https://antekante.com

ಎಲ್ಲ ಉದ್ಯಮಿಗಳಿಗೂ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಕ್ಕಿಲ್ಲ. ಇವತ್ತು ಅವರು ಯಶಸ್ವಿ ಉದ್ಯಮಿ ಅಂತ ಗುರುತಿಸಿಕೊಂಡಿದ್ದಾರೆ ಅಂದ್ರೆ ಅದರ ಹಿಂದೆ ಅವರ ಕಠಿಣ ಪರಿಶ್ರಮ, ಹಾರ್ಡ್ ವರ್ಕ್, ಸೋಲು ಎಲ್ಲ ಕಂಡಿದ್ದಾರೆ. ಆದರೆ ಆಮೇಲೆ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಇದು ನಿಜವಾದ ವಾಣಿಜ್ಯೋದ್ಯಮಿಯ ಗುಣಗಳಲ್ಲಿ ಒಂದು.

ನಿಮಗೆ ನಿಮ್ಮದೇ ಆದ ಒಂದು ಕಂಪನಿ ಶುರುಮಾಡಬೇಕು ಅನ್ನೋ ಆಸೆ ಇದೆಯಾ? ಸೋಲಿನ ಭಯದಿಂದ ಸುಮ್ಮನಿದ್ದೀರಾ? ಈ ಹಿಂದೆ ಸೋತವರು ಯಾರಾದ್ರೂ ಈಗ ಯಶಸ್ವಿಯಾಗಿ ಕಂಪನಿ ಕಟ್ಟಿ ಬೆಳೆಸಿದ್ದಾರಾ?

ಈಗ ಕಾಲ ಬದಲಾಗಿದೆ, ಹತ್ತು ವರ್ಷಗಳ ಹಿಂದೆ ನೋಡ್ತಾ ಇದ್ದಹಾಗೆ ಈಗ ಯಾರೂ ನೀವು ಹೊಸ ಕಂಪನಿ ಶುರು ಮಾಡಿ ಅದರಲ್ಲಿ ಸೋತರೂ ಕೂಡ ಅದನ್ನ ಯಾವುದೇ ನೆಗೆಟಿವ್ ಆಂಗಲ್ ಇಂದ ನೋಡಲ್ಲ. ಅಷ್ಟೇ ಅಲ್ಲ ನೀವು ನಿಜವಾಗ್ಲೂ ಒಳ್ಳೆ ಪ್ರಯತ್ನ ಮಾಡಿ ಸೋತಿದ್ರೆ, ನಿಮ್ಮ ಕಂಪನಿಮೇಲೆ ಹೂಡಿಕೆ ಮಾಡೋವ್ರೂ ಕೂಡ ಇದರಲ್ಲಿ ಯಾವುದೇ ಕೆಟ್ಟದನ್ನ ಹುಡುಕೋದಿಲ್ಲ.

ಮೊದಲಿಗ ಸೋತರೂ ನಂತರ ಯಶಸ್ವಿಯಾಗಿ ಕಂಪನಿಗಳನ್ನು ಹುಟ್ಟುಹಾಕಿ ದೊಡ್ಡಮಟ್ಟಕೆ ಬೆಳೆದಿರೋ, ನಮಗೆಲ್ಲರಿಗೂ ಪರಿಚಯವಿರೋ ಇವರ ಬಗ್ಗೆ ಸ್ವಲ್ಪ ತಿಳ್ಕೊಳೋಣ

1. ನಾರಾಯಣ ಮೂರ್ತಿ

ಮೊದಲಿ IIM ಅಹಮದಾಬಾದ್ ನಲ್ಲಿ ಕೆಲಸ ಶುರು ಮಾಡಿದ್ರೂ, 1976 ರಲ್ಲಿ ಸಾಫ್ಟ್ರಾನಿಕ್ಸ್ ಅನ್ನೋ ಕಂಪನಿ ಶುರು ಮಾಡಿದ್ರು. 1 – 1 .5 ವರ್ಷ ದುಡಿದು ಇದರಲ್ಲಿ ಸೋತಾಗ ಪತ್ನಿ ಕಂಪ್ಯೂಟರ್ ಸಿಸ್ಟಮ್ಸ್ ಅನ್ನೋ ಕಂಪನಿಗೆ ಸೇರಿಕೊಂಡ್ರು.

