http://lh5.googleusercontent.com/-hYvcUGRShMM/T-kvVjxFE6I/AAAAAAAB9zg/IQfNYtMSYRs/s800/e12.jpg

ನಾವಂತೂ ದಿನಾ ಬೆಳಗಾದ್ರೆ, ಇವೆಲ್ಲಾ ನಿಭಾಯಿಸೋದು ಕಷ್ಟ ಅಂತ ಕಂಡಿದ್ದಕ್ಕೆಲ್ಲಾ ಅಂತೀವಿ. ಆದ್ರೆ, ಇಲ್ಲಿರೋ ಚಿತ್ರಗಳನ್ನ ನೋಡಿದ್ರೆ ನೀವೇ ಒಂದು ನಿಮಿಷ ಹೇಗೂ ಸಾಧ್ಯಾನಾ ಅಂತ ಆಶ್ಚರ್ಯಪಡ್ತೀರ. ಪ್ರಪಂಚದ ಮೂಲೆಮೂಲೆಲಿ ಜನ ಯಾವ ತರಹ ಭಾರ ನಿಭಾಯಿಸ್ತಿದಾರೆ ನೀವೆ ನಿಮ್ಮ ಕಣ್ಣಾರೆ ನೋಡಿ.

1. ಎಲ್ಲೆಲ್ಲೂ ಮೂಟೆ

ಮೂಟೆ ಮೇಲೆ ಕೂತಿರೋ ಮನುಷ್ಯನ್ನ ನೋಡಿ. ಎಂತ ಆರಾಮಾಗಿ ಕಾಣ್ತಾನೆ. ನಮಗೇನಾರು ಹಾಗೆ ಕೂರೋಕೆ ಹೇಳಿದ್ರೆ, ಖಂಡಿತ ಓಡಿ ಹೋಗಿಬಿಡ್ತಿದ್ವಿ ಅನ್ಸತ್ತೆ.

2. ಲಾರಿಲಿ ಹೀಗೂ ಲೋಡ್ ಹಾಕಬೋದು

ಅಲ್ಜೇರಿಯಾದ ಲಾರಿ ಸಾಮಾನ್ಯದ್ದಲ್ಲ. ಇದರ ಭತ್ತ ತುಂಬಿರೋದು ಒಂಟೆ ಕೂದಲಂತೆ. ಇರೋದನ್ನ ಪೂತರ್ಿ ಬಳಸೋದು ಅಂದರೆ ಇದೇ ಇರಬೇಕು. ಯದ್ವಾತದ್ವಾ ತುಂಬೋದಕ್ಕು ತಾಳ್ಮೆ ಬೇಕು. ಏನಂತೀರ?

3. ದೋಣಿಯ ಮೇಲೆ ನೋಡ್ರಪ್ಪಾ

ದೋಣಿ ಸಾಗಲಿ ಮುಂದೆ ಹೋಗಲಿ ಆಂತ ಹಾಡು ಹೇಳೀದಷ್ಟು ಸುಲಭ ಅಲ್ಲ. ದೋಣಿ ಮುಳುಗಬಾರದು ಅಂದ್ರೆ ತೂಕ ಸರಿಯಾಗಿ ಹಂಚಿರಬೇಕು. ಎಷ್ಟು ಹುಷಾರಾಗಿ ದೋಣಿ ನಡೆಸಬೇಕೋ ದೇವ್ರೇ…

4. ಅಬ್ಬಬ್ಬಾ ….ಅಂತಷ್ಟೇ ಅನಿಸೋದಾ!

ಈ ಗಾಡಿಗಳ ಮೇಲೆ ಅದು ಹೇಗೆ ಸಾಮಾನು ಜೋಡಿಸಿದ್ರೋ …ಅದು ಹೇಗೆ ಗಾಡಿ ಓಡಿಸ್ತಾರೋ ಶಿವನೇ ಬಲ್ಲ.

