ಮೆದುಳು ಕೆಲಸಮಾಡೋ ರೀತಿ ಆಕರ್ಷಕವಾಗಿರುತ್ತೆ. ನಮ್ಮ ಮೆದುಳು ಎಲ್ಲವನ್ನೂ ಹೇಗೆ ಗ್ರಹಿಸುತ್ತೆ ಅಂತ ತಿಳ್ಕೊಳ್ಳೋದು ಸ್ವಲ್ಪ ಕಷ್ಟಾನೇ. ನಮ್ಮ  ಮನೋ ಜ್ಞಾನಿಗಳು, ಸಂಶೋಧಕರು ಇದನ್ನ ಅರ್ಥ ಮಾಡ್ಕೊಳ್ಳೋದಕ್ಕೆ ಅಂತಾನೆ, ಕೆಲವು ಕಣ್ಣಿಗೆ ಭ್ರಮೆ ಹುಟ್ಟಿಸೋ ಉಪಕರಣ, ಉಪಾಯ ಕಂಡುಹಿಡಿದಿದ್ದಾರೆ.

ಇದನ್ನೆಲ್ಲಾ ಅರ್ಥ ಮಾಡ್ಕೊಳ್ಳೋದಕ್ಕೆ ನಮ್ಮ  ಬುದ್ದಿ, ಮನಸ್ಸು ಸಾಧ್ಯವಾದಷ್ಟೂ ಶಾರ್ಟ್ ಕಟ್ ಹುಡುಕೋ ಪ್ರಯತ್ನ ಮಾಡುತ್ತೆ.   ಇದಕ್ಕೆ ಒಳ್ಳೆ ಉದಾಹರಣೆ ಅಂದ್ರೆ ದೆವ್ವ. ಇದನ್ನ ಯಾರು ನೋಡಿದ್ದಾರೆ? ಆದರೆ ಈ ಶಬ್ದ ಕಿವಿಗೆ ಬಿದ್ದ ತಕ್ಷಣ ಕಣ್ಮುಂದೆ ಬರೋದು ಬಿಳಿ ಬಣ್ಣ, ತಿರುಚಿದ ಕಾಲು, ಉದ್ದ ಕೂದಲು, ಗೆಜ್ಜೆ ಶಬ್ದ ಹೀಗೆ ಪಟ್ಟಿ ಬೆಳಿತಾ ಹೋಗುತ್ತೆ. ಹಾಗಾದ್ರೆ ದೆವ್ವ ಅಂದ್ರೆ ಇದೆಲ್ಲ ಇರುತ್ತಾ? ಇದಕ್ಕೆ ಇದೆ ಸರಿಯಾದ ಉತ್ತರ ಅಂತ ಏನಿಲ್ಲ, ನಾವು ಕೇಳಿರೋ ಕಥೆ, ಯಾರೋ ಏನೋ ಹೇಳಿರೋ ಮಾತುಗಳಿಂದ, ನೋಡಿರೋ ಫಿಲಂ ಗಳಿಂದ ನಮ್ಮ ಮನಸ್ಸಿನಲ್ಲಿ ದೆವ್ವ ಅಂದ್ರೆ ಈ ವಿಹಾರಗಳು ಸುಳಿಯೋಹಾಗೆ ಮಾಡುತ್ತೆ.

ಈ ಆಸಕ್ತಿದಾಯಕ ಭ್ರಮೆ ಹುಟ್ಟಿಸೋ ಚಿತ್ರಗಳನ್ನ ನೀವು ಹತ್ತಿರದಿಂದ ನೋಡಿದರೆ, ನಿಮ್ಮ ಮೆದುಳು ನಿಮ್ಮ ಮೇಲೆ ತಂತ್ರಗಳನ್ನು ಹೇಗೆ ವಹಿಸುತ್ತದೆ ಮತ್ತು ಎಲ್ಲ ರೀತಿಯ ಮಾನಸಿಕ ಶಾರ್ಟ್ಕಟ್ಗಳನ್ನು ತೊಗೊಳುತ್ತೆ ಅಂತ ನಿಮಗೆ ಅರ್ಥ ಆಗುತ್ತೆ.

ಕೆಲವುಸಲ ಇದು ಥಟ್ ಅಂತ ಉತ್ತರ ಹುಡುಕೋದಕ್ಕೆ ಹೊರಟ್ರೆ ಕೆಲವುಸಲ ನಾವು ಅರ್ಥ ಮಾಡ್ಕೊಳ್ಳೋದ್ರಲ್ಲಿರೋ ಗ್ಯಾಪ್ ಕಮ್ಮಿ ಮಾಡೋ ಪ್ರಯತ್ನ ಮಾಡುತ್ತೆ, ಮತ್ತೆ ಕೆಲವುಸಲ  ಯಾವುದೊ ಒಂದು ಇಲ್ಲದೆ ಇರೋ ಪ್ಯಾಟರ್ನ್ ಹುಡುಕೋದಕ್ಕೆ ಹೋಗುತ್ತೆ.

