http://images.cinemaexpress.com/uploads/user/imagelibrary/2017/7/26/original/Operation-Alamelamma-1.jpg

ಅಪರೂಪಕ್ಕೆ ಸಿಕ್ಕಾಗ ಎಲ್ರು ಒಳ್ಳೆಯವರೇ, ದಿನ ಜೊತೆಗ್ ಇದ್ದಾಗ್ಲೇ ನಿಜ ಗೊತ್ತಾಗದು… ಅದೇ ರೀ ಮದ್ವೆ ಆದ್ಮೇಲೆ ದಿನ ಜೊತೆಗೆ ಇರ್ಬೇಕಲ್ವಾ ಅದಕ್ಕೆ ಹೇಳ್ದೆ, ಹಾಗಾದ್ರೆ ಮೊದ್ಲೇ ಅವ್ರು ಒಳ್ಳೆಯವರಾ, ಸರಿ ಹೋಗ್ತಾರಾ, ಹೊಂದ್ಕೊತಾರ ಅಂತ ಹೇಗಪ್ಪಾ ತಿಳ್ಕೊಳೋದು? ನಾವಿವತ್ತು ಸ್ವಲ್ಪ ಪತ್ತೇದಾರಿ ಕೆಲಸ ಮಾಡಿ ಒಂದಿಷ್ಟು ಗುಣಗಳನ್ನ ಮೂಟೆಕಟ್ಟಿ ತಂದಿದೀವಿ. ನಿಮ್ಮವರ ಹತ್ತಿರ ಈ ಗುಣಗಳು ಇತ್ತು ಅಂದ್ರೆ ದೂಸ್ರಾ ಮಾತೆ ಬೇಡ ಜೈ ಅಂತ ಒಪ್ಕೋಬಿಡಿ. ಬನ್ನಿ ಯಾವ ಯಾವ ಗುಣ ಅಂತ ನೋಡಣ…

1. ಹೊಸದನ್ನ ಕಲಿತು ನಿಮ್ಮ ಬೆಳವಣಿಗೆಗೆ ಸಹಾಯ ಮಾಡೋ ಗುಣ

ಇಬ್ರು ಒಬ್ರಿಗೊಬ್ರು ಕನ್ನಡಿ ಇದ್ದಂಗೆ, ನಿಮ್ಮ ಮನಸಿನ ಭಾವನೆಯಿಂದ, ನಿಮ್ಮ ವರ್ತನೆಯಿಂದ ಇಬ್ರು ತುಂಬಾ ಕಲೀತೀರ. ಇಬ್ರು ಇಬ್ರುತಾರಾನು ಯೋಚ್ನೆ ಮಾಡೋದನ್ನ ಕಲೀತೀರ. ಒಂದೇ ವಿಷ್ಯಾನ ಎರೆಡೆರಡು ರೀತಿ ನೋಡುವ ಕಲೆ ಕಲೀತೀರ. ಹೊಸದನ್ನ ಕಲಿಯಕ್ಕೆ ಇಬ್ಬರಿಗೂ ಆಸಕ್ತಿ ಇರತ್ತೆ. ಒಬ್ರು ಕಲಿತರೆ ಇನ್ನೊಬ್ರು ಕಲ್ತೆ ಕಲೀತಾರೆ. 

ಮೂಲ

2. ನೀವು ಹೇಗಿದ್ದೀರೋ ಹಾಗೇ ನಿಮ್ಮನ್ನ ಇಷ್ಟ ಪಡೋ ಗುಣ  

ನೀವು ನೀವಾಗಿದ್ದಾಗಲೇ ಯಾರು ಇಷ್ಟ ಪಡ್ತಾರೋ ಅವ್ರು ನಿಮಗೆ ಸರಿಯಾದೋರು ಅನ್ನೋದನ್ನ ತಿಳ್ಕೊಳಿ. ನಿಮ್ಮನ್ನ ತನಗೋಸ್ಕರ ಬದಲಾಗಿ ಅಂತ ಹೇಳಲ್ಲ, ನೀವ್ ಹೇಗಿದೀರೋ ಹಾಗೆ ಇಷ್ಟ ಪಡ್ತಾರೆ. ನೀವ್ ಯೋಚ್ನೆ ಮಾಡೋ ರೀತೀನ ತಪ್ಪು ಅನ್ನಲ್ಲ ಬದಲಾಗಿ ಇದು ಯೋಚನೆ ಮಾಡೋ ಇನ್ನೊಂದು ಆಂಗಲ್ ಅಂತಾರೆ.

ಮೂಲ

3. ನೇರವಾಗಿ ಅನಿಸಿದ್ದನ್ನ ಹೇಳೋ ಗುಣ 

ಜಾಸ್ತಿ ಹಿಂದೆ-ಮುಂದೆ ನೋಡಲ್ಲ, ಅನಿಸಿದ್ದನ್ನ ನೇರವಾಗಿ ಹೇಳ್ತಾರೆ. ವಾದ ಮಾಡಲ್ಲ ಬದಲಾಗಿ ಚರ್ಚೆ ಮಾಡ್ತಾರೆ. ಮಾತನ್ನ ಮನಸ್ಸಿಂದ ಆಡ್ತಾರೆ. ಭಾವನೆಗೆ ಬೆಲೆ ಕೊಟ್ಟು ಮಾತಾಡ್ತಾರೆ. ಸತ್ಯ ಮಾತಾಡ್ತಾರೆ, ನೇರವಾಗಿ ಮಾತಾಡ್ತಾರೆ 

