https://files.brightside.me/files/news/part_44/449110/19578110-1-1505987524-650-221458790f-1518417445.jpg

ಹೊಸದಾಗಿ ಒಂದ್ ವಸ್ತು ಮಾರ್ಕೆಟ್ಗೆ ಬಂದಿರತ್ತೆ. ನಾವೂ ವರ್ಷಾನುಗಟ್ಟಲೆ ಇಂದ ಬಳಸ್ತಾ ಇರ್ತೀವಿ. ಅದ್ರೆ ಸಮಯ ಆಗ್ತಾ ಆಗ್ತಾ ಅದರ ನಿಜವಾದ್ ಉಪ್ಯೋಗಕ್ಕಿಂತ ನಮ್ ಅವಶ್ಯಕತೆಗ್ ತಕ್ಕಂಗೆ, ಕ್ರಿಯೇಟಿವಾಗಿ ಬಳಸೋದೇ ಮಜಾ ಅನ್ಸತ್ತೆ. ಜೊತೆಗೆ ಆ ವಸ್ತು ಹಳೇದಾಯ್ತು ಅಂತ ಎಸಿಯೋ ಬದ್ಲು, ಇನ್ಯಾವ್ದೋ ರೂಪದಲ್ಲಿ ಉಪ್ಯೋಗಕ್ಕೆ ಬಂದ್ರೆ, ಏನೋ ಉಳಿತಾಯ ಮಾಡಿಬಿಟ್ವಿ ಅಂತ ಖುಷಿನೂ ಆಗತ್ತೆ. ಅಂಥ ಒಂದಷ್ಟು ಖತರ್ನಾಕ್ ಐಡಿಯಾಗಳ್ನ ಅಂತೆಕಂತೆ ನಿಮ್ಗೋಸ್ಕರ ಇಲ್ಲಿ ಹೇಳ್ತಿದೆ. ಮನೇಲಿ ಹಳೇದಾಗಿರೋ ಬಟ್ಟೆ ಕ್ಲಿಪ್ಪು, ಮಕ್ಕಳ ಆಟದ್ ಸಾಮಾನು ಎಲ್ಲಾ ಎತ್ತಿ ಗುಡ್ಡೆಹಾಕ್ಕೊಳಿ ಬೇಗ.

೧. ಪ್ಲಾಸ್ಟಿಕ್ ಲೋಟ


 

ಒಂದಲ್ಲ ಒಂದ್ ಸಂದರ್ಭದಲ್ಲಿ ಪ್ಲಾಸ್ಟಿಕ್ ಲೋಟ ತಂದು ಬಳಸಿರ್ತೀವಿ. ಆದ್ರೆ ಅದನ್ನ ಸರಿಯಾಗಿ ಗಮನಿಸಿರಲ್ಲ. ಅದನ್ನೇನ್ರಿ ಗಮನ್ಸದು? ತೂತಿಲ್ದೇ, ಹಾಕಿದ್ದು ಸೋರದೇ ಇದ್ರೆ ಸರಿ ಅಂತೀರಾ? ಅದಲ್ಲ. ಕೆಲವು ಪ್ಲಾಸ್ಟಿಕ್ ಲೋಟದ್ ಮೇಲೆ ಗುಂಡಗೆ ಉಂಗುರದ ಥರ ಮಾರ್ಕ್ ಮಾಡಿರ್ತಾರೆ. ಸುಮ್ನೆ ಡಿಸೈನು. ಅಂದ್ಕೊಂಡಿರ್ತೀವಿ. ಆದ್ರೆ ಹಾಗಲ್ಲ. ಬೇರೆ ಬೇರೆ ರೀತಿ ಪಾನೀಯಗಳ್ನ ಎಷ್ಟೆಷ್ಟು ಅಳತೆನಲ್ಲಿ ಪ್ರಮಾಣದಲ್ಲಿ ತೊಗೊಬೋದು ಅಂತ ಅಂದಾಜು ತಿಳ್ಸಕ್ಕೆ ಆ ಗುರುತು ಹಾಕಿರ್ತಾರೆ.

