http://media.indiatimes.in/media/content/2014/Nov/jogging-copy_1416387806_725x725.jpg

ದೇಹ ಹಾಗು ಮನಸ್ಸು ಎರಡರದ್ದೂ ಆರೋಗ್ಯ ಚೆನ್ನಾಗಿ ನೋಡಿಕೊಂಡರೆ ಮಾತ್ರ ನೆಮ್ಮದಿಯಾಗಿರೋಕೆ ಸಾಧ್ಯ. ಇನ್ನು ದೇಹಾರೋಗ್ಯ ಚೆನ್ನಾಗಿದ್ದರೆ ಮನಸ್ಸು ಚೆನ್ನಾಗಿರುತ್ತೆ, ಮನಸ್ಸಿನ ಆರೋಗ್ಯ ಚೆನ್ನಾಗಿದ್ದರೆ ದೇಹದ ಸ್ಥಿತಿ ಚೆನ್ನಾಗಿರುತ್ತೆ.

ಹೊರಗಿನ ಪ್ರಪಂಚಕ್ಕೆ ತೋರಿಸೋಕೆ ದೇಹದ ಆರೋಗ್ಯ ಕಾಪಾಡಿಕೊಳ್ಳೋಕೆ ಜನ ಗಮನಹರಿಸ್ತಾರೆ, ಆದ್ರೆ ಮನಸ್ಸಿನ ಆರೋಗ್ಯ ಅಂದ್ರೆ ಸ್ವಲ್ಪ ಹಗುರ್ವಾಗಿ ತೊಗೋತಾರೆ. ಶರೀರಕ್ಕೇನಾದ್ರು ನೋವಾದ್ರೆ ಹೇಳ್ಕೊಳೋ ಥರ ಮನಸ್ಸಿಗೆ ನೋವಾದಾಗ ವ್ಯಕ್ತ ಪಡ್ಸಲ್ಲ. ಯಾಕೋ ಹಿಂಜರಿತಾರೆ. ಸಮಾಜ ತಲೆಸರಿ ಇಲ್ಲ ಅನ್ನತ್ತೆ ಅಂತ…

ನಿಮಗೊಂದು ನೆನಪಿರಲಿ ಮನಸ್ಸಿನ ಅನಾರೋಗ್ಯಕ್ಕೆ ಕಾರಣ ಮೆದುಳಲ್ಲಿ ಉತ್ಪತ್ತಿಯಾಗೋ ಕೆಲವು ಕೆಮಿಕಲ್ಗಳು… ಅವು ಹೆಚ್ಚಾದ್ರೂ ತೊಂದರೆ, ಕಡಿಮೆಯಾದ್ರೂ ತೊಂದರೆ. ದೈಹಿಕ ಆರೋಗ್ಯ ಕಾಪಾಡ್ಕೊಳದು ಎಷ್ಟು ಮುಖ್ಯನೋ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳೊದೂ ಅಷ್ಟೇ ಅತ್ಯಗತ್ಯ. ಇಷ್ಟು ಹೇಳಿ ನಾವು ಮಾನಸಿಕ ಆರೋಗ್ಯ ಕಾಪಾಡ್ಕೊಂಡು ನೆಮ್ಮದಿಯಾಗಿರೋದು ಹೇಗೆ ಅಂತ ಹೇಳ್ತೀವಿ. ಇಲ್ಲಿರೋ ವಿಚಾರ ಓದಿ.

1. ನಿಮ್ಮನ್ನ ನೀವು ಗೌರವಿಸಿ

ನಾವೇ ನಮ್ಮ ಶತ್ರುಗಳ ಥರ ಆಡ್ತೀವಿ. ನಮ್ಮ ತಪ್ಪುಗಳ್ನ ಗುರುತ್ಸಿ ಮಾನಸಿಕವಾಗಿ ನಮ್ಮನ್ನ ನಾವು ಶಿಕ್ಷಿಸಿಕೊಳ್ತೀವಿ. ನಮ್ಮನ್ನ ನಾವು ಕ್ಷಮಿಸ್ಕೊಬೇಕು. ತಪ್ಪು ಮಾಡೋದು ಸಹಜ, ಆದ್ರೆ ಗೊತ್ತಾದ್ಮೇಲೆ ದೂಷಿಸಿಕೊಳ್ಳೋದು ಬಿಟ್ಟು ಸರಿಪಡಿಸ್ಕೊಬೇಕು. ನಮಗೆ ಸಂತೋಷ ಕೊಡೋ ಹವ್ಯಾಸಗಳ್ನ ಮಾಡ್ತಾ ಮನಸ್ಸಿಗೆ ನೆಮ್ಮದಿ ತಂದ್ಕೊಬೇಕು. ಸ್ಪಷ್ಟವಾಗಿ ಹೇಳಬೇಕೆಂದರೆ ನಿಮ್ಮ ಒಳ್ಳೆತನಾನ ನೀವು ಆಗಾಗ ಮೆಚ್ಕೊಳಿ.

