1. ಬೇವಿನ ಎಲೆ

kamdora

ಬೇವಿನ ಜ್ಯೂಸ್ ಕುಡಿದರೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.

ಬೇವಿನ ರಸ ಮೈಯಲ್ಲಿ ವೈರಸ್ ಬೆಳೆಯುವುದನ್ನು ಕಡಿಮೆ ಮಾಡಿ ಲಿವರ್ ಚೆನ್ನಾಗಿ ಕೆಲಸ ಮಾಡುವ ಹಾಗೆ ಮಾಡುತ್ತದೆ.

ಸಕ್ಕರೆ ಖಾಯಿಲೆ ಇರುವವರು ಬೇವಿನ ರಸ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಗೊಳ್ಳುತ್ತದೆ. ಮೊಡವೆ ಗುಳ್ಳೆಗಳಿಗೆ ರಾಮಬಾಣ.

2. ದೊಡ್ಡಿಪತ್ರೆ

jvkini

ಎಲ್ಲ ತರಹದ ಅಲರ್ಜಿಗೆ ದೊಡ್ಡಪತ್ರೆ ಸೊಪ್ಪಿನ ರಸ ಒಳ್ಳೆ ಔಷಧಿ.

ಇದರ ಎಲೆಗಳನ್ನು ಜಜ್ಜಿ ಗಾಯಕ್ಕೆ ಅಥವಾ ಚೇಳು ಕಡಿದ ಜಾಗಕ್ಕೆ ಹಚ್ಚಿದರೆ ಚಮತ್ಕಾರ ಆಗತ್ತೆ!

3. ದಾಳಿಂಬೆ ಎಲೆ

withlovefromthevine

ದಾಳಿಂಬೆ ಎಲೆ ತಿನ್ನುವದರಿಂದ ಕೆಮ್ಮು ಕಡಿಮೆಯಾಗುವಂತೆ ಮಾಡುತ್ತದೆ.

ದಾಳಿಂಬೆ ಎಲೆಗಳ ರಸದಿಂದ ಮೈ ತಿಕ್ಕಿ ಸ್ನಾನ ಮಾಡಿದರೆ ಶರೀರಕ್ಕೆ ಕಾಂತಿ ಬರುತ್ತದೆ ಮತ್ತು ಬೆವರಿನ ವಾಸನೆ ಹೋಗುತ್ತದೆ.

4. ಬಿಲ್ವಪತ್ರೆ

ayurvedic

ಕಣ್ಣಿನಲ್ಲಿ ಉರಿ, ಕಡಿತ ಇದ್ದಾಗ ಬಿಲ್ವಪತ್ರೆ ರಸವನ್ನು ಕಣ್ಣಿನ ಮೇಲೆ ಹಚ್ಚಿಕೊಳ್ಳಬಹುದು.

ಬಿಲ್ವದ ಎಲೆಯನ್ನು ನೀರು ಸೇರಿಸದೆ ರಸ ಮಾಡಿ ಹಣೆಗೆ ಹಚ್ಚುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ.

ಈ ಎಲೆಯ ರಸ ನೀರನ್ನು ನೆಗಡಿಯಿದ್ದಾಗ ಮೂಗಿಗೆ ಹನಿಸಬಹುದು.

ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಮುಂಜಾನೆ ಎದ್ದಕೂಡಲೇ 2-3 ಬಿಲ್ವದ ಎಲೆಯನ್ನು ತಿನ್ನಬಹುದು.

5. ಹೊನಗೊನೆ ಸೊಪ್ಪು

jansibhathere

'ಹೊನಗೊನೆ ಸೊಪ್ಪು ಹೋದ ಕಣ್ಣು ತಂತು', ಅಂತ ಹೇಳ್ತಾರೆ.

ಕರುಳಿನ ಹುಣ್ಣು, ಬಾಯಿಹುಣ್ಣು ಮತ್ತು ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ.

ಕೂದಲಿಗೆ ಎಣ್ಣೆ ಮಾಡಿ ಹಚ್ಚಬಹುದು.

6. ಒಂದೆಲಗ

bestherbalhealth

ಓಂದೆಲಗ ಮಕ್ಕಳ ಸಮಸ್ಯೆಗೆ ಸಿದ್ದೌಷದ. ಇದರ ರಸ ಕುಡಿಯುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು, ಜ್ಞಾಪಕಶಕ್ತಿ ಹೆಚ್ಚುವುದು.

ಇದರ ಕಷಾಯ ಸೇವನೆಯಿಂದ ಮಲಬದ್ದತೆ ಹೋಗಲಾಡಿಸಬಹುದು.

7. ನೇರಳೆ ಎಲೆ

varashreenursery

ನೇರಳೆ ಎಲೆಯ ರಸದಿಂದ ಹೊಟ್ಟೆ ಹುಣ್ಣು ಮತ್ತು ಭೇದಿ ಕಡಿಮೆ ಮಾಡಬಹುದು.

ವಸಡು ಹಾಗು ಹಲ್ಲಿನ ಆರೋಗ್ಯಕ್ಕೆ ಇದನ್ನು ಹಲ್ಲುಪುಡಿಯಂತೆ ಉಪಯೋಗಿಸಬಹುದು.

8. ಸೀಬೆ ಎಲೆ

guavaleafextract

ಸಿಕ್ಕಾಪಟ್ಟೆ ಭೇದಿ ಇದ್ದಾಗ ಸೀಬೆ ಎಲೆ ರಸ ತೆಗೆದುಕೊಂಡರೆ ತಟಕ್ ಅಂತ ಕಡಿಮೆಯಾಗತ್ತೆ.

ಇದರ ಕಷಾಯ ತೆಗೆದುಕೊಂಡರೆ ಮೈ ಕೊಬ್ಬು ಕಡಿಮೆಯಾಗತ್ತೆ.

ಕೂದಲಿಗೆ ಒಳ್ಳೆಯ ಕಂಡೀಷನರ್.

ನಿಮಗೆ ಈ 8 ಎಲೆಗಳಲ್ಲಿ ಯಾವುದು ಬೇಕು ಅನ್ನಿಸಿತು?