https://2.img-dpreview.com/files/p/TS560x560~forums/58303976/316ff7e8eb334a659c15c5f69425eea3

ಹೊಟ್ಟೆ ಉಬ್ಬರಿಸೋದು, ಇದೊಂತರಾ ಕಾಮನ್ ಕಾಯಿಲೆ. ಕಾಯಿಲೆನಾ… ಸಿಕ್ಕಾಪಟ್ಟೆ ಕಾಮನ್ ತೊಂದರೆ ಅಂತೀನಿ.. ಹೊಟ್ಟೆ ಉಬ್ಬರಿಸೋದು, ಹೊಟ್ಟೆ ಭಾರ, ಒಂತರಾ ಸಂಕಟ ಇವೆಲ್ಲ ದಿನ ನಿತ್ಯ ನಮ್ಮಲ್ಲಿ ಕಾಡೋ ಸಮಸ್ಯೆ. ಇದು ಯಾಕಾಗತ್ತೆ.. ಕೆಲವೊಮ್ಮೆ ಜಾಸ್ತಿ ತಿಂದಾಗ ಉಬ್ಬರಿಸತ್ತೆ ಆದ್ರೆ ಕೆಲವೊಮ್ಮೆ ಕಮ್ಮಿ ತಿಂದ್ರೂ ಈ ಸಮಸ್ಯೆ ಕಾಣಿಸತ್ತೆ…ಯಾಕೆ… ಕೆಲವೊಂದು ತಿಂಡಿ ಪದಾರ್ಥದ ಗುಣ ಅದು.. ಹೊಟ್ಟೇಲಿ ಗ್ಯಾಸ್ ತುಂಬಿಕೊಂಡು ಸುಮಾರ್ ಸಮಸ್ಯೆ ಆಗತ್ತೆ.. ನಿಮಗೂ ಈ ಸಮಸ್ಯೆ ಇದೆ ಅಂದ್ರೆ ನಾವು ಇಲ್ಲಿ ಬರ್ದಿರೋದನ್ನ ಓದಿ, ತಿಳ್ಕೊಳಿ, ಪಾಲಿಸಿ.. ಸಮಸ್ಯೆ ಸರಿಹೋಗತ್ತೆ.

1. ಗಬ ಗಬ ಅಂತ ಗಡಿಬಿಡಿಲಿ ತಿನ್ನೋದು 

ನಿಮ್ಮ ಸ್ನೇಹಿತರ ಜೊತೆ ಕೂತಾಗ ನೀವೇ ಊಟ ಲೇಟ್ ಆಗಿ ಮುಗಿಸೋದಾ.. ಆರಾಮಾಗಿರಿ ಒಳ್ಳೇದು.. ಯಾವತ್ತೂ ಗಬ ಗಬ ಅಂತ ತಿನ್ನಬೇಡಿ, ಹೀಗೆ ಮಾಡಿದಾಗ ಗಾಳಿ ಹೊಟ್ಟೆ ಒಳಗೆ ಸೇರಿಕೊಂಡು ನಿಮ್ಮ ಹೊಟ್ಟೆ ಊದಿಕೊಳತ್ತೆ.. ನಿಧಾನವಾಗಿ ಅಗಿದು ಅಗಿದು ತಿನ್ನಿ ಹೊಟ್ಟೆ ಉಬ್ಬರಿಸೋಲ್ಲ 

2. ಪೈಪ್(ಸ್ಟ್ರಾ) ಬಳಸಿ ಕುಡಿಯೋದು 

ಇದೇನಪ್ಪ ಸ್ಟ್ರಾಗು ಹೊಟ್ಟೆ ಉಬ್ಬರಿಸೋಕು ಸಂಬಂಧ ಅಂತ ಯೋಚ್ನೆ ಮಾಡ್ತಿದೀರಾ.. ಸಂಬಂಧ ಇದೆ.. ಪ್ರತಿ ಸತಿ ಸೊರ್ರ್.. ಅಂತ ಎಳೆದಾಗಲೂ ಗಾಳಿ ಹೊಟ್ಟೆ ಒಳಕ್ಕೆ ಸೇರಿಕೊಳತ್ತೆ.. ಕುಡಿದದ್ದಕ್ಕಿಂತ ಗಾಳಿನೇ ಜಾಸ್ತಿ ಹೊಟ್ಟೆ ಒಳಕ್ ಹೋದ್ರೆ ಏನ್ ಮಾಡದಪ್ಪ.. ಉಬ್ಬರಿಸಿಕೊಂಡೆ ಉಬ್ಬರಿಸಿಕೊಳತ್ತೆ.. ಆದಷ್ಟು ಸ್ಟ್ರಾ ಬಳಸೋದನ್ನ ಬಿಟ್ಟಾಕಿ.

