http://reelbox.tv/catalog-admin/image/gallery/df235-5.jpg

ಸೂಕ್ಷ್ಮ ಸ್ವಭಾವದವರು ಅತಿ ಹೆಚ್ಚು ಪರೋಪಕಾರ ಹಾಗು ಸಹಾನುನುಭೂತಿ ಇರೋರು. ಒಬ್ರಿಗೆ ಖುಷಿ ಆಗುತ್ತೆ ಅಂದ್ರೆ, ಎಲ್ಲಿವರೆಗಾದರೂ ಮುನ್ನುಗ್ಗೋರಲ್ಲಿ ಇವರೇ ಮೊದಲು. ಹೆಚ್ಚಿನ ಸಮಯಗಳಲ್ಲಿ ಸೂಕ್ಷ್ಮ ಮನಸ್ಥಿತಿ ಇರೋರು ತುಂಬ ದುರ್ಬಲರು ಅನ್ನೋರೆ ಹೆಚ್ಚು. ಜನರ ಜೊತೆ ಸೇರಕ್ಕೆ ಅವರು ಸ್ವಲ್ಪ ಹಿಂದೇಟಾಕ್ತಾರೆ ನಿಜ. ಆದರೆ ಅವರಿಗೆ ಇರೋ ಅಷ್ಟು ತಾಳ್ಮೆ, ಕ್ಷಮಾಗುಣ… ಬೇರೆಯವ್ರಲ್ಲಿ ಬರೋಕ್ಕೆ ಸಾಧ್ಯಾನೇ ಇಲ್ಲ.

1. ಪ್ರತಿ ಚಿಕ್ಕ ವಿಷಯಾನೂ ತುಂಬಾ ಆಳವಾಗಿ ಅನುಭವಿಸ್ತಾರೆ

ತಮ್ಮ ಭಾವನೆಗಳಿಗೆ ಅತಿ ಹೆಚ್ಚು ಹೊಡೆತ ಕೊಡಬಹುದಾದ ಎಲ್ಲಾ ನೋವುಗಳನ್ನೂ ತಿಂದು, ಗೆದ್ದುಬರ್ತಾರೆ ಈ ಸೂಕ್ಷ್ಮಜೀವಿಗಳು. ನೋವಲ್ಲೂ ಗೆಲುವನ್ನ ಕಾಣೋಕೆ ಇವರಿಗೆ ಮಾತ್ರ ಸಾಧ್ಯ. ಯಾರಿಂದ ಏನನ್ನೂ ಅಪೇಕ್ಷಿಸದೇ ಸಹಾಯ ಮಾಡ್ತಾರೆ. ಯಾವುದೇ ಅಹಂಭಾವ ಇಲ್ಲದೇ ಸಮಾಜಕ್ಕೆ ಒಂದೊಳ್ಳೆ ರೀತೀಲಿ ಹಿಂತಿರುಗಿಸ್ಬೇಕು ಅನ್ನೋ ಮನೋಭಾವದವರು.

2. ಇವರು ಮನಃಪೂರ್ತಿಯಾಗಿ ಎಲ್ಲಾರ್ನೂ ಪ್ರೀತಿಸ್ತಾರೆ

ಯಾರು ಎಷ್ಟೇ ನೋವು ಕೊಟ್ಟಿದ್ರೂ, ಎಲ್ಲರ್ನೂ ತುಂಬಾ ಪ್ರೀತಿಸ್ತಾರೆ.  ಮನಸ್ಸು ಎಷ್ಟೇ ನೋವಾದ್ರೂ ಬೇಗ ಚೇತರಿಸಿಕೊಳ್ತಾರೆ. ಇವರ ಪ್ರೀತಿಗೆ ಯಾವುದೇ ಎಲ್ಲೆ ಇಲ್ಲ. ಮತ್ತೆ ನೋವಾಗೋ ಸಾಧ್ಯತೆ ಇದ್ರೂ ಹೊರಬರೋ ಹುಮ್ಮಸ್ಸಿನಿಂದ ಮುನ್ನುಗ್ತಾರೆ.