ಮುಂದೆ 1981 ರಲ್ಲಿ ತಮ್ಮ ಜೊತೆ ಇನ್ನೂ 6 ಜನ ಉದ್ಯೋಗಿಗಳನ್ನು ಪಾಲುದಾರರನ್ನಾಗಿ ಸೇರಿಸಿಕೊಂಡು ಇನ್ಫೋಸಿಸ್ ಕಂಪನಿಯನ್ನು ಶುರು ಮಾಡಿದ್ರು. ಅಲ್ಲಿಂದ ಮುಂದೆ ನಡೆದಿದ್ದೆಲ್ಲ ಈಗ ಇತಿಹಾಸ, ಕಂಪನಿ ಎಷ್ಟು ದೊಡ್ಡದಾಗಿ ಬೆಳೆದಿದೆ, ಅವರು ಹೇಗೆ ಯಶಸ್ಸು ಪಡೆದರು ಅನ್ನೋದು ನಮಗೆಲ್ಲ ಗೊತ್ತೇ ಇದೆ.

2. ರತನ್ ಟಾಟಾ

ರತನ್ ಟಾಟಾ ಅಷ್ಟು ದೊಡ್ಡ ಉದ್ಯಮಿ, ಅವರಿಗೆ ಯಾವ ಸೋಲು ಅಂತ ಯೋಚನೆ ಬಂತಾ? ಹೌದು ಸೋಲು ಅವರನ್ನೂ ಬಿಟ್ಟಿಲ್ಲ. ಅವರು ಟಾಟಾ ಮೋಟರ್ಸ್ ಶುರು ಮಾಡಿದಾಗ, 1998 ರಲ್ಲಿ ಟಾಟಾ ಇಂಡಿಕಾ ಅನ್ನೋ ಕಾರ್ ಮಾರುಕಟ್ಟೆಗೆ ಬಿಟ್ರು, ಆದ್ರೆ ಅದನ್ನ ಜನ ಇಷ್ಟ ಪಡಲಿಲ್ಲ. ಯಾರೂ ಈ ಕಾರು ತೊಗೊಳೋದಕ್ಕೆ ಹೋಗಲಿಲ್ಲ. ಆಗ ಎಷ್ಟೋಜನ  ಇವರಿಗೆ ನಿಮ್ಮ ಕಂಪನಿಯ ಕಾರ್ ಡಿವಿಷನ್ ಮಾರಿಬಿಡಿ ಅಂತ ಹೇಳಿದ್ರು. ಇವರು ಅದಕ್ಕೆ ಒಪ್ಪಿಗೇನೂ ಕೊಟ್ರು.

1999 ರಲ್ಲಿ ಕಾರ್ ಡಿವಿಷನ್ ಮಾರೋದಕ್ಕೆ ತುಂಬಾ ಕಂಪನಿಗಳ ಹತ್ತಿರ ಮಾತಾಡಿದ್ರು, ಆದ್ರೆ ಫೋರ್ಡ್ ಕಂಪನಿ ಮಾತ್ರ ಸ್ವಲ್ಪ ಆಸಕ್ತಿ ತೋರಿಸ್ತು. ಆದ್ರೆ ಅಲ್ಲಿ ಫೋರ್ಡ್ ಕಂಪನಿ ಮಾಲೀಕ ಹೇಳಿದ ಮಾತು ಇವರಿಗೆ ತುಂಬಾನೇ ನೋವು ತರುವಂತದ್ದು, ಆ ಮಾತು ಏನಪ್ಪಾ ಅಂದ್ರೆ  "ಜನರಿಗೆ ಯಾವ ತರದ ಕಾರ್ ಬೇಕು ಅಂತ ಗೊತ್ತಿಲ್ಲ ಅಂದಮೇಲೆ ಈ ಬಿಸಿನೆಸ್ ಯಾಕೆ ಶುರು ಮಾಡಿದ್ರಿ? ನಿಮ್ಮ ಈ ಡಿವಿಷನ್ ಕೊಂಡುಕೊಂಡು ನಾವು ನಿಮಗೆ ಉಪಕಾರ ಮಾಡ್ತಾ ಇದ್ದಿವಿ" ಅಂತ.

