https://s3.scoopwhoop.com/aka/cricleg/19.png

ಜಗತ್ತಲ್ಲಿ ಅದೇಷ್ಟೋ ಕ್ರೀಡೆಗಳಿವೆ ಆದ್ರೆ ಕ್ರಿಕೆಟ್ ಅನ್ನೋ ಆಟ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರ್ಗೂ ಆಗಲ್ಲ ಅಂದ್ರೂ  ಆಡೋವಂತೆ ಮಾಡತ್ತೆ ಅದೇ ಅದ್ರ ಶಕ್ತಿ. ಇಂತಹ ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡ್ನಲಾದ್ರೂ ಭಾರತದಲ್ಲಿ ಅದ್ನೊಂದು ಧರ್ಮ ಅಂತಾನೇ ಕರೀತೇವೆ. ಅಂತಹ ಕ್ರಿಕೆಟ್ನ ಈ 44 ಪೋಟೊಗಳ್ನ ನೋಡ್ತಾ ಇದ್ರೆ ಕ್ರಿಕೆಟ್ ಪ್ರೇಮಿಗಳು ಖುಶ್ ಆಗೋದು ಖಂಡಿತ. 

1) ಸಚಿನ್ ತೆಂಡುಲ್ಕರ್ ಕೊನೆಯ ಬಾರಿ , ವೆಸ್ಟ್ ಇಂಡೀಸ್ ಎದುರು ವಾಂಖೇಡೆಯಲ್ಲಿ ಬ್ಯಾಟ್ ಮಾಡೋದಕ್ಕೆ ಬಂದಾಗ…

2) ಪಾಕಿಸ್ತಾನದ ಎದುರು ಅನಿಲ್ ಕುಂಬ್ಳೆ 10 ವಿಕೆಟ್ ಪಡೆದ ಕ್ಷಣ…

3) ಶ್ರೀಲಂಕಾದ ಗಾಲೆ ಸ್ಟೇಡಿಯಂಗೆ ಸುನಾಮಿ ಅಪ್ಪಳಿಸಿದ ನಂತರ ತೆಗೆದ ಪೋಟೋ…

4) 2007 ಟ್ವೆಂಟಿ ಟ್ವೆಂಟಿ ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ಗೆ ಆರು ಬಾರಿ ಚೆಚ್ದಾಗ…

5) ಜಿಮ್ಮಿ ಅಮರ್ನಾಥ್, ಮೈಕಲ್ ಹೋಲ್ಡಿಂಗ್ನ ಬೌಲ್ಡ್ ಮಾಡ್ದಾಗ ಜನ್ರು ಒಂದೇ ಸಮ್ನೇ ಓಡಿ ಬಂದಿದ್ದು ಯಾಕ್ ಗೊತ್ತಾ?

ಭಾರತ ಮೊದಲ ಸಲ ವಿಶ್ವಕಪ್ ಗೆದ್ದಿದ್ದು ಆವಾಗ್ಲೇ!

6) ನಾಟ್-ವೆಸ್ಟ್ ಸರಣಿಯನ್ನ ಗೆದ್ದಾಗ, ದಾದ ಬಟ್ಟೆ ಕಳಚಿ ಫ್ಲಿಂಟಾಫ್ನ ಎದ್ರು ರಿವೆಂಜ್ ತೀರ್ಸ್ಕೊಂಡಿದ್ದು ಹೀಗೆ…

ಎಳ್ ತಿಂಗ್ಳ ಹಿಂದೆ ಫ್ಲಿಂಟಾಪ್ ವಾಂಖೇಡೆಯಲ್ಲಿ ಹೀಗೆ ಮಾಡಿದ್ದ ಅದ್ಕೆ .

