http://assets.rebelcircus.com

ಧರ್ಮ, ಜಾತಿ ಬಗ್ಗೆ ಸ್ವಲ್ಪ ಯೋಚಿಸಿ ಅಂತ ಹೇಳಿದ್ರೆ ಸಾಕು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು ಅಂತ ತಿಳ್ಕೊಳ್ತಿವಿ. ಹಾಗಾದ್ರೆ ಧರ್ಮ ಅಂದ್ರೆ ಏನು?  ಧರ್ಮ ಅಂದ್ರೆ ಹಲವಾರು ನಂಬಿಕೆಗಳ ಒಂದು ಗುಂಪು. ಅದು ನಮಗೆ ಜೀವನ ಹೇಗೆ ನಡೆಸಬೇಕು ಅಂತ ಹೇಳುತ್ತೆ, ಇನ್ನೊಂದು ರೀತಿಲಿ ಹೇಳೋದಾದ್ರೆ ನಮ್ಮ ಜೀವನದ ಮಾರ್ಗದರ್ಶಿ.  

ನಾವೆಲ್ಲ ಮನುಷ್ಯ ಧರ್ಮಕ್ಕೆ ಸೇರಿರೋವ್ರು, ಹಾಗಿದ್ದಮೇಲೆ ನಮ್ಮಲಿ ಜಾಸ್ತಿ ವ್ಯತ್ಯಾಸ ಇರ್ಬಾರ್ದು ಅಲ್ವಾ?

ಈ ಧರ್ಮ, ಜಾತಿಯ ಮೂಲ, ಹುಟ್ಟು ಎಲ್ಲೇ ಆಗಿರಬಹುದು ಎಲ್ಲರೂ ಜೀವನದ ಬಗ್ಗೆ ಒಂದೇ ರೀತಿಯ ತತ್ವಾನೇ ಹೇಳೋದು. ಎಲ್ಲರೂ ಬದುಕೋದಕ್ಕೆ ಇರೋದು ಒಂದೇ ದಾರಿ.

ಎಲ್ಲ ಧರ್ಮದವರೂ ಈ ಹತ್ತು ಬೋಧನೆಗಳನ್ನ ಹೇಳ್ತಾರೆ.

10. ಯಾವಾಗ್ಲೂ ದೇವರು ನಮ್ಮ ಮೇಲೆ ಒಂದು ಕಣ್ಣಿಟ್ಟಿರ್ತಾನೆ.

ಮುಸ್ಲಿಮರು ಹೇಳ್ತಾರೆ "ಅಲ್ಲಾ ಒಬ್ಬನೇ" ಅವನಿಗೆ ಯಾರು ಭಯ ಪಡ್ತಾರೋ ಅವರಿಗೆ ಅವನು ದಾರಿ ತೋರಿಸ್ತಾ.ನೆ ಅಂತ. ಕ್ರಿಶ್ಚಿಯನ್ನರು ಹೇಳ್ತಾರೆ ದೇವರಿಗೆ ಯಾವುದು ಇಷ್ಟ ಆಗುತ್ತೋ ಅದನ್ನ ಮಾತ್ರ ಮಾಡು ಅಂತ. ಧರ್ಮ ಮತ್ತು ವಿಜ್ಞಾನದ ನಡುವಿನ ರೇಖೆಯನ್ನು ಅಳಿಸೋದಕ್ಕೆ ದೇವರಿದ್ದಾರಾ ಅನ್ನೋದು ಪ್ರಮುಖ ಪಾತ್ರ ವಹಿಸುತ್ತೆ. ಪ್ರತಿ ಧರ್ಮಕ್ಕೂ ಅದರದೇ ಆದ ಪ್ರಪಂಚ, ಸೃಷ್ಟಿಕರ್ತ ಎಲ್ಲ ಇದ್ದಾರೆ. ಈ ಎಲ್ಲಾ ಧರ್ಮಗಳನ್ನು ಅನುಸರಿಸುವವರೂ ನಂಬೋದು ಅದನ್ನೇ ನಮ್ಮ ಕರ್ಮಕ್ಕೆ ತಕ್ಕ ಪ್ರತಿಫಲ ಸಿಗುತ್ತೆ. ನಮ್ಮ ಕೆಲಸ ಮೆಚ್ಚಿ ಒಳ್ಳೆ ಪ್ರತಿಫಲ ಕೊಡೋದಕ್ಕಾಗಲಿ ಅಥವಾ ಕೆಟ್ಟ ಕೆಲಸ ಮಾಡಿದ್ರೆ ಶಿಕ್ಷೆ ಕೊಡದಕ್ಕೆ ಆಗಲಿ ದೇವರೇ ಕಾರಣ. ಯಾವುದೇ ಮನುಷ್ಯ ಇದರ ಬಗ್ಗೆ ನಿರ್ಧಾರ ಮಾಡಕ್ಕಾಗಲ್ಲ, ಆದ್ರೆ ದೇವರಿಗೆ ಎಲ್ಲಾ ತಿಳಿದಿದೆ, ಅವನೇ ನೋಡ್ಕೋತಾನೆ.

