http://www.inspiringwomen.co.za/wp-content/uploads/2013/09/stressed-woman.jpg

ದಿವಾಲೂ ಬ್ಯಾಸರದ ಕೂಟಾಗ ಒಂದ ದೊಡ್ಡ ಯುದ್ಧಾನ ಮಾಡ್ತವಿ ಅಂತ ನಾವಂತವಿ ಆದರ ಅಂತೆಕಂತೆ ಇದನ್ನ ಒಪ್ಕೊಳಂಗಿಲ್ಲ. ಬ್ಯಾಸರ ಅನ್ನೊದು ಒಂದ ರೀತಿ ಹೆದರಿಕಿದ್ದಂಗಂತ. ಇದ ನಿಮಗ ಗೊತ್ತಿತ್ತನ?

ಅದಕ್ಕಂತನ ನಾವೆಲ್ಲರ ಹೋಂಟರ ನಮಗ ಬ್ಯಾಸರ ಆಗ್ಬಾರ್ದು ಅಂತ ಏನಾದ್ರು ಜತಿಗೆ ಇಟ್ಕೊಂಡ ಹೊಕ್ಕವಿ.  ಎಲ್ಲರ ದೂರದ ಊರಿಗೆ ಹೋಗಬಕಾರ… ಯಾರರ್ನರ ಕಾಯಬಕಾರ… ನಮ್ಮ ಕೈಯಾಗ ಒಂದು ಫೋನು ಇಲ್ಲಂದ್ರ ಪುಸ್ತಕ ಇರ್ತತಿ. ಇನ್ನೂ ಸ್ವಲ್ಪ ಮಂದಿ ಓದ್ಕೊಂತ, ಹಾಡ ಕೇಳ್ಕೊಂತ, ಆಡ್ಕೊಂತ ಹಿಂಗ ಏನಾದ್ರೂ ಒಂದ ಮಾಡ್ಕೊಂತ ತಮ್ಮ ಬ್ಯಾಸರಾನ ದೂರ ಮಾಡ್ಕೊಂತಾರ.

ಒಟ್ಟನ್ಯಾಗ ನಮ್ಮ ಬ್ಯಾಸರಾನ ಹೋಗಸಾಕ ಪ್ರತಿ ಕ್ಷಣಾನೂ ನಾವು ಉತ್ಸಾಹದಿಂದ ಇರಾಕ ಯಾದರ ಒಂದ ಕೆಲಸಾನ ಮಾಡ್ಕೊಂತಾನ ಇರ್ತೀವಿ.

ನಮಗಕಷ್ಟಾಗಕೆಲಸಾ ಮಾಡಾಕ ಬ್ಯಾಸರಾಕ್ಕತಿ

ನಮ್ಮ ಮೆದುಳಿಗೆ ಬ್ಯಾಸರಂದ್ರ ಇಷ್ಟಾನ ಆಗಂಗಿಲ್ಲ. ಹೊಸ ಹೊಸ ವಿಷಯಗಳನ್ನ ನೋಡಿದ್ರ ನಮಗ ಹೆಂಗ ಸಂತೋಷಾಕ್ಕೈತೊ ಹಂಗ ನಮ್ಮ ಮೆದುಳಿಗೂ ಸಂತೋಷಾಕ್ಕತಿ. ಆದರ ಸ್ವಲ್ಪ ಹೊತ್ತಿನ ನಂತರ ಮೆದುಳನ್ಯಾಗ ಈ ಪ್ರಕ್ರಿಯೆ ಆಗದಂಗ ನಮಗ ಬ್ಯಾಸರಾಗಾಕ ಶುರು ಆಕ್ಕತಿ. ಪದೆಪದೆ ಈದ ಚಕ್ರಾನ ತಿರುಗ್ತಿರ್ತೈತಿ. ಖರೆ ಏನಂದ್ರ ನಮ್ಮ ಮೆದುಳಿಗೆ ಅವಾಗವಾಗ ಹುಮ್ಮಸ್ಸ ಬರಾಕ ಒಳ್ಳೆ ವಿಷಯಾನ ಆಗ್ಬೇಕಂತಿಲ್ಲ, ಕೆಲವೊಂದ ಸಲ ನಕಾರಾತ್ಮಕ ವಿಷಯಗಳು ಸೈತ ಮೆದುಳಿಗೆ ಉತ್ಸಾಹ ತರ್ತೈತಿ. ನಿಮಗಿದು ಗೊತ್ತೈತೋ ಇಲ್ವೊ.

hope1032.com.au

ಬ್ಯಾಸರ ಹೋಗಸ್ಬೇಕಂದ್ರ ನಿಮ್ಮ ಲಕ್ಷೆನ ಬ್ಯಾರೆಬ್ಯಾರೆ ವಿಷಯದ ಕಡೆ ಹರಸ್ಬೇಕು...