7) ಆಸ್ಟ್ರೇಲಿಯ ಮತ್ತೆ ಭಾರತ ಪಂದ್ಯದಲ್ಲಿ ಜೇನ್ನೋಣಗಳ ದಾಳಿ ಆದಾಗ…

ಇದು ನಡೆದಿದ್ದು ಡೆಲ್ಲಿಯ ಫೀರೊಜ್ ಶಾ ಕೋಟ್ಲಾ ಮೈದಾನದಲ್ಲಿ 

8) ಚೇಸಿಂಗಲ್ಲೇ ದಾಖಲೆ ಬರೆದ ಪಂದ್ಯ ಇದು…

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ 50 ಒವರ್ನಲ್ಲಿ ಗಳಿಸಿದ್ದು 434. ಇದಕ್ಕುತ್ತರವಾಗಿ ಸೌತ್ ಆಫ್ರಿಕಾ ಒಂದು ಒವರ್ ಒಂದು ವಿಕೆಟ್ ಇರೋವಾಗ್ಲೆ 438 ರನ್ ಮಾಡಿ ನಾವೇನ್ ಕಮ್ಮಿಯಿಲ್ಲ ಅಂತ ಸರ್ಯಾಗ್ ಚೆಚ್ಚಿದ್ದೆ.

9) 1938 ರಲ್ಲಿ ಹೆಡಿಂಗ್ಲೇ ನಲ್ಲಿ ನಡೆದ ಪಂದ್ಯವೊಂದರ ಟೀ ಬ್ರೇಕ್…

ಅದ್ಕೆ ಜೆಂಟ್ಲ್ ಮ್ಯಾನ್ ಗೇಮ್ ಅನ್ನೋದು.

10) ಕ್ರಿಕೆಟ್ ಕಾಶಿ ಲಾರ್ಡ್ಸ್ ತನ್ನ 200 ವರ್ಷ ಫೂರ್ತಿಗೊಳಿಸಿದ ಸಂದರ್ಭ 22 ಅತಿರಥ ಮಹಾರಥರ ಮಧ್ಯೆ ಪಂದ್ಯವೊಂದನ್ನ ಎರ್ಪಡಿಸಿತ್ತು…

ಆವಾಗ ತೆಗೆದ್ ಪೋಟೋ. ಸಚಿನ್ ಮತ್ತು ವಾರ್ನ್ ನಾಯಕರಾಗಿದ್ದರು.

11) ಯಾವಾಗೆಲ್ಲ ಸ್ಕೋರ್ 111, 222, 333 ಆಗತ್ತೋ ಅಂಪೈರ್ ಡೇವಿಡ್ ಶೆರ್ಫಡ್ ಈ ರೀತಿ ಮಾಡ್ತಾ ಇದ್ರೂ ಅಂದ್ರೆ ನಂಬ್ಲೇಬೇಕು…

12) 1975 ರಲ್ಲಿ ಮೊದಲ ಸಲ ಕ್ಲೈವ್ ಲಾಯ್ಡ್ ವೆಸ್ಟ್ ಇಂಡೀಸ್ಗೆ ವಿಶ್ವಕಪ್ ಗೆಲ್ಲಿಸಿ ಕಪ್ ಹಿಡಿದ ಕ್ಷಣ…

13) ಆಸ್ಟ್ರೇಲಿಯಾದ 408ನೇ ಆಟಗಾರ ಫಿಲ್ ಹ್ಯುಸ್, ಸೀನ್ ಅಬ್ಬೋಟ್ ಎಸೆತದಲ್ಲಿ ಕೊನೆಯುಸಿರೆಳೆದಾಗ ಸ್ಟೀವನ್ ಸ್ಮಿತ್ ತನ್ನೊಂದು ಶತಕವನ್ನ ಆತನಿಗೆ ಅರ್ಪಿಸಿದ ಕ್ಷಣ…

14) ಟ್ರೆವರ್ ಚಾಪಲ್ನ್ ಅಂಡರ್ ಆರ್ಮ್ ಎಸೆತ…

ಅತೀ ಬುದ್ದಿವಂತಿಕೆನೋ ಅಥ್ವಾ ಕೊಬ್ಬೋ ಗೊತ್ತಿಲ್ಲ ಇನ್ನೇನು ನ್ಯುಜಿಲ್ಯಾಂಡ್ ಗೆದ್ದೇ ಗೆಲ್ಲತ್ತೆ ಅನ್ನೋ ಕ್ಷಣದಲ್ಲಿ ಈ ಘಟನೆ ನಡ್ದ್ ಹೋಗಿತ್ತು. ಸಿಟ್ಟಿನಲ್ಲಿ ಬ್ಯಾಟ್ಸಮನ್ ಬ್ಯಾಟನ್ನೇ ಮೈದಾನದಲ್ಲೆ ಎಸಿದಿದ್ದ.

