https://antekante.com

ವೇದ ಪುರಾಣಗಳ ಇತಿಹಾಸ ಇರೋ ನಮ್ಮ ಭಾರತದಲ್ಲಿ ಅನೇಕ ದೇವಸ್ಥಾನಗಳಿವೆ. ಊರಿಗೊಂದು ಅನ್ನೋಹಾಗೆ ದೇವಸ್ಥಾನ ಇದೆ. ಹಾಗೆ ನಮ್ಮ ದೇಶದಲ್ಲಿ ಅನೇಕ ದೇವಸ್ಥಾನಗಳಲ್ಲಿ ತುಂಬಾ ರಹಸ್ಯ ಕೂಡ ಅಡಗಿದೆ.

ವಿಜ್ಞಾನದಿಂದಾನೂ ಯಾವುದೇ ಉತ್ತರ ಸಿಗದ ಇಂತಹ ಕೆಲವು ರಹಸ್ಯಮಯ ದೇವಸ್ಥಾನಗಳಬಗ್ಗೆ ಇವತ್ತು ತಿಳ್ಕೊಳೋಣ.

1. ಸಪ್ತ ಮೆಟ್ಟಿಲುಗಳು ಸಪ್ತಸ್ವರಗಳನ್ನ ಹಾಡತ್ತೆ,  ಐರಾವತೇಶ್ವರ ದೇವಸ್ಥಾನ, ಧಾರಾಸುರಂ.

ಈ ಸಂಗೀತದ ಮೆಟ್ಟಿಲುಗಳಿರೋದ್ರು ಐರಾವತೇಶ್ವರ ದೇವಸ್ಥಾನ, ಧಾರಾಸುರಂ ಅನ್ನೋ ಊರಲ್ಲಿ. ಇದರ ಹಿಂದಿನ ರಹಸ್ಯ ಇನ್ನೂ ನಿಗೂಢವಾಗೇ ಇದೆ. ಶಿವನ ಈ ದೇವಸ್ಥಾನವನ್ನ ಎರಡನೇ ರಾಜರಾಜ ಚೋಳ 12 ನೇ ಶತಮಾನದಲ್ಲಿ ಕಟ್ಟಿಸಿದ್ದಂತೆ, ಕುಂಭಕೋಣಂ ಇಂದ 6 ಕಿಲೋಮೀಟರು ದೂರದಲ್ಲಿ ಈ ದೇವಸ್ಥಾನ ಇದೆ. ಯುನೆಸ್ಕೋ ಇದನ್ನ ವಿಶ್ವ ಪರಂಪರೆ ಸ್ಮಾರಕ ಅಂತ ಗುರುತಿಸಿದೆ. ದೇವಸ್ಥಾನದ ಮುಂಭಾಗದಲ್ಲಿ ಮಾಡಿರೋ ಈ ಕಲ್ಲಿನ ಮೆಟ್ಟಿಲುಗಳ ಮೇಲೆ ಹೊಡೆದು ನೋಡಿದರೆ 7 ಬೇರೆಬೇರೆ ರೀತಿಯ ನಾದಗಳು ಕೇಳಿಸುತ್ತೆ. ಎಲ್ಲ 7 ಸ್ವರಗಳನ್ನ ಕೇಳಿಸಿಕೊಳ್ಳಬಹುದು. 

https://i2.wp.com/detechter.com

2. ಸರಿಗಮ ಕಂಬಗಳು, ವಿಜಯ ವಿಠ್ಠಲ ದೇವಸ್ಥಾನ, ಹಂಪೆ.