ಅದೇ ಫೋರ್ಡ್ ಕಂಪನಿ ಮುಂದೆ 2008 ರಲ್ಲಿ – ಜಾಗ್ವಾರ್ ಲ್ಯಾಂಡ್ರೋವರ್ ಬಿಡುಗಡೆ ಮಾಡಿದ್ದೂ ನೆಲ ಕಚ್ಚಿತು. ಆಗ ಈ ಫೋರ್ಡ್ ಕಂಪನಿ ದೀವಳಿ ಆಗೋದನ್ನ ತಪ್ಪಿಸಿದ್ದು ಯಾರು ಅಂತ ತಿಳೀತಲ್ಲ? ಹೌದು ಅವರೇ ರತನ್ ಟಾಟಾ. ಈ ಜಾಗ್ವಾರ್ ಲ್ಯಾಂಡ್ರೋವರ್ ಡಿವಿಷನ್ ಅನ್ನು ಇವರೇ ಕೊಂಡುಕೊಂಡರು. ಅಷ್ಟೇ ಅಲ್ಲ ಅದ್ರಿಂದ ಅವರಿಗೆ 2500 ಕೋತಿ ನಷ್ಟ ಆಯಿತು. ಇದ್ರಲ್ಲಿ ಜಾಗ್ವಾರ್ ಪಾಲು 1800 ಕೋಟಿ. ಈ ಸಮಯದಲ್ಲಿ ಫೋರ್ಡ್ ಕಂಪನಿ ಮಾಲೀಕರು ಹೇಳಿದ್ದು " ನೀವು ನಮ್ಮ ಕಂಪನಿ ತೊಗೊಂಡು ನಮ್ಮನ್ನ ಉಳಿಸಿದ್ರಿ, ಸಹಾಯ ಮಾಡಿದ್ರಿ" ಅಂತ.

ಇದಾದಮೇಲೆ ಟಾಟಾ ಮೋಟರ್ಸ್ ಬೆಳೆದು ಹೇಗೆ ಯಶಸ್ಸು ಹೊಂದಿತು ಅನ್ನೋದು ಗೊತ್ತೇ ಇದೆ .

 

3. ಸುನಿಲ್ ಭಾರತೀ ಮಿತ್ತಲ್

ಇವರು ತಮ್ಮ ಕೆಲಸ ಶುರು ಮಾಡಿದ್ದೂ ಬರಿ 20000 ರೂಪಾಯಿ ಅವರ ತಂದೆಯಿಂದ್ ಸಾಲ ತೊಗೊಂಡು. ಆಗ ಅವರಿಗೆ 18 ವರ್ಷ. ಇವರು ಮೊದಲು ಶುರು ಮಾಡಿದ್ದು ಸ್ಥಳೀಯ ಸೈಕಲ್ ಉತ್ಪಾದಕರಿಗೆ ಬಿಡಿ ಭಾಗಗಳನ್ನು ಮಾಡಿಕೊಡುವುದರಿಂದ. ಮುಂದಿನ 3 ವರ್ಷಗಳಲ್ಲೇ ಇವರು ಇನ್ನ್ಯಾರದು ಉದ್ಯಮಗಳನ್ನ ಶುರು ಮಾಡಿದ್ರು. ಒಂದು ಸ್ಟೀಲ್ ಶೀಟ್ ತಯಾರು ಮಾಡೋದು ಮತ್ತೊಂದು  ನೂಲು ನೇಯುವ ಉದ್ಯಮ.ಮೊದಮೊದಲು ತುಂಬಾನೇ ಕಷ್ಟ ಪಟ್ರು. ದಿನಕ್ಕೆ 16 -18 ಗಂಟೆ ದುಡಿತಿದ್ರು, ಆದರು ಅಂತ ಯಶಸ್ಸು ಸಿಗಲಿಲ್ಲ. ಇವರಿಗೆ ಎಲ್ಲೋ ಒಂದು ಕಡೆ ಇನ್ನು ಇದನ್ನ ಮುಂದುವರಿಸೋದ್ರಲ್ಲಿ ಅರ್ಥ ಇಲ್ಲ, ಉದ್ದಾರ ಆಗಲ್ಲ ಅನ್ನಿಸಿ ಸೈಕಲ್ ಹಾಗೂ ನೂಲು ನೇಯೋ ಉದ್ಯಮವನ್ನ ಮಾರಿ ಮುಂಬೈ ಬಿಟ್ಟು ಹೊರಟರು.

