https://8fd3e791a58596c0ca97-e2039d154aebc68b9bb080249997e7ef.ssl.cf1.rackcdn.com/1149_93de030d.jpg

ಹೆಣ್ಮಕ್ಳನ್ನ, ಅವ್ರ ಆಸೆಗಳ್ನ ಅರ್ಥ ಮಾಡ್ಕೊಳದು ಕಷ್ಟ ಅನ್ನೋದು ಮುಕ್ಕಾಲು ಪಾಲು ಹುಡುಗರ ರೋಧನೆ. ಆದ್ರೆ ಯಾಕೆ ಹಾಗೆ? ಯಾಕೆ ಹುಡುಗಿರು ನನ್ನ ನೋಡಿದ್ರೆ ಓಡ್ ಹೋಗ್ತರೆ? ಅಸಡ್ಡೆ ಮಾಡ್ತರೆ? ಹತ್ರ ಬಂದು ದೂರ ಆಗ್ತರೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ನಿಮ್ಮನ್ನ ಕಾಡ್ತಿದ್ರೆ, ಹುಡುಗಿಗೆ ಹತ್ರ ಆಗ್ಬೇಕು ಅಂದ್ರೆ, ಏನ್ ಮಾಡ್ಬಾರ್ದು? ಈಗ್ ಹೇಗಿದಿವೋ ಹಾಗೆ ಯಾಕೆ ಇರ್ಬಾರ್ದು ಅಂತ ತಿಳ್ಕೊಬೇಕು. ಹುಡುಗಿರ್ನ ಅರ್ಥ ಮಾಡ್ಕೊಳಕ್ಕೆ ಕಷ್ಟ ಅಂತನೇ ಅಂದ್ಕೊಳಣ. ಆದ್ರೆ, ಬಾಯ್ ಫ್ರೆಂಡ್ ಮತ್ತೆ ಸಂಗಾತಿ ಆಯ್ಕೆ ಮಾಡ್ಕೊಳೋ ವಿಷ್ಯ ಬಂದಾಗ, ಸಾಮಾನ್ಯ ಎಲ್ಲಾ ಹುಡುಗಿರ್ ಅಭಿರುಚಿನೂ ಒಂದೇ. ಇದೆಲ್ಲಾ ಸ್ಪಷ್ಟವಾಗಿ ಅರ್ಥ ಆಗ್ಬೇಕಾ? ಹಾಗಿದ್ರೆ ನಿಮ್ಗೋಸ್ಕರ ಇಲ್ಲಿ 10 ಪಾಯಿಂಟ್ಗಳ್ನ ಕೊಟ್ಟಿದೀವಿ ನೋಡಿ. ಈ ಗುಟ್ಟುಗಳೆಲ್ಲ ನಿಮಗೆ ಸರಿಯಾಗಿ ಅರ್ಥವಾದರೆ ನೀವು ನಿಮ್ ಹುಡುಗಿ ಹಾಲು ಜೇನು ಥರ ಇರೋದ್ರಲ್ಲಿ ಅನುಮಾನನೇ ಇಲ್ಲ.…

