https://rupshabhadra.files.wordpress.com/2014/12/altajdc0mi_vngwvvzbbyncd0jujytgmvrf3c3zrm0luxs2.jpg

ಇಂದಿನ ಬಿಡುವೇ ಇಲ್ಲದಿರೋ ಜೀವನಶೈಲಿಯಲ್ಲಿ ನಾವೆಲ್ಲ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಅಂದರೆ ಒಂಟಿತನ. ಆ ಒಂಟಿತನಕ್ಕೆ ನಾವು ಸಲೀಸಾಗಿ ಕೊಡೋ ಕಾರಣ "ಟೈಮೇ ಇಲ್ಲಾರಿ" ಅಂತಾ. ಮುಂದೊಂದು ದಿನ ಸಾಕಷ್ಟು ಟೈಮ್ ಇದ್ದು,ಇದೇ ಒಂಟಿತನ ಶಾಪವಾಗಿ ನಮ್ಮನ್ನು ಖಿನ್ನತೆಗೆ ದೂಡುತ್ತೆ. ಆ ಬೇಜಾರಿನ ಫಲಿತಾಂಶ, ಬೇಡ ಬಿಡಿ… ಅಷ್ಟು ದೂರ ಹೋಗೋದೇ ಬೇಡ.

ಹಾಗಾಗಿ, ನಾವೆಲ್ಲಾ ಅರ್ಥ ಮಾಡ್ಕೋಬೇಕಾಗಿರೊ ಒಂದು ಸತ್ಯ ಅಂದ್ರೆ, ಜೇವನದಲ್ಲಿ ಹಣ ಎಷ್ಟು ಮುಖ್ಯಾನೋ ಅಷ್ಟೇ ಜನ ಕೂಡ ಮುಖ್ಯ ಅನ್ನೋದು.  ಒಳ್ಳೆಯ ಸ್ನೇಹ ಮತ್ತು ಒಳ್ಳೆಯ ಸ್ನೇಹಿತರು ಮುಖ್ಯ. ಮನುಷ್ಯ ಸ್ನೇಹ ಜೀವಿ. ಸಂಶೋಧಕ ರಾಬಿನ್ ಹೇಳೋ ಪ್ರಕಾರ ಒಬ್ಬ ಮನುಷ್ಯ 5 ಆತ್ಮೀಯ ಸ್ನೇಹಿತರು, ಅವರ 5 ಆತ್ಮೀಯ ಸ್ನೇಹಿತರ, .ಅವರ 5 ಆತ್ಮೀಯ ಸ್ನೇಹಿತರು…ಹೀಗೆ ಅಬ್ಬಬ್ಬ್ಬಾ ಅಂದ್ರೆ, ೧೫೦ ಸ್ನೇಹ ಸಂಬಂಧಗಳು ಹೊಂದಿರುತ್ತಾನಂತೆ. ಆದರೆ ಎಷ್ಟು ಸಂಭಂಧಗಳನ್ನ ಉಳಿಸಿಕೊಂಡಿರ್ತಾನೆ ಅನ್ನೋದೇ ಯಕ್ಷ ಪ್ರಶ್ನೆ!

 ಏನೇ ಫೇಸ್ಬುಕ್ , ವಾಟ್ಸ್-ಅಪ್ ಅನ್ನೋ ಸಾಮಾಜಿಕ ಜಾಲತಾಣಗಳಿದ್ದರೂ ಜನರಲ್ಲಿ ಆ ಆತ್ಮೀಯತೆ ತುಂಬ ಕಮ್ಮಿಯಾಗಿದೆ.ಸಹಜ ನಗು ಮಾಯಾ ಆಗಿದೆ. ಇದೆಲ್ಲಾ ಬಿಟ್ಟು ನಮ್ಮ ಸಂಬಂಧಗಳನ್ನ ಸ್ವಲ್ಪ ಗಟ್ಟಿ ಮಾಡ್ಕೊಬೇಕು. ಏನಂತೀರಾ? ಅದಕ್ಕೋಸ್ಕರಾನೇ ನಾವಿಲ್ಲಿ ನಿಮಗೆ 9 ದಾರಿಗಳನ್ನ ಹೇಳ್ತೀವಿ, ಕೇಳಿ.

