http://images.huffingtonpost.com/2016-03-10-1457625832-6004570-happysadface720x340.jpg

ಕೆಲವು ಸಲ ಮೂಡ್ ಎಷ್ಟು ಖರಾಬ್ ಆಗಿರುತ್ತೆ ಅಂದ್ರೆ, ಯಾರೋ ಒಂದು ಸಣ್ಣ ಪ್ರಶ್ನೆ ಕೇಳಿದ್ರೂ ಅವ್ರಿಗೆ ಹೊಡೆದೇಬಿಡೋಣ ಅನ್ನೋ ಅಷ್ಟು ಸಿಟ್ಟು ಬರುತ್ತೆ. ಇದ್ರಿಂದ ನಮ್ಮ ಮೂಡು… ಜೊತೆಗೆ ನಮ್ಮ ಸುತ್ತ ಮುತ್ತ ಇರೋರ್ ಮೂಡು, ಎಲ್ಲಾ ಕೆಡತ್ತೆ.  ಈ ರೀತಿ ಕೆಟ್ಟ ಮೂಡ್ನಲ್ಲಿದ್ದಾಗ ಕೂಡ್ಲೇ ಅದ್ರಿಂದ ಹೊರಗೆ ಬರೋ ಥರ ಟ್ರಿಕ್ ಗೊತ್ತಿದ್ರೆ ಒಳ್ಳೇದಲ್ವಾ?

ತುಂಬಾ ಜನ ಹೇಳೋ ಪ್ರಕಾರ, ಸಿಟ್ಟಲ್ಲಿದ್ರೂ ಖುಷಿಯಾಗಿರೋ ಹಾಗೆ ನಗ್ನಗ್ತಾ ಇದ್ರೆ, ನಿಮ್ಗೇ ಗೊತ್ತಿಲ್ದೆ ನಿಮ್ ಮೂಡ್ ಸರಿ ಹೋಗುತ್ತೆ. ಹೀಗೆ ನಗೋದಲ್ದೆ ಈ 5 ಟ್ರಿಕ್ಕುಗಳನ್ನ ಕಲಿತ್ಕೊಂಡ್ರೆ ಫಟ್ ಅಂತ ಕೆಟ್ಟ ಮೂಡಿಂದ ಹೊರಗೆ ಬರ್ಬಹುದು.

1. ನಿಮ್ಮ ದೇಹದ ಕೆಲವು ಆಕ್ಯೂಪ್ರೆಶರ್ ಪಾಯಿಂಟುಗಳನ್ನ ಒತ್ಕೊಳಿ

ದೇಹದ ಕೆಲವು ಭಾಗಗಳನ್ನ ತಟ್ಟೋದ್ರಿಂದ ಅಥ್ವಾ ಒತ್ತೋದ್ರಿಂದ ನೆಗೆಟಿವ್ ಯೋಚ್ನೆಗಳು ದೂರ ಆಗುತ್ತೆ. ಬೇಜಾರು, ಸಿಟ್ಟು, ಭಯ ಹೋಗಿ ಖುಷಿ ಸಿಗುತ್ತೆ. ಮಂಡಿ ಕೆಳಗೆ, ಭುಜದ ಹತ್ತಿರ ಇರೊ ಪ್ರೆಷರ್ ಪಾಯಿಂಟ್ಗಳ್ನ ಒತ್ಕೊಳೋದ್ರಿಂದ ಮೂಡ್ ನಿಮಿಷಗಳಲ್ಲಿ ಚನ್ನಾಗಾಗುತ್ತಂತೆ. ಟ್ರೈ ಮಾಡಿ.

 

2. ಏನಾದ್ರೂ ಒಳ್ಳೇದನ್ನ ತಿನ್ನಿ

ಹಸಿವು ಕೆಟ್ಟ ಮೂಡಿಗೆ ಕಾರಣ ಇರ್ಬಹುದು. ಕೆಲ್ಸದ್ ನಡುವೆ ಊಟ ಮಾಡೋಕೆ ಸಮಯ ಸಿಗ್ದೇ ಇದ್ದಿದ್ರಿಂದ ನಿಮ್ ಮೂಡ್ ಕೆಟ್ಟಿರ್ಬಹುದು. ಇಂಥ ಸಮಯದಲ್ಲಿ ಪ್ರೊಟೀನ್ ಅಂಶ ಇರೋ ಆಹಾರ ತಿಂದ್ರೆ ಮೂಡ್ ಸರಿ ಹೋಗುತ್ತೆ. ಆದ್ರೆ ಮೂಡ್ ಕೆಟ್ಟಾಗೆಲ್ಲ ಏನಾದ್ರೂ ತಿನ್ನೋದನ್ನ ಅಭ್ಯಾಸ ಮಾಡ್ಕೋಬೇಡಿ. ಹೆಚ್ಚಿನೋರು ಚಾಕಲೆಟ್ ತಿಂತಾರಂತೆ. ಆದ್ರೆ ಅದು ನಿಮ್ ಮೂಡನ್ನ ಸರಿ ಮಾಡೊಲ್ಲ ಅಂತ ರಿಸರ್ಚಿನಲ್ಲಿ ಪ್ರೂವ್ ಆಗಿದೆ. ಹಾಗಾಗಿ ಚಾಕೊಲೆಟ್ ತಿನ್ನೋಕೆ ಹೋಗ್ಬೇಡಿ. ತಿನ್ನೋದಾದ್ರೆ ಏನಾದ್ರೂ ಒಳ್ಳೆ ಆಹಾರ ತಿನ್ನಿ.