1. ಹುಡುಗೀರ್ನ ನಯವಾಗಿ ನೋಡ್ಕೋಬೇಕು

ನೀವೊಬ್ಬ ಪರ್ಫೆಕ್ಟ್ ಜಂಟಲ್ ಮ್ಯಾನ್ ಆಗಿರ್ಬೇಕು ಅಂತ ನಿಮ್ ಹುಡುಗಿ ಆಸೆ ಪಡ್ತಾಳೆ. ಇದೇನ್ ದೊಡ್ ರಹಸ್ಯ ಅಲ್ಲ. ಆದ್ರೆ ಈ ಬಗ್ಗೆ ಸಾಕಷ್ಟ್ ಜನ ಹುಡುಗರಿಗೆ ಒಂಥರಾ ಅಸಡ್ಡೆ ಇದೆ. ಅಯ್ಯೋ ಅದೇನ್ ಅಷ್ಟೊಂದ್ ಕೇರ್ ತೊಗೊಳೋದು, ಅದ್ಯಾಕ್ ಅಷ್ಟ್ ವಿಚಾರಿಸ್ಕೋಬೇಕೂ, ಹೋಟೆಲ್ಗೆ ಹೋದಾಗ ಏನ್ ಅವ್ಳಿಗೆ ಚೇರ್ ಎಳ್ಕೊಂಡ್ ಕೂತ್ಕೊಳಕ್ಕೆ ಬರಲ್ವ, ಹೀಗೆಲ್ಲಾ ಯೋಚನೆ ಮಾಡ್ತರೆ. ಪ್ರಾಕ್ಟಿಕಲ್ಲಾಗಿ ಸರಿ ಇರ್ಬೋದು ಆದ್ರೆ, ಈ ಚಿಕ್ಕ ಚಿಕ್ಕ ವಿಷ್ಯಗಳೂ ನಿಮ್ಮ ಸಂಬಂಧ ಗಟ್ಟಿಯಾಗಕ್ಕೆ ಸಹಾಯ ಮಾಡತ್ತೆ. ಜೊತೆಗೆ ಹುಡುಗಿರು ತಮ್ ಹುಡುಗನಿಂದ ಇದನ್ನ ಎದುರು ನೋಡ್ತರೆ. ಇಷ್ಟಕ್ಕೂ ಇದೆಲ್ಲಾ ಮಾಡೊದ್ರಲ್ಲಿ ತಪ್ಪೇನಿದೆ ಹೇಳಿ? ಜಂಟಲ್ ಮ್ಯಾನ್ ಅಂದ್ರೆ ಈ ಗುಣಗಳೆಲ್ಲಾ ಇರ್ಬೇಕು. ಇಲ್ಲ ಅಂದ್ರೆ ಹುಡುಗಿರ್ಗೆ ನಿಮ್ ಬಗ್ಗೆ ಆಸಕ್ತಿ ಇರಲ್ಲ. ಶುದ್ದ ಒರಟ ಅಂದ್ಕೊಂಡ್ಬಿಡ್ತರೆ.

2. ಸದಾ ಫಿಟ್ನೆಸ್ ಹುಚ್ಚು ಇರಬಾರದು

ಈಗಿನ್ ಕಾಲದ್ ಹೆಣ್ಮಕ್ಳಿಗೆ ಸೈಜ್ ಜೀರೋ ಚಿಂತೆ ಆದ್ರೆ, ಹುಡುಗುರ್ಗೆ ಬಾಡಿ ಬಿಲ್ಡಿಂಗ್ ಚಿಂತೆ. ಫಿಟ್ಟಾಗಿರೋ, ಜಿಮ್ ಬಾಡಿ ಇರೋ ಹುಡುಗ್ರು ಹೆಣ್ಮಕ್ಳಿಗೆ ಇಷ್ಟ ಆಗ್ತರೆ. ಆದ್ರೆ ಮೂರುಹೊತ್ತೂ ಅದರ ಕಡೆಗೇ ಗಮನ ಕೊಟ್ಕೊಂಡು, ಜಿಮ್ಮೇ ಮನೆ ಮಾಡ್ಕೊಂಡಿರೋರ್ ಬಗ್ಗೆ ಅಸಡ್ಡೆ ಇರತ್ತೆ. ನಿಜ ಅಲ್ವ? ಹುಡುಗಿಗೆ ಸಮಯ ಕೊಡೋ ಬದ್ಲು, ನಿಮ್ ದೇಹ ಬೆಳೆಸಕ್ಕೆ ಇರೋ ಸಮಯನೆಲ್ಲಾ ಕಳೀತಿದ್ರೆ ಯಾವ್ ಹುಡುಗಿ ಸುಮ್ನಿರ್ತಾಳೆ?

