
ಪ್ರೀತಿ ಹುಟ್ಟೋಕೆ ಕಾಲು ಸೆಕೆಂಡ್ ಸಾಕಂತೆ. ಆದರೆ, ಹುಟ್ಟಿರೋ ಪ್ರೀತಿನ ಹೇಳಿಕೊಳ್ಳೋಕೆ ಕಾಲು ಶತಮಾನ ಕಳೆದ್ರೂ ಆಗದಿರೋ ಮಹಾನುಭಾವರು ನಮ್ಮ ನಿಮ್ಮ ಮಧ್ಯೆ ಇದಾರೆ. ಹಾಗಿರುವಾಗ ಸ್ವಲ್ಪ ಬುದ್ಧಿ, ಕಾಸು ಖರ್ಚು ಮಾಡಿ, ನಿಮ್ಮ ಹುಡುಗೀನ ಒಂದೊಳ್ಳೇ ಜಾಗಕ್ಕೆ ಕರಕೊಂಡು ಹೋಗಿ ಪ್ರಪೋಸ್ ಮಾಡಿದ್ರೆ ಹೇಗೆ ಅಂತ? ಅಂತ ಜಾಗಕ್ಕೆ ಹೋದ ಖುಷಿಲಿ ನಿಮ್ಮ ಪ್ರೀತಿ ಒಪ್ಕೊಂಡ್ರೆ, ಇರೋ ತನಕ ಆ ಒಂದು ಅನುಭವ ನೆನಸ್ಕೊಂಡು ಸಂತೋಷಪಡಬೋದು. ಅಂತ ಕೆಲವು ಜಾಗಗಳು ಇಲ್ಲಿದೆ ನೋಡಿ.
1. ರಣತಂಬೋರ್ ನ್ಯಾಷನೆಲ್ ಪಾರ್ಕ- ಅಲ್ಲಿ ಪ್ಯಾರಚೂಟ್ ಅಲ್ಲಿ ಹಾರುವಾಗ ಪ್ರಪೋಸ್ ಮಾಡಿ.
ಇದು ಬಹಳ ಸುಂದರವಾದ ಜಾಗ. ಪ್ಯಾರಚೂಟ್ ಅಲ್ಲಿ ಹಾರೋಕೂ ಅವಕಾಶ ಇದೆ. ಹಾಗೇ ಹಾರುವಾಗ, ಈ ಜಗತ್ತೇ ಸುಂದರ ಅನ್ನೋ ನಶೆಲಿ ಇರುವಾಗ ಪ್ರಪೋಸ್ ಮಾಡಿ. ಆಗಲ್ಲ ಅನ್ನೋ ಹುಡುಗಿ ಇನ್ನು ಹುಟ್ಟಿಲ್ಲ.
2. ಹಿಮಾಲಯದ ಬೆಟ್ಟಗಳಲ್ಲಿ ನೀವಿಬ್ಬರೇ ಇರೋ ಸಮಯ ನೋಡಿ ಪ್ರಪೋಸ್ ಮಾಡಿ
ಹಿಮಾಲಯ ಶಿವ ಪಾರ್ವತಿಯರೇ ಮೆಚ್ಚಿಕೊಂಡ ಜಾಗ. ಈ ಭೂಮಿ ಮೇಲಿನ ಸ್ವರ್ಗ. ಸ್ವರ್ಗದಲ್ಲಿ ಕಂಡ ಅಪ್ಸರೆ ನೀನು. ನನ್ನ ಪ್ರೀತಿ ಒಪ್ಕೋ… ಅಂತ ಒಂದು ಮಾತು ಕೇಳಿ. ಅದ್ಯಾಕೆ ಒಪ್ಪಲ್ಲ ನೋಡೋಣ.
3. ಶ್ರೀನಗರದ ದಾಲ್ ಲೇಕಿಗೆ ಕರಕೊಂಡು ಹೋಗಿ, ಪ್ರೀತಿಸ್ತೀನಿ ಅನ್ನೋ ಮಾತು ಹೇಳಿ.
ಪ್ರಶಾಂತ ಸರೋವರ, ಅಮಲೇರಿಸೋ ಪರಿಸರ, ಹಿತವಾದ ತಂಗಾಳಿ…. ಅದೇ ಸಮಯ ನೋಡಿ, ನಿಮ್ಮ ಪ್ರೀತಿಯ ಬಗ್ಗೆ ಹೇಳಿಕೊಳ್ಳಿ. ಹುಡುಗೀರು ಮನಸು ಕೊಡೋಕೆ ಒಂದು ನಿಮಿಷ ಸಾಕು.
4. ಗುಜರಾತ್ನ ಕಚ್ ಮರುಭೂಮಿಲಿ ನಿಂತು ಡಿಫ್ರೆಂಟಾಗಿ ಪ್ರಪೋಸ್ ಮಾಡಿ
ನಾನೇ ಬೇರೆ. ನನ್ನ ಸ್ಟೈಲೇ ಬೇರೆ ಅನ್ನೋ ಹುಡುಗಿಗಾಗಿ, ಇಂಥ ಅಪರೂಪದ ಜಾಗ. ಜನಗಳೇ ಇಲ್ಲದ ಖಾಲಿ ಭೂಮಿಲಿ ನಿಂತು ಗಟ್ಟಿಯಾಗಿ ಅವಳ ಹೆಸರು ಕೂಗಿ, ಫಿಲ್ಮಿಯಾಗಿ ಪ್ರಪೋಸ್ ಮಾಡಿ.