15) ಇನ್ನೊಂದ್ ನಾಲ್ಕ್ ರನ್ ಹೊಡೆದಿದ್ರೆ ಡಾನ್ ಬ್ರಾಡ್ಮನ್ 100 ರಷ್ಟು ಸರಾಸರಿ ಮಾಡ್ತಿದ್ದ…

ಅದೇ ಅವ್ನ ಲಾಸ್ಟ್ ಮ್ಯಾಚ್ ಆಗಿತ್ತು ಜೊತೆಗೆ ಫರ್ಸ್ಟ್ ಬಾಲೇ ಡಕ್ ಆಗಿ ಔಟಾಗಿದ್ದ.

16) 1999ರ ವಿಶ್ವಕಪನಲ್ಲಿ ಲ್ಯಾನ್ಸ್ ಕ್ಲೂಸ್ನರ್ ಓಡಿ ಬಾ ಅಂದ್ರೂ ಕೇಳದ ಡೊನಾಲ್ದ್ ಸೌತ್ ಆಫ್ರಿಕಾದ ಪಾಲಿಗೆ ಆವತ್ತು ವಿಲನ್ ಆಗಿ ಹೋಗಿದ್ದ…

ಟೈ ಆದ್ರೂ ಕೂಡಾ ಸೌತ್ ಆಫ್ರಿಕಾನೇ ಫೈನಲ್ಗೆ ಹೋಗ್ತಾ ಇತ್ತು.  

ಛೇ………

17) ಡೆನ್ನಿಸ್ ಲಿಲ್ಲಿ ಪಾಕಿಸ್ತಾನದ ಜಾವೇದ್ ಮಿಯಾಂದದ್ನ ಕೆಣ್ಕಿದಾಗ ಸಿಟ್ ಬಂದು ಬ್ಯಾಟ್ ಎತ್ತಿದ್ ರೀತಿ ನೋಡಿ…

18) ಇಬ್ರೂ ಬ್ಯಾಟ್ಸಮನ್ಗೆ ಓಡೋಕೆ ಆಗ್ದೇ ರನ್ನರ್ ಆಗಿ ಇಬ್ಬರನ್ನ ತಗೊಂಡಿದ್ದು…

ವೆಸ್ಟ್ ಇಂಡೀಸ್ನ್ ಶಿವ್ ನಾರಾಯಣ್ ಚಂದ್ರಪಾಲ್ ಹಾಗೂ ರಿಡ್ಲೇ ಜೇಕಬ್ಸ್ ಗಾಯ ಆಗಿ ಒಡೋಕೆ ಆಗ್ದೇ ವಾವೆಲ್ ಹೈಂಡ್ಸ್ ಮತ್ತೆ ಸ್ಯಾಮ್ಯುಯೆಲ್ಸ್ನ್ ಸಹಾಯ ತಗೊಂಡಿದ್ದು. ಆದ್ರೆ ಇದು ಎಳೇ ರನ್ಗೆ ಮುಗಿದಿತ್ತು ಬಿಡಿ.

19) ಡೆನ್ನಿಸ್ ಲಿಲ್ಲಿ ಒಂಬತ್ತು ಜನ್ರನ್ನ್ ಸ್ಲಿಪಲ್ಲಿ ನಿಲ್ಲಿಸಿ ನ್ಯುಜಿಲ್ಯಾಂಡ್ ಬ್ಯಾಟ್ಸಮನ್ಗೆ ತಾಕತ್ತಿದ್ರೆ ಮುಂದಕ್ಕೆ ಹೊಡಿ ಅಂದಂಗಿದೆ ಇದು…

20) ಅದೇ ತರ 1999ರಲ್ಲಿ ಜಿಂಬ್ವಾಂಬೆಯ ಎದುರು…

21) 400 ರನ್ಗಳನ್ನ ಹೊಡೆದ ನಂತರ ಬ್ರಿಯಾನ್ ಲಾರ ಪಿಚ್ಗೆ ಮುತ್ತಿಕ್ಕಿದ್ದು ಹೀಗೆ…

2004 ರಲ್ಲಿ ಬ್ರಿಯಾನ್ ಲಾರ ಇಂಗ್ಲೆಂಡ್ ಎದ್ರು ಈ ದಾಖಲೆ ಮಾಡಿದ್ರು. ಒಂದೆರಡು ದಿನಗಳ ಮೊದಲು ಆಸ್ಟ್ರೇಲಿಯಾದ ಮ್ಯಾಥ್ಯು ಹೇಡನ್ 380 ರನ್ಗಳನ್ನ ಚೆಚ್ಚಿದ್ದು ಪುಡಿ ಪುಡಿಯಾಯ್ತು.