3. ಬೇಕಾಬಿಟ್ಟಿಯಾಗಿ ಬಟ್ಟೆ ಹಾಕ್ಕೋಬಾರ್ದು

ಹುಡುಗರೇ ಈ ಕಿವಿಮಾತು ನೀವ್ ಖಂಡಿತಾ ಗಂಭೀರ್ವಾಗಿ ತೊಗೊಳ್ಳಲೇ ಬೇಕು. ಯಾಕೆ ಅಂತಿರ? ಎಲ್ಲಾ ಹುಡುಗಿರ್ಗೂ ತಮ್ ಹುಡುಗ ಚೆನ್ನಾಗ್ ಕಾಣ್ಬೇಕು, ಸ್ಮಾರ್ಟಾಗಿ ಡ್ರೆಸ್ ಮಾಡ್ಕೊಂಡಿರ್ಬೇಕು ಅಂತ ಆಸೆ ಇರತ್ತೆ. ಅವ್ರೂ ನಿಮ್ಮನ್ನ ಭೇಟಿಮಾಡಕ್ಕೆ ಬಂದಾಗ ಅಷ್ಟೇ ಕಾಳಜಿಯಿಂದ ನಿಮಗೆ ಇಷ್ಟ ಆಗೋ ಹಾಗೆ ತಯಾರಾಗ್ ಬಂದಿರ್ತರೆ. ಇದಕ್ಕೆ ಜಾಸ್ತಿ ಸಂಶೋಧನೆ ಏನೂ ಮಾಡ್ಬೇಕಿಲ್ಲ. ಒಂದ್ ವೇಳೆ ನಿಮ್ಗೆ ಇವತ್ತಿನ ಫ್ಯಾಷನ್ ಬಗ್ಗೆ ,  ಸಾಕಷ್ಟು ಬ್ಲಾಗುಗಳು, ವೆಬ್ಸೈಟ್ಗಳು ಇದೆ. ಅದನ್ನ ನೋಡಿ, ಸಮಯ ಸಿಕ್ಕಾಗ ನಿಮ್ ಹುಡುಗಿನೂ ಕೇಳಿ, ನಿಮ್ಗೆ ಯಾವ್ ಥರದ್ ಬಟ್ಟೆ ಒಪ್ಪತ್ತೆ ಅಂತ. ಇಷ್ಟ್ ಸಾಕು ಕಣ್ರಿ, ನಿಮ್ ಹುಡುಗಿ ಕಣ್ಣಲ್ಲಿ ಹೀರೋ ಲೆವೆಲ್ಗೆ ಮಿಂಚಿಬಿಡ್ತಿರ.

4. ಹಂಗಂತ ಕನ್ನಡಿ ಮುಂದೆ ಗಂಟೆ ಗಟ್ಲೆ ಕಾಲ ಕಳೀಬಾರ್ದು

ಮೇಲ್ ನೋಟಕ್ಕೆ ಇದೊಂದ್ ಸಮಸ್ಯೆನೇ ಅಲ್ಲ ಅನ್ಸತ್ತೆ. ಆದ್ರೆ ಕಾಲ ಕಳಿತಾ ಕಳಿತಾ ಕಿರಿ ಕಿರಿ ಆಗಕ್ಕೆ ಶುರುವಾಗತ್ತೆ. ಹುಡುಗ್ರು ಹ್ಯಾಂಡ್ಸಮ್ಮಾಗಿ ಕಾಣ್ಬೇಕು, ಹಾಕೋ ಬಟ್ಟೆಯಿಂದ ಹಿಡಿದು, ಶೂ, ಗ್ಲಾಸಸ್ ವರೆಗೂ ಅಪ್ಡೇಟೆಡ್ ಆಗಿರ್ಬೇಕು ಅಂತ ಆಸೆ ಪಡ್ತಾರೆ ನಿಜ. ಆದ್ರೆ ಹೆಣ್ಮಕ್ಳಿಗಿಂತ ಹೆಚ್ಚಾಗಿ ಸ್ನಾನ ಮಾಡಕ್ಕೆ ಸಮಯ ತೊಗೊಳೋದು, ಎಲ್ಲಿಗಾದ್ರು ಹೋಗ್ಬೇಕಾದ್ರೆ ತಯಾರಾಗಕ್ಕೆ ಗಂಟೆಗಟ್ಳೆ ಸಮಯ ವ್ಯರ್ಥ ಮಾಡೋದು. ಇದೆಲ್ಲ ನೋಡಿದ್ರೆ ಕಿರಿಕಿರಿ ಆಗತ್ತೆ. ನಿಜ ಕಣ್ರಿ ಕೆಲವು ಹುಡುಗ್ರು ಇರ್ತರೆ. ಬಿಸಿಲಿಗೆ ಹೋಗುವಾಗ ಹುಡುಗಿರ್ಗಿಂತ ಹೆಚ್ಚಾಗಿ ಸನ್ಸ್ಕ್ರೀನ್ ಲೋಷನ್ ಎಲ್ಲಾ ಹಚ್ಚ್ಕೊಂಡ್ ಹೋಗ್ತರೆ. ಇಂಥವ್ರನ್ನ ಹೇಗ್ರಿ ತಡ್ಕೊಳೋದು? ಯೋಚನೆ ಮಾಡ್ಬೇಕಾದ್ ವಿಷ್ಯ ತಾನೇ. ಇಷ್ಟಕ್ಕೂ ಅದು ಹೆಣ್ಮಕ್ಲ ಸ್ವತ್ತು ಕಣ್ರಿ.

