http://www.hindustantimes.com/rf/image_size_640x362/HT/p2/2016/06/29/Pictures/_d40b8344-3dce-11e6-974a-2ab7ab59b8ea.jpg

ಪ್ರೀತಿ ಪ್ರೇಮ ಎಲ್ಲಾ ಫಿಲಮ್ಮಲ್ಲಿ ನೋಡೋ ಅಷ್ಟು ಸುಲಭ ಅಲ್ಲ. ಮೋಹಕ ನೋಟ, ಆಮೇಲೆ ಹೊಟ್ಟೇಲಿ ಒಂಥರಾ ಚಿಟ್ಟೆ ಬಿಟ್ಟಂತಹ ಅನುಭವ- ಇವೆಲ್ಲಾ ಬರೀ ಆಕರ್ಷಣೆ. ಆದ್ರೆ ನಿಜ್ವಾದ ಪ್ರೀತಿಗೆ ಇಬ್ಬರ ಭಾವನೆಗಳೂ ಸದಾ ಕಾಲ ಉಳಿಯೋಹಾಗಿರ್ಬೇಕು.

ಈ ಹನ್ನೆರಡು ಗುಣಗಳಿರೋ ಹುಡುಗಂಗೆ ಬರೀ ಆಕರ್ಷಣೆ ಅಲ್ಲ, ನಿಮ್ಮ ಮೇಲೆ ನಿಜವಾದ ಪ್ರೀತಿ ಇದೆ ಅಂತ ಅರ್ಥ.

1. ನಿಮ್ಮ ಮನೆಯವ್ರು, ಸ್ನೇಹಿತರ ಬಗ್ಗೆ ಗೌರವ ತೋರಿಸ್ತಾನೆ

ತನ್ನ ಮನೆಯವ್ರು, ಸ್ನೇಹಿತರು ಅಂದ್ರೆ ಪ್ರೀತಿ, ನಿಮ್ಮವರ ಬಗ್ಗೆ ಅಸಡ್ಡೆ ಮಾಡೋ ಹುಡುಗ ಇವ್ನಲ್ಲ. ನಿಮ್ಮ ಸ್ನೇಹಿತರನ್ನ, ಮನೆಯವ್ರನ್ನ ಭೇಟಿ ಮಾಡಕ್ಕೆ ಇವನು ನೆಪ ಹುಡ್ಕಲ್ಲ, ಬದಲಾಗಿ ಸಮಯ ಮಾಡ್ಕೊತಾನೆ.

2. ಕೊಟ್ಟ ಮಾತು ಉಳಿಸ್ಕೋತಾನೆ

ನಿಮಗೆ ಕೊಡೋ ಮಾತು ಸುಮ್ನೆ ಕಾಟಾಚಾರಕ್ಕಲ್ದೆ ನಿಜ್ವಾಗ್ಲೂ ಅದನ್ನ ನೆನಪಲ್ಲಿ ಇಟ್ಕೊತಾನೆ. ಅಷ್ಟೆ ಅಲ್ಲ, ಅದರಂತೆ ನಡ್ಕೊತಾನೆ ಕೂಡ. ನಿಮ್ಮನ್ನ ಎಲ್ಲಿಂದಾದ್ರು ಕರ್ಕೊಂಡ್ ಬರ್ತೀನಿ ಅಂತ ಹೇಳಿದ್ರೆ ಅದನ್ನ ನಡೆಸಿಕೊಡ್ತಾನೆ, ಮರ್ತು ನಿಮ್ಮನ್ನ ಕಾಯ್ಸಲ್ಲ, ನೋಯ್ಸಲ್ಲ.