ಸಪ್ತ ಸ್ವರಗಳನ್ನ ನುಡಿಸೋ ಕಲ್ಲಿನ ಕಂಬ ಇರೋದು ಶ್ರೀ ವಿಜಯ ವಿಠ್ಠಲ ದೇವಸ್ಥಾನ, ಹಂಪೆಯಲ್ಲಿ. ಹಾಳು ಹಂಪೆಯ ವಿಠ್ಠಲ ಬಜಾರ್ ನ ಕೊನೆಯಲ್ಲಿ ಈ ದೇವಸ್ಥಾನ ಇದೆ. ಇದನ್ನ 15 ಶತಮಾದಲ್ಲಿ ಕಟ್ಟಿಸಿದ್ದಂತೆ. ಈ ದೇವಸ್ಥಾನದಲ್ಲಿ 56 ಸಂಗೀತದ ಕಂಬಗಳಿರೋ ರಂಗ ಮಂಟಪ ಇದೆ. ಇದನ್ನ ಸರಿಗಮ ಕಂಬ ಅಂತಾನೂ ಕರೀತಾರೆ. ಈ ಕಂಬಗಳನ್ನ ತಟ್ಟಿದಾಗ ಸಂಗೀತ ಬರುತ್ತೆ ,ಇದು ಹೇಗೆ ಅಂತ ಇನ್ನೂ ಗೊತ್ತಾಗಿಲ್ಲ.

https://c1.staticflickr.com
3. ಯಾವುದೇ ಆಧಾರ ಇಲ್ಲದೆ ನಿಂತಿರೋ ಕಂಬ, ವೀರಭದ್ರೇಶ್ವರ ದೇವಸ್ಥಾನ, ಲೇಪಾಕ್ಷಿ.

ವೀರಭದ್ರೇಶ್ವರ ದೇವಸ್ಥಾನ, ಲೇಪಾಕ್ಷಿ ದೇವಸ್ಥಾನ ಅಂತಾನೆ ಹೆಚ್ಚು ಪ್ರಸಿದ್ಧಿ. ಇದು ಆಂಧ್ರಪ್ರದೇಶದ ಲೇಪಾಕ್ಷಿ ಜಿಲ್ಲೆಯಲ್ಲಿದೆ. ಯಾವುದೇ ಆಧಾರ ಇಲ್ಲದೆ ನಿಂತಿರೋ ಕಂಭ ಜನರನ್ನ ಆಕರ್ಶಿಸುತ್ತೆ. ಈ ದೇವಸ್ಥಾನದಲ್ಲಿ 70 ಕಂಬಗಳಿದ್ದರೂ, ಈ ಒಂದು ಕಂಬ ಯಾವುದೇ ಆಧಾರ ಇಲ್ಲದೆ ನಿಂತಿರೋದು ಎಲ್ಲರನ್ನ ಸೆಳೆಯುತ್ತೆ. ಇದನ್ನ ಪರೀಕ್ಷೆ ಮಾಡಕ್ಕೆ ತುಂಬಾ ಜನ ಪೇಪರ್, ಬಟ್ಟೆ ಎಲ್ಲ ತೂರಿಸಿ ನೋಡಿದ್ದರೆ, ಇದು ಯಾವುದೇ ಆಧಾರ ಇಲ್ಲದೆ ಹೇಗೆ ನಿಂತಿದೆ ಅನ್ನೋದಕ್ಕೆ ಇಲ್ಲಿವರೆಗೂ ಉತ್ತರ ಸಿಕ್ಕಿಲ್ಲ.

https://www.procaffenation.com

4. ಪೂರ್ತಿ ಗ್ರಾನೈಟಿಂದ ಕಟ್ಟಿರೋದು, ಬೃಹದೇಶ್ವರ ದೇವಸ್ಥಾನ, ತಂಜಾವೂರು.