5. ಹುಡುಗೀರ್ನ ರೇಗಿಸಬಾರದು

ಸಿಕ್ಕ ಸಿಕ್ಕ ಹುದುಗಿರ್ ಜೊತೆಲೆಲ್ಲ ಫ್ಲರ್ಟ್ ಮಾಡ್ಬೇಡಿ. ನಿಮ್ಮನ್ನ ನಿಜ್ವಾಗ್ಲೂ ಇಷ್ಟ ಪಡೋ ಹುಡುಗಿನ ಈ ಒಂದ್ ಕಾರಣಕ್ಕೆ ಕಳ್ಕೊಳೋ ಸಾಧ್ಯತೆ ಇದೆ. ಹುಡುಗಿರ್ ಅಂದ ಚಂದನ ದುರು ದುರು ಅಂತ ಬಿಟ್ಟ ಕಣ್ಣು ಬಿಟ್ಟಂಗೆ ನೋಡ್ಕೊಂಡ್ ಮಜ ತೊಗೊತಿದಿರ ಅಂದ್ರೆ ಅಲ್ಲಿಗೆ, ಹಾವು ಬಿಟ್ಕೊಂಡಂಗೆ. ಹಾಗಾಗಿ ನಿಮ್ಮ ಇಂಥ ಆಸೆ, ಆಕಾಂಕ್ಷೆ, ಬಯಕೆ ಏನಿದ್ರೂ ನಿಮ್ ಹುಡುಗಿ ಜೊತೆ ಮಾತ್ರ ಇಟ್ಕೊಳಿ. ಹಾಗಂತ ಅವರ ಹತ್ರನೂ ಹದ್ದು ಮೀರಿ ಆಡಂಗಿಲ್ಲ. ಸ್ವಲ್ಪ ಸೂಕ್ಷ್ಮವಾಗಿ ನಡ್ಕೊಳಿ. ಇಲ್ಲ ಅಂದ್ರೆ, ಹುಡುಗಿನೂ ಕೈಬಿಟ್ಟೋಗಿ, ಗಾಳಿ ಠುಸ್ಸಾಗಿರೋ ಬಲೂನ್ ಥರ ಆಗೋಗ್ತಿರ.