ಸರ್ವೋತ್ತಮನ ದೃಷ್ಟಿ ನಮ್ಮಮೇಲೆ ಇರೋವರೆಗೂ ನಮಗೆ ಯಾವುದೇ ರೀತಿಯ ಅಭದ್ರತೆ ಕಾಡೋದಿಲ್ಲ.

https://www.wikihow.com

9. ಶಿಸ್ತು, ವಿವೇಚನೆ ಇರೋ ಮನಸ್ಸಿರಬೇಕು.

ಶಿಸ್ತಿನ ವಿಷ್ಯದಲ್ಲಿ ಈಲ್ಲ ಧರ್ಮಾನೂ ಒಂದೇ. ಭಗವದ್ಗೀತೆಯಲ್ಲಿ "ಸಮಾಧಾನ, ಸೌಜನ್ಯ, ಸ್ವಯಂ ನಿಗ್ರಹ ಹಾಗೂ ಶುದ್ಧತೆ" ಇವುಗಳನ್ನ ಶಿಸ್ತು ಅಂತ ಹೇಳಿದೆ. ಶಿಸ್ತನ್ನ ಪಾಲಿಸ್ತಿದ್ರೆ ಅಂತವರಿಗೆ ಯಾವುದೇ ರೂಪ ಬೇಕಾದ್ರೂ ಕೊಡಬಹುದು. ಶಿಸ್ತು ಪಾಲಿಸ್ತಿದ್ರೆ ಅರ್ಧ ಕೆಲಸ ಮುಗಿದಹಾಗೆ. ವಿವೇಚನೆಯಿಲ್ಲದ, ಶಿಸ್ತಿಲ್ಲದ ಮನಸ್ಸಿಗಿಂತ ಹೆಚ್ಚಿನ ಅವಿಧೇಯತೆ ಬೇರೆ ಏನೂ ಇಲ್ಲ ಅಂತ ಬುದ್ಧ ಕೂಡ ನಂಬಿದ್ದ.

ಯಾರು ಶಿಸ್ತನ್ನು ಪಾಲಿಸಿ, ಹಾಗೆ ನಡ್ಕೊತಾರೊ, ಸ್ವಯಮ್ ನಿಗ್ರಹ ಹೊಂದಿರ್ತಾರೋ ಅವರಿಗೆ ತನ್ನ ಇತಿ ಮಿತಿಗಳ ಬಗ್ಗೆ ಚೆನ್ನಾಗೆ ಗೊತ್ತಿರುತ್ತೆ. ಮೂರನೇ ವ್ಯಕ್ತಿಯಿಂದ ಅವರು ಹೇಳಿಸಿಕೊಳ್ಳಬೇಕಾಗಿಲ್ಲ.

https://cdn.tinybuddha.com

8. ಮಾಡಿದ್ದುಣ್ಣೋ ಮಹರಾಯ, ಕರ್ಮಕ್ಕೆ ತಕ್ಕ ಪ್ರತಿಫಲ.