1. ಒಬ್ಬರಿಗೊಬ್ಬರು ಆದಷ್ಟೂ ಸಮಯ ಕೊಡಿ

ಜೀವನದಲ್ಲಿ ನಾವು ತುಂಬ ನೊಂದಾಗ, ನಮಗೆ ನಿಜವಾಗ್ಲೂ ಬೇಕಾಗಿರೋದೇನು ಹೇಳಿ? ಒಂದು ಹೆಗಲು, ಎರಡು ಕಿವಿ, ನಿಮ್ಮ ನೋವಿಗೆ ಸ್ಪಂದಿಸುವ ಒಂದು ಹೃದಯ, "ನಾನಿದ್ದೇನೆ ಬಿಡೋ'' ಅನ್ನೊ ಒಂದೇ ಒಂದು ಮಾತು. ನಿಮಗೆ ಆ ತರ ಒಬ್ಬ ಫ್ರೆಂಡ್ ಇದ್ದರೆ ಯಾವತ್ತೂ ನಿರ್ಲಕ್ಷಿಸಬೇಡಿ. ಪರಸ್ಪರ ಭೇಟಿ ಮಾಡಕ್ಕೆ ಟೈಂ ಮಾಡ್ಕೊಳ್ಳಿ. ಸಮಯದ ಅಭಾವದ ನೆಪ ಹೇಳಿ ಸ್ನೇಹಿತರನ್ನು ಕಳೆದುಕೊಳ್ಳ ಬೇಡಿ.ಎಷ್ಟೇ ಫೋನೂ, ಮೆಸೇಜು ಮಾಡಿದ್ರೂ ಪರಸ್ಪರ ಕೈ ಕುಲುಕಿ , ಆಲಂಗಿಸಿ ನಕ್ಕಾಗ ಮಾತ್ರ ನಿಮ್ಮಲ್ಲಿ  ಒಂದು ರೀತಿ ಲವಲವಿಕೆ,ತುಂಬಿ ಬರೋ ಹೃದಯ ನಿಮ್ಮೆಲ್ಲಾ ನೋವನ್ನು ಮರೆಸುವ ಸಂಜೀವಿನಿಯಾಗುತ್ತೆ. ಈ ರೀತಿ ಔಷಧ ನಿಮ್ಮ ಯಾವ ಶಾಂಪಿಂಗ್ ಮಾಲ್ ನಲ್ಲಿ ಸಿಗುತ್ತೆ ಹೇಳಿ?

2. ಸಮಯ ಸಿಕ್ಕಾಗ ಮೆಸೇಜ್ ಮಾಡಿ

ನಿಮ್ಮ ಸ್ನೇಹಿತರ ನೋವು-ನಲಿವುಗಳಿಗೆ ಸ್ಪಂದಿಸಿ.ಶುಭ ಸಂದರ್ಭಗಳಲ್ಲಿ ತಪ್ಪದೆ ವಿಶ್ ಮಾಡಿ. ಒಟ್ಟಿಗೆ ಸಮಯ ಕಳೆದಾಗ ಫೋಟೋ ತಗೊಳ್ಳಿ. ಜೊತೆಯಾಗಿ ಇರುವ ಫೋಟೊಗಳನ್ನು ಶೇರ್ ಮಾಡಿ. ಅವರಿಗೆ ಇಷ್ಟವಾದ ಒಳ್ಳೆಯ ಹವ್ಯಾಸಗಳಲ್ಲಿ ನೀವೂ ಆಸಕ್ತಿ ತೋರಿಸಿ .

ಮೂಲ

3.ಮರೆಯದೆ ಕಾಲ್ ಮಾಡಿ

ಈಗಿನ ಕಾಲದಲ್ಲಿ ಎಲ್ಲಾರೂ ಬ್ಯುಸಿನೇ. ಆದ್ರೂ, ನಿಮಗೆ ನಿಮ್ಮ ಫ್ರೆಂಡ್ ಕಾಲ್ ಮಾಡಿ, ನಿಮಗೆ ಆ ಸಮಯದಲ್ಲಿ ಸರಿಯಾಗಿ ಮಾತಾಡಕ್ಕೆ ಆಗದಿದ್ರೆ ಅಥವಾ ಕಾಲ್ ರಿಸೀವ್ ಮಾಡಕ್ಕೆ ಆಗ್ಲಿಲ್ಲ ಅಂದ್ರೆ, ತಪ್ಪದೇ ಆಮೇಲೆ ಕಾಲ್ ಮಾಡಿ. ಒಂದು ಸರ್ವೇ ಪ್ರಕಾರ, ಯಾವಾಗ ಸ್ನೇಹಿತರ ಮಧ್ಯೆ ಕಮ್ಯೂನಿಕೇಷನ್ ಚನ್ನಾಗಿರತ್ತೋ, ಅವರ ಸ್ನೇಹಾನೂ ಅಷ್ಟೇ ಗಟ್ಟಿಯಾಗಿರತ್ತೆ.

4. ಅವರ ಸಂತೋಷದಲ್ಲಿ, ಯಶಸ್ಸಲ್ಲಿ ಭಾಗವಹಿಸಿ

ನಿಮ್ಮ ಸ್ನೇಹಿತನ ಜೀವನದ ಅದ್ಬುತ ಕ್ಷಣಗಳಲ್ಲಿ ಅವರ ಜೊತೆಗಿರಿ. ಅವರ ಹುಟ್ಟಿದ ದಿನ,ಮದುವೆ ವಾರ್ಷಿಕೋತ್ಸವ,ಮಗುವಿನ ಹುಟ್ಟಿದ ದಿನ, ಆರೋಗ್ಯ ಹದಗೆಟ್ಟಾಗ… ಹೀಗೆ, ಜೊತೆಗೆ ನಿಲ್ಲಿ, ಹಾರೈಸಿ. ಈಗಂತೂ ಹಣಕ್ಕಿಂತ ದುಬಾರಿ ಮನುಷ್ಯನ ಸಮಯ. ಅದನ್ನ ಕೊಡಿ.ಅದ್ಬಿಟ್ಟು, ಅಸೂಹೆ ಪಡೋದೋ, ಅವನಾಗೇ ಕರೀಲಿ ಅಂತಾನೋ ಕಾಯಬೇಡಿ.

