ಭಾಳ ಮಂದಿಗೆ ಈ ಕೆಲಸ ಸಾಕಪಾ ಅನ್ನಷ್ಟು ಬ್ಯಾಸರಾಗಿರ್ತೈತಿ. ಬ್ಯಾರಬ್ಯಾರೆ ಕಂಪನ್ಯಾಗ ಕೆಲಸ ಹುಡುಕಾಕೂ ಶುರು ಮಾಡಿರ್ತಾರ. ಅಂತಾರಿಗೇಂತಾನ ಇಲ್ಲದಾವು ನೋಡ್ರಿ ಈ 5 ನಿಯಮಗಳು. ಈಗಿರೋ ಕೆಲಸ ಕಳ್ಕೋಬಾರ್ದು, ಮುಂದ ಚೊಲೋ ಕೆಲಸ ಸಿಗ್ಬೇಕು ಅಂದ್ಕೊಳ್ಳೊರು ಈ ನಿಯಮಗಳನ್ನ ಪಾಲಿಸಿದ ಸಾಕು, ನಿಮ್ಮ ಮುಂದಿನ ಜೀವನ ಭಾಳ ಛೋಲೋ ಇರ್ತೈತಿ.

1.ನಿಮ್ಮ ಲಕ್ಷೆ ಯಾವತ್ತಿದ್ರೂ ನಿಮ್ಮ ಪರ್ಫಾರಮೆನ್ಸ್ ಮ್ಯಾಲೆ ಇರ್ಬೇಕು

ನಿಮ್ಮ ಗುರಿ ಏನು? ಕೆಲಸ. ಯಾವಾಗ ಅದನ್ನ ಮುಗಸ್ಬೇಕು ಅನ್ನೋದರ ಕಡೆ ಲಕ್ಷ್ಯಾ ಕೊಡ್ರಿ.  ಆ ಸಮಯಕ್ಕ ಆ ಕೆಲಸಾನ ಮುಗಿಸ್ಬಿಡ್ಬೇಕು. ಕಂಪನಿಯೊಳಗ ಪರ್ಫಾರಮೆನ್ಸ್ ಚೊಲೊ ಇಲ್ಲ ಅನ್ನೊದು ಒಂದ ಕಾರಣ ಐತಿ. ನಿಮ್ಮ ಗುಂಪಿನ ಮುಖ್ಯಸ್ಥರಿಗೆ ಈ ಕೆಲಸಾನ ಈ ಟೈಮಗೆ ಮುಗಸ್ತಿನಿ ಅಂತ ಹೇಳಿರ್ತೀರಿ ಆ ಟೈಮಗೆ ಮಾಡಿ ಮುಗಸ್ರಿ. ಸಮಯಕ್ಕ ಸರಿಯಾಗಿ ಕೆಲಸಗಳನ್ನ ಮಾಡಿ ಮುಗಸಿದ್ರ, ನೀವು ಕೆಲಸ ಕಳ್ಕೊಳ್ಳೊ ಸಂದರ್ಭಾನೇ ಬರಂಗಿಲ್ಲ.

target.jpg

2. ಏನು ಗುಟ್ಟ ಮಾಡದಂಗ ನಿಮ್ಮ ಬಾಸ್  ಕುಟಾಗ ಮಾತಾಡ್ರಿ

ಕೆಲಸ ಜಲ್ದಿ ಜಲ್ದಿ ಆಗ್ಬೇಕು, ಒಳ್ಳೆ ಫಲಿತಾಂಶ ಬರ್ಬೇಕು ಅನ್ನೋದಷ್ಟ ಕಂಪನಿ ಉದ್ದೇಶ. ಅದಕ್ಕ ತಕ್ಕಂಗ ಕೆಲಸ ಮಾಡಿ ಮುಗಸ್ರಿ. ಬಾಸ ಜತಿಗೆ ಮಾತಾಡ್ರಿ, ನಿಮ್ಮ ಯೋಜನೆಗಳನ್ನ ಹೇಳ್ಕೊರ್ರಿ, ಎಷ್ಟ ಲಗೋನ ಕೆಲಸ ಮುಗಸಾಕ ಆಕ್ಕತಿ ಅನ್ನೊದರ ಬಗ್ಗೆ ಚರ್ಚೆ ಮಾಡ್ರಿ. ನಿಮ್ಮ ಬಾಸ ಜತಿಗೆ ನೀವು ಕೈ ಜೋಡಸ್ರಿ. ನಿಮ್ಮ ಪರ್ಫಾರಮೆನ್ಸ್ ಮತ್ತ ಅವರ ಪರ್ಫಾರಮೆನ್ಸ್ ಎರಡು ಕೂಡ್ಕೊಂಡು ಕೆಲಸ ಆಗಂಗ ನೋಡ್ಕೊರ್ರಿ. ಆಮ್ಯಾಲ ನೋಡ್ರಿ ಎಷ್ಟರ ಕಷ್ಟದ ಪರಿಸ್ಥಿತಿ ಬರ್ಲಿ ನಿಮ್ಮ ಬಾಸ್ ನಿಮ್ಮನ್ನ ಕೆಲಸದಿಂದ ತೆಗಿಯಂಗೇಲ್ಲ.