ಮೂಲ

3. ಯಾರಿಗೇ ಆಗ್ಲೀ ಸಹಾಯ ಮಾಡೋಕೆ ಮುಂದಿರ್ತಾರೆ

ಈ ಸೂಕ್ಷ್ಮ ಮನಸ್ಸಿನೋರಿರ್ತಾರಲ್ಲ… ಅವರು, ಬೇರೆಯೋರ್ಗೆ ಹೋಲಿಸ್ಕೊಂಡ್ರೆ ಸ್ವಲ್ಪ ಜಾಸ್ತೀನೇ ಕಷ್ಟಗಳನ್ನ ದಾಟಿ ಬಂದಿರ್ತಾರೆ. ಮತ್ತೊಬ್ಬರನ್ನ ಯಾವಾಗ್ಲೂ ಗೌರವದಿಂದ ಕಾಣ್ತಾರೆ, ತಮಗಿಷ್ಟವಾದೋರ ಬೆಂಗಾವಲಾಗಿರ್ತಾರೆ. ಪ್ರೀತಿ ಅನುಕಂಪದ ಮಡಿಲಾಗಿರ್ತಾರೆ. ರೋಡಲ್ಲಿ ಸಿಕ್ಕೋರಿಗೆ ಊಟ ಕೊಡೋರು, ಬಡ ಮಕ್ಕಳಿಗೆ ಸಹಾಯಮಾಡೋರು ಈ ಥರದೋರೆ!

4. ಯಾವುದೇ ಅಪಾಯಾನೂ ಧೈರ್ಯವಾಗಿ ಎದುರಿಸ್ತಾರೆ

ಬೇರೆಯವರು ಮುಂದ್ವರಿಯಕ್ಕೆ ಹೆದರೋ ಕೆಲಸಗಳ್ನ ಇವರು ಸರಾಗವಾಗ್ ಮಾಡಿ ಮುಗಿಸ್ತಾರೆ. ಯಾಕಂದ್ರೆ, ಜೀವನದಲ್ಲಿ ಇವರು ಎದುರಿಸಿರೋ ಕಷ್ಟಗಳು ಇವರಿಗೆ ಅಷ್ಟು ಧೈರ್ಯ ತಂದುಕೊಟ್ಟಿರುತ್ವೆ. ಇನ್ನು, ಮುಂಚೇನೇ ಹೇಳ್ದಾಗೆ, ಯಾರಿಗ್ ಯಾವಾಗ ಸಹಾಯ ಬೇಕಂದ್ರೂ ಮಾಡಕ್ಕೆ ಸದಾ ಸಿದ್ಧ ಇಂತೋರು.

ಮೂಲ

5. ಹೊಸತನ ಹುಡುಕ್ತಿರ್ತಾರೆ

ಸೃಜನಶೀಲತೆ ಹುಟ್ಟೋದು ಜೀವನದ ಎಲ್ಲಾ ಸವಾಲುಗಳಿಗೂ ರೆಡಿಯಾಗಿದ್ದಾಗ ಮಾತ್ರ. ಇಂತೋರೇ ಕಲಾವಿದರು, ಬರಹಗಾರರು, ಸಂಗೀತಗಾರರಾಗೋದು. ಆಗ್ಲೇ ಹೇಳ್ದಾಗೆ, ಇವರು ಸಮಸ್ಯೆಗಳನ್ನ ಸುಲಭವಾಗಿ ನಿವಾರಿಸ್ತಾರೆ. ತಮ್ಮ ಕಲೆಯಿಂದ ಬೇರೇಯವರನ್ನ ಉತ್ತೇಜಿಸ್ತಾರೆ.

6. ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡಿಹಿಡೀತಾರೆ

ಕೆಲಸ ಮಾಡೋ ವಿಷಯ ಬಂದ್ರೆ ಇಲ್ಲ ಅನ್ನೋ ಮಾತೇ ಇವರಿಗೆ ಗೊತ್ತಿಲ್ಲ. ಯಾವುದೇ ಕೆಲಸಕ್ಕೂ ಇಲ್ಲಾ ಅನ್ನದೇ ಮುನ್ನುಗ್ತಾರೆ. ಅವರು ಜೀವನ್ದಲ್ಲಿ ಎದುರ್ಸಿರೋ ಕಷ್ಟಗಳು ಅವ್ರಿಗೆ ಎಂಥಾ ಸವಾಲ್ನಾದ್ರೂ ಎದುರ್ಸೋ ಶಕ್ತಿ ಮತ್ತು ಯುಕ್ತಿ ಎರಡನ್ನೂ ಕೊಟ್ಟಿರತ್ತೆ. ಮತ್ತೆ ಒಂದು ಸಮಸ್ಯೆ ಅಂತ ಬಂದಾಗ, ಅದನ್ನೀಗ್ಲೇ ಸರಿಪಡಿಸದೇ ಹೋದ್ರೆ, ಮುಂದೆ ಇನ್ನೂ ದೊಡ್ಡದಾಗ್ಬೋದು ಅನ್ನೋದೂ ಇವರಿಗೆ ಗೊತ್ತು.

ಮೂಲ

7. ಕೈಗೆ ತೊಗೊಂಡಿದ್ದ ಕೆಲಸಾನ ಮಾಡೇ ಮುಗಿಸ್ತಾರೆ

ಇಂಥೋರು ಯಾವ್ದೇ ವಿಷಯ ಕೈಗೆತ್ಕೊಂಡ್ರು ಅದನ್ನ ಮಾಡೇ ಮುಗಿಸ್ತಾರೆ.  ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸೋ ಅಭ್ಯಾಸ ಇವರಿಗಿರುತ್ತೆ. ಮನೆ, ಸಂಬಂಧ, ವ್ಯಕ್ತಿ ಯಾರಾದ್ರೂ ಇರ್ಲಿ. ಅವರ ಬಗ್ಗೆ ತಾವೇನೂ ಹೇಳ್ಕೊಳ್ದೇ ಇದ್ರು, ಇವರಿಗೆಲ್ಲಾ ತಿಳಿದಿರುತ್ತೆ. ಈ ಗುಣ ಕೆಲವ್ರಿಗೆ ಆಶ್ಚರ್ಯ ತರ್ಸತ್ತೆ. ಈ ಥರದ ವ್ಯಕ್ತಿಗಳು ಎಂಥಾ ಪುಣ್ಯಾತ್ಮರು ಅಂದ್ರೆ, ಅವ್ರು ಬೇರೆಯೋರ್ ಬಗ್ಗೆ ಗಮನ್ಸಿರ್ತಾರಲ್ಲ, ಅಂತಾ ಅಂಶಗಳ್ನ ಅವರಿಗೇ ಸಹಾಯ ಮಾಡಕ್ಕೆ ಉಪಯೋಗಿಸ್ತಾರೆ.

8. ಪ್ರಕೃತಿ ಥರಾನೇ ಇವರೂ ಶಾಂತ ಸ್ವಭಾವದೋರಾಗಿರ್ತಾರೆ

ಇವರಿಗೆ ಜನ-ಜಂಜಾಟ ಅಂದ್ರೆ ಅಷ್ಟು ಹಿಡಿಸಲ್ಲ, ಸದ್ದು ಗದ್ದಲ ಆಗಲ್ಲ. ಒಬ್ರೇ ಇರಕ್ಕೆ ಇಷ್ಟಪಡ್ತಾರೆ. ಇದ್ರಿಂದ ಅವ್ರಿಗೆ ಒಂಥರಾ ಶಕ್ತಿ, ತಮ್ಮನ್ನ ತಾವು ಸರಿಯಾಗಿ ಅರ್ಥ ಮಾಡ್ಕೊಳಕ್ಕೆ ಸಮಯ… ಎಲ್ಲಾ ಸಿಕ್ಕತೆ ಅಂತಾರೆ. ಥೇಟ್ ಪ್ರಕೃತಿ ಥರಾನೇ ಇವ್ರೂ ಯಾರಿಂದ ಏನೂ ನಿರೀಕ್ಷೆ ಇಟ್ಕೊಳ್ದೆ ಸ್ವಚ್ಚ ಮನಸ್ಸಿಂದ ಬೇರೆಯೋರಿಗೆ ಸಹಾಯ ಮಾಡ್ತಾರೆ.

ಮೂಲ

ಈಗ ಹೇಳಿ, ಇವರು ಯಾವ ರೀತೀಲಿ ದುರ್ಬಲರು ಅಂತ?