6. ದುಡ್ಡುಕಾಸಿನ್ ವಿಷ್ಯದಲ್ಲಿ ಜಾಣತನ ಮುಖ್ಯ

ದುಡ್ಡಿನ್ ಬೆಲೆ ಗೊತ್ತಿಲ್ದೇ ಇರೋ ವ್ಯಕ್ತಿ ಚಿಕ್ಕ ಮಗು ಥರ. ಮಕ್ಕಳೂ ಅಷ್ಟೆ. ಎಷ್ಟೇ ಮುಗ್ಧರಾಗಿದ್ರೂ ದುಡ್ಡಿನ್ ಮಹತ್ವ ಏನಂತ ಗೊತ್ತಿರಲ್ಲ. ಆದ್ರೆ ಹುಡುಗಂಗೆ ಬರಿ ಒಳ್ಳೆ ಮನಸ್ಸಿದ್ರೆ ಸಾಕ? ಜವಾಬ್ದಾರಿ ನಿಭಾಯ್ಸೋಕೂ ಬರ್ಬೇಕಲ್ವ. ಇನ್ನು ದುಡ್ಡಿನ್ ವಿಷ್ಯದಲ್ಲಂತೂ ಹುಷಾರಾಗಿರ್ಬೇಕು. ಈ ವಿಶ್ಯದಲ್ಲಿ ಮಗು ಥರ ಆಡೋ ಹುಡುಗ ಹೆಣ್ಮಕ್ಳಿಗೆ ಬಿಲ್ ಕುಲ್ ಇಷ್ಟ ಆಗಲ್ಲ. ಮನುಷ್ಯ ಬೆಳಿತಾ ಇದ್ದ ಹಾಗೆ ವ್ಯವಹಾರ ಜ್ಞಾನನೂ ಬೆಳುಸ್ಕೊಳ್ದೇ ಹೋದ್ರೆ ಹೇಗೆ? ಸೀರಿಯಸ್ಸಾಗಿ ಒಂದ್ ಹುಡುಗಿ ಜೊತೆ ಕಮಿಟ್ ಆಗಿದ್ರಂತೂ, ಸಂಬಂಧ ಗಟ್ಟಿ ಮುಂದುವರಿತಾ ಇದ್ದಹಾಗೇ ಭವಿಷ್ಯದ್ ಬಗ್ಗೆ ಇಂಥ ಚರ್ಚೆಗಳೂ, ಪ್ಲಾನಿಂಗೂ ಮಾತುಕಥೆ ಮಧ್ಯ ಬರತ್ತೆ. ಆಗ ದುಡ್ಡಿನ್ ಬಗ್ಗೆ ನಿಮ್ಗಿರೋ ಅಲಕ್ಷ್ಯನೇ ಸಂಬಂಧ ಕೆಡಕ್ಕೆ ಕಾರಣ ಆಗ್ಬೋದು.

7. ನಿಮ್ಮ ಬಗ್ಗೆ ನೀವೇ ಕೊಚ್ಕೋಬಾರ್ದು

ಕೇಳಕ್ಕೆ ಹುಡುಗಿ ಸಿಕ್ಕಿದಳೆ ಅಂತ ಕುಣ್ಕೊಂಡ್ ಕುಣ್ಕೊಂಡ್ ನಿಮ್ ಬಗ್ಗೆ ನಾನ್ ಸ್ಟಾಪಾಗಿ ಪುಂಗಕ್ಕೆ ಹೋಗ್ಬೇಡಿ. ಹುಡುಗಿರ್ಗೆ ಸಖತ್ ಬೋರಾಗತ್ತೆ. ನಮ್ಮನ್ನ ನಾವ್ ತುಂಬಾನೇ ಪ್ರೀತುಸ್ಕೊತಿವಿ ನಿಜ. ಹಾಗಂತ ಈಗೀಗ ನಿಮಗ್ ಹತ್ರ ಆಗ್ತಿರೋ ಹುಡುಗಿಗೆ ಬರಿ ನಿಮ್ ಬಗ್ಗೆ ಹೇಳ್ತಿದ್ರೆ, ಇವ್ನು ಯಾವಾಗ್ ಕ್ಯಾಸೆಟ್ ನಿಲ್ಲಿಸ್ತನೋ ಅನ್ಸತ್ತೆ ಹೊರತು, ಇನ್ನೇನೂ ಆಗಲ್ಲ. ಜೊತೆಗೆ ಈ ವಿಷ್ಯ ಬರಿ ಹುಡುಗಿರ್ ವಿಷ್ಯದಲ್ಲಿ ಮಾತ್ರ ಅಲ್ಲ. ಯಾರೂ ಈ ಗುಣಕ್ಕೆ ಸೊಪ್ಪಾಕಲ್ಲ. ಅಯ್ಯೋ ಅವ್ನೊಬ್ಬ ದೊಡ್ಡ್ ಪುಂಗಿದಾಸ ಅಂತಾರೆ. ಇಂಥ ವಿಚಾರ್ದಲ್ಲೆಲ್ಲ ತುಂಬಾ ಸೂಕ್ಷ್ಮವಾಗಿರ್ಬೇಕು ಕಣ್ರಿ. ನಿ ಹುಡುಗಿಗೂ ಅವಳ ಬಗ್ಗೆ ಹೇಳ್ಕೊಳಕ್ಕೆ ಬಿಡಿ. ಅವಳ ಜೊತೆ ಜೀವನ ಹಂಚ್ಕೊಬೇಕು ಅಂತಿರುವಾಗ, ಯಾವಾಗ್ಲೂ, ಎಲ್ಲಾದ್ರಲ್ಲೂ ನಿಮ್ ಇಷ್ಟ ಕಷ್ಟನೇ ಇದ್ರೆ ಏನ್ ಚಂದ? ಇದನ್ನ ಬೇಗ ಅರ್ಥ ಮಾಡ್ಕೊಂಡು ಹುಡುಗಿ ಜೊತೆ ಮುಂದುವರೆಯೋದು ಒಳ್ಳೆದು.