meeting.jpg

3. ನಿಮ್ಮ ವರ್ತನೆಯಿಂದ ಆಫೀಸನ್ಯಾಗ ಯಾರಿಗೂ ಸಮಸ್ಯೆ ಆಗ್ದಿರೋಹಂಗ ನೋಡ್ಕೊರಿ

ಭಾಳಷ್ಟ ಮಂದಿ ತಮ್ಮ ಕೆಲಸ ಕಳ್ಕೊಳ್ಳಾಕ ಇದು ಒಂದ ಕಾರಣಾಗೇತಿ. ಕೆಲವ ಸರ್ತಿ ಕೆಲಸನ ಛೊಲೋ ಮಾಡ್ತಿರೋರೂ ಸಹ ತಮ್ಮ ನಡುವಳಿಕೆಯಿಂದ ಕೆಲಸ ಕಳ್ಕೊಬೇಕಾಕ್ಕತಿ. ಅಲ್ಲದ ಕಂಪನ್ಯಾಗ ಜಗಳ ಮಾಡೋದು, ಬೈಯ್ಯೋದು, ಮಾಡಿದ್ರ ಕೆಲಸ ಹೋಗೊದು ಪಕ್ಕಾ. ಅದಕ್ಕ ಸಹೋದ್ಯೋಗಿಗಳ ಜತಿಗೆ ಹೆಂಗ ನಡ್ಕೊಬೇಕು ಅನ್ನೋದು ಭಾಳ ಮುಖ್ಯ. ಕಂಪನ್ಯಾಗ ಕೆಲಸ ಮಾಡೋರೆಲ್ಲಾ ಸ್ನೇಹಿತರ ಹಂಗಿರ್ಬೇಕು.

 

4.ಕೆಲಸಕ್ಕ ಯಾವಾಗ, ಎಷ್ಟ ಟೈಮ ಕೋಡ್ಬೇಕೊ ಅಷ್ಟು ಕೊಡ್ರಿ

ಸಮಯ ಪಾಲನೆ ಭಾಳ ಮುಖ್ಯ. ನೀವು ಕೆಲಸಕ್ಕ ಎಷ್ಟೊತ್ತಿಗೆ ಬರ್ತೀರಿ, ಸಂಜಿಮುಂದ ಎಷ್ಟೊತ್ತನಕ ಆಫೀಸನ್ಯಾಗಿರ್ತೀರಿ ಅನ್ನೊದು ಭಾಳ ಮುಖ್ಯಾಕ್ಕತಿ. ಸಂಜಿಮುಂದ ಎಲ್ಲಾರು ಹೋಗೊದಕ್ಕಿಂತ ಮುಂಚೆ ನೀವು ಆಫೀಸ್ ಬಿಟ್ಟ ಹೊಕ್ಕಿದ್ರ, ಹಿಂಗ ಹೋಗೊದನ್ನ ಫಸ್ಟ ಬಿಟ್ಟಬಿಡ್ರಿ, ಯಾಕಂದ್ರ ಈದು ನಿಮಗ ಕೆಲಸದ ಮ್ಯಾಲೆ ಆಸಕ್ತಿ ಇಲ್ಲ ಅನ್ನೊದನ್ನ ಎತ್ತಿ ತೋರಸ್ತೈತಿ. ಹಂಗ ಸ್ವಲ್ಪೆ ಸ್ವಲ್ಪ ಹೆಚ್ಚ್ ಕೆಲಸ ಮಾಡಿದ್ರ ಸಾಕು ಅದು ನಿಮಗ ಕೆಲಸದ ಮ್ಯಾಲೆ ಭಾಳ ಆಸಕ್ತಿ ಅನ್ನೊದನ್ನ ತೋರಿಸಿ ಕೊಡ್ತತಿ.

time.jpg

ಮೂಲ

5. ಎಲ್ಲಾರ ಕೂಟಾಗು ಸೇರಿಕೊಂಡ ಕೆಲಸ ಮಾಡ್ರಿ

“ನಾ ಆ ಕೆಲಸ ಮಾಡಾಕವಲ್ಲೆ, ಈ ಕೆಲಸ ಮಾಡಾಕವಲ್ಲೆ” ಅಂತ ಹೇಳೊರು ಕೊಟ್ಟ ಕೆಲಸಾನ ಮಾಡಂಗೇಲ್ಲ. ಅದಕ್ಕೆನೇನರ ಕಾರಣ ಹೇಳ್ಕೊಂತಾನ ಇರ್ತಾರ. ಮಾಡಾಕ ಕೆಲಸನ ಇಲ್ದಿದ್ರ ಪರಿಸ್ಥಿತಿ ಹೆಂಗಿರ್ತಿತ್ತು ಅಂತ ಹಂಗ ಸುಮ್ಮನ ವಿಚಾರ ಮಾಡಿ ನೋಡ್ರಿ. ಹೆಚ್ಚೆಚ್ಚು ಜವಾಬ್ದಾರಿಯುತ ಕೆಲಸಗಳು ನಿಮ್ಮನ್ನ ಹುಡಿಕ್ಕೊಂಡ ಬಂದಾಗ ಅವುಗಳನ್ನೆಲ್ಲ ಚೊಲೋತ್ತಂಗ ಮಾಡ್ರಿ. ಹಿಂಗ ಮಾಡೋದ್ರಿಂದ ಮುಂದೊಂದ ದಿನ ನಿಮಗ ಅದೇ ಕಂಪನಿಯೊಳಗ ಒಂದ ಒಳ್ಳೆ ಸ್ಥಾನ ಸಿಗತೈತಿ. ಒಂದು ವೇಳೆ ಆ ಕಂಪನಿ ಕೆಲಸ ಬಿಟ್ಟು ಬ್ಯಾರೆ ಕಂಪನಿಗೆ ಸೇರ್ಬೇಕಾದಾಗ್ಲೂ ಇದು ನಿಮಗ ಉಪಯೋಗಕ್ಕ ಬರತೈತಿ.

work.jpg