ತಮಿಳುನಾಡಿನ ತಂಜಾವೂರಿನಲ್ಲಿರೋ ಬೃಹದೇಶ್ವರ ದೇವಸ್ಥಾನ ಪೂರ್ತಿ ಗ್ರಾನೈಟ್ನಿಂದ ಕಟ್ಟಿದ್ದಾರೆ. ಆಶ್ಚರ್ಯದ ವಿಷಯ ಅಂದ್ರೆ ಈ ಊರಿನ ಹತ್ತಿರದಲ್ಲಿ ಎಲ್ಲೂ ಗ್ರಾನೈಟ್ ಸಿಗೋ ಪ್ರದೇಶ ಇಲ್ಲ.ಗ್ರಾನೈಟ್ ಸಿಗ್ತಾ ಇದ್ದಿದ್ದು ಇಲ್ಲಿಂದ 60 ಕಿಲೋಮೀಟರು ದೂರದಲ್ಲಿ.  ಈ ದೇವಸ್ಥಾನದ ಗೋಪುರವನ್ನ ಒಂದೇ ಒಂದು ದೊಡ್ಡ ಗ್ರಾನೈಟ್ ಇಂದ ಮಾಡಿದ್ದಾರೆ. ಅದರ ತೂಕ ಸುಮಾರು 80 ಟನ್. ಅಷ್ಟು ದೂರದಿಂದ ಗ್ರಾನೈಟ್ ಹೇಗೆ ತಂದ್ರು? ಹೇಗೆ ಅಷ್ಟು ಎತ್ತರಕ್ಕೆ ಇತ್ತು ಗೋಪುಟ ಕಟ್ಟಿದ್ರು? ಇದಕ್ಕೆ ಇನ್ನೂ ಉತ್ತರ ಸಿಗಬೇಕಿದೆ.

https://i.ytimg.com

5. 22 ಬಿಲಿಯನ್ ಡಾಲರ್ ಸಂಪತ್ತಿನ ಖಜಾನೆ, ಪದ್ಮನಾಭಸ್ವಾಮಿ ದೇವಸ್ಥಾನ, ತಿರುವನಂತಪುರಂ.

22 ಬಿಲಿಯನ್ ಡಾಲರ್ ಸಂಪತ್ತಿನ ಖಜಾನೆ, ಹೌದು ಇದು ಇರೋದು ಕೇರಳದ ತಿರುವನಂತಪುರಂನ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ. ಈ ದೇವಸ್ಥಾನದಲ್ಲಿ ಒಟ್ಟು 7 ಖಜಾನೆ ಇದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದೇವಸ್ಥಾನದ ಆಡಳಿತ ಮಂಡಳಿ ಇದರ 6 ಖಜಾನೆ ಬಾಗಿಲು ತೆಗೆದಾಗ 22 ಬಿಲಿಯನ್ ಡಾಲರ್ ನಿಧಿ ಸಿಕ್ಕಿದೆ. 7 ಖಜಾನೆ ತೆಗೆಯೋದಕ್ಕೆ ಯಾವುದೇ ಕೀ, ಬೋಲ್ಟ್ ಏನೂ ಇಲ್ಲ. ಖಜಾನೆ ಬಾಗಿಲಮೇಲೆ ನಾಗರಹಾವಿನ ಚಿತ್ರದ ಕೆತ್ತನೆ ಇದೆ. ಇದನ್ನ ತೆಗೆಯೋದಕ್ಕೆ ಯಾವುದೊ ರಹಸ್ಯವಾದ ಮಂತ್ರ ಇದೆ, ಅದ್ರಿಂದ ಮಾತ್ರ ತೆಗೆಯೋದಕ್ಕೆ ಸಾಧ್ಯ ಅಂತಾರೆ. ಬೇರೆ ರೀತಿ ತೆಗೆದ್ರೆ ಏನಾದೂ ಅನಾಹುತ ಆಗುತ್ತೆ ಅಂತಾರೆ. ಈ ಖಜಾನೆಯಲ್ಲಿ ಬರಿ ರಹಸ್ಯ ಅಲ್ಲ ಅಪಾಯ ಕೂಡ ಇದೆ ಅಂತಾರೆ.

https://i.ytimg.com

6. ಗಾಳಿಗೇ ವಿರುದ್ಧವಾಗಿ ಹಾರೋ ಬಾವುಟ, ಪುರಿ ಜಗನ್ನಾಥ ಸ್ವಾಮಿ ದೇವಸ್ಥಾನ, ಒಡಿಶಾ.