8. ಸಿಕ್ಕಾಪಟ್ಟೆ ಅಸೂಯೆ ಪಡಬಾರದು, ಪೊಸೆಸಿವಾಗಿರಬಾರದು

ಯಾವಾಗ್ಲಾದ್ರು ಒಂದೊಂದ್ ಸಲ ಹುಡುಗಾಟಕ್ಕೆ ನಿಮ್ ಹುಡುಗಿ ಜೊತೆ ಅಸೂಯೆಯಿಂದ ನಡ್ಕೊಳದು ಸರಿ. ಆದ್ರೆ ಸೀರಿಯಸ್ಸಾಗಿ ಪದೇ ಪದೇ ಹೊಟ್ಟೆಕಿಚ್ಚು ಪಡೋದು, ಉಸಿರು ಕಟ್ಟೋವಷ್ಟು ಪೊಸೆಸಿವ್ನೆಸ್ ತೋರ್ಸೋದು ಮಾಡಿದ್ರೆ, ಸಹಿಸಕ್ಕಾಗಲ್ಲ. ಹಿಂಸೆ ಆಗತ್ತೆ. ಹಕ್ಕು ಚಲಾಯಿಸೋ ಹುಡುಗ್ರು ಕಂಡ್ರೆ ಹುಡುಗಿರು ಉರುದ್ ಬೀಳ್ತರೆ. ಇಬ್ರಿಗೂ ಸಮಾನ ಸ್ವಾತಂತ್ರ್ಯ ಇದೆ ಅಲ್ವ ಅದ್ರಲ್ಲೂ ನೀವು ಒಂದ್ ಹುಡುಗಿಗೆ ಇನ್ನು ಈಗೀಗ ಹತ್ರ ಆಗ್ತಿದಿರ ಅಂದ್ರೆ, ಆಕೆ ಬಗ್ಗೆ ಅಸೂಯೆ ಪಡೋದು, ಅತಿಯಾದ ಪೊಸೆಸಿವ್ನೆಸ್ ತೋರ್ಸೋದು, ಇದ್ಯಾವ್ದೂ ನಡಿಯಲ್ಲ.