೨. ಲೆಗೋ ಆಟದ ಸಾಮಗ್ರಿ


ಲೆಗೋ ಆಟ ಚಿಕ್ಕ ಮಕ್ಕಳಿಗೆ ತುಂಬಾ ಇಷ್ಟ. ಪುಟ್ಟ ಪುಟ್ಟ ಪ್ಲಾಸ್ಟಿಕ್ ತುಂಡುಗಳಿಂದ ಮನೆ ಕಟ್ಟೋದು, ವಾಹನ ಮಾಡೋದು ಇವೆಲ್ಲಾ ಖುಷಿ ಕೊಡತ್ತೆ. ಆದ್ರೆ ಮಕ್ಕಳು ದೊಡ್ಡೋರ್ ಆದ್ಮೇಲೆ ಅದನ್ನ ಏನ್ ಮಾಡೋದು ಅನ್ನೋ ಚಿಂತೆನೇ ಬೇಡ. ಇಲ್ಲೊಬ್ರು ಬೀಗದ ಕೈ ಹಿಡಿ ಮತ್ತೆ ನೇತುಹಾಕೋ ಸ್ಟ್ಯಾಂಡ್ ಮಾಡ್ಕೊಂಡಿದಾರೆ. ನಿಮ್ಗೆ ಇನ್ಯಾವ್ ಐಡಿಯ ಬರ್ತಿದೆ.

೩. ಬೈಂಡರ್ ಕ್ಲಿಪ್


ಒಂದಷ್ಟು ಕಾಗದನ, ದಪ್ಪ ರಟ್ಟಿನ ಫೋಲ್ಡರ್ನ ಬೈಂಡರ್ ಕ್ಲಿಪ್ ಹಾಕಿ, ಜೋಡಿಸಿ ಇಡ್ತಿವಿ. ಆದ್ರೆ ಇವು ಬರೀ ಅಷ್ಟಕ್ಕೆ ಮಾತ್ರ ಸೀಮಿತ ಅಲ್ಲ. ಬೈಂಡರ್ ಕ್ಲಿಪ್ ಯಾವದನ್ನ ಬೇಕಾದ್ರೂ ಬೈಂಡ್ ಮಾಡಿ ಹಿಡ್ಕೊಳತ್ತೆ ಅಂತ ಇಲ್ಲಿ ತೋರ್ಸಿದಾರೆ. ಕಂಪ್ಯೂಟರ್ರು, ಲ್ಯಾಪ್ಟಾಪು ಇದಕ್ಕೆ ಬೇಕಿರೋ ಡೇಟಾ ಕೇಬಲ್ ಹೀಗ್ ಜೋಡಿಸಿ ಇಟ್ಕೊಬೊದು. ಕಳೆದುಹೋಗಲ್ಲ, ಹಾಳಾಗಲ್ಲ.

೪. ತೋಟದ ಕುಂಟೆ / ರೇಕ್


ತೋಟದಲ್ಲಿ ನೆಲ ಅಗಿಯಕ್ಕೆ, ಸಣ್ಣ ಪುಟ್ಟ ಬಿತ್ತನೆ ಮಾಡಕ್ಕೆ ಇಂಥ ಕುಂಟೆಗಳ್ನ ಬಳಸ್ತಾರೆ. ಆದ್ರೆ ಅದನ್ನ ಹೋಗೂ ಬಳಸ್ಬೊದು ಅಂತ ಕೇಳಿ ಆಶ್ಚರ್ಯ ಪಡ್ತೀರ. ಉಪ್ಯೋಗಕ್ಕೆ ಬರ್ದೇ ಇರೋ ಕುಂಟೆಗಳ್ನ ತೊಳೆದು, ಹೊಸದಾಗಿ ಬಣ್ಣ ಬಳಿದು, ತಳಕಂಬಳಕ ನೇತಾಕಿ, ಸೂಪರ್ರಾಗಿರೋ ವೈನ್ ಗ್ಲಾಸ್ ಸ್ಟ್ಯಾಂಡ್ ಮಾಡ್ಕೊಬೊದು. ಪೇಯಿಂಟ್ ಮಾಡಿರೋದ್ರಿಂದ ಈ ಹ್ಯಾಂಗರ್ನ ತೋಟದಲ್ಲಿ, ಮನೆ ಮುಂದೆ ಇರೋ ಗಾರ್ಡನಲ್ಲೂ ಹಾಕ್ಕೊಬೋದು.