ಮೂಲ

3. ನಿಮ್ಮ ಸೌಂದರ್ಯದ ಬಗ್ಗೆ ಅಸೂಯೆ ಪಡಲ್ಲ

ನೀವು ಚನ್ನಾಗಿ ಡ್ರೆಸ್ ಮಾಡ್ಕೊಂಡ್ರೆ ಅದ್ರ ಬಗ್ಗೆ ಆಕ್ಷೇಪಣೆ ಮಾಡಲ್ಲ. ನಿಮ್ಮ ಬಗ್ಗೆ ಮೆಚ್ಚುಗೆ ಇರತ್ತೆ. ’ಆಫೀಸಲ್ಲಿ ಯಾರ್ ನಿನ್ನ ನೋಡ್ತಾರೆ? ಹೇಗೋ ಒಂದು ಹೋಗ್ಬಾರ್ದಾ!’ ಅನ್ನೋನು ಇವ್ನಲ್ಲ. ನನ್ನ ಹೆಂಡ್ತಿ ದಿನಾ ಎಷ್ಟು ಸುಂದರವಾಗಿ ಕಾಣ್ತಾಳೆ ಅಂತ ಹೆಮ್ಮೆ ಪಡೋನು ಇವನು.

4. ನಿಮ್ಮ ಜೊತೆ ಕಾಲ ಕಳಿಯಕ್ಕೆ ಇಷ್ಟ ಪಡ್ತಾನೆ

ಯಾವಾಗ್ಲೂ ಸ್ನೇಹಿತರು, ಕ್ರಿಕೆಟ್, ಟಿ.ವಿ. ಅಂತ ನಿಮ್ಮಿಂದ ದೂರ ಇರಲ್ಲ. ಆದಷ್ಟೂ ನಿಮ್ಮ ಜೊತೆ ಸಿನೆಮಾ ನೋಡ್ತಾ, ಮನೆಗೆಲಸಕ್ಕೆ ಸಹಾಯ ಮಾಡ್ತಾ ನಿಮ್ಮೊಂದಿಗೆ ಹೆಚ್ಚು ಸಮಯ ಕಳೀತಾನೆ. ಅವನ ಸ್ನೇಹಿತರನ್ನೂ ನಿಮ್ಮ ಸ್ನೇಹಿತರನ್ನೂ ನಿಮ್ಮೊಂದಿಗೆ ಭೇಟಿ ಮಾಡೋದೇ ಇವ್ನಿಗೆ ಸರಿ ಅನ್ಸತ್ತೆ.

ಮೂಲ

5. ತಪ್ಪದೇ ನಿಮ್ಮ ಬೇಜಾರಿಗೆ ಕಿವಿ ಕೊಡ್ತಾನೆ

ನಿಮಗೆ ಬೇಜಾರಾದಾಗ ಆ ಸಂದರ್ಭದಿಂದ ತಪ್ಪಿಸ್ಕೊಂಡು ಹೋಗೋ ಹೇಡಿ ಇವ್ನಲ್ಲ. ನಿಮ್ಮ ಮಾತನ್ನ ಕೂತು ಕೇಳ್ತಾನೆ, ನಿಮಗೆ ಆರಾಮನ್ಸಕ್ಕೆ ಏನ್ ಮಾಡ್ಬೋದೋ ಎಲ್ಲಾ ಮಾಡ್ತಾನೆ. ನಿಮ್ಮ ಕಷ್ಟದ ಕಾರಣ ಕೇಳಿ ಅದ್ರಿಂದ ಹೊರಗೆ ಬರಕ್ಕೆ ತಕ್ಕ ಸಲಹೆ ಕೂಡ ಕೊಡ್ತಾನೆ.

6. ಹಣಕಾಸಿನ ನಿರ್ಧಾರದಲ್ಲಿ ನಿಮ್ಮ ಸಲಹೆ ಕೇಳ್ತಾನೆ

ಮನೆಯ ಸಣ್ಣ ಪುಟ್ಟ ಖರ್ಚಿರ್ಲಿ ಅಥ್ವಾ ಮನೆ, ಕಾರು ಖರೀದಿ ಅಂತ ದೊಡ್ಡ ನಿರ್ಧಾರಗಳಿರ್ಲಿ, ನಿಮ್ಮನ್ನ ಕೇಳ್ದೆ ಇವನು ಮುಂದಿನ ಹೆಜ್ಜೆ ಇಡಲ್ಲ. ದುಡ್ಡು ನಂದು, ನಿಂದು ಅನ್ನದೇ ಇಬ್ರೂ ಕೂತು ನಿರ್ಧಾರ ಮಾಡ್ಬೇಕು ಅನ್ನೋ ಮನೋಭಾವ ಇವನಿಗಿರತ್ತೆ.