1980 ರಲ್ಲಿ ಭಾರತಿ ಓವರ್ಸೀಸ್ ಟ್ರೇಡಿಂಗ್ ಕಂಪನಿ ಪ್ರಾಂಭ ಮಾಡಿ ಅದ್ರಲ್ಲಿ ಬೇರೆ ಬೇರೆ ವಿದೇಶಿ ಕಂಪನಿಗಳಿಂದ ಹಕ್ಕು ಪಡೆದು,  ಲೈಸನ್ಸ್ ಪಡೆದು ಅಲ್ಲಿಂದ ಜನರೇಟರ್ಗಳನ್ನ ಇಂಪೋರ್ಟ್ ಮಾಡಿಕೊಡು ಇಲ್ಲಿ ಮಾರಾಟ ಮಾಡ್ತಾ ಇದ್ರು. ಆದ್ರೆ 1983 ರಲ್ಲಿ ಯಾವಾಗ ಸರ್ಕಾರ ಇಂಪೋರ್ಟ್ ಮಾಡೋದನ್ನ ನಿಷೇಧ ಮಾಡಿ ಇಲ್ಲೇ ಜನರೇಟರ್ ತಯಾರು ಮಾಡೋದಕ್ಕೆ ಬರಿ 2 ಕಂಪನಿಗಳಿಗೆ ಅವಕಾಶ ಮಾಡಿ ಕೊಟ್ಟಿತೋ, ಆಗ ಇವರಿಗೆ ಮಾಡಲು ಯಾವುದೇ ಕೆಲಸ ಅಥವಾ ಉದ್ಯಮ ಇರಲಿಲ್ಲ. 

ಈಗ ಮಾಡೋದಕ್ಕೆ ಏನೂ ಇಲ್ವಲ್ಲ ಮುಂದೆ ಏನು ಅಂತ ಯೋಚನೆ ಮಾಡೋವಾಗ್ಲೇ ಇವರಿಗೆ ಅವಕಾಶ ಕಂಡಿದ್ದು ತೈವಾನ್ ನಲ್ಲಿ ಇದ್ದಾಗ. ಅಲ್ಲಿ ಬಟನ್ ಇರೋ ಫೋನ್ ತುಂಬಾನೇ ಜನಪ್ರಿಯವಾಗಿತ್ತು, ಆದ್ರೆ ಭಾರತದಲ್ಲಿ ಅದು ಇರಲಿಲ್ಲ, ಇನ್ನು ಡಯಲ್ ಮಾಡೋ ಫೋನ್ ಮಾತ್ರ ಇದ್ದಿದ್ದು. ಆಗಲೇ ಇವರು ಪುಶ್ ಬಟನ್ ಇರೋ ಫೋನ್, ಫ್ಯಾಕ್ಸ್ ಗೆ ಉತ್ತರಿಸೋ ಮಷೀನ್ ಇದನ್ನೆಲ್ಲಾ "ಬೀಟಲ್" ಅನ್ನೋ ಹೆಸರಿನ ಅಡಿಯಲ್ಲಿ ತಯಾರಿಸೋದಕ್ಕೆ ಶುರು ಮಾಡಿದ್ರು. ದೂರವಾಣಿ ಕ್ಷೇತ್ರದಲ್ಲಿ  ದೊಡ್ಡದಾಗಿ ಬೆಳೆದರು.

ಮೂಲ

4. ರಿತೇಶ್ ಅಗರ್ವಾಲ್

ರಿತೇಶ್ ಅಗರ್ವಾಲ್ ಅಂತ ಹೇಳಿದ್ರೆ ಅಷ್ಟು ಬೇಗ ನಿಮಗೆ ಗೊತ್ತಾಗದೆ ಇರಬಹುದ್. ಓಯೋ (OYO) ರೂಮ್ ಬಗ್ಗೆ ಕೇಳಿದ್ದೀರಾ? ಬೋರ್ಡ್ ನೋಡಿದ್ದೀರಾ? ಹೌದು ನಾವು ಈಗ ಹೇಳ್ತಿರೋದು ಇದನ್ನ ಹುಟ್ಟುಹಾಕಿದವರ ಬಗ್ಗೆ.