೫. ಆಲೀವ್ ಎಣ್ಣೆ


ಇತ್ತಿಚೆಗೆ ನಮ್ ದೇಶದಲ್ಲೂ ಆಲೀವ್ ಎಣ್ಣೆನ ಅಡುಗೆ ಮಾಡಕ್ಕೆ, ಅಂದ ಚಂದ ಹೆಚ್ಚುಸ್ಕೊಳಕ್ಕೆ ಬಳಸ್ತಾಯಿದೀವಿ. ಇದರ ಇನ್ನೂ ಒಂದು ಉಪಯೋಗ ಅಂದ್ರೆ, ಲೆದರ್ ಶೂ ಚಪ್ಪಲಿ ಫಳ ಫಳ ಅಂತ ಹೊಳಿಯೋಹಾಗ್ ಮಾಡೋದು. ಯಾವ್ದಾದ್ರೂ ಚರ್ಮದ್ ಸಾಮಾಗ್ರಿ ಅಂದ್ರೆ ಲೆದರ್ ಪರ್ಸ್, ಬೆಲ್ಟ್ ಹೀಗೆ ಏನಾದ್ರೂ ಸರಿ, ಚೆನ್ನಾಗಿ ಹೊಳಿಬೇಕು, ಬಣ್ಣ ಇನ್ನೂ ಗಾಢ ಆಗ್ಬೇಕು ಮತ್ತೆ ಜಾಸ್ತಿ ದಿನ ಬಾಳಿಕೆ ಬರ್ಬೆಕು ಅಂದ್ರೆ ಈ ಸರಳವಾದ್ ಟ್ರಿಕ್ ಸಾಕು. ಮಾಮೂಲಿ ಬಣ್ಣ ಹಚ್ಚೋ ಬ್ರಶ್ಗೆ ಆಲೀವ್ ಎಣ್ಣೆ ಹಚ್ಕೊಂಡು ಲೆದರ್ ಮೇಲೆ ಹಚ್ಚೋದು. ಜಾಸ್ತಿ ಎಣ್ಣೆ ಹಚ್ಚಿದಷ್ಟೂ ಬಣ್ಣ ಜಾಸ್ತಿ ಗಾಢ ಆಗತ್ತೆ.

೬. ಮರದ ಬಟ್ಟೆ ಕ್ಲಿಪ್

1518417445.jpg
ಮರದ ಬಟ್ಟೆ ಕ್ಲಿಪ್ ದಿನ ಕಳಿತಾ ಕಳಿತಾ ಒಣಗೋಗತ್ತೆ. ಮತ್ತೆ ಬಟ್ಟೆಗಳ ಮೇಲೆ ಬಳಸಕ್ಕೆ ಆಗಲ್ಲ. ಬಟ್ಟೆ ಸಿಕ್ಕಾಕೊಳತ್ತೆ. ಹಾಗಂತ ಬಿಸಾಕೋ ಬದ್ಲು ಮೊಳೆ ಹೊಡಿಯಕ್ಕೆ ಉಪ್ಯೋಗಿಸ್ಬೊದು. ಮೊಳೆನ ಬಟ್ಟೆ ಕ್ಲಿಪ್ನಲ್ಲಿ ಸಿಕ್ಕುಸ್ಕೊಂಡು, ಗೋಡೆ ಮೇಲೆ ಇಟ್ಟು, ಸುತ್ತಿಗೆಯಿಂದ ಹೊಡುದ್ರೆ, ಗಟ್ಟಿಯಾಗಿ ಕೂರತ್ತೆ ಜೊತೆಗೆ ಬೆರಳಿಗೂ ಗಾಯ ಆಗಲ್ಲ.

೭. ಕಪ್ ಕೇಕ್, ಮಫಿನ್ ಟ್ರೇ


ಅಂಗಡಿಯಿಂದ ಕಪ್ ಕೇಕ್ ಅಥವ ಮಫಿನ್ ತೊಗೊಂಡು ಬರ್ತಿವಿ. ತಿಂದಾದ ಮೇಲೆ ಆ ಟ್ರೇನ ಬಿಸಾಕ್ತಿವಿ. ಅದರ ಬದಲು, ಮನೆ ಆಚೆ ಅಂದ್ರೆ ತೋಟದಲ್ಲೋ, ಮಾಳಿಗೆ ಮೇಲೋ ಊಟ ತಿಂಡಿ ಪ್ಲ್ಯಾನ್ ಮಾಡಿದಾಗ, ಪುಟ್ಟ ಪುಟ್ಟ ಬಟ್ಟಲಿನ ಥರ ಇರೋ ಆ ಟ್ರೇಗಳ್ನ ಚಟ್ನಿ, ಟೊಮ್ಯಾಟೋ ಸಾಸ್, ಕೆಚಪ್, ಚೀಸ್ ಡಿಪ್ ಇಂಥದ್ದೆಲ್ಲಾ ಹಾಕಕ್ಕೆ ಉಪ್ಯೋಗುಸ್ಬೋದು. ಮಕ್ಕಳಿಗಂತೂ ತಿನ್ನಕ್ಕೂ ಸುಲಭ. ದೊಡ್ಡೋರಿಗೆ ಆಮೇಲಿಂದ ತೊಳಿಯಕ್ಕೂ ಸುಲಭ.