2. ನಿಮ್ಮ ಶರೀರದ ಬಗ್ಗೆ ಕಾಳಜಿ ಇರ್ಲಿ

ಮೊದಲೇ ಹೇಳಿದ ಹಾಗೆ ದೇಹ ಚೆನ್ನಾಗಿದ್ರೆ ಮನಸ್ಸೂ ಚೆನ್ನಾಗಿರುತ್ತೆ. ಇನ್ನು ದೇಹ ಚೆನ್ನಾಗಿರೋಕೆ ಇದೆಲ್ಲಾ ಮಾಡಿ.

  • ಬೀಡಿ ಸಿಗರೇಟ್ ಸೇದ್ಬೇಡಿ
  • ತುಂಬ ನೀರ್ ಕುಡೀರಿ
  • ದಿನಕ್ಕೆ ಒಂದ್ 30 ನಿಮಿಷನಾದ್ರೂ‌ ವ್ಯಾಯಾಮ ಮಾಡಿ
  • 7-9 ಗಂಟೆ ನಿದ್ದೆ ಮಾಡಿ
  • ಆರೋಗ್ಯಕ್ಕೆ ಒಳ್ಳೇದನ್ನೇ ತಿನ್ನಿ,… ಹಾಳು-ಮೂಳು ಕಮ್ಮಿ ಮಾಡಿ

ಮೂಲ

3. ಒಳ್ಳೆಯವರ ಸಹವಾಸ ಮಾಡಿ

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಅಂತ ದೊಡ್ಡವ್ರು ಹೇಳಿಲ್ವ. ಎಲ್ಲಾರ್ಗೂ ಒಳ್ಳೇ ಕುಟುಂಬ ಮತ್ತೆ ಸ್ನೇಹಿತ್ರು ಸಿಗಲ್ಲ. ಆದಷ್ಟೂ ಒಳ್ಳೆ ಜನ್ರ ಸಹವಾಸ ಮಾಡಿ. ಜೊತೇಲಿರೋವ್ರ ಮನೋಭಾವ ನಮ್ಮೇಲೆ ತುಂಬ ಪ್ರಭಾವ ಬೀರುತ್ತೆ. ಒಳ್ಳೇಯವರ ಜೊತೆ ಇದ್ದು ಒಳ್ಳೇ ಕೆಲಸ ಮಾಡೋ ಅಭ್ಯಾಸ ಮಾಡ್ಕೊಳಿ.

4. ನಿಮ್ಮ ಕೈಲಾದ್ದನ್ನ ಕೊಡಿ

ದುಡ್ದಿದ್ದೆಲ್ಲ ಕೊಟ್ಬಿಟ್ಟೂ ದಾನ ಶೂರ ಕರ್ಣ ಆಗಿ ಅಂತಿಲ್ಲ. ಕೈಲಾಗಿದ್ದು ಕೊಡಿ. ಆಗ ನಿಮಗೆ ನಿಮ್ಮ ಬಗ್ಗೆ ಗೌರವ ಹೆಚ್ಚುತ್ತೆ. ಸ್ವಲ್ಪ ಸಮಯ ಬೇರೇಯೋರ್ಗೆ ಸಹಾಯ ಮಾಡಕ್ಕೆ ಮೀಸಲಿಡಿ.

ಮೂಲ

5. ಒತ್ತಡ ಕಡಿಮೆ ಮಾಡಿಕೊಳ್ಳೋಕ್ಕೆ ಧ್ಯಾನ ಮಾಡಿ

ಒತ್ತಡ ದೇಹ ಮತ್ತೆ ಮನಸ್ಸು ಎರಡನ್ನೂ ಹಾಳ್ಮಾಡುತ್ತೆ. ಇನ್ನು ಒತ್ತಡ ನಿಭಾಯಿಸೋಕೆ ಹಲವಾರು ರೀತಿಗಳಿವೆ. ಯಾವುದಾದರೊಂದನ್ನ ಅಭ್ಯಾಸ ಮಾಡಿಕೊಳ್ಳಿ.