22) 92ರ ವಿಶ್ವಕಪಲ್ಲಿ ಜಾಂಟಿ ರೋಡ್ಸ್ , ಪಾಕಿಸ್ತಾನದ ಇಂಜಮಾಮ್ನ ರನ್ ಔಟ್ ಮಾಡಿದ್ದು ಹೀಗೆ…

23) ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್, ಕೊನೆಯ ಪಂದ್ಯದ ನಂತರ ಪಿಚ್ನ ಮುಟ್ಟಿ ನಮಸ್ಕರಿಸಿದ್ದು ಹೀಗೆ…

24) 1999, 2003, 2007 ಹೀಗೆ ಮೂರು ಬಾರಿ ಸತತವಾಗಿ ವಿಶ್ವಕಪ್ ಗೆದ್ದ ತಂಡ ಎಂದ್ರೆ ಆಸ್ಟ್ರೇಲಿಯಾ…

25) ಬರೇ 31 ಬಾಲ್ನಲ್ಲಿ ಶತಕ ಮಾಡಿದ ಮಿ. 360 ಎ ಬಿ ಡಿ ವಿಲಿಯರ್ಸ್ಗೆ ಸ್ಪೋಟಕ ಬ್ಯಾಟ್ಸಮನ್ ಕ್ರಿಸ್ ಗೈಲ್ ತಲೆಬಾಗಿ ಸಲಾಂ ಹೊಡೆದಿದ್ದು ಹೀಗೆ…

26) ಯುವರಾಜ್ ಸಿಂಗ್ "ದ್ ಗಾಡ್ ಆಪ್ ಕ್ರಿಕೆಟ್ಗೆ" ನಮಸ್ಕರಿಸಿದ ಕ್ಷಣ…

27) ಟೋನಿ ಗ್ರೆಗ್ ಅನ್ನೋ ಅಂಪೈರ್ಗೆ ಹೀಗೊಂದು ಟ್ರಿಬ್ಯುಟ್…

28) 120 ಕೋಟಿ ಜನರ ಕನಸು ನನಸಾದ ಕ್ಷಣ…

ಭಾರತ 2011 ರಲ್ಲಿ ಮತ್ತೆ ವಿಶ್ವಕಪ್ ಗೆದ್ದಾಗ.

29) ಇದಪ್ಪಾ ಸ್ಪಿರಿಟ್ ಅಂದ್ರೆ…

ತನ್ನೊಂದು ಕೈ ಫ್ರಾಕ್ಚರ್ ಆಗಿದ್ರೂ ಇನ್ನೊಬ್ಬ ಆಟಗಾರ ಲ್ಯಾರಿ ಗೋಮ್ಸ್ ಶತಕ ಬಾರಿಸಲಿ ಅಂತ ಮೈದಾನಕ್ಕಿಳಿದ , ಕ್ರಿಕೆಟ್ಗೋಸ್ಕರ ಜೀವಾನೇ ಕೊಡ್ತಿನೆ ಅನ್ನೊ ಹಾಗಿದೆ . ಈ ಮಾಲ್ಕಂ ಮಾರ್ಶಲ್ ಅನ್ನೋನು ಇಷ್ಟೇ ಮಾಡಿದ್ರೆ ದೊಡ್ಡ ವಿಷ್ಯ ಆಗ್ತಾ ಇಲ್ಲವಾಗಿತ್ತು . ಬೌಲಿಂಗಲ್ಲು 53 ರನ್ ನೀಡಿ 7 ವಿಕೆಟ್ ಪಡೆದಿದ್ದು ದಾಖಲೆ.