ಮೂಲ

7. ನಿಮ್ಮಲ್ಲಿರೋ ಕೊರತೆಗಳ ಸಮೇತ ನಿಮ್ಮನ್ನ ಒಪ್ಕೋತಾನೆ

ನಿಮಗೆ ಏನೂ ಗೊತ್ತಿಲ್ಲ ಅಂತ ಹಿಯ್ಯಾಳಿಸೋ ಬುದ್ಧಿ ಇವನಿಗಿರಲ್ಲ. ನಿಮಗೆ ತಿಳಿಯದಿರೋ ವಿಷಯಗಳ್ನ ನಿಮಗೆ ತಿಳಿ ಹೇಳ್ತಾನೆ. ಇಲ್ಲಾ, ಇಬ್ರೂ ಇದರ ಬಗ್ಗೆ ಕಲಿಯೋಣ ಅಂತಾನೆ. ನಿಮ್ಮಲ್ಲಿರೋ ಎಲ್ಲಾ ಸಣ್ಣ ಪುಟ್ಟ ಕೊರತೆಗಳ ಸಮೇತ ನಿಮ್ಮನ್ನ ಒಪ್ಕೋತಾನೆ.

8. ನಿಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸ್ತಾನೆ

ನೀವು ಹೇಗಿದ್ರೂ ಸರಿ, ತನ್ನ ಕೆಲಸ ಮೊದ್ಲು ಆದ್ರೆ ಸಾಕು ಅನ್ನೋ ಸ್ವಾರ್ಥಿ ಇವನಾಗಿರಲ್ಲ. ನಿಮ್ಮ ಆರೋಗ್ಯದಲ್ಲಿ ಚೂರು ವ್ಯತ್ಯಾಸ ಆದ್ರೂ ನಿಮ್ಮ ಆರೈಕೆ ಮಾಡ್ತಾನೆ, ನಿಮ್ಮ ಕೆಲಸಗಳ್ನ ಹಂಚ್ಕೊತಾನೆ ಮತ್ತೆ ನಿಮ್ಮ ಕೈಲಿ ಆದಷ್ಟೂ ಕೆಲಸ ಮಾಡಿಸ್ಬಾರ್ದು ಅಂತ ಯೋಚಿಸ್ತಾನೆ.

ಮೂಲ

9. ನಿಮ್ಮ ಜೊತೆ ಭವಿಷ್ಯದ ಕನಸು ಕಾಣ್ತಾನೆ

ಬೇರೆ ಕೆಲಸಕ್ಕೋ, ಬೇರೆ ಊರಿಗೋ, ಬೇರೆ ದೇಶಕ್ಕೋ ಹೋಗೋ ಆಕಾಂಕ್ಷೆ ಇದ್ರೂ, ಬರೀ ತನ್ನ ಬಗ್ಗೆ ಮಾತ್ರ ಇವ್ನು ಯೋಚ್ನೆ ಮಾಡಲ್ಲ. ನಿಮ್ಮ ಅನುಕೂಲ, ನಿಮ್ಮ ಕೆಲಸ, ನಿಮ್ಮ ಆಸೆಗಳ ಬಗ್ಗೆ ಕೂಡ ಇವನಿಗೆ ಅಷ್ಟೇ ಕಾಳಜಿ ಇರೋದ್ರಿಂದ ಅವನ ಎಲ್ಲಾ ನಿರ್ಧಾರಗಳನ್ನೂ ನಿಮ್ಮ ಜೊತೇಲೇ ಮಾಡಕ್ಕಿಷ್ಟಪಡ್ತಾನೆ.

