https://hips.hearstapps.com/cos.h-cdn.co/assets/16/18/1462302602-banana-peel-teeth-whitening-hack.jpg

ಬಾಳೆಕಾಯಿ, ಬಾಳೆಹಣ್ಣು ರುಚಿ. ಹಾಗೆ ನಮ್ ಮೈಗೆ ಭಾಳ ಒಳ್ಳೆದು. ಸಿಪ್ಪೆ ಸಾಮಾನ್ಯವಾಗಿ ಬಿಸಾಕ್ತೀವಿ ಅಲ್ವಾ? ಬಾಳೆಹಣ್ಣಲ್ಲಿ ಎಷ್ಟು ಪೌಷ್ಟಿಕಾಂಶಗಳಿವೆಯೋ ಹಾಗೇ ಅದರ ಸಿಪ್ಪೇಲಿ ಕೂಡ ಇದೆ ಅನ್ನೋದು ಗೊತ್ತಿತ್ತಾ? ಇನ್ಮುಂದೆ ಸಿಪ್ಪೆ ಬಿಸಾಕ್ದೆ ಇರಕ್ಕೆ ಕೆಳಗಿನ ಕಾರಣಗಳನ್ನ ಓದಿ…

1. ಬಾಳೆಹಣ್ಣು ಸಿಪ್ಪೆಯಿಂದ ಹಲ್ಲು ಬೆಳ್ಳಗಾಗತ್ತೆ

ಬಾಳೆ ಸಿಪ್ಪೆಯಿಂದ ಒಂದು 15 ದಿನ ಹಲ್ಲು ತಿಕ್ಕಿ. ಹಲ್ಲಿನ ಮೇಲಿನ ಕೊಳೆ ಎಲ್ಲಾ ಹೋಗಿ ಹೊಳಪು ಬರತ್ತೆ. 

healthyandnaturallife.com

2. ನರಹುಲಿಗಳನ್ನ ಬೀಳಿಸತ್ತೆ 

ಕುತ್ತಿಗೆ, ಮುಖದ ಮೇಲೆ ಬರೋ ನರಹುಲಿಗಳನ್ನ ಹೋಗಲಾಡ್ಸ್ಕೊಳಕ್ಕೆ ಬಾಳೆ ಸಿಪ್ಪೆ ಅದಕ್ಕೆ ಕಟ್ಟಿ ಒಂದು ಬ್ಯಾಂಡೇಜ್ ಸುತ್ತಿ ರಾತ್ರಿ ಇಡೀ ಬಿಟ್ಬಿಡಿ. ಬೆಳಗ್ಗೆ ಏಳೋಷ್ಟ್ರಲ್ಲಿ ತಾನಾಗೇ ಬಿದ್ದೊಗತ್ತಂತೆ.

3. ಮೊಡವೆ ಗುಳ್ಳೆ ಮತ್ತೆ ಸುಕ್ಕು ಕಮ್ಮಿ ಮಾಡ್ಸತ್ತೆ

ಸುಮ್ನೆ ಒಂದು 30 ನಿಮಿಷ ಮುಖದ ಮೇಲೆಲ್ಲಾ ಸಿಪ್ಪೆ ತೊಗೊಂಡು ತಿಕ್ಕಿ. ನೋಡಿ ಇದರ ಕರಾಮತ್ತು!

mammabee.com

4. ಸೋರಿಯಾಸಿಸ್ (ಫಂಗಸ್ ಇನ್ಫೆಕ್ಶನ್) ತರೋ ಉರಿ ಮತ್ತೆ ಕೆರೆತ ಕಮ್ಮಿ ಮಾಡ್ಸತ್ತೆ

ಬಾಳೆ ಸಿಪ್ಪೆ ತೊಗೊಂಡು ಇನ್ಫೆಕ್ಶನ್ ಆಗಿರೋ ಜಾಗದಲ್ಲಿ ಚೆನ್ನಾಗಿ ತಿಕ್ಕಿದ್ರೆ ತಕ್ಷಣಕ್ಕೆ ಒಂಚೂರು ಉಪಶಮನ ಸಿಗತ್ತೆ.