ಕರ್ಮ ಕೆಲಸ ಮಾಡೋದು ನ್ಯೂಟನ್ ನ 3 ತತ್ವದ ಹಾಗೆ. ನಾವು ಮಾಡೋ ಪ್ರತಿ ಕ್ರಿಯೆಗೂ ಸಮನಾದ ಹಾಗೂ ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತೆ. ಇಲ್ಲಿ ಕ್ರಿಯೆ ಅಂದ್ರೆ ಪ್ರತಿಯೊಬ್ಬ ಮನುಷ್ಯ ಮಾಡೋ ಕೆಲಸ. ಕರ್ಮ ಅನ್ನೋ ಪದ ನೇರವಾಗಿ ಬಳಸದೆ ಇದ್ರೂ ಬೈಬಲ್ ಕೂಡ ಇದನ್ನೇ ಹೇಳುತ್ತೆ. ಕರ್ಮ ತುಂಬಾನೇ ಸರಳ ವಾದದ್ದು, ಇದು ನಮಗೆ ಆತ್ಮಾವಲೋಕನ ಮಾಡಿಸುತ್ತೆ. ಬೇರೆಯವರು ನಮಗೆ ತೊಂದರೆ ಕೊಟ್ರೆ ನಾವು ಸುಮ್ಮನಿರ್ತೀವಾ? ಇಲ್ಲ ತಾನೇ, ಹಾಗಾದ್ರೆ ನಾವು ಯಾಕೆ ಬೇರೆಯವರಿಗೆ ತೊಂದರೆ ಕೊಡ್ಬೇಕು?

ಕರ್ತ ಅನ್ಯ ಧರ್ಮದವರಿಗೂ ಹತ್ತಿರವಾಗಿದ್ದಾನೆ, ನೀನು ಏನು ಮಾಡ್ತೀಯೋ ಅದೇ ನಿನಗೂ ಆಗುತ್ತೆ, ನಮ್ಮ ಪ್ರತಿಫಲ ನಮ್ಮ ತಲೆಮೇಲೆ ಇರುತ್ತೆ. ಬೈಬಲ್ ನ ಈ ಸಾಲುಗಳು ಹೇಳೋದೂ ಕರ್ಮದ ಬಗ್ಗೆನೇ.  

https://i2.wp.com

7. ಸಂತೋಷ ಹಾಗೂ ತೃಪ್ತಿಗೂ, ಹಣ,ಸಂಪತ್ತಿಗೂ ಯಾವುದೇ ಸಂಭಂದ ಇಲ್ಲ ಅಂತ.

ಬರೀ ದುಡ್ಡಿನ ಬೆನ್ನು ಹತ್ತೋದಕ್ಕಿಂತ ಅವಮಾನಕರ ವಿಷಯ ಬೇರೆ ಇಲ್ಲ ಅಂತ ಬೈಬಲ್ ಹೇಳಿದ್ರೆ, ಮಹಾವೀರ ಜೈನರು  ಆತ್ಮದ ಪರಿಪೂರ್ಣತೆ ಬೇಕು ಅಂದ್ರೆ ಜನ ಹಣದ ಸ್ವಾಧೀನದಲ್ಲಿರಲ್ಲ ಅನ್ನೋ ಶಪಥ ಮಾಡಬೇಕು ಅಂದಿದ್ದಾರೆ. ಹಾಗೆ ಬುದ್ಧ ಹಾಗೂ ಕನ್ಫ್ಯೂಷಿಯಸ್ ಕೂಡ ಸರಿಯಾದ ಮಾರ್ಗದಲ್ಲಿ ಹಣಗಳಿಕೆ ಬಗ್ಗೆ ಹೇಳಿದ್ದಾರೆ. ಎಲ್ಲ ಧರ್ಮಗಳೂ ಹೇಳೋದೂ ಒಂದೇ ಸಂತೋಷ ಹಾಗೂ ತೃಪ್ತಿಗೂ,  ಹಣ,ಸಂಪತ್ತಿಗೂ ಯಾವುದೇ ಸಂಭಂದ ಇಲ್ಲ ಅಂತ. ಎಲ್ಲಾ ಧರ್ಮದವರೂ ಹಣ ಗಳಿಸಿ ಕೂಡಿ ಇದೋ ಬದಲು, ಅಗತ್ಯ ಇರುವವರಿಗೆ ದಾನ ಮಾಡೋದನ್ನ ಪ್ರೋತ್ಸಾಹಿಸುತ್ತೆ.