ಮೂಲ

4. ಹೆಚ್ಚು ಕಮ್ಮಿ ನಿಮ್ಮ ವಿಚಾರಗಳು, ಯೋಚ್ನೆ ಮಾಡೋ ರೀತಿ ಎಲ್ಲ ಒಂದೇತರ ಇರೋದು 

ಹಾಗಂತ ಬೇರೆ ಯೋಚ್ನೆ, ಬೇರೆ ಭಾಷೆ, ಬೇರೆ ಜಾಗ, ಬೇರೆ ಜಾತಿ, ಬೇರೆ-ಬೇರೆ-ಬೇರೆ… ಇವೆಲ್ಲ ಸರಿ ಅಲ್ಲ ಅಂತಲ್ಲ. ಅದ್ರಲ್ಲೆಲ್ಲಾ ಅಂತ ಇದ್ರೂ ಒಬ್ರನ್ನೊಬ್ರು ಮನಸಾರೆ ಇಷ್ಟಪಟ್ಟು, ಒಬ್ರನ್ನೊಬ್ರು ಗೌರವಿಸ್ದಾಗ ಸಂಬಂಧ ವರ್ಕೌಟ್ ಆಗೇ ಆಗತ್ತೆ. ಆದ್ರೆ ನಾವಿಲ್ಲಿ ಹೇಳ್ತಿರೋದು ನಿಮ್ಮ ಮನಸ್ಸಿನ ವಿಚಾರಗಳು, ನಿಮ್ಮ ಮನಸ್ಸಿನ ಭಾವನೆಗಳು ಹೆಚ್ಚುಕಮ್ಮಿ ಒಂದೇತರ ಇರತ್ತೆ ಅಂತ. 

ಮೂಲ

5. ತಮ್ಗಿಂತಾ ನಿಮ್ಮನ್ನ ಸಿಕ್ಕಾಪಟ್ಟೆ ನಂಬೋ ಗುಣ

ಇಬ್ರೂ ಒಬ್ರನ್ನೊಬ್ರು ಸಿಕ್ಕಾಪಟ್ಟೆ ನಂಬುತ್ತೀರ, ಇಡೀ ಪ್ರಪಂಚಾನೇ ಎದ್ರು ನಿಂತ್ರು ನಿಮ್ಮ ನಂಬಿಕೆ ಕಮ್ಮಿ ಆಗಲ್ಲ. ಸುಳ್ಳು ಹೇಳಲ್ಲ. ಎಷ್ಟೇ ಕಷ್ಟಾದ್ರೂ ಯಾವ್ ವಿಷಯಾನು ಮುಚ್ಚಿಡಲ್ಲ.

ಮೂಲ

6. ಹೆಚ್ಚುಕಮ್ಮಿ ಎಲ್ಲಾದನ್ನು ನಿಮ್ಜೊತೆ ಚರ್ಚೆ ಮಾಡಿ, ನಿರ್ಧಾರ ಮಾಡೋ ಗುಣ

ಜೀವನ ಅಂದ್ಮೇಲೆ ಸಮಸ್ಯೆ ಇದ್ದೆ ಇರತ್ತೆ, ಸುಮ್ನೆ ವಾದ ಮಾಡಿ ಜಗಳ ಮಾಡಕ್ಕಿಂತ, ಟೆನ್ಷನ್ ಮಾಡ್ಕೊಂಡು ಕಿತ್ತಾಡಕ್ಕಿಂತ, ಸುಮ್ನೆ ಕೋಪ ಮಾಡ್ಕೊಳೋಕ್ಕಿಂತ ನೀವು ಚರ್ಚೆ ಮಾಡಿ ಒಂದೊಳ್ಳೆ ನಿರ್ಧಾರ ತೊಗೋತೀರ. ಒಂದೊಂದ್ಸತಿ ಒಬ್ಬೊಬ್ರು ಕಾಂಪ್ರಮೈಸ್ ಆಗ್ತೀರ. ಅಡ್ಜಸ್ಟ್ ಮಾಡ್ಕೊಂಡು ಆರಾಮಾಗಿರೋದೇ ಅಲ್ವಾ ಜೀವನ?

ಮೂಲ

7. ಬದಲಾವಣೇನ ಒಪ್ಪಿಕೊಂಡು ಬದಲಾಗೋ ಗುಣ 

ಕೊನೆಗೆ ಏನೇ ಆದ್ರೂ ಜೀವನ ನಮ್ಮ ಅಣ್ಣಾವ್ರು ಹೇಳಿರೋ ಥರ "ಕಾಲಕ್ಕೆ ತಕ್ಕಂತೆ ನಡೀಬೇಕು" ಅಲ್ವಾ. ಎಲ್ಲ ಬದಲಾಗತ್ತೆ, ಇಬ್ರಲ್ಲೂ ಅದನ್ನ ಒಪ್ಕೊಂಡು ಬದಲಾಗಿ ಹೋಗೋ ಗುಣ ಇರಬೇಕು.

ಮೂಲ

ಈ ಗುಣಗಳು ಇರ್ಲೇಬೇಕು ಅಂತಲ್ಲ, ಹೆಚ್ಚುಕಮ್ಮಿ ಇದ್ರೂ ಆಗತ್ತೆ. ಆದ್ರೆ ಇವೆಲ್ಲಾ ಇದ್ರೆ ಅವರ ಜೊತೆ ನಿಮ್ ಜೀವನ ಸಂತೋಷವಾಗಿರತ್ತೆ ಅನ್ನೋದು ಖಂಡಿತ.