  1. ಈ ಚಿತ್ರದಲ್ಲಿರೋ ಚಕ್ರ ಸುತ್ತುತ್ತಾನೆ ಇದೆ ಅನ್ನಿಸ್ತಿದ್ಯಾ? ಹಾಗಿದ್ರೆ ಅದು ತಪ್ಪು! ಈ ಚಿತ್ರದ ಬೇರೆ ಭಾಗಗಳನ್ನ ನೋಡಕ್ಕೆ ಅಂತ ನೀವು ನಿಮ್ಮ ದೃಷ್ಟಿಯನ್ನು ಆಕಡೆ ಈಕಡೆ ಓಡಾಡಿಸೋದ್ರಿಂದ ಈ ಚಲನೆಯ ಭ್ರಮೆ ನಿಮಗೆ ಆಗುತ್ತೆ.

  1. ಈ ಕೆಳಗಿನ ಗ್ರಿಡ್ ನ ಮಧ್ಯಭಾಗ ನೋಡಿದ್ರೆ, ಸರಿಯಾಗಿರೋಹಾಗೆ ಕಾಣಿಸ್ತಾ? ಆದರೆ ಇದು ನಿಮ್ಮ ಭ್ರಮೆ ಮಾತ್ರ, ಯಾಕೆ ಅಂದ್ರೆ, ಹೀಗೆ ಕಾಣಿಸೋದು ನಮ್ಮ ಮೆದುಳಿನ ಸೀಮಿತ ಬಾಹ್ಯ ದೃಷ್ಟಿಗೆ ಇರೋ ಗ್ಯಾಪ್ ತುಂಬುವ ಬುದ್ದಿಯಿಂದ.

  1. ಕೆಲವು ಆಸಕ್ತಿದಾಯಕ ಭ್ರಮೆಗಳು ಶತಮಾನಗಳಿಂದ ಅಸ್ತಿತ್ವದಲ್ಲಿವೆ. ಉದಾಹರಣೆಗೆ, ಈ ಪ್ರಾಚೀನ ರೋಮನ್ ಗ್ರಿಡ್ ಅನ್ನು ತೆಗೆದುಕೊಳ್ಳಿ. ನಿಮ್ಮ ದೃಷ್ಟಿಕೋನಕ್ಕೆ ತಕ್ಕಂತೆ, ಮಾದರಿಯ ಇಳಿಜಾರು ಎಡಕ್ಕೆ ಅಥವಾ ಬಲಕ್ಕೆ ಇರುತ್ತೆ.

  1. ಈ ಭ್ರಮೆ ಹುಟ್ಟಿಸೋ ಚಿತ್ರಕ್ಕೆ ಹೆರ್ಮನ್ ಗ್ರಿಡ್ ಅಂತಾರೆ. ಬಿಳಿ ಗೆರೆಗಳು ಒಂದಾಗೋ ಜಗದಲ್ಲಿ ಬೂದು ಬಣ್ಣದ ಚುಕ್ಕೆಗಳು ಕಾಣ್ಸುತ್ತೆ, ಆದರೆ ನೀವು ಅವುಗಳನ್ನು ನೇರವಾಗಿ ನೋಡಿದಾಗ ಮರೆಯಾಗುತ್ತೆ.

  2. ಈ ಬ್ಲಾಕ್ಗಳ ಮಧ್ಯೆ ಇರೋ ಲೈನ್, ನೇರವಾಗಿದ್ಯಾ ಅಥವಾ ಸೊಟ್ಟಗಿದ್ಯಾ? ಸೊಟ್ಟಗೆ ಕಾಣಿಸ್ತಿದ್ರೂ ವಾಸ್ತವದಲ್ಲಿ ಅವು ನೇರವಾದ ಗೆರೆಗಳೇ. ನಮ್ಮ ಗ್ರಹಣ ಶಕ್ತಿ ಟ್ರಿಕಿ ಆಗಿದ್ರೂ ನಮ್ಮ ಮೆದುಳು ವಾಸ್ತವಕ್ಕಿಂತ ಭಿನ್ನವಾಗಿ ಯೋಚನೆ ಮಾಡೋಹಾಗೆ ಮಾಡುತ್ತೆ.

6.ಗಾತ್ರ ಅಥವಾ ದೂರ ಅಳತೆ ಮಾಡೋವಾಗ ನಮ್ಮ ಕಣ್ಣು ನಮಗೆ ಮೋಸ ಮಾಡುತ್ತೆ. ಮೆದುಳು ಚಮತ್ಕಾರ ತೋರ್ಸುತ್ತೆ. ಕೆಳಗಿರೋ ಚಿತ್ರದಲ್ಲಿ ಯಾವುವೋ ಒಂದು ಸರ್ಕಲ್ ಮಾತ್ರ ದೊಡ್ಡದಾಗಿದ್ಯಾ? ಖಂಡಿತ ಇಲ್ಲ ಎಲ್ಲಾ ಒಂದೇ ಸಮನಾಗಿದೆ.