ನಮ್ಮ ಹತ್ತಿರ ಎಷ್ಟೇ ಕಮ್ಮಿ ಇದ್ರೂ ಉದರ ಮನಸ್ಸು ಇರೋದಕ್ಕೆ ನಮ್ಮ ಧರ್ಮಕ್ಕೆ ನಾವು ಧನ್ಯವಾದ ಹೇಳಲೇಬೇಕು.  

http://assets.rebelcircus.com

6. ಸುಖ-ದುಃಖ,ಲಾಭ- ನಷ್ಠ, ಸೋಲು -ಗೆಲುವು ಎಲ್ಲದನ್ನೂ ಸಮಾನವಾಗಿ ಕಾಣಬೇಕು.

ಜೀವನದಲ್ಲಿ ಸುಖ-ದುಃಖ,ಲಾಭ- ನಷ್ಠ, ಸೋಲು -ಗೆಲುವು ಎಲ್ಲದನ್ನೂ ಸಮಾನವಾಗಿ ಕಾಣಬೇಕು, ಈ ಮಾತನ್ನ ಇಸ್ಲಾಂ ಧರ್ಮದಲ್ಲೂ ಹೇಳಿದೆ, ಇದೆ ಮಾತನ್ನ ಯುದ್ಧದ ಸಮಯದಲ್ಲಿ ಕೃಷ್ಣ ಅರ್ಜುನನಿಗೆ ಹೇಳಿದ್ದಾನೆ. ಯಾರು ವಿಜಯೋತ್ಸಾಹದಲ್ಲೇ ಆಗಲಿ ವಿಪತ್ತಿನಲ್ಲೇ ಆಗಲಿ, ಒಂದೇ ತರ ಇದ್ದು ಬೇರೆ ಯಾವುದೇ ಪ್ರಭಾವಕ್ಕೆ ಒಳಗಾಗದೆ ಇರ್ತಾನೋ ಅವನೇ ನಿಜವಾದ ವಿಜಯಶಾಲಿಯಾಗೋದು.

ಇದು ಸಾಮಾನ್ಯಾವಾಗಿ ಎಲ್ಲರಿಗೂ ಗೊತ್ತಿರೋದೇ, ಆದರೆ ಸಮಯಕ್ಕೆ ಸರಿಯಾಗಿ ನಾವು ಎಚ್ಚೆತ್ತುಕೊಳ್ಳಬೇಕು.

https://themindsjournal.com

5. ಸ್ವಪ್ರತಿಷ್ಠೆ ,ಅಹಂಕಾರ ಬಿಡಬೇಕು.

ಯಾವುದೇ ಧರ್ಮವೂ ಸ್ವಯಂ ಪ್ರತಿಷ್ಠೆ, ಅಹಂಕಾರಗಳನ್ನ ಸಹಿಸೋದಿಲ್ಲ. ಈ ಬಗ್ಗೆ ನಡೆದ ಒಂದು ಪ್ರಸಂಗ ತುಂಬಾನೇ ಆಸಕ್ತಿಕರವಾಗಿದೆ. ಒಂದುಸಲ ಒಬ್ಬ ಮನುಷ್ಯ ಬುದ್ಧನ ಹತ್ತಿರ ಹೋಗಿ "ನನಗೆ ಸಂತೋಷ ಬೇಕು" ಅಂತ ಕೇಳಿದ್ನಂತೆ. ಅದಕ್ಕೆ ಬುದ್ಧ "ನಾನು, ನನಗೆ " ಅನ್ನೋದನ್ನ ಮೊದಲು ಬಿಡು, ಅದು ಅಹಂಕಾರ ಸೂಚಿಸುತ್ತೆ ಅಂದನಂತೆ. ಈಗ "ಬೇಕು " ಅನ್ನೋದನ್ನ ಬಿಡು  ಅದು ಆಸೆ ತೋರ್ಸುತ್ತೆ ಅಂತ ಹೇಳಿದ್ನಂತೆ. ಇವೆರಡನ್ನೂ ಬಿಟ್ಟರೆ ಸಂತೋಷ ಮಾತ್ರನೇ ನಿನ್ನ ಹತ್ತಿರ ಉಳ್ಕೊಳ್ಳೋದು ಅಂತ ಹೇಳಿದ್ನಂತೆ. ಯಾವುದೇ ಧರ್ಮ ನಮಗೆ ಅಹಂಕಾರ, ಸ್ವಾರ್ಥ ಕಲಿಸೋದಿಲ್ಲ.