5. ಉದಯ್ಪುರದ ತೇಲುವ ಅರಮನೆಯಲ್ಲಿ, ನನ್ನ ಮದುವೆಯಾಗು. ರಾಣಿ ತರ ನೋಡ್ಕೋತೀನಿ ಅನ್ನಿ
ತಿಳಿಯಾದ ಸರೋವರ, ರಾಜವೈಭವದ ಅರಮನೆ, ಹಿಂದೆ ಬೆಟ್ಟಗಳ ಸಾಲು…ತುಂಬಾ ಖುಷಿಯಾಗಿರ್ತಾಳೆ ಹುಡುಗಿ. ಅದೇ ಸಮಯದಲ್ಲಿ, ನನ್ನ ರಾಣಿ ಆಗ್ತೀಯಾ ಅಂದ್ರೆ ಇಲ್ಲ ಅನ್ನಲ್ಲ ನಿಮ್ಮ ಹುಡುಗಿ.
6. ದೂರ ಆಗಲ್ಲ ಅಂದ್ರೆ, ಕೇರಳದ ವೈನಾಡು ಪ್ರಪೋಸ್ ಮಾಡೋಕೆ ಒಳ್ಳೇ ಜಾಗ.
ವೈನಾಡು ನಮ್ಮ ಮೈಸೂರಿಗೆ ತುಂಬಾ ಹತ್ತಿರ. ಕೇರಳ ಅಂದ್ರೆ ದೇವನಾಡು. ಅಲ್ಲಿನ ಪ್ರತಿ ಜಾಗ ಚೆಂದವೇ. ಅಲ್ಲೇ ಒಂದೊಳ್ಳೇ ಜಲಪಾತ ನೋಡ್ಕೊಂತ ಪ್ರಪೋಸ್ ಮಾಡಿ.
7. ತಾಜ್ ಮಹಲ್ ಗೆ ಕರಕೊಂಡು ಹೋಗಿ, ಪ್ರಪೋಸ್ ಮಾಡಿ.
ನೀವು ತಾಜ್ ಮಹಲ್ ಗೆ ಹೋಗೋಣ ಅಂದಾಗ್ಲೇ, ಹುಡುಗೀಗೆ ನಿಮ್ಮ ಪ್ರೀತಿಯ ವಾಸನೆ ಸಿಕ್ಕಿರತ್ತೆ. ಅಂದ್ರೂ ನಿಮ್ಮ ಜೊತೆ ಬಂದ್ರು ಅಂದ್ರೆ, ಒಪ್ಪೋದು ಗ್ಯಾರೆಂಟಿ. ದೇವರ ಮೇಲೆ ಭಾರ ಹಾಕಿ, ಪ್ರಪೋಸ್ ಮಾಡಿಬಿಡಿ.
8. ಕೇರಳದ ಚಂಬೇರ ಪೀಕ್ ಮೇಲೆ ನಿಂತು, ಹಾರ್ಟ ಶೇಪ್ ಲೇಕ್ ತೋರಿಸ್ತಾ ಪ್ರಪೋಸ್ ಮಾಡಿ.
ಹೃದಯಾಕಾರದ ಸರೋವರ ತೋರಿಸಿ, ನನ್ನ ಪ್ರೀತಿ ಇಷ್ಡೇ ದೊಡ್ಡದು. ಇದಕ್ಕಿಂತ ಜಾಸ್ತಿ ಪ್ರೀತಿಸೋ ಆಸೆ ನನಗೆ. ನೀನು ನನ್ನ ಪ್ರೀತಿ ಒಪ್ತೀಯಾ ಅಂತ ಕೇಳಿ. ನಿಮ್ಮ ಮಾತು ಮುಗಿಯೋದ್ರೊಳಗೆ ಅವಳು ಹೂ ಅಂತಾಳೆ.
9. ಗೋವಾದ ಬೀಚ್ ರೆಸಾರ್ಟ ಅಲ್ಲಿ ಸಮುದ್ರ ತೋರಿಸ್ತಾ, ಮಾತು ಮಾತಲ್ಲಿ ಪ್ರಪೋಸ್ ಮಾಡಿ.
ಗೋವಾ ಅಂದ್ರೇನೆ ಮಸ್ತಿ. ಸ್ವಲ್ಪ ಮಜಾ ಮಾಡಿದ ಮೇಲೆ, ಮನಸು ಖುಷಿಯಾಗಿರತ್ತೆ. ಆಗ ಮುದ್ದಾದ ಮಾತಲ್ಲಿ ಪ್ರಪೋಸ್ ಮಾಡಿ. ಚೆನ್ನಾಗಿರತ್ತೆ.
10. ಕಾಂಚನಜುಂಗಾದ ಬೆಟ್ಟದ ಮೇಲೆ ನಿಂತು, ನಿಮ್ಮ ಪ್ರೀತಿ ಇಷ್ಟೇ ಎತ್ತರದ್ದು ಅಂತ ಹೇಳಿ.
ಈ ಕಾಂಚನಗಂಗಾ ನಮದು…ಈ ಗೌರಿ ಶಿಖರ ನಮದು…ಹಾಡು ಕೇಳಿಲ್ವಾ? ಅದೇ ಹಾಡು ಹಾಡಿ ಪ್ರಪೋಸ್ ಮಾಡಿದ್ರೂ ಆಯ್ತು.
ನೊಡಿದ್ರಲ್ಲ ಎಂತೆಂತಾ ಜಾಗ ಇದೆ ಅಂತ. ಎಲ್ಲದ್ರೂ ಕರಕೊಂಡು ಹೋಗಿ ಪ್ರಪೋಸ್ ಮಾಡಿ. ಮದುವೆಗೆ ನಮ್ಮನ್ನ ಕರೆಯೋದು ಮರೀಬೇಡಿ…