5. ಕುದುರೆ ಗ್ರಹಚಾರ

ಈ ಕುದುರೆ ಹಿಂದಿನ ಜನ್ಮದಲ್ಲಿ ಕತ್ತೆ ಆಗಿತ್ತು ಅನ್ಸತ್ತೆ. ಈ ಜನ್ಮದಲ್ಲಿ ಭಾರತದ ಹರಿಯಾಣದಲ್ಲಿ ಹುಟ್ಟಿ ಹೀಗೆ ಜೀತ ಮಾಡ್ತಿದೆ. ಈ ಮಧ್ಯೆ ಆ ಮನುಷ್ಯನ್ನ ನೋಡಿ ನಿಮಗೆ ನಗು ಬರ್ಲಿಲ್ವಾ?

6. ಗಾಡಿಗಿಂತ ಸಾಮಾನೆ ಜಾಸ್ತಿ

ಇಲ್ಲಿ ನೋಡಿ. ಸಾಮಾನ್ನ ಗಾಡಿಗೆ ತುಂಬಿದ್ರೋ, ಸಾಮಾನು ಕೆಳಗೆ ಗಾಡಿ ಇಟ್ರೋ ಗೊತ್ತಿಲ್ಲ. 

7. ಸರ್ಕಸ್ ನಾಯಿ

ಬ್ರೆಸಿಲ್ ಫುಟ್ಬಾಲ್ಗೆ ಮಾತ್ರ ಅಲ್ಲ. ಇನ್ನು ಮೇಲೆ ಹೇಗೆ ನಾಯಿ ಮತ್ತು ಸರಂಜಾಮು ಹೇಗೆ ಒಟ್ಟಿಗೆ ಸಾಗಿಸಬೋದು ಅಂತ ತೋರಿಸಿಕೊಟ್ಟಿದ್ದಕ್ಕೂ ಹೆಸರಾಗಬೋದು.

8. ಸೈಕಲ್ ಸವಾರಿ

ಈ ಮನುಷ್ಯ ಜಾಗ ತಲುಪೋ ಒಳಗೆ ಏನೆಲ್ಲಾ ಬೀಳಿಸಬೋದು ಲೆಕ್ಕ ಹಾಕಿ. ಆಂದ್ರೂ ಅವನ ಸಾಹಸ ಮೆಚ್ಚಬೇಕ್ರಿ.

9. ಬಾಂಗ್ಲಾದೇಶ ಏನ್ ಕಮ್ಮಿ ಇಲ್ಲ

ನಾವು ಆಗ್ಲೇ ನೋಡಿದ ಕುದುರೆ ಅಣ್ಣ ಇದು. ನೋಡಿ ಎಷ್ಟು ಎತ್ತರದ ತನಕ ಡಬ್ಬ ಜೋಡಿಸಿದಾರೆ. ಹೀಗೆ ಕಷ್ಟಪಡೋಕೆ ಕುದುರೆಯಾಗಿ ಹುಟ್ಬೇಕಿತ್ತಾ ಅಂತೀರ.

10. ಒಗ್ಗಟ್ಟೇ ಒಬ್ಬಟ್ಟು

ಒಂದು ಕೈಯಿಂದ ಚಪ್ಪಾಳೆ ಆಗಲ್ಲ ಅಂತೇವಲ್ಲ. ಹಾಗೆ ಒಬ್ಭರೇ ಇದ್ರೆ ಕೆಲಸ ನಡಿಯಲ್ಲ ಆಂತಿರೋದು ನಾವಲ್ಲ. ಇಲ್ಲಿರೋ ಚಿತ್ರಗಳು.

ಆಂತೂ ಇಂತೂ ಕುಂತ ಕಡೆನೆ ಸರ್ಕಸ್ ನೋಡಿದ್ರಿ. ಈಗ ಹೇಳಿ. ನಾವು ಮಾಡೋ ಕೆಲಸ ಇಷ್ಟು ಕಷ್ಟಾನಾ?