ನಮಗೆಲ್ಲ ಗೊತ್ತಿರೋಹಾಗೆ ಪ್ರತಿ ಧರ್ಮಕ್ಕೂ ಅದರದೇ ಆದ ನೀತಿ,ನಿಯಮ, ಮಾರ್ಗ ಸೂಚಿ ಇದೆ. ಈ ದಾರಿ ಮಧ್ಯೆ ಅಹಂಕಾರ ಬಂದ್ರೆ ಇದನ್ನ ಪಾಲಿಸೋದಕ್ಕೆ ಆಗಲ್ಲ.

https://cdn-images-1.medium.com

4. ಅಜ್ಞಾನ ನಮ್ಮನ್ನ ಹಾಳುಮಾಡುತ್ತೆ, ಜ್ಞಾನ ನಮ್ಮನ್ನ ಬೌದ್ಧಿಕ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತೆ.

ಭಾಗವದ್ಗೀತೆಯಲ್ಲೂ ಜ್ಞಾನದ ಮಹತ್ವ ಏನು ಅಂತ ಹೇಳಿದ್ದಾರೆ. ಎಲ್ಲಾ ಧರ್ಮಗಳೂ ಅಜ್ಞಾನವನ್ನ ನಿರ್ಲಕ್ಷ್ಯ ಮಾಡಿವೆ. ಅಜ್ಞಾನ ನಮ್ಮ ಬೆಳವಣಿಗೆ ಹಾಳುಮಾಡುತ್ತೆ. ಜ್ಞಾನ ನಮ್ಮ ರಕ್ಷಣೆ ಮಾಡುತ್ತೆ. ಜ್ಞಾನ ಒಂದು ರೀತಿ ಗುರಾಣಿ ಇದ್ದಹಾಗೆ, ನಮ್ಮನ್ನ ಬೌದ್ಧಿಕ ದುಷ್ಟ ಶಕ್ತಿಗಳಿಂದ ಕಾಪಾಡುತ್ತೆ.

https://cdn0.tnwcdn.com/wp-content

3. ಜೀವನದಲ್ಲಿ ಒಳ್ಳೆಯದನ್ನ ಮಾಡಿದ್ರೆ ಆತ್ಮ ಪರಮಾತ್ಮನನ್ನ ಸೇರುತ್ತೆ.

ಗೀತೆಯಲ್ಲಿ ಆತ್ಮಕ್ಕೆ ಸಾವಿಲ್ಲ, ಅದನ್ನ ಸಾಯಿಸೋದಕ್ಕೂ, ನಾಶಪಡಿಸೋದಕ್ಕೂ ಆಗಲ್ಲ ಅಂತ ಹೇಳಿದ್ದಾರೆ. ನಾವು ಬಿಟ್ಟು ಹೋಗೋ ನೆನಪಿನ ರೂಪವೇ ಆತ್ಮ. ಈ ಭೂಮಿ ಮೇಲೆ ಇರೋವರೆಗೂ ಮಾತ್ರ ಅದು ಇದು ಅಂತ ಎಲ್ಲಾ ಕಥೆ, ದೇಹ ಬಿಟ್ಟು ಹೋದಮೇಲೆ ಬರೀ ಆತ್ಮ ಉಳಿಯುತ್ತೆ.

ನಾವು ಒಳ್ಳೆ ಕೆಲಸಗಳನ್ನ ಮಾಡಿದ್ರೆ ನಮ್ಮ ಆತ್ಮ ಪರಮಾತ್ಮನನ್ನ ಸೇರುತ್ತೆ, ಎಲ್ಲಾ ಧರ್ಮಗಳೂ ಇದನ್ನೇ ಹೇಳೋದು.

https://etzhayim.ne

2. ಏನನ್ನೇ ಸಾಧಿಸಬೇಕಾದ್ರೆ ಪರಿಶ್ರಮ, ತಾಳ್ಮೆ ಇರಬೇಕು.