30) ಈ ಮೂರು ಕ್ರಿಕೆಟ್ ಆಟಗಾರರನ್ನ ಯಾರ್ ತಾನೇ ಮರಿಲಿಕ್ಕೆ ಸಾಧ್ಯ…

 ದ ವಿಜಾರ್ಡ್ ಶೇನ್ ವಾರ್ನ್,  ಸರ್ ಡಾನ್ ಬ್ರಾಡ್ಮನ್, ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್

31)  ಆಷಸ್ ಸರಣಿಯಲ್ಲಿ ಇಂಗ್ಲೆಂಡ್ 2 ರನ್ನಿಂದ ಜಯಗಳಿಸಿದಾಗ ಫ್ರೆಡ್ಡಿ ಪ್ಲಿಂಟಾಪ್,  ಬ್ರೇಟ್ ಲೀನ ಸಮಧಾನ ಪಡಿಸಿದ್ದು ಹೀಗೆ…

32) ಇನ್ನೇನ್ ನಾವ್ ಗೆದ್ದೇ ಬಿಟ್ವೋ ಅನ್ನೋ ಉತ್ಸಾಹದಲ್ಲಿದ್ದ ಆಸ್ಟ್ರೇಲಿಯಾಕ್ಕೆ ಗ್ರೇಮ್ ಸ್ಮಿತ್ನ್ ಎಂಟ್ರೀ ಶಾಕ್ ಕೊಟಿದ್ದೆ ಕೊಟ್ಟಿದ್ದು…

ಗಾಯದಿಂದ ಪೆವಿಲಿಯನಲ್ಲಿ ಕೂತ್ಕಂಡಿದ್ದ ಗ್ರೇಮ್ ಸ್ಮಿತ್ಗೆ ತನ್ನ ತಂಡ ಸೋಲ್ಬಾರ್ದು ಅಂತ ಮೈದಾನಕ್ಕೆ ಇಳಿದ್ದಿದ್ದ. 8.2 ಒವರ್ ಆಡಿದ್ರೆ ಮ್ಯಾಚ್ ಡ್ರಾ ಆಗ್ತಿತ್ತು, ಆದ್ರೆ ಸೋತ್ ಬಿಡ್ತು. ಎನೇ ಆಗ್ಲಿ ಕ್ಯಾಪ್ಟನ್ ಗ್ರೇಮ್ ಸ್ಮಿತ್ನ ಪ್ರಯತ್ನ ಇಂದಿಗೂ ಜೀವಂತ.

33) ಜಿ ಆರ್ ವಿಶ್ವನಾಥ ಶತಕ ಬಾರಿಸಿದ ನಂತರ ಟೋನಿ ಗ್ರೇಗ್ ಮಗುವಿನ ತರ ಆಡಿಸಿದ್ದು ಹೀಗೆ…

34) ಡೆನ್ನಿಸ್ ಲಿಲ್ಲಿ ಅಲುಮ್ಯುನಿಯಂ ಬ್ಯಾಟ್ (ಕಾಂಬಟ್) ಹಿಡ್ಕಂಡು ಮೈದಾನಕ್ಕೆ ಬಂದಾಗ ತುಂಬಾನೆ ರಾದ್ದಾಂತ ಆಗಿತ್ತು…

35) ದವಡೆ ಮುರಿದಿದ್ರೂ 14 ಒವರ್ನ್ ಬೌಲ್ ಮಾಡಿದ್ದು ನಮ್ ಅನಿಲ್ ಕುಂಬ್ಳೆ…

36) 1996 ರ ವಿಶ್ವಕಪ್ನಲ್ಲಿ ವೆಂಕಟೇಶ್ ಪ್ರಸಾದರ ಬಾಲ್ಗೆ ಬೌಂಡ್ರಿ ಹೊಡ್ದಾಗ ಅಮೀರ್ ಸೊಹೈಲ್ ಬ್ಯಾಟ್ ತೋರ್ಸಿದ್ದು ಹೀಗೆ…

ಬೇಕಿತ್ತಾ? ಮುಂದಿನ ಎಸೆತದಲ್ಲಿ ಬೌಲ್ಡ್ ಆಗಿ ಹೇಗ್ ಹೋಗ್ತಾ ಇದ್ದಾನೆ ನೋಡಿ…

37) 100 ಶತಕ ಬಾರ್ಸಿದಾಗ ಸಚಿನ್ ತೆಂಡುಲ್ಕರ್ ಸಂಭ್ರಮಿಸಿದ್ದು ಹೀಗೆ…

38) ಪಾಕಿಸ್ತಾನದ ಗಡ್ಡಾಫಿ ಸ್ಟೇಡಿಯಂನಲ್ಲಿ ಟೆರರಿಸ್ಟ್ ಅಟ್ಯಾಕ್ ಆದಾಗ ಶ್ರೀಲಂಕಾ ಆಟಗಾರರನ್ನ ವಿಮಾನದಲ್ಲಿ ಸ್ಥಳಾಂತರಿಸಿದ್ದು ಹೀಗೆ…

ಆದ್ರೂ ತುಂಬಾ ಜನ ಆಟಗಾರರಿಗೆ ಗಾಯ ಆಯ್ತು.

