ಕೊಬ್ಬರಿ ಎಣ್ಣೆ ಅಂದ್ರೇನೇ ಅದರ ಘಮವಾದ ವಾಸನೆ ನೆನಪು ಬರುತ್ತಲ್ವಾ? ನಮ್ಮಲ್ಲಿ ಸಾಮಾನ್ಯವಾಗಿ ಕೊಬ್ಬರಿ ಎಣ್ಣೆ ಕೂದ್ಲಿಗೇ ಜಾಸ್ತಿ ಹಚ್ತೀವಾದ್ರೂ, ಅಡಿಗೇಲೂ ಇ

ಕೊಬರಿ ಎಣ್ಣಿ ಅನ್ನತ್ತಿಗೇನ ಅದರದು ಘಮಾ ಘಮಾ ವಾಸನಿ ನೆನಪ ಆಕ್ಕತೆಲ್ಲಾ? ನಮ್ಮ ಕಡೆ ಕೊಬರಿ ಎಣ್ಣೀನ  ತಲೀಗೇನ ಹೆಚ್ಚಿಗಿ ಹಚ್ಚತವಿ ಆದರೂ ಅಡಿಗಿ ಒಳಗನೂ ಇದನ್ನ ಉಪೇಗಸೋ ಜನಾನೂ ಏನೂ ಕಡಿಮಿ ಇಲ್ಲಾ. ಇನ್ನ ಸೌಂದರ್ಯ ಪ್ರಜ್ಞಾ ಹೆಚ್ಚಿಗಿ ಇರೋರಿಗೆ ಅಂತೂ ಈ ಕೊಬರಿ ಎಣ್ಣಿ ಭಾಳ ಉಪೇಗಕ್ಕ ಬರತತಿ. ಕೊಬರಿ ಎಣ್ಣಿ ಹಚಿಗೆಳ್ಳದರಿಂದ ಕೂದಲಾ ಉದರೋದ ಕಡಿಮಿ ಆಗೋದಲ್ಲದ, ಒಣಾ ಚರ್ಮಕ್ಕ ಮೆಡಿಸಿನ್ ಆಕ್ಕತಿ, ಅಲ್ಲದ ಮೇಕಪ್ ತೆಗಿಯೋ ಮುಂದ ಕೊಬರಿ ಎಣ್ಣಿ ಹಚಿಗೆಂಡರ ಚರ್ಮ ಹಾಳ ಆಗಂಗಿಲ್ಲ.

ಇಸ್ಟ ಅಲ್ಲಾ… ಕೊಬರಿ ಎಣ್ಣಿ ನಮ್ಮ ಡೈಜೇಶನ್ ಪವರ್ ನ ಹೆಚಿಗಿ ಮಾಡಿ ರೋಗಾ ನಮ್ಮ ಹಂತೇಲೆ ಬರದ ಇರೋ ಹಂಗ ಕಾಪಾಡತತಿ. ಕೊಬರಿ ಎಣ್ಣಿ ದಿನಾನು ಹಚಿಗೆಂಡರ ಈ ಬ್ಯಾಕ್ಟೀರಿಯಾ, ಇನ್ಫೆಕ್ಶನ್ನು ಯಾವದೂ ಬರಂಗಿಲ್ಲ ಬರದ ಇಟಗರ್ರಿ. ಇದರ ಜತೀಗೆ ಹಲ್ಲು, ಮತ್ತ ಎಲಬಿಗೂ ಕೊಬರಿ ಎಣ್ಣೀ ಭಾಳ ಛೊಲೋ ಏನರೆಪಾ. ಗಂಡಸೂರು ದಾಡಿ ಬೋಳಿಸಿಗೆಳ್ಳಕಿಂತಾ ಮದಲ ಕೊಬರಿ ಎಣ್ಣೀನ ಮಖಕ್ಕ ಹಚಿಗೆಂಡರ ಚರ್ಮ ಕಟ್ ಆಗದ ಇರ ಹಂಗ ನೋಡಿಕೆಂತತಿರೆಪಾ.