7.ಮೆದುಳು ತೊಗೊಳೋ ಶಾರ್ಟ್ ಕಟ್ ಗೆ ಒಳ್ಳೆ ಉದಾಹರಣೆ ಅಂದ್ರೆ, ಸಾಧ್ಯವಾದಾಗಲೆಲ್ಲ ಮುಖದ ಚಿತ್ರ ನೆನಪಾಗಿಸೋ ಪ್ರಯತ್ನ ಮಾಡುತ್ತೆ. ಉದಾಹರಣೆಗೆ ಕೆಳಗಿನ ಬಿಲ್ಡಿಂಗ್ ಚಿತ್ರ ನೋಡಿ. ಇದು ನಿಮಗೆ ಒಂದು ಹಕ್ಕಿಯ ಮುಖ ನೆನಪಾಗೋಹಾಗೆ ಮಾಡೇ ಮಾಡುತ್ತೆ.

8.ಈ ಕೆಳಗಿನ ಚಿತ್ರ ಆಪ್ಟಿಕಲ್ ಭ್ರಾಂತಿಗಳಲ್ಲಿ ತುಂಬಾನೇ ಆಸಕ್ತಿ ಹುಟ್ಟಿಸೋದು. ಚೌಕ A ಹಾಗೂ B ಎರಡೂ ಒಂದೇ ಬಣ್ಣದ್ದು, ಆದ್ರೆ ನಮಗೆ ಚೆಸ್ ಬೋರ್ಡ್ ನೋಡಿ ಅದರ ಪ್ಯಾಟರ್ನ್ ತಲೇಲಿರೋ ಕಾರಣದಿಂದ ನಮಗೆ ಇವೆರಡೂ ಬೇರೆ ಬೇರೆ ಬಣ್ಣ ಅಂತ ಅನ್ನಿಸುತ್ತೆ.

9.ಮನುಷ್ಯನ ಮೆದುಳು ಶಾರ್ಟ್ ಕಟ್ ಹುಡುಕುತ್ತೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಇದು. ಈ ಕೆಳಗಿನಚಿತ್ರದಲ್ಲಿರೋ ಹೂದಾನಿ/ ವಾಸ್ ನೋಡಿ. ನಮ್ಮ ಮೆದುಳು ಅದರಲ್ಲೂ ಮುಖ ಗುರುತಿಸೋ ಪ್ರಯತ್ನ ಮಾಡುತ್ತೆ ಅನ್ನೋದನ್ನ, ವಾಸ್ ಪಕ್ಕದಲ್ಲಿರೋ ಅದರ ನೆರಳು/ ನೆರಳಿನ ಚಿತ್ರ ತೋರ್ಸುತ್ತೆ.

10.ತುಂಬಾನೇ ಆಸಕ್ತಿ ಇರೋ ಭ್ರಮೆ ಅಂದ್ರೆ ಈ ಅಸಾಧ್ಯವಾದ ಆಕಾರ. ಈ ಪೆನ್ರೋಸ್ ತ್ರಿಕೋನಾಕಾರ. ಇದು ತರ್ಕಭದ್ದವಾಗಿ ಇಲ್ಲದೆ ಇರೋದ್ರಿಂದ ಇದನ್ನ ಗ್ರಹಿಸೋದು ಕಷ್ಟ ಆಗುತ್ತೆ.

11.ಕನಿಝಾ ತ್ರಿಕೋನ ಅನ್ನೋ ಈ ಕೆಳಗಿನ ಚಿತ್ರಾನೂ ನಮ್ಮ ಮೆದುಳು ಹೇಗೆ ಶಾರ್ಟ್ ಕಟ್ ಉಪಯೋಗಿಸುತ್ತೆ ಅಂತ ಹೇಳುತ್ತೆ. ಈ ಚಿತ್ರ ಸರಿಯಾಗಿ ನೋಡಿ,ಇದರಲ್ಲಿ ತ್ರಿಕೋನಾಕಾರ ಇಲ್ಲವೇ ಇಲ್ಲ, ಆದರೆ ಚಿತ್ರ ನೋಡುತ್ತಿದ್ದಹಾಗೆ ನಮ್ಮ ಮೆದುಳು ಇದನ್ನ ತ್ರಿಕೋನ ಅಂತಾನೆ ಗುರುತಿಸುತ್ತೆ.

ಮೆದುಳು ನಮ್ಮ ಕಣ್ಣಿಗೆ ಮೋಸ ಮಾಡ್ತಿದೆ ಅನ್ನೋದು ನಿಜ ತಾನೇ?