39) ಮಹಿಳಾ ಮಣಿಗಳ ಮೊದಲ ಎಕದಿನ ಪಂದ್ಯ…

4ನೇ ಆಗಸ್ಟ್ 1976 ರಲ್ಲಿ ಲಾರ್ಡ್ಸನಲ್ಲಿ ನಡೆದಿದ್ದು.

40) ಸರ್ ಇಯಾನ್ ಬಾತಂ 1981 ರಲ್ಲಿ ಔಟಾಗದೇ 149 ರನ್ನನ್ನ ಗಳಿಸಿ ಒಂದ್ ಧಮ್ ಎಳಿತಾ ಇರೋದು ನೋಡಿ…

ಇದು ನಡೆದಿದ್ದು ಆಸ್ಟ್ರೇಲಿಯಾದ ವಿರುದ್ದ.

41) ಭಾರತದ ಎಕ್ನಾಥ ಸೋಲ್ಕರ್ ಅದ್ಭುತವಾದ ಕ್ಯಾಚ್ನ ಹಿಡ್ದಾಗ…

ಭಾರತ ಕಂಡ ಅದ್ಭುತವಾದ ಫೀಲ್ಡರ್. ಅಲನ್ ನಾಟ್ನ ಕ್ಯಾಚ್ನ ಪಡೆದಿದ್ದು 1971ರಲ್ಲಿ.

42) ಬರ್ಮುಡಾದ ಪೋಲಿಸ್ ಕಮ್ ಕ್ರಿಕೆಟರ್ ಡ್ವೇನ್ ಲೆವರಾಕ್ ಭಾರತದ ರಾಬಿನ್ ಉತ್ತಪ್ಪನ್ನ ಕ್ಯಾಚ್ ಹಿಡ್ದಿದ್ದು ಯಾರ್ ತಾನೇ ಮರಿಯಾಕ್ ಸಾಧ್ಯ…

43) ಕೆಪ್ಲರ್ ವೆಸೆಲ್ ಅನ್ನೋ ಆಟಗಾರ ಆಸ್ಟ್ರೇಲಿಯ ಮತ್ತೆ ಸೌತ್ ಆಫ್ರಿಕಾದ ಪರವಾಗಿ ಆಡಿದ್ದಾನೆ ಅಂದ್ರೆ ನಂಬ್ಲೇಬೇಕು…

24 ಟೆಸ್ಟ್ ಗಳ್ನ ಆಸ್ಟ್ರೇಲಿಯ ಪರವಾಗಿ ಆಡಿ, 1991 ರಲ್ಲಿ ಸೌತ ಆಫ್ರಿಕಾದ ಪರವಾಗಿ ಕ್ಯಾಪ್ಟನ್ ಜವಾಬ್ದಾರಿ ಹೊತ್ಕಂಡು , 1992ರಲ್ಲಿ ಆಸ್ಟ್ರೇಲಿಯಾದ ವಿರುದ್ದಾನೇ 81 ರನ್ಗಳ್ನ ಮಾಡಿ ಜಯ ತಂದುಕೊಟ್ಟಿದ್ದು ಹೇಗ್ ತಾನೇ ಮರಿಯಕ್ಕೆ ಸಾಧ್ಯ.

44) ಸಚಿನ್ ತೆಂಡುಲ್ಕರ್ , ಸರ್ ಡಾನ್ ಬ್ರಾಡ್ಮನ್ ಪುತ್ಥಳೀಯ ಎದ್ರು ಪೋಟೋ ತಗೊಂಡಾಗ…

ಕ್ರಿಕೆಟ್ ಪ್ರೇಮಿಗಳಿಗೆ ಒಂದ್ಸಲ ಸ್ವರ್ಗ ರಪ್ ಅಂತ ಪಾಸ್ ಆದಂಗಿತ್ತು ಅಲ್ವಾ?