9. ಜೀವನದಲ್ಲಿ ಒಂದು ಗುರಿ ಅಂತ ಇರಬೇಕು

ಯಾವ್ ಹೆಣ್ಮಕ್ಳಿಗೂ ಚಿಕ್ಕ ಚಿಕ್ಕ ಗುರಿ, ಮುಂದುವರಿಯೋ ತಾಕತ್ತಿದ್ರೂ ಪ್ರಯತ್ನ ಪಡದೇ ಇರೋ ಹುಡುಗ್ರುನ್ನ ಕಂಡ್ರೆ ಆಗಲ್ಲ. ಹಾಗಂತ ದುಡ್ದಿನ್ ಹಿಂದೆ ಹೋಗ್ಬೇಕು ಅಂತ ಅಲ್ಲ. ಆದ್ರೆ ದೊಡ್ದ ದೊಡ್ದ ಗುರಿ ಇಟ್ಕೊಂಡು, ಜೀವನದಲ್ಲಿ ಒಂದೊಳ್ಳೆ ಸ್ಥಾನ ತಲುಪೋ ಛಲ ಇರ್ಬೇಕು. ಬೆರೆಯವ್ರಿಂದ ಯಾವ್ ಸ್ಪೂರ್ತಿನೂ ಅಪೆಕ್ಷೆ ಪಡ್ದೆ, ತಮ್ಮಿಂದ ತಾವೇ ಪ್ರೇರಣೆ ಪಡ್ಕೊಳೋ ಹುಡುಗ್ರು ಇಷ್ಟ ಆಗ್ತರೆ. ಸುಮ್ನೆ ಎಲ್ರು ಥರ ನಾವೂ ಬದುಕಿದ್ವಿ ಅನ್ನೋ ಬದುಕು ಯಾರಿಗ್ ಬೇಕು ಹೇಳಿ? ಸಣ್ಣ ಪುಟ್ಟ ಆಸೆ ನೆರವೇರಿಸ್ಕೊಳಕ್ಕೂ ಹಿಂದೆ ಮುಂದೆ ನೋಡ್ಬೇಕಾದ್ ಪರಿಸ್ಥಿತಿನ ಈಗಿನ್ ಕಾಲ್ದಲ್ಲಿ ಯಾವ್ ಹೆಣ್ಣು ಒಪ್ಕೊಳಕ್ಕೆ ಸಿದ್ಧ
ಇರ್ತಳೆ? ಅದೇ ಪಕ್ಕಾ ಗುರಿ ಇರೋ ಹುಡುಗಂಗೆ ಏನ್ ಮಾಡ್ಬೇಕು ಅನ್ನೋದು ಸ್ಪಷ್ಟವಾಗಿರತ್ತೆ. ಆದ್ರೆ ಇದನ್ನಲ್ಲಾ ಸಾಧಿಸಕ್ಕೆ ಅವನು ಯಾವತ್ತೂ ನೀತಿ ಬಿಟ್ಟು ನಡಿಬಾರ್ದು. ಅದನ್ನೂ ಹುಡುಗಿರು ಸಹಿಸಲ್ಲ. ಅನ್ಯಾಯದ್ ಮಾರ್ಗದಲ್ಲಿ ಹೋಗೋ ಹುಡುಗ ಒಂದಿನ್ ಅತನಗೂ ಅನ್ಯಾಯ ಮಾಡ್ಬೋದೇನೋ ಅಂತ ಅವಳು ಆತಂಕ ಪಡೋದ್ರಲ್ಲಿ ಅರ್ಥ ಇದೆ ಅಲ್ವ.

10. ನಗಿಸೋ ಕಲೆ ಗೊತ್ತಿರಬೇಕು

ಇದು ಸಾಬೀತಾಗಿರೋ ಸತ್ಯ. ಹುಡುಗೀರೋ ತಮ್ಗೆ ಎಂಥಾ ಹುಡುಗ ಜೊತೆಯಾಗ್ಬೇಕು ಅಂತ ಪಟ್ಟಿ ಮಾಡೋ ಲಿಸ್ಟಲ್ಲಿ, ನಗ್ಸಕ್ಕೆ ಬರ್ಬೇಕು ಅನ್ನೋದೂ ಟಾಪಲ್ಲಿರತ್ತೆ. ಅಂಥ ಹುಡುಗನ್ನ ಯಾವತ್ತೂ ಹುಡುಗಿ ಬಿಟ್ಕೊಡಲ್ಲ. ಹಾಗಾಗಿ ಒಳ್ಳೆ ಹಾಸ್ಯಮಾಡೋ ಅಭ್ಯಾಸ ಮಾಡ್ಕೊಳಿ. ನಿಮ್ ಹುಡುಗಿ ಎಂಥಾ ಸಂದರ್ಭದಲ್ಲೇ ಇದ್ರೂ ನೀವು ಆಕೆನ ನಗಿಸಿ ಸಮಾಧಾನ ಮಾಡೋ ಹಂತಕ್ಕೆ ಸೆನ್ಸ್ ಆಫ್ ಹ್ಯೂಮರ್ ಬೆಳೆಸ್ಕೊಬೇಕು. ಆಗ ಸಂಬಂಧ ಇನ್ನೂ ಗಟ್ಟಿಯಾಗತ್ತೆ. ನಿಮ್ ಹುಡುಗಿ ಖುಷಿಯಾಗಿದ್ರೆ ತಾನೆ ನೀವೂ ಆರಾಮಾಗಿರಕ್ಕೆ ಸಾಧ್ಯ. ಇಲ್ಲ ಅಂದ್ರೆ ತುಂಬಾ ಕಷ್ಟ ಆಗತ್ತಪ್ಪ.