ಈ ಕಂಪನಿ ಮೊದಲು ಶುರುವಾಗಿದ್ದು ಹಾಸಿಗೆ ಮತ್ತು ಉಪಹಾರದ ಮಾರುಕಟ್ಟೆಯಾಗಿ. ಆದ್ರೆ ಸರಿಯಾಗಿ ಒಂದು ತಂಡದ ಹಾಗೆ ಕೆಲಸ ಮಾಡದೇ, ವಾದ ಭಿನ್ನಾಭಿಪ್ರಾಯ ಇದ್ದಿರಿಂದ ಇದು ನೆಲಕಚ್ಚಿತು.ಈ ಸೋಲಿನಿಂದ ಪಾಠ ಕಲಿತು ಮತ್ತೆ ಸರಿಯಾದ ರೂಪು ರೇಷೆಯೊಂದಿಗೆ, ಒಳ್ಳೆ ತಂಡ ಬೆಳೆಸಿ ಮತ್ತೆ ಉದ್ಯಮ ಪ್ರಾರಂಭ ಮಾಡಿದ್ರು. ಮೊದಲು ಒರವೆಲ್ ಸ್ಟೇಯ್ಸ್ ಅನ್ನೋ ಹೆಸರಿನಿಂದ ಈ ಕಂಪನಿ ಶುರು ಆಗಿತ್ತು. 2013 ರಲ್ಲಿ ಇದನ್ನೇ OYO ರೂಮ್ಸ್ ಅಂತ ಬದಲಾಯಿಸಿದ್ರು.

ಇದ್ರಿಂದಾಗಿ ಭಾರತೀಯ ಹೋಟೆಲ್ ಹಾಗೂ ಆಥಿತ್ಯ ಉದ್ಯಮದಲ್ಲಿ ಒಳ್ಳೆ ಬೆಳವಣಿಗೆ ಆಗಿ, ಎಲ್ಲರಿಗೂ ಯಾವುದೇ ತೊಂದರೆ ಇಲ್ಲದೆ, ತುಂಬಾನೇ ಸಂತೋಷ ಕೊಡೊ ಹಾಗೂ ಕೈಗೆಟಕುವ ಬೆಲೆಯ ಹೋಟೆಲ್ ರೂಮ್ಗಳು ಸಿಗುವಹಾಗೆ ತಮ್ಮ ತಂತ್ರಜ್ಞಾನದ ಮೂಲಕ ಉತ್ತಮಪಡಿಸಿದ್ರು. 

ಈಗ ಇವರ ಕಂಪನಿಯಲ್ಲಿ  4000 ಕ್ಕೂ ಹೆಚ್ಚು ರೂಮ್ಗಳು, 350 ಕ್ಕೂ ಹೆಚ್ಚು ಹೋಟೆಲ್ ,500 ಕ್ಕೂ ಹೆಚ್ಚು ಕೆಲಸಗಾರರು ಇದ್ದಾರೆ. ಇದು ಅವರು ಶುರು ಮಾಡಿದಾಗ ಇದ್ದದ್ದಕ್ಕಿಂತ 3 ಪಟ್ಟು ಹೆಚ್ಚು ಬೆಳವಣಿಗೆ ಕಂಡಿದೆ. 

ಮೂಲ

ನಿಮ್ಮಲ್ಲಿ ಯಾರಿಗಾದ್ರೂ ಯಾವುದೇ ಉದ್ಯಮ ಶುರು ಮಾಡಬೇಕು ಅನ್ನೋ ಆಸೆ ಆಕಾಂಕ್ಷೆ ಇದ್ರೆ, ಸೊಲಬಹುದೇನೋ ಅನ್ನೋ ಭಯದಿಂದ ಹೊರಗೆ ಬಂದು ಶುರು ಮಾಡಿ. ಸೋಲು ಗೆಲುವಿನ ಮೆಟ್ಟಿಲು. ನಿಮ್ಮ ಆಸೆ ಕೈಗೂಡಿ ನಿಮಗೆ ಯಶಸ್ಸು ಸಿಗಲಿ.