ಕುರಾನ್ ಕೂಡ ಇದನ್ನೇ ಹೇಳುತ್ತೆ. ಯಾರು ತಾಳ್ಮೆಯಿಂದ ಪರಿಶ್ರಮ ಪಡ್ತಾರೋ ಅವರಿಗೆ ಅಲ್ಲಾ ದಾರಿ ತೋರಿಸ್ತಾನೆ ಅಂತ. ಕಣ್ಣು ಮುಚ್ಚಿ ತೆಗೆಯುವುದರೊಳಗೆ ಏನೋ ಸಾಧನೆ ಮಾಡಕ್ಕೆ ಆಗಲ್ಲ. ನಾವು ಪರಿಶ್ರಮ ಪಡದೆ ಇದ್ರೆ ನಮಗೆ ಸಹಾಯ ಮಾಡಕ್ಕೆ ಅಂತ ದೇವರು ಮೇಲಿಂದ ಇಳಿದು ಬರೋದಿಲ್ಲ.

http://dogruhaber.com.tr

1. ದ್ವೇಷದಿಂದ ದ್ವೇಷ ಗೆಲ್ಲಕ್ಕಾಗಲ್ಲ, ಪ್ರೀತಿಯಿಂದ ದ್ವೇಷ ಗೆಲ್ಲಬೇಕು.  

ನಾಸ್ತಿಕರೇ ಆದರೂ ಪ್ರೀತಿ ಮರೆಯೋದಿಲ್ಲ. ಬುದ್ದಿವಂತರಾದವರು ಬೇರೆ ಏನೂ ಅಪೇಕ್ಷೆ ಪಡದೆ ನಿಸ್ವಾರ್ಥವಾಗಿ ಪ್ರೀತಿ ಮಾಡ್ತಾರೆ. ಬೇರೆಯವರಿಗೆ ಒಳ್ಳೇದನ್ನೇ ಬಯಸುವವರು ಯಾವಾಗಲೂ ಬೇರೆಯವರನ್ನ ಪ್ರೀತಿಸುತ್ತಾರೆ, ಈ ಭೂಮಿ ಮೇಲೆ ಇರೋದಕ್ಕೆ ನಮಗೆ ಶಾಂತಿ, ಪ್ರೀತಿ ತುಂಬಾನೇ ಅಗತ್ಯ ಅಲ್ವಾ? ಒಂದು ಯುದ್ಧದಿಂದ ಎಲ್ಲಾ ಯುದ್ಧಗಳನ್ನ ನಿಲ್ಲಿಸೋದಕ್ಕೆ ಆಗಲ್ಲ. ಪ್ರೀತಿ ಇಲ್ಲ ಅಂದ್ರೆ ಮಾನವೀಯತೆಗೆ ಬೆಲೆ ಇಲ್ಲ. ಇದನ್ನೇ ಎಲ್ಲಾ ಧರ್ಮ ಗ್ರಂಥಗಳು ನಮಗೆ ಹೇಳೋ ಪ್ರಯತ್ನ ಮಾಡ್ತಿರೋದು. ಮನುಷ್ಯ ಯಾವತ್ತೂ ಒಳ್ಳೆ ಕೆಲಸಗಳನ್ನೇ ಮಾಡಬೇಕು. ಬುದ್ಧ ಹೇಳಿರೋ ಹಾಗೆ ದ್ವೇಷದಿಂದ ದ್ವೇಷ ಗೆಲ್ಲೋದಕ್ಕೆ ಆಗಲ್ಲ, ದ್ವೇಷವನ್ನ ಪ್ರೀತಿಯಿಂದ ಮಾತ್ರ ಗೆಲ್ಲೋದಕ್ಕೆ ಆಗೋದು, ಇದು ಪ್ರಪಂಚದ ನಿಯಮ.http://www.rayznews.com

ನಾವು ಆ ಜಾತಿ, ಈ ಜಾತಿ, ಆ ಧರ್ಮ ಅನುಸರಿಸ್ತೀವಿ ಈ ಧರ್ಮ ಅನುಸರಿಸ್ತೀವಿ ಅಂತ ಹೇಳ್ಕೋತೀವಿ, ಆದ್ರೆ ಎಲ್ಲಾ ಧರ್ಮಗಳ ಸಂದೇಶ, ಅದರ ಉದ್ದೇಶ ಎಲ್ಲಾ ಒಂದೇ.