6. ಮನಸ್ಸು ವಟ ವಟ ಅಂತಿದ್ರೆ ಅದರ ಬಾಯಿ ಮುಚ್ಸಿ

ನಮ್ಮ ಮನಸಿಗಿರೋ ಶಕ್ತಿ ಅಷ್ಟಿಷ್ಟಲ್ಲ. ಅದು ಸಮಾಧಾನವಾಗಿದ್ದರೆ ನಮಗೆ ಒಳ್ಳೇದು. ಆದ್ರೆ ನಮ್ಮ ಮನಸ್ಸು ಬೇಡ್ದೇರದನ್ನೇ ಯೋಚನೆ ಮಾಡೋದು. ಧ್ಯಾನ ಮಾಡದ್ರಿಂದ ಪೂಜೆ ಪುನಸ್ಕಾರ ಮಾಡದ್ರಿಂದ ಮನಸ್ಸು ನೆಮ್ಮದಿಯಾಗಿರುತ್ತೆ.

ಮೂಲ

7. ನಿಮ್ಮ ಕೆಲಸದ ಒತ್ತಡದಿಂದ ತೊಂದರೆ ಆಗ್ದೇ ಇರೋ ಹಾಗೆ ನೋಡ್ಕೊಳಿ

ಕೆಲಸದಿಂದ ಬರೋ ಒತ್ತಡ ಎಲ್ಲರಿಗೂ ಇದ್ದಿದ್ದೆ… ಎಷ್ಟೇ ಸರೀಗೆ ಕೆಲ್ಸ ಮಾಡಿದ್ರು ಬಾಸ್ ಒಪ್ಪಲ್ಲ. ಹೇಳಿದ ಟೈಮಿಗೆ ಕೆಲ್ಸ ಮಾಡಿ ಮುಗಿಸ್ಲಿಲ್ಲಾ ಅನ್ನೋದು ನೆಮ್ಮದೀನೇ ಹಾಳ್ ಮಾಡ್ಬಿಡುತ್ತೆ. ಆದಷ್ಟೂ ಕೆಲಸ ನಿಮ್ಮ ನೆಮ್ಮದಿ ಹಾಳು ಮಾಡ್ದಿರೋ ಹಾಗೆ ನೋಡ್ಕೊಳಿ. ತುಂಬ ತೊಂದರೆ ಆಗ್ತಿದ್ರೆ ಬೇರೆ ಏನಾದ್ರು ಆಯ್ಕೆ ಇದ್ಯಾ ನೋಡಿ.

8. ಮದ್ಯ ಮತ್ತಿತರ ವ್ಯಸನದಿಂದ ದೂರ ಸರೀರಿ

ತಕ್ಷಣಕ್ಕೆ ಕಿಕ್ ಕೊಡುತ್ತೆ, ಆದ್ರೆ ಇವೆಲ್ಲ ಒತ್ತಡದಿಂದ ದೂರ ಮಾಡಲ್ಲ. ಇವು ಹೆಚ್ಚಾದರೆ ಬೇರೆ ಸಮಸ್ಯೆಗಳ್ನ ತಂದೊಡ್ಡುತ್ತೆ. ಇವಕ್ಕೆ ದಾಸರಾಗಿ ದೊಡ್ಡ್ ದೊಡ್ಡ ರೋಗ ತಂದ್ಕೊಳೋ ಬದ್ಲು ದೂರ ಇದ್ದು ನೆಮ್ಮದಿಯಾಗಿರಿ.

ಮೂಲ

9. ಬಿಡುವು ಮಾಡ್ಕೊಂಡು ಮಜಾ ಮಾಡದನ್ನ ಮರೀಬೇಡಿ

ಒಂದೇ ಥರ ಕೆಲಸ ಒತ್ತಡ ಹಾಗು ಖಿನ್ನತೆಗೆ ದಾರಿ ಮಾಡುತ್ತೆ. ಇನ್ನು ದಿನವಿಡೀ ಒಂದೇ ಮಾಡೋದ್ರಿಂದ ಮಾನಸಿಕ ಖಾಯಿಲೆ ಬರೋ ಸಾಧ್ಯತೆ ಇರುತ್ತೆ. ಅದಕ್ಕೇ ಹೇಳಿದ್ದು ಬೇರೆ ಬೇರೆ ಕೆಲಸ ಅಥವಾ ಹವ್ಯಾಸಗಳನ್ನ ರೂಢಿಸಿಕೊಳ್ಳಿ… ಒಳ್ಳೇದು.