೮. ಒಣ ಶ್ಯಾವಿಗೆ ಕಡ್ಡಿ

ಗಾಜಿನ ಬಟ್ಟಲು, ಲೋಟದಲ್ಲಿರೋ ಮೇಣದಬತ್ತಿ ಹಚ್ಚಕ್ಕೆ ಉದ್ದದ್ ಕಡ್ಡಿಪೆಟ್ಟಿಗೆ ಇಲ್ಲ ಅಂದ್ರೆ, ಪಾಯಸ ಮಾಡಕ್ಕೆ ಅಂತ ಮನೇಲಿ ತಂದು ಇಟ್ಕೊಂಡಿರೋ ಶ್ಯಾವಿಗೆ ಕಡ್ಡಿನಲ್ಲೇ ಹಚ್ಚ್ಬೋದು. ರುಚಿ ರುಚಿಯಾಗಿರೋ ತಿಂಡಿ ಮಾಡಕ್ಕೆ ಬಳಸೋ ಶ್ಯಾವಿಗೆನ ಹೀಗೂ ಉಪ್ಯೋಗುಸ್ಕೊಬೋದು ಅಂತ ಗೊತ್ತಿತ್ತಾ.

೯. ವಿಕ್ಸ್ ವೇಪೋರಬ್

ನೆಗಡಿ ಕೆಮ್ಮು ಏನೇ ಬಂದ್ರೂ ಮೊದ್ಲು ಕೈ ಹೋಗೋದೇ ವಿಕ್ಸ್ ಡಬ್ಬಿ ಕಡೆ. ಆದ್ರೆ ಇದರ ಉಪ್ಯೋಗ ಬರೀ ಅಷ್ಟಕ್ಕೇ ಅಲ್ಲ. ಸಣ್ಣದಾಗಿ ಕಿವಿ ನೋವಾಗ್ತಿದ್ರೆ, ಗುಯ್ಯಿಂ ಅಂತಿದ್ರೆ, ಚೂರು ವಿಕ್ಸ್ನ ಹತ್ತಿಗೆ ಹಚ್ಚಿ, ಮಡಿಸಿ ಕಿವಿ ಒಳಗೆ ಇಟ್ಕೊಳೋದ್ರಿಂದ ಆರಾಮ ಸಿಗತ್ತೆ. ಬರೀ ಥಂಡಿಯಿಂದ ಆಗಿರೋ ನೋವಿಗೆ ಇದು ಪರಿಣಾಮ ಬೀರತ್ತೇ ಹೊರತು, ಸೋಂಕಾಗಿದ್ರೆ ಉಪ್ಯೋಗ ಇಲ್ಲ. ಆಗ ಡಾಕ್ಟರ್ ಹತ್ರನೇ ಹೋಗ್ಬೇಕು. ವಿಕ್ಸಿಂದ ಆಗೋ ಇನ್ನೊಂದಿಷ್ಟು ಲಾಭ ಅಂದ್ರೆ, – ಮೊಡವೆ ಊತ ಮತ್ತೆ ನೋವು ಕಮ್ಮಿ ಮಾಡತ್ತೆ – ಸೊಳ್ಳೆ ಜೊತೆ ಬೇರೆ ಕೀಟನ ದೂರ ಇಡತ್ತೆ – ಪಾದನ ಮೃದುವಾಗಿಡತ್ತೆ – ಸಾಕು ಪ್ರಾಣಿಗಳು ಅಲ್ಲಲ್ಲಿ ಕೆರಿಯೋದು, ಬಗರೋದು ತಪ್ಸತ್ತೆ – ಕಾಲು ಬೆರಳಿನ ಸೋಂಕಿಗೆ ಮದ್ದು ಮಾಡತ್ತೆ – ಸ್ಟ್ರೆಚ್ ಮಾರ್ಕ್ ತಿಳಿ ಮಾಡತ್ತೆ.

itsthevibe.com

ಒಂದು ಬೋನಸ್ ಕಿವಿ ಮಾತು

ಮನೇಲಿ ಸಣ್ಣ ಪೈಪ್ ಇಲ್ಲ ಅಂದ್ರೆ, ಸಿಂಕ್ ನಲ್ಲಿಯಿಂದ ಬಕೇಟ್ಗೆ ನೀರನ್ನ ಡಸ್ಟ್ಬಿನ್ ಟ್ರೇ ಬಳಸಿ ಹೀಗ್ ತುಂಬಬೋದು. ಹೇಳಿರೋ ಇಷ್ಟೆಲ್ಲಾ ಐಡಿಯಾಗಳು ಒಂದಲ್ಲಾ ಒಂದ್ ಸಂದರ್ಭದಲ್ಲಿ ಖಂಡಿತಾ ಉಪ್ಯೋಗಕ್ಕೆ ಬರತ್ತೆ ಕಣ್ರಿ.

ಚಿತ್ರ: files.brightside.me