socialdiary.net

5. ನೋವು ನಿವಾರಿಸತ್ತೆ

ಎಲ್ಲಾದ್ರೂ ಮೈ ಕೈ ನೋವು ಇರ್ದ್ರೆ ಬಾಳೆಸಿಪ್ಪೆ ತೊಗೊಂಡು ಉಜ್ಕೊಳಿ. ಮ್ಯಾಜಿಕ್ ನೋಡಿ. ನೋವು ಕಡಿಮೆ ಆಗತ್ತೆ. ಪೈನ್ ಬಾಮ್ ಹಚ್ಚ್ಕೊಳಲ್ಲ್ವಾ ಅದೇ ತರ!

findhomeremedy.com

6. ಮೈ ತೂಕ ಕಮ್ಮಿ ಆಗತ್ತೆ

ಬಾಳೆಹಣ್ಣಲ್ಲಿ ಪೊಟಾಸಿಯಮ್ ಇದೆ. ಆದ್ರಿಂದ ನಮ್ ಮೈಗೆ ಭಾಳ ಒಳ್ಳೆದು ಅಂತ ತಿನ್ತೀವಿ. ಆದ್ರೆ ಅದ್ರಲ್ಲಿ 40% ಪೊಟಾಸಿಯಂ ಮತ್ತು ಸಾಕಷ್ಟು ವಿಟಮಿನ್, ಮಿನರಲ್ಗಳು ಅದರ ಸಿಪ್ಪೇಲೆ ಇರತ್ತಂತೆ. ಹಂಗಾಗಿ ತೂಕ ಇಳಿಸ್ಬೇಕು ಅನ್ನೋರು ಸಿಪ್ಪೆ ಸಮೇತ ತಿನ್ಬೋದು!

ಒಂದು ರೆಸಿಪಿ ಕೂಡ ಇದೆ…ಇದನ್ನ ತಿಂದು ಒಂದು ಹೊತ್ತು ಊಟ ತಪ್ಪಿಸ್ಕೊಬೋದು. ಮೈಗೆ ಬೇಕಾದಷ್ಟು ಎನೆರ್ಜಿ ಸಿಗತ್ತಂತೆ.

4 ಬಾಳೆಕಾಯಿ ಸಿಪ್ಪೆ ತೊಗೊಂಡು ಸಣ್ಣದಾಗಿ ಹೆಚ್ಚಿಕೊಳ್ಳಿ.. ಒಂದು ಪಾತ್ರೇಲಿ ಇದನ್ನ ಹಾಕಿ, ಸ್ವಲ್ಪ ಎಣ್ಣೆ, ಸ್ವಲ್ಪ ಅರಿಶಿನ ಹಾಗೂ ಉಪ್ಪಾಕಿ ಬೇಯಿಸಿ. ಇದಕ್ಕೆ ಬೇಯಿಸಿದ ಅಲಸಂದೆ ಕಾಳು ಮಿಕ್ಸ್ ಮಾಡಿ ಚೆನ್ನಾಗಿ ಸಣ್ಣ ಉರೀಲಿ ಹದ ಮಾಡ್ಕೊಳ್ಳಿ. ಒಗ್ಗರಣೆ ಕೊಡಿ. ನಿಂಬೆ ರಸ ಹಿಂಡಿ. 

healthycareway.com

ಈಗೇನಂತೀರಿ? ಸಿಪ್ಪೆ ಬಿಸಾಕಲ್ಲ ಅಲ್ವಾ? ಆದ್ರೆ ಈಗಿನ ಕಾಲದಲ್ಲಿ ಹಣ್ಣಾಗಕ್ಕೆ ಬಾಳೆಗೂ ಸಾಕಷ್ಟು ಔಷಧಿ ಹೊಡೆದಿರ್ತಾರೆ. ನೋಡಿ ಸರ್ಯಾದನ್ನ ಆಯ್ಕೆ ಮಾಡ್ಕೊಳಿ.