ಪುರಿ ಜಗನ್ನಾಥ ಸ್ವಾಮಿ ದೇವಸ್ಥಾನ, ಒಡಿಶಾ. ಈ ದೇವಸ್ಥಾನದ ಗೋಪುರದ ಮೇಲಿರೋ ಬಾವುಟ ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಹಾರುತ್ತೆ. ಗಾಳಿ ಬೀಸೋ ದಿಕ್ಕಿಗೆ ಹಾರೋದು ಸಾಮಾನ್ಯ, ಇದು ಹೇಗೆ?  45 ಅಂತಸ್ತು ಎತ್ತದಲ್ಲಿರೋ ಈ ಗೋಪುರವನ್ನ ಏರಿ ಪೂಜಾರಿಯೊಬ್ಬ ಪ್ರತಿದಿನ ಬಾವುಟ ಬದ್ಲಾಯಿಸ್ತಾನಂತೆ. 1800 ವರ್ಷಗಳಿಂದನೂ ಈ ಪದ್ಧತಿ ಅನುಸರಿಸ್ತಿದ್ದಾರಂತೆ. ಅಕಸ್ಮಾತ್ ಒಂದು ದಿನ ಬದಲಾಯಿಸಿಲ್ಲ ಅಂದ್ರೆ ಮುಂದಿನ 18 ವರ್ಷ ದೇವಸ್ಥಾನದ ಬಾಗಿಲು ಮುಚ್ಚಬೇಕಾಗುತ್ತಂತೆ.

https://www.iskconbangalore.org

7. 1000 ವರ್ಷದಿಂದ ಸಂರಕ್ಷಿಸಿಟ್ಟಿರೋ ರಾಮಾನುಜಾಚಾರ್ಯರ ದೇಹ, ರಂಗಂಥಸ್ವಾಮಿ ದೇವಸ್ಥಾನ, ಶ್ರೀರಂಗಂ .

ಭಾಗವದ್ರಾಮಾನುಜ ಸನ್ನಿಧಿ, ಶ್ರೀ ರಂಗಂಥಸ್ವಾಮಿ ದೇವಸ್ಥಾನ, ಶ್ರೀರಂಗಂ ತಮಿಳುನಾಡು. ಇಲ್ಲಿ ಮೂರು ಆಚಾರ್ಯರಲ್ಲಿ ಒಬ್ಬರಾದ ರಾಮಾನುಜಾಚಾರ್ಯರಿಗೆ ಅಂತಾನೆ ಒಂದು ಸನ್ನಿಧಿ ಇದೆ, ಅದೂ ರಂಗನಾಥ ಸ್ವಾಮಿ ದೇವಸ್ಥಾನದ ಒಳಗೆ. ವೈಷ್ಣವರು ಭೇಟಿ ಮಾಡೋ ಸುಪ್ರಸಿದ್ದ ಪುಣ್ಯಕ್ಷೇತ್ರಗಳಲ್ಲಿ ಇದಕ್ಕೆ ವಿಶೇಷ ಸ್ಥಾನಮಾನ ಇದೆ. ಆಶ್ಚರ್ಯ ಏನಪ್ಪಾ ಅಂದ್ರೆ ಇಲ್ಲಿ 1000 ವರ್ಷಗಳಿಂದ ರಾಮಾನುಜರ ದೇಹವನ್ನ ಸಂರಕ್ಷಿಸಿ ಇಟ್ಟಿದ್ದಾರೆ. ಅದರಲ್ಲೂ ಕೂತಿರೋ ಭಂಗಿಯಲ್ಲಿ. ಇದು ಎಲ್ಲರಿಗೂ ದರ್ಶನಕ್ಕೆ ಮುಕ್ತವಾಗಿದೆ. ಅವರು ಹೇಗಿದ್ದರೋ ಹಾಗೆ ಇಟ್ಟಿದ್ದಾರೆ, ಕಣ್ಣು ಹಾಗೂ ಉಗುರುಗಳನ್ನ ಕೂಡ ನೀವು ಗಮನಿಸಿ ನೋಡಬಹುದು.ಜೀವಂತ ಮೂರ್ತಿಯ ಹಾಗಿದೆ. ಇಷ್ಟು ವರ್ಷಗಳಕಾಲ ಏನೂ ಆಗದ ಹಾಗೆ ಹೇಗೆ ಸಂರಕ್ಷಣೆ ಮಾಡಿದ್ದಾರೆ? ಇನ್ನೂ ಉತ್ತರ ಸಿಗಬೇಕಿದೆ.