 

3. ನಿಮ್ಗಿಷ್ಟ ಆಗೋ ಸುವಾಸನೆ, ಸೆಂಟ್ನ ನಿಮ್ಮ ರೂಮಲ್ಲಿಡಿ

ಕಿತ್ತಳೆ ಅಥ್ವಾ ಲ್ಯಾವೆಂಡರಿನ ಪರಿಮಳದಿಂದ ಮೂಡ್ ಸರಿ ಹೋಗುತ್ತೆ ಅಂತ ಆಸ್ಟ್ರಿಯಾ ದೇಶದಲ್ಲಿ ನಡೆಸಿದ ಒಂದು ರಿಸರ್ಚಿನಲ್ಲಿ ಪ್ರೂವ್ ಆಗಿದೆ. ಡೆಂಟಿಸ್ಟ್ ಕ್ಲಿನಿಕ್ಕಿನಲ್ಲಿ ಕಾಯುತ್ತಿದ್ದ 200 ಜನ ಪೇಶೆಂಟುಗಳಿಗೆ ಸಂಗೀತ ಕೇಳಿಸಿ, ಲ್ಯಾವೆಂಡರ್ ಮತ್ತು ಕಿತ್ತಳೆಯ ಸುವಾಸನೆಯನ್ನ ಕೋಣೆಯಲ್ಲಿ ಹರಡಿ ನೋಡಿದ್ರಂತೆ. ಇನ್ನೊಂದು ಕೋಣೆಯಲ್ಲಿ ಇದ್ಯಾವ್ದೂ ಇಲ್ದೆ ಜನ ಕಾಯ್ತಾ ಇದ್ರು. ಕೊನೆಗೆ ಗೊತ್ತಾಗಿದ್ದು ಇದು – ಕಿತ್ತಳೆ ಮತ್ತು ಲ್ಯಾವೆಂಡರಿನ ಪರಿಮಳದಿಂದಾಗಿ ಜನರಲ್ಲಿ ಸ್ಟ್ರೆಸ್ ಕಡಿಮೆ ಆಗುತ್ತೆ. ಹಾಗಾಗಿ ನಿಮ್ಗೆ ಇಷ್ಟ ಆಗೋ ಯಾವ್ದಾದ್ರೂ ಸೆಂಟ್/ಎಣ್ಣೆಯನ್ನ ಹುಡುಕ್ಕೊಳ್ಳಿ.

 

4. ಪಾರ್ಕಲ್ಲಿ ಹಸಿರಿನ ಮಧ್ಯ ವಾಕ್ ಹೋಗಿ ನೋಡಿ

ಮೂಡ್ ತುಂಬಾ ಕೆಟ್ಟಿದ್ರೆ ಪಕ್ಕದಲ್ಲೇ ಯಾವ್ದಾದ್ರೂ ಪಾರ್ಕ್ ಹುಡುಕ್ಕೊಂಡು ಒಮ್ಮೆ ವಾಕ್ ಹೋಗಿ ನೋಡಿ. ಮೂಡ್ ಸರಿ ಹೋಗುತ್ತೆ. ಮೂಡ್ ಸರಿ ಮಾಡೋದಿಕ್ಕೆ ಕೊಡೋ ಮದ್ದಿನಷ್ಟೇ ಕೆಲ್ಸ ವ್ಯಾಯಾಮ, ವಾಕ್ ಕೂಡ ಮಾಡುತ್ತೆ ಅಂತ ರಿಸರ್ಚಿನಲ್ಲಿ ಕಂಡು ಹಿಡಿದಿದ್ದಾರೆ.

 

5. ನಿಮ್ಮಷ್ಟಕ್ಕೆ ನೀವೇ ಏನಾದ್ರೂ ಒಳ್ಳೇದ್ ಮಾತಾಡಿ

ನಮ್ ಮನಸಿನ್ ಮೂಲೇಲಿ ನಮ್ ಬಗ್ಗೆ ನಮ್ಗೇ ಏನೇನೋ ಬೇಡ್ದಿರೋ ಯೋಚ್ನೆಗಳಿರುತ್ತೆ. ಅದು ನಮ್ ಮೂಡನ್ನ ಕೆಳಗಿಳಿಸ್ತಾ ಇರುತ್ತೆ. ಆ ಯೋಚ್ನೆಗಳ ತಲೆ ಮೇಲೆ ಹೊಡೀಬೇಕಿದ್ರೆ ನಮ್ಮಷ್ಟಕ್ಕೆ ನಾವು ನಮ್ ಬಗ್ಗೆ ಒಳ್ಳೇದೇನಾದ್ರೂ ಮಾತಾಡ್ಬೇಕು. ನಾವು ಮಾಡಿದ್ ಒಳ್ಳೇ ಕೆಲ್ಸ ಯಾವ್ದಾದ್ರೂ ಇದ್ದೇ ಇರುತ್ತೆ, ಅದರ ಬಗ್ಗೆ ಮಾತಾಡ್ಬಹುದು. ಹೀಗೆ ಮಾತಾಡೋದ್ರಿಂದ ಮೂಡ್ ಸರಿ ಹೋಗುತ್ತೆ.

 

ಇನ್ಮುಂದೆ ಮೂಡ್ ಸರಿ ಇಲ್ಲ ಅಂತ ಬೇಜಾರು ಪಟ್ಕೊಳ್ಳೋ ಅವಶ್ಯಕತೆ ಇಲ್ಲ ಅಲ್ವಾ? ನಿಮ್ ವಿಷಯದಲ್ಲಿ ಇದು ಕೆಲ್ಸ ಮಾಡ್ತಾ ಅಂತ ನಮ್ಗೆ ಖಂಡಿತಾ ತಿಳಿಸಿ!