ಈ ಕೊಬರಿ ಎಣ್ಣಿದು ಸ್ಪೆಶಾಲಿಟಿ ಇನ್ನೂ ಏನೇನ ಐತಿ ಅನ್ನೋದ ಇನ್ನೊಂದೀಟ ನೋಡನ ಬರ್ರಿ. ಸುಕಾ ಸುಮ್ಮನ ಅಂತಾದ ಇಂತಾದ ಕ್ರೀಮಿಗೆ ರೊಕ್ಕಾ ಹಾಳ ಮಾಡಿಕೆಳ್ಳದರ ತಪ್ಪತತಿ.

1. ಫಂಗಸ್ ಇನ್ಫೆಕ್ಶನ್ ಏನರ ಆಗಿ ಉಗರ ಹಳದಿ ಆಗಿದ್ದರ ಬಿಸೇ ಬಿಸಿ ಕೊಬರಿ ಎಣ್ಣಿ ಹಚ್ಚರಿ.

ಕೊಬರಿ ಎಣ್ಣಿ ಒಳಗ ಫಂಗಸ್ ತಡಿಯೋ ಶಕ್ತಿ ಐತಿ. ಇನ್ಫೆಕ್ಶನ್ ಹೊಕ್ಕತಿ. ನೀರಿನ್ಯಾಗ ಹೆಚಿಗಿ ಕೆಲಸಾ ಮಾಡೋರಿಗೆ ಇದ ಭಾಳ ಉಪೇಗ ಆಕ್ಕತಿ ನೋಡರಿ. ಡಾಕ್ಟರದು, ಆಯಿಂಟಮೆಂಟಿಂದು ಎಲ್ಲಾ ರೊಕ್ಕಾ ಉಳೀತೇತಿ.

ಮೂಲ

2. ಧೂಳದಿಂದಾ ಅಲರ್ಜಿ ಆಗೋ ಅಂಥಾರು ಮೂಗಿನ ಹೊಳ್ಳಿಗೆ ಕೊಬರಿ ಎಣ್ಣಿ ಸವರಿಕೆರ್ರಿಪಾ.

ಕೆಲವೊಬ್ರಿಗೆ ಈ ಧೂಳದಿಂದಾ ಜಾಸ್ತಿ ಅರ್ಜಿ ಆಗತಿರತತಿ. ಹಿಂಗ ಆದಾಗ ಒಂದೀಟ ಕೊಬರಿ ಎಣ್ಣೀನ ಮೂಗಿನ ಮ್ಯಾಲ ಹಕ್ಕೆಂಡ್ರ ಧೂಳದ್ದು ಅಲರ್ಜಿ, ನೆಗಡಿ, ಮಟಾ ಮಾಯ ಆತಿ. ಟ್ರಾಯ್ ಮಾಡಿ ನೋಡರಿ.

ಮೂಲ

3. ಕೂದಲಾ ಬರೊಬ್ಬರಿ ಬೆಳೀಬೇಕು ಅಂದರ ಬಿಸೇ ಕೊಬರಿ ಎಣ್ಣಿ ಮತ್ತ ಕರಬೇವು ಮಿಕ್ಸ ಮಾಡಿ ತಲೀಗೆ ಹಚಿಗೆರ್ರಿ.

ತಲಿ ಕೂದಲಾ ಹೆಲ್ತಿ ಆಗಿ ಇರಬೇಕ ಅಂದರ ಕೊಬರಿ ಎಣ್ಣೀಗೆ ಒಂದೀಟ ಒಣಾ ಕರಬೇವಿನ ಪುಡಿ ಮಿಕ್ಸ ಮಾಡಿ ಬಿಸಿ ಮಾಡಿ ತಲೀಗೆ ಹಚಿಗೆಂಡರ ಕೂದಲಾ ಮಸ್ತ ಬೆಳೀತಾವು.