https://detechter.com

8. ನೀರಿನ ಮೂಲ ಇಲ್ಲದೆ ಇದ್ರೂ ನಿರಂತವಾಗಿ ನಂದಿ ಬಾಯಿಂದ ಬರ್ತಿರೋ ನೀರು, ಕಾಡು ಮಲ್ಲೇಶ್ವರ ದೇವಸ್ಥಾನ, ಬೆಂಗಳೂರು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಕಾಡು ಮಲ್ಲೇಶ್ವರ ದೇವಸ್ಥಾನ, 1997 ರಲ್ಲಿ ಯಾವುದೊ ಕಾಮಗಾರಿ ಮಾಡೋವಾಗ, ಕೆಲಸಗಾರರಿಗೆ ಒಂದು ಕಲ್ಯಾಣಿ ಹಾಗೂ ನಂದಿ ವಿಗ್ರಹ ಹೂತಿರೋ ಸ್ಥಿತಿಯಲ್ಲಿ ಕಾಣ್ಸುತ್ತೆ. ಪೂರ್ತಿ ಅಗೆದು ನೋಡಿದ್ರೆ ನಂದಿ ಬಾಯಿಂದ ನಿರಂತವಾಗಿ ನೀರು ಬರ್ತಾನೆ ಇರುತ್ತೆ. ಅದು ಶಿವಲಿಂಗದ ಹತ್ತಿರಕ್ಕೆ ಹರಿಯುತ್ತೆ. ಆದರೆ ಈ ನೀರಿನ ಮೂಲ ಏನು ಅಂತ ಇದುವರೆಗೂ ಗೊತ್ತಾಗಿಲ್ಲ.

https://detechter.com
9. ಮಳೆ ಬಗ್ಗೆ ಭವಿಷ್ಯ ಹೇಳೋ ದೇವಸ್ಥಾನ.

ಈ ವಿಶೇಷತೆ ಇರೋದು ಕಾನ್ಪುರದ ಜಗನ್ನಾಥ ದೇವಾಲಯದಲ್ಲಿ. ಇದನ್ನ ಮಳೆ ದೇವಸ್ಥಾನ , ಮಾನ್ಸೂನ್ ದೇವಸ್ಥಾನ ಅಂತಾನೂ ಕರೀತಾರೆ. ಇಲ್ಲಿನ ದೇವಸ್ಥಾನದ ಛಾವಣಿಮೇಲೆ ಇರೋ ನೀರಿನ ಹನಿಗಳು ಮಳೆ ಚೆನ್ನಾಗಿ ಬರುತ್ತೋ ಇಲ್ವೋ ಅಂತ ಹೇಳುತ್ತಂತೆ. ನೀರಿನ ಹನಿ ದೊಡ್ಡದಾಗಿದ್ರೆ ಚೆನ್ನಾಗಿ ಮಳೆ ಬರುತ್ತಂತೆ, ಸಣ್ಣ ಇದ್ರೆ ಬರಗಾಲ ಬರೋ ಸಾಧ್ಯತೆ ಇದೆ ಅಂತ ಹೇಳುತ್ತಂತೆ. ಇದು ಮಳೆ ಬಗ್ಗೆ ಒಂದೆರಡು ದಿನ ಮುಂಚೆ ಅಲ್ಲ 15 ದಿನ ಮುಂಚೆನೇ ಏನಾಗುತ್ತೆ ಅಂತ ಹೇಳುತ್ತಂತೆ. ಮಳೆಗಾಲ ಶುರುವಾಗೋದಕ್ಕೆ 15 ಮುಂಚೆನೇ ದೇವಸ್ಥಾನದ ಚಾವಣಿ ಮೇಲಿಂದ ನೀರಿನ ಹನಿ ಬೀಳಕ್ಕೆ ಶುರು ಆಗುತ್ತಂತೆ. ಇದ್ರಿಂದ ಮಳೆ ಎಷ್ಟು ಆಗಬಹುದು ಅನ್ನೋದು ತಿಳಿಯುತ್ತಂತೆ. ಇದನ್ನ ನೋಡ್ಕೊಂಡು ಇಲ್ಲಿನ ಸುತ್ತಮುತ್ತಲಿನ ರೈತರು ಕೃಷಿ ಚಟುವಟಿಕೆ ಶುರು ಮಾಡ್ತಾರಂತೆ.