ಬ್ಯಾಸರಾಗಾಕತ್ತಂದ್ರ ಸಾಕು ನಾವು ಬ್ಯಾರೆ ಬ್ಯಾರೆ ವಿಷಯಗಳ ಕಡೆ ಲಕ್ಷೆ ಕೊಡಾಕ ಶುರು ಮಾಡ್ತವಿ. ನಮಗಾಗಿರೋ ಬ್ಯಾಸರ ಕಳ್ಕೊಳ್ಳಾಕ ಮುಂದಾಕ್ಕವಿ.  ಆದರ ನೀವು ಏನೊ ಒಂದು ಮುಖ್ಯವಾದ ಕೆಲಸಾ ಮಾಡಾಕತ್ತಿರ್ತಿರಿ ಅವಾಗ ಬ್ಯಾಸಾರಾತು ಅಂದ್ರ ಕಷ್ಟಾಕ್ಕತಿ. ಪರೀಕ್ಷೆ ಹಿಂದಿನ ದಿನ ಓದತಿರ್ತವಿ ಅವಾಗ ಬ್ಯಾಸರಾತು ಅಂತ ಸಿನಿಮಾ ನೋಡಿದ್ರ ಏನಾಗ್ಬಹುದು ಅಂತ ಸ್ವಲ್ಪ ವಿಚಾರ ಮಾಡಿ ನೋಡ್ರಿ.

ನಿಮಗಾಗಿರೋ ಬ್ಯಾಸರಾನ ನೀವು ಹೆಂಗ ಹೋಗಿಸ್ಕೊಬಹುದು ಅಂತ ವಿಚಾರ ಮಾಡ್ರಿ.

ಯಾರಿಗಾದ್ರೂ ಬ್ಯಾಸರಾಗೋದು ಸಾಮಾನ್ಯ ಹಂಗಂತ ಅದರ ಬಗ್ಗೆ ವಿಚಾರ ಮಾಡ್ಕೊಂತ ಕುಂದ್ರದ ಬಿಟ್ಟು ಆಗಿರೋ ಬ್ಯಾಸರಾನ ಹೋಗಿಸೋದು ಹೇಗೆ ಅಂತ ವಿಚಾರ ಮಾಡ್ರಿ. ನಿಮಗೂ ಸಲ್ಪ ಟೈಮ್ ಕೊಟ್ಕೊರ್ರಿ.

image.freepik.com

ನಿಮ್ಮ ಲಕ್ಷೆನ ಸ್ವಲ್ಪ ಬ್ಯಾರೆ ಕಡೆ ಹರಸ್ರಿ

ಕೆಲಸದ ಜೊತಿಗೆ ಬ್ಯಾಸರಕ್ಕೋ ಸ್ವಲ್ಪ ಟೈಮ್ ಇಟ್ಕೊರಿ. ಅಂದ್ರ ನಿಮಗೂ ಗೊತ್ತಿರ್ಲಿ ನೀವು ಕೆಲಸಾ ಮಾಡಬಕಾರ ನಿಮ್ಮ ಲಕ್ಷೆ ಬರೇ ಕೆಲಸದ ಮ್ಯಾಗಷ್ಟ ಇರ್ಲಿ, ಅತ್ತಾಗಿತ್ತಾಗ ಲಕ್ಷೆ ಕೊಡ್ಬಾಡ್ರಿ.

ಕೆಲಸ ನಡುವ ಸ್ವಲ್ಪ ಬಿಡುವ ತಗೊಂಡ್ರ ನಿಮಗೂ ಕೆಲಸ ಮಾಡಾಕ ಹುರುಪ ಹೆಚ್ಚಾಕ್ಕತಿ. ಇದು ನಿಮಗ ಗೊತ್ತಿರ್ಲಿ. ಅಂದಾಜು 52 ನಿಮಿಷ ಕೆಲಸ ಮಾಡ್ತಿರಿ ಅಂದ್ರ 17 ನಿಮಿಷ ಬಿಡುವ ತಗೋಬಹುದು.

d2rd7etdn93tqb.cloudfront.net

ಬ್ಯಾಸರಾದಾಗ ತಾಳ್ಮೆ ತೊಗೊಬೇಕು ಅಂತ ನಿಮ್ಮ ಮೆದುಳಿಗೆ ತರಬೇತಿ ಮಾಡ್ರಿ

ನಿಮಗ ಹಿಂಗ ಮಾಡೋದ್ರಿಂದ ಖರೆವಂದ್ರ ಮಾಡೋ ಕೆಲಸ ಭಾಳಾಗೊದನ್ನ ಗಮನಿಸಾಕ ಸಾಧ್ಯಾಕ್ಕತಿ. ಉದಾಹರಣೆಗೆ ನೀವು ಅರ್ಧ ತಾಸಿಗೊಮ್ಮೆ ಬಿಡುವ ತಗೊಂಡ್ರ ಮುಂದಿನ ಅರ್ಧ ತಾಸ ಪೂರ್ತಿಯಾಗಿ ಲಕ್ಷೆ ಕೊಟ್ಟ  ಕೆಲಸ ಮಾಡ್ತೀರಿ. ನಿಮಗ ನಿಮ್ಮ ಕೆಲಸದ ಜತಿ ಏಕಾಗ್ರತೇನೂ ಹೆಚ್ಚಾಕ್ಕತಿ.

ಮುಂದಿನ ಸರ್ತಿ ನಿಮಗ ಬ್ಯಾಸರಾದಾಗ ನಮ್ಮನ್ನ ಸ್ವಲ್ಪ ನೆನಪ ಮಾಡ್ಕೊರಿ. ಅಂತೆಕಂತೆಯೊಳಗಿನ ಲೇಖನಾನ ಓದ್ರಿ, ನಿಮ್ಮ ಬ್ಯಾಸರಾನ ದೂರಾ ಮಾಡ್ಕೊರಿ.