ಮೂಲ

3. ನೀರು ಕಮ್ಮಿ ಕುಡಿಯೋದು

ಜನ ಇರ್ತಾರೆ.. ತುಂಬಾ ಕಮ್ಮಿ ನೀರ್ ಕುಡಿಯೋರು ಇರ್ತಾರೆ.. ನೆನಪು ಮಾಡಿಕೊಂಡಾದ್ರು ನೀರು ಕುಡೀರಿ.. ನೀರು ಜೀರ್ಣ ಕ್ರಿಯೇನ ಚೆನ್ನಾಗಿ ನಡೆಯಕ್ಕೆ ಸಹಾಯ ಮಾಡತ್ತೆ.. ನಿಮಗೆ ಗೊತ್ತಾಗತ್ತೆ.. ಚೆನ್ನಾಗಿ ಬೇಕಾದಷ್ಟು ನೀರ್ ಕುಡೀರಿ ಮಾರ್ರೆ..

4. ಬಬಲ್ ಗಮ್ ತಿನ್ನೋದು

ನೀವು ಪ್ರತಿ ಸತಿ ಚೇವಿಂಗ್ ಗಮ್ ಅಗಿಯೋಕೆ ಅಂತ ಬಾಯಿ ಬಿಟ್ಟಾಗ ಗಾಳಿ ಸೇರಿಕೊಳ್ಳುತ್ತಾ ಹೋಗತ್ತೆ.. ಅಷ್ಟೇ ಅಲ್ಲ ಈ ಚೇವಿಂಗ್ ಗುಮ್ಮಲ್ಲಿ ಇರೋ ಸಕ್ಕರೆಯ ಅಂಶ (ಶುಗರ್ ಆಲ್ಕೋಹಾಲ್) ನಮ್ಮ ದೇಹದ ಜೀರ್ಣಕ್ರಿಯೆಗೆ ಎಡವಟ್ಟು.. ಇದು ಹೊಟ್ಟೆ ಉಬ್ಬಸದಿಂದ ಶುರುವಾಗಿ ಬೇದಿ ತಂಕ ಸಮಸ್ಯೆ ಆಗಬಹುದು.. ನೋಡಿ ಚೇವಿಂಗ್ ಗಮ್ ಬಿಟ್ಟುಬಿಡಿ  

ಮೂಲ

5. ಜಾಸ್ತಿ ಒತ್ತಡದ ಜೀವನ ಮಾಡೋದು

ಸ್ಟ್ರೆಸ್ ಆದಾಗ ದೇಹ ಜಾಸ್ತಿ ಆಸಿಡ್ ಉತ್ಪಾದನೆ ಮಾಡತ್ತೆ, ಹಾಗೆ ತಿಂದಿದ್ದು ಸರಿಯಾಗಿ ಜೀರ್ಣ ಆಗಲ್ಲ ಇದರಿಂದ ಗ್ಯಾಸ್ ಜಾಸ್ತಿ ಆಗಿ ಹೊಟ್ಟೆ ಉಬ್ಬರಿಸೋದು ಆಗತ್ತೆ. ಜಾಸ್ತಿ ಸ್ಟ್ರೆಸ್ ಮಾಡ್ಕೋಬೇಡಿ, ಸ್ವಲ್ಪ ಯೋಗ, ಧ್ಯಾನ, ವ್ಯಾಯಾಮ ಅಭ್ಯಾಸ ಮಾಡ್ಕೊಳಿ.. 

ಮೂಲ

6. ರಾತ್ರಿ ಲೇಟಾಗಿ ಊಟ ಮಾಡೋದು

ಊಟ ಮಾಡಿ ತಕ್ಷಣ ಮಲ್ಕೊಂಡ್ರೆ ಸರಿಯಾಗಿ ಜೀರ್ಣ ಆಗಲ್ಲ.. ಹೀಗಾಗಿ ಬೆಳಗ್ಗೆ ಹೊಟ್ಟೆ ಉಬ್ಬರಿಸಿಕೊಳತ್ತೆ.. ಊಟ ಮಾಡಿ ಸ್ವಲ್ಪ ಸಮಯ ಆದಮೇಲೆ ಮಲಗಿ..

7. ರಾತ್ರಿ ಊಟ ಆದ ತಕ್ಷಣ ಹಣ್ಣು ತಿನ್ನೋದು

ಬಿಸಿ ಬಿಸಿಯಾಗಿ ಊಟ ಮಾಡಿ ತಕ್ಷಣ ಹಣ್ಣು ತಿಂದರೆ ಹಣ್ಣು ಹೋಗಿ ಊಟದ ಮೇಲೆ ಕೂತು ಗ್ಯಾಸ ಆಗತ್ತೆ. ಹಣ್ಣು ಫೆರ್ಮೆಂಟ್ ಆಗಿಬಿಡುತ್ತೆ ಆಗ ಗ್ಯಾಸ್ ಉತ್ಪಾದನೆ ನಡೆಯತ್ತೆ.. 

ಮೂಲ

8. ಸರಿಯಾಗಿ ಎರಡಕ್ಕೆ ಹೋಗದೆ ಇರೋದು

ಸರಿಯಾಗಿ ಹೋಗಬೇಕು.. ನೀವು ದಿನಾ ಅರ್ಜೆಂಟಲ್ಲಿ  ಓಡಿ ಓಡಿ ಹೋಗ್ತೀರಾ ಅಥವಾ ಹೋಗಕ್ಕೆ ಕಷ್ಟ ಪಡ್ತೀರಾ? ಸ್ವಲ್ಪ ಈ ಅಭ್ಯಾಸಾನ ಸರಿ ಮಾಡಿಕೊಳ್ಳಿ.. ಪೈಪಲ್ಲಿ ಕಸ ಸೇರಿಕೊಂಡು ಕಸ ಆಚೆ ಹೋಗದೆ ಇದ್ದರೆ ಪೈಪ್ ಊದಿಕೊಳತ್ತೆ ಅಲ್ವಾ.. ಹಾಗೆ ನಮ್ಮ ಹೊಟ್ಟೇನೂ.. 

9. ಸಕ್ಕರೆ ಜಾಸ್ತಿ ತಿನ್ನೋದು

ಸಕ್ಕರೆ ಅತಿಯಾದಾಗ ದೇಹದಲ್ಲಿ ಫರ್ಮೆಂಟೇಶನ್ ಮಾಡೋ ಬ್ಯಾಕ್ಟೀರಿಯಾನಾ ಹುಟ್ಟಿಸತ್ತೆ, ಇದರಿಂದ ಜೀರ್ಣ ಕ್ರಿಯೆಗೆ ತೊಂದರೆ ಆಗಿ ಗ್ಯಾಸ್ ಉತ್ಪಾದನೆ ಆಗತ್ತೆ.. ಆಗ ಹೊಟ್ಟೆ ಉಬ್ಬರಿಸೋದು.. 

ಮೂಲ

10. ತುಂಬ ಈರುಳ್ಳಿ ತಿನ್ನೋದು

ಈರುಳ್ಳಿ ಪ್ರಿಯರಾಗಿದ್ದರೆ ಸ್ವಲ್ಪ ಕಷ್ಟ ನಿಮಗೆ.. ಈರುಳ್ಳಿ ಕಮ್ಮಿ ಮಾಡಿ… ಯಾಕೆ ಅಂದ್ರೆ ಈ ಈರುಳ್ಳಿಲಿ FODMAPS ಅನ್ನೋ ಅಂಶ ಇದೆ ಇದು ಗ್ಯಾಸ ಉತ್ಪಾದನೆ ಮಾಡಿ ಹೊಟ್ಟೆ ಉಬ್ಬರಿಸೋಹಾಗೆ ಮಾಡತ್ತೆ.. 

11. ಕೃತಕ ಸಕ್ಕರೆ ತಿನ್ನೋದು

ನಾವೇನು ಮನೇಲಿ ಬಳಸಲ್ಲ… ಈ ಹೋಟೆಲ್ನೋರು ಬಳಸುತ್ತಾರೆ.. ಮೊದಲೇ ಹೇಳಿದಂತೆ ಈ ಸಕ್ಕರೆ ಅಂಶದ ಪದಾರ್ಥ ಫರ್ಮೆಂಟೇಶನ್ ಮಾಡಿ ಹೊಟ್ಟೇಲಿ ಗ್ಯಾಸ್ ಸಮಸ್ಯೆ ಶುರುಮಾಡುತ್ತೆ.. 

ಮೂಲ

ಮೇಲಿರೋದು ಎಲ್ಲಾದು ಎಲ್ಲರಿಗೂ ಅನ್ವಯಿಸಲ್ಲ… ನಿಮಗೆ ಹೊಟ್ಟೆ ಉಬ್ಬರಿಸೋ ಸಮಸ್ಯೆ ಜಾಸ್ತಿ ಇದ್ದಾಗ ನೀವು ಮೇಲಿರೋದ್ರಲ್ಲಿ ಯಾವ್ದು ನಿಮಗೆ ತೊಂದರೆ ಮಾಡ್ತಿದೆ ಅಂತ ಕಂಡು ಹಿಡ್ಕೊಳಿ, ಅದನ್ನ ನಿಲ್ಲಿಸಿ.