https://www.thedivineindia.com

10. ಎಲ್ಲಾ ಶಿವನ ದೇವಸ್ಥಾನ ಒಂದೇ ಸಮಾನಾಂತರ ರೇಖೆಯಲ್ಲಿರೋದು.

ದಕ್ಷಿಣ ಭಾರತದಲ್ಲಿರೋ ಪಂಚ ಭೂತ ಸ್ಥಳ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿನ ಶಿವಲಿಂಗ ಗಾಳಿ, ಭೂಮಿ, ನೀರು, ಬೆಂಕಿ ಹಾಗೂ ಆಕಾಶ ಗಳನ್ನ ಸೂಚಿಸುತ್ತಂತೆ. ಭೌಗೋಳಿಕವಾಗಿ ನೋಡಿದಾಗ ಈ ಎಲ್ಲಾ ದೇವಸ್ಥಾನಗಳೂ ಒಂದೇ ರೇಖೆಯಲ್ಲಿದೆ. ಈ 5 ದೇವಸ್ಥಾನಗಳಲ್ಲಿ ,1 ಚಿದಂಬರಂನ ನಟರಾಜ ದೇವಸ್ಥಾನ, 2 ಏಕಾಂಬರೇಶ್ವರ ದೇವಸ್ಥಾನ , ಕಾಂಚಿಪುರಂ. 3 ಶ್ರೀ ಕಾಳಹಸ್ತೀಶ್ವರ ದೇವಸ್ಥಾನ, ಆಂಧ್ರ ಪ್ರದೇಶ ಈ ಮೂರೂ ದೇವಸ್ಥಾನಗಳು ಪೂರ್ವದಲ್ಲಿ 79 ಡಿಗ್ರಿ ರೇಖಾಂಶದಲ್ಲಿದೆ. ಉಳಿದೆರಡು ದೇವಸ್ಥಾನಗಳಾದ ತಿರುವನ್ನೈ ಕಾವಲ್ ದಕ್ಷಿಣದಿಂದ 3 ಡಿಗ್ರಿ ಹಾಗೂ ಉತ್ತರದಿಂದ ಪಶ್ಚಿಮದ ಕಡೆ 1 ಡಿಗ್ರಿಯಲ್ಲಿದ್ದರೆ, ತಿರುವಣ್ಣಾಮಲೈ ಮಧ್ಯಭಾದಲ್ಲಿ  ದಕ್ಷಿಣಕ್ಕೆ ಸುಮಾರು 1 .5 ಡಿಗ್ರಿ ಹಾಗೂ ಪಶ್ಚಿಮಕ್ಕೆ 0 .5 ಡಿಗ್ರಿ ರೇಖಾಂಶದಲ್ಲಿದೆ.  ಯಾವುದೇ ವೈಜ್ಞಾನಿಕ ಉಪಕರಣಗಳು ಇಲ್ಲದೆ ಇರೋ ಆ ಸಮಯದಲ್ಲಿ ಒಂದೇ ರೇಖಾಂಶದಲ್ಲಿ ಹೇಗೆ ಕಟ್ಟಿದ್ರು?

https://antekante.com

ನಿಮಗೆ ಇದರ ಬಗ್ಗೆ ಎಷ್ಟು ಗೊತ್ತಿತ್ತು? ನಿಮಗೇನಾದರೂ ವೈಜ್ಞಾನಿಕವಾಗಿ ಇದಕ್ಕೆ ಉತ್ತರ ಸಿಕ್ಕಿದ್ಯಾ?