂರ್ಣವಾಗಿ ತೆಗೆದುಹಾಕದ ಹೊರತು ಅರ್ಥಪೂರ್ಣ ಕಲಿಕೆ ಸಾಧ್ಯವಿಲ್ಲ. ನಾವು ಈ ದಿಕ್ಕಿನಲ್ಲಿ ಕೂಡಲೇ ಕಾರ್ಯತತ್ಪರರಾಗಬೇಕಿದೆ.
———————————————————————–
ಮೌಲ್ಯಮಾಪನದಿಂದ ಅಪಮೌಲ್ಯದೆಡೆಗೆ
ಮೌಲ್ಯಮಾಪನಕ್ಕೆ ಜಗತ್ತಿನಾದ್ಯಂತ ಶಾಲಾ ಶಿಕ್ಷಣ ಪದ್ಧತಿಯಲ್ಲಿ ಅನಗತ್ಯ ಹಾಗೂ ಅಪಾಯಕಾರಿ ಎನ್ನುವಷ್ಟು ಒತ್ತನ್ನು ನೀಡಲಾಗುತ್ತಿದೆ. ಇದರ ವಿರುದ್ಧವಾಗಿ ಪ್ರತಿಭಟಿಸುತ್ತಿರುವ ಸಂಶೋಧಕರಲ್ಲಿ ಆಲ್ಫೀ ಕೋಹ್ನ್ ಪ್ರಮುಖರು. ಇದೇ ವಿಚಾರದ ಪ್ರತಿಪಾದನೆಗಾಗಿ ಟೈಮ್ ಪತ್ರಿಕೆಯಿಂದ ಪ್ರಶಂಸೆ ಪಡೆದ ಇವರು ಸಧ್ಯ ಅಮೆರಿಕಾದ ಬಾಸ್ಟನ್‌ನಲ್ಲಿದ್ದು ಜಗತ್ತಿನಾದ್ಯಂತ ತಮ್ಮ ವಿಚಾರಗಳನ್ನು ಹರಡಲು ಪ್ರವಾಸ ಮಾಡುತ್ತಿರುತ್ತಾರೆ. ಗ್ರ್ರೇಡ್‌ಗಳ ಬಗ್ಗೆ ಅತೀವ ನಂಬಿಕೆ ಇಟ್ಟುಕೊಂಡಿರುವವರು ಗಮನಿಸಲೇಬೇಕಾದ ಅನೇಕ ಮಹತ್ವದ ವಿಚಾರಗಳನ್ನು ವೈಜ್ಞಾನಿಕ ಸಂಶೋಧನೆಗಳ ಹಿನ್ನೆಲೆಯಲ್ಲಿ ಸರಳವಾಗಿ ಪ್ರಸ್ತುತಪಡಿಸಲಾಗಿದೆ.

 

ಶಿಕ್ಷಣ, ಅದರಲ್ಲೂ ವಿಶೇಷವಾಗಿ ಶಾಲಾ ಶಿಕ್ಷಣದ ಕುರಿತಾಗಿ ಕಾಳಜಿ ಇರುವ ಆಸಕ್ತರಿಗೆ ಉಪಯುಕ್ತವಾಗಲೆಂದು ಬೇರೆ ಬೇರೆ ಮೂಲಗಳಿಂದ ಆಯ್ದ ಲೇಖನ ಮತ್ತು ವಿಡಿಯೋಗಳ ಕನ್ನಡ ಅನುವಾದವನ್ನುದರ್ಪಣ’ ಯೋಜನೆ ನೀಡುತ್ತಿದೆ 

ವಿವರಗಳಿಗೆ ಸಂಪರ್ಕಿಸಿ ಎಸ್ಎನ್ಗಣನಾಥ (9980131765) – sngananath@gmail.com