ಮೂಲ

5. ಸ್ನೇಹಿತ ಕಷ್ಟದಲ್ಲಿದ್ದಾಗ, ಕರೆಯದಿದ್ರೂ ಹೋಗಿ

ಎಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀವೋ, ಹಣ ಕೊಡಬೇಕಾಗುತ್ತೋ ಅನ್ನೋ ಯೋಚನೆ ಬಿಡಿ. ನಿಮ್ಮ ಸ್ನೇಹಿತ ಕೆಳಗೆ ಬಿದ್ದಾಗ ಕೈ ಚಾಚಿ. ನಿಮ್ಮ ದುಡ್ಡೇನೂ ಕೊಡಬೇಡಿ. ಧೈರ್ಯ ಕೊಡಿ, ಸಾಂತ್ವಾನ ಹೇಳಿ, ನಿಮ್ಮ ಸಮಯ ಕೊಡಿ ಸಾಕು. ನಿಮ್ಮ ಕೈಯಲ್ಲಿ ಏನು ಸಹಾಯ ಆಗುತ್ತೋ ಮಾಡಿ

6. ಸ್ನೇಹಿತ ತಪ್ಪು ಮಾಡಿದಾಗ ಖಂಡಿಸಿ

ನಮ್ಮೆಲ್ಲರಿಗೂ ಸ್ನೇಹಿತರಂದ್ರೆ ತುಂಬಾನೇ ಪ್ರೀತಿ. ಒಂದೊಂದ್ ಸರ್ತಿ ಅಂತೂ ಅವರ ಮೇಲೆ ಕುರುಡು ಪ್ರೀತಿ. ಅವರೇನಂದ್ರೂ, ಏನೇ ಮಾಡಿದ್ರೂ ಸರಿ. ಆದ್ರೆ, ನಾವೆಲ್ಲ ನೆನಪಿಟ್ಕೋಬೇಕಾದ್ದು, ಅವರು ಸರಿ ಅಂತ ಗೊತ್ತಿದ್ದಾಗ, ಅವರ ಜೊತೆ ನಿಲ್ಲೋದು ಎಷ್ಟು ಮುಖ್ಯಾನೋ, ಅದೇ ರೀತಿ ಅವರು ತಪ್ಪು ಮಾಡ್ದಾಗ ಖಂಡಿಸೋದೂ ಅಷ್ಟೇ ಮುಖ್ಯ. ನೀವು ಸರಿಯಾದ ವಿಷಯ ಹೇಳಿದ್ರೆ, ನಿಮ್ಮ ಮೇಲೆ ಅವರಿಗೆ ನಂಬಿಕೆ, ಅಭಿಮಾನ ಇದ್ರೆ, ನಿಮ್ಮ ಮಾತು ತೆಗೆದುಹಾಕಲ್ಲ ನೋಡ್ಕೊಳಿ.

ಮೂಲ

7. ನಿಮ್ಮ ಜೀವನದಲ್ಲಿ ಅವರೆಷ್ಟು ಮುಖ್ಯ ಅನ್ನೋದನ್ನ ತೋರ್ಸಿ

ಮನುಷ್ಯ ಅಂದ್ಮೇಲೆ ಅವನನ್ನ ಯಾರಾದ್ರೂ ಹೊಗಳಿದಾಗ, ಬೇರೆಯವರ ಜೀವನದಲ್ಲಿ ತಮಗೆ ಮಹತ್ವ ಇದೆ ಅಂತ ಗೊತ್ತಾದಾಗ ಖುಷಿ ಆಗೋದು ಸಹಜ. ಆದ್ರಿಂದ ಸಂದರ್ಭ ಸಿಕ್ಕಾಗೆಲ್ಲ ನಿಮ್ಮ ಸ್ನೇಹಿತರಿಗೆ ಅವರು ನಿಮಗೆಷ್ಟು ಮುಖ್ಯ ಅಂತ ಹೇಳಿ. ಯಾವಾಗ್ಲೂ ಬಾಯಿಂದ್ಲೇ ವ್ಯಕ್ತಪಡಿಸಬೇಕು ಅಂತ ಇಲ್ಲ. ಅವರ ಜೊತೆ ಸಮಯ ಕಳಿಯೋದು, ಆದಾಗ ಗಿಫ್ಟ್ ಕೊಡೋದು ಮಾಡೋದ್ರಿಂದ ಅವರಿಗೂ ಖುಷಿಯಾಗುತ್ತೆ, ನಿಮ್ಮ ಸ್ನೇಹಾನೂ  ಚನ್ನಾಗಿರತ್ತೆ.

ಇಷ್ಟು ಮಾಡಿ ನೋಡಿ. ನೀವು ಬಿಟ್ರೂ ನಿಮ್ಮ ಸ್ನೇಹ ನಿಮ್ಮನ್ನು ಬಿಡಲ್ಲ.