10. ನಿಮ್ಮಲ್ಲಿ ಯಾವಾಗ್ಲೂ ಸ್ಪೂರ್ತಿ ತುಂಬ್ತಾನೆ

ನೀವು ಏನೇ ಹೊಸದಾಗಿ ಮಾಡಕ್ಕೆ ಹೊರಟ್ರೂ ಇವನು ಅಡ್ಡಿ ಬರಲ್ಲ. ನಿಮಗೆ ಇನ್ನಷ್ಟು ಉತ್ತೇಜನ ಕೊಟ್ಟು, ಹುರಿದುಂಬಿಸಿ, ಅದರಲ್ಲಿ ತಾನೂ ಆಸಕ್ತಿ ತೋರಿಸ್ತಾನೆ. ಅವನ ಉತ್ತೇಜನ ನೋಡಿ ಏನಾದ್ರೂ ಮಾಡಲೇಬೇಕು ಅಂತ ಅನ್ಸೋ ಅಷ್ಟು ನಿಮಗೆ ಅವನು ಸ್ಫೂರ್ತಿಯಾಗಿರ್ತಾನೆ.

ಮೂಲ

11. ನಿಮ್ಮ ಆಸೆಗಳ್ನ ಪೂರೈಸ್ತಾನೆ

ನೀವು ಆಸೆ ಪಡೋದ್ನ ಪೂರೈಸಕ್ಕೆ ತನ್ನ ಶಕ್ತಿ ಮೀರಿ ಪ್ರಯತ್ನ ಪಡೋನು ಈತ. ಎಲ್ಲಾದ್ರು ಹೋಗ್ಬೇಕು, ಏನಾದ್ರು ಕೊಂಡ್ಕೊಬೇಕು ಅಂತ ನೀವು ಯಾವಾಗ್ಲೋ ಹೇಳಿದ್ರೂ ಅದನ್ನ ನೆನಪಲ್ಲಿ ಇಟ್ಕೊಂಡು ನಿಮ್ಮ ಆಸೆ ಈಡೇರಿಸ್ತಾನೆ, ಅದೂ ಯಾವ್ದೇ ಅಪೇಕ್ಷೆ ಇಲ್ದೆ.

12. ನಿಮ್ಮ ಬಗ್ಗೆ ಪ್ರತಿ ಸಣ್ಣ ವಿಷಯಾನೂ ತಿಳ್ಕೊಂಡಿರ್ತಾನೆ

ನಿಮ್ಮ ಬಗ್ಗೆ, ನಿಮ್ಮ ಇಷ್ಟ-ಕಷ್ಟಗಳ ಬಗ್ಗೆ, ನಿಮ್ಮ ಆಯ್ಕೆಯ ಬಗ್ಗೆ, ನಿಮ್ಮ ಸಂತೋಷ-ದುಃಖಗಳ ಬಗ್ಗೆ ಇವನಿಗೆ ಎಲ್ಲಾ ಗೊತ್ತಿರತ್ತೆ. ನೀವು ಯಾವತ್ತೋ ಅಂದು ಮರೆತಿದ್ದ ಮಾತುಗಳ್ನ ಕೂಡ ಇವನು ಮರೆಯಲ್ಲ. ನಿಮಗೆ ಗುಲಾಬಿ ಇಷ್ಟಾನೋ ಮಲ್ಲಿಗೇನೋ, ಜಾಮೂನೋ, ರಸಗುಲ್ಲಾನೋ… ಎಲ್ಲಾ ಅವನಿಗೆ ಗೊತ್ತು.  

ಮೂಲ

ಇಂಥಾ ಗುಣಗಳಿರೋ ಚಿನ್ನದಂಥಾ ಹುಡುಗ ನಿಮಗೆ ಸಿಕ್ರೆ ನಿಮ್ ಜೀವನ ಹೂವಿನ ಹಾಸಿಗೆ ಆಗೋದ್ರಲ್ಲಿ ಸಂಶಯಾನೇ ಇಲ್ಲ.