ಮೂಲ

4. ಹಣ್ಣ – ಕಾಯಿಪಲ್ಲೆ ಹೆಚ್ಚ ಮುಂದ ಕಲಿ ಆದರ ಅಥವಾ ಜಿಡ್ಡ ಹೋಗಬೇಕಂದರ ಕೊಬರಿ ಎಣ್ಣಿ ಹಚ್ಚರಿ.

ಕಾಯಿ ಪಲ್ಲೆ ಹಚ್ಚ ಮುಂದ ಅಂದರ ಬೀಟರೂಟಿನಂಥಾವನ ಕೈಗೆ ಎಣ್ಣಿ ಹಚಿಗೆಂಡ ಹೆಚ್ಚಿದರ ಕಲಿ ಆಗಂಗಿಲ್ಲ ಏನರೆಪಾ. ಜತೀಗೆ ಹಲಸಿನ ಹಣ್ಣ ಬಿಡಸೋ ಮುಂದ ಕೈಗೆ ಕೊಬರಿ ಎಣ್ಣಿ ಹಚಿಗೆಳ್ಳದರಿಂದ ಕೈಗೆ ಅಂಟ, ಜಿಡ್ಡ ಹತ್ತದ ತಪ್ಪತತಿ.

ಮೂಲ

5. ಸಣ್ಣ ಮಕ್ಕಳಿಗೆ ಎಲ್ಲೆರ ಚರ್ಮಾ ಕೆಂಪಗ ಆಗಿದ್ದರ ಕೊಬರಿ ಎಣ್ಣಿ ಸವರಬೇಕ.

ಮಕ್ಕಳಿಗೆ ಈ ಡೈಪರ್ ಹಾಕಿದಾಗ ಗಾಯ ಆಗಿರತಾವು ನೋಡರಿ ಅವಾಗ ಕೊಬರಿ ಎಣ್ಣಿ ಹಚ್ಚರಿ. ಗಾಯಾ ಜಲ್ದಿ ಕಡಿಮಿ ಆಕ್ಕತಿ.

ಮೂಲ

6. ನಿಂಬಿ ಹಣ್ಣ 2-3 ತಿಂಗಳಗಟ್ಟಲೆ ಹಾಳ ಆಗಬಾರದು ಅನ್ನಂಗಿದ್ದರ ಕೊಬರಿ ಎಣ್ಣಿ ಹಚ್ಚಿ ಇಟ್ಟಬಿಡರಿ.

ಭಾಳಾ ದಿನಗಟ್ಟಲೆ ನಿಂಬಿ ಹಣ್ಣನ ಹಾಳ ಆಗದಂಗ ಇಡಬೇಕು ಅನ್ನಂಗಿದ್ದರ ನಿಂಬಿ ಹಣ್ಣಿನ ಸುತ್ತಲೂ ಕೊಬರಿ ಎಣ್ಣಿ ಹಚ್ಚಿ ಇಡರಿ. ಇದರಿಂದಾ 2-3 ತಿಗಂಳಾ ಆದರೂ ನಿಂಬಿ ಹಣ್ಣ ಫ್ರೆಶ್ ಆಗೇ ಇರತತಿ.

ಮೂಲ

ಇಸ್ಟ ಮಾಡಿದರ, ಕೊಬರಿ ಎಣ್ಣಿ ಅನ್ನೋದ ನಿಮ್ಮ ಕೈಯ್ಯಾಗ ಇರೋ ಮ್ಯಾಜಿಕಲ್ ಮೆಡಿಸಿನ್ ಆಗೋದರಾಗ ಡೌಟ ಇಲ್ಲಾ….

ಇಸ್ಟ ಎಲ್ಲಾ ಉಪೇಗ ಇರೋ ಅಂತಾ ಕೊಬರಿ ಎಣ್ಣೀನ ಉಪೇಗಸೋ ಮುಂದ ಒಂದೀಸ ಪಾಯಿಂಟಗುಳನ ತಲ್ಯಾಗ ಇಟಗಾಬೇಕು. ಏನಪಾ ಅಂದರ ಹಲ್ತೀಗೆ ಭಾಳ ಛೋಲೋ ತಡೀಲೆ ಅಂತ ಏನರಾ ಇದನ್