ಮನುಷ್ಯ ಸಿಕ್ಕಾಪಟ್ಟೆ ಬುದ್ದಿ ಜೀವಿ, ಎಷ್ಟೋ ಸತಿ ವಿಜ್ಞಾನಿಗಳು ದೊಡ್ಡ ದೊಡ್ಡ ಅವಿಷ್ಕಾರಗಲ್ಲಿ ವರ್ಷ ವರ್ಷ ಮುಳುಗಿರ್ತಾರೆ, ಆದ್ರೆ ಕೆಲವೊಂದು ನಡೆಯೋದಕ್ಕೆ ಕೇವಲ ಕಾಮನ್ ಸೆನ್ಸ್ ಇದ್ರೆ ಸಾಕು, ಅಂತ ಕೆಲವು ಕಾಮನ್ ಸೆನ್ಸಿನ ಅವಿಷ್ಕಾರಗಳನ್ನ ನಿಮ್ಮ ಮುಂದೆ ಇಲ್ಲಿ ತಂದಿದೀವಿ. ನೋಡ್ಕೊಂಡ್ ಬನ್ನಿ

1. ಟೂತ್ ಪೇಸ್ಟ್ ಪೂರ್ತಿ ಬಳಸಕ್ಕೆ ಈ ಮಷೀನ್, ಟೂತ್ ಪೇಸ್ಟ್ ಸ್ಕ್ವೀಜರ್ ಅಂತಾರೆ ಇದನ್ನ

2. ಮನೆಯೊಳಗಡೆ ಹಾಕೊಳೋ ಚಪ್ಪಲಿ, ಆರಾಮಾಗಿ ಗುಡಿಸಿ ಒರಿಸಬಹುದು

3. ಹಾಂಕಾಂಗಲ್ಲಿ ಒಂದೊಂದು ಸ್ಟಾಪಿಗೆ ಒಂದೊಂದು ಬಣ್ಣ, ಭಾಷೆ ಗೊತ್ತಿಲ್ಲ ಅಂದ್ರೆ ಟಿಕೆಟ್ ಬಣ್ಣ ನೋಡಿ ಸ್ಟಾಪ್ ಬಣ್ಣ ನೋಡಿ ಆರಾಮಾಗಿ ಬಸ್ಸಿಂದ ಇಳಿಯಬಹುದು

4. ಪಿಂಗ್ ಪಾಂಗ್ ಬಾಲ್ ಆಟ ಆಡಿದಾಗ ಬಾಲ್ ಕಳ್ಕೊಬಾರ್ದು ಅಂತ ಈ ಟೇಬಲ್ ಮಾಡಿರೋದು

5. ರೋಡ್ ಬದಿ ಸೈಕಲ್ ಪಾರ್ಕಿಂಗ್, ರಿಪೇರಿ ಮಾಡ್ಕೊಳೋ ವಸ್ತು ಅಲ್ಲೇ ಇರತ್ತೆ

6. ನಾ ಸ್ವಲ್ಪ ದಪ್ಪ, ಆದ್ರೆ ನನ್ನ ಫ್ರೆಂಡಿನ ಗಾಡೀಲಿ ದಪ್ಪಕಿರೋರು ಆರಾಮಾಗಿ ಅಡ್ಜಸ್ಟ್ ಮಾಡ್ಕೊಬೋದು

7. ಹೋಟೆಲ್ಲಿನ ಟೇಬಲ್ ಮೇಲೆ ಈ ಬಟನ್ ಇರತ್ತೆ, ಒತ್ತಿದರೆ ಸಪ್ಲಾಯರ್ ಗಡಿಯಾರಕ್ಕೆ ರಿಂಗ್ ಹೋಗತ್ತೆ

8. ತಿಂಡೀಲಿ ಇರೋದೆಲ್ಲ ಇಲ್ಲಿ ಅಚ್ಚಾಗತ್ತೆ

9. ಮುಖದ ಕ್ರೀಮ್ ಡಿಸ್ಪೆನ್ಸರ್ – ವಾಶ್ರೂಮಲ್ಲಿ ಇಟ್ರೆ ಎಷ್ಟ್ ಒಳ್ಳೇದಲ್ವಾ

10. ವಿಸಿಟರ್ ಬ್ಯಾಡ್ಜ್ ಈ ರೀತಿ ಇದ್ರೆ ಎಷ್ಟ್ ಚೆಂದ ಅಲ್ವ? 12 ಗಂಟೆಕಾಲ ಆದ್ಮೇಲೆ ಬಣ್ಣ ಬದಲಾಗಿ ಬ್ಯಾಡ್ಜ್ ತನ್ನ ಅರ್ಹತೆ ಕಳ್ಕೊಳತ್ತೆ

11. ಪ್ಲಾಸ್ಟಿಕ್ ಗಿಡಾನೆ. ಆದ್ರೆ ನ್ಯಾಚುರಲ್ ಗಿಡದಂಗೆ ಕಾಣಿಸ್ಲಿ ಅಂತ ಸ್ವಲ್ಪ ಹಾಳ್ಮಾಡಿದಾರೆ

ಹೇಗಿದೆ ಈ ಆವಿಷ್ಕಾರಗಳು? ನಿಮ್ಮ ಅಭಿಪ್ರಾಯ ಪೋಸ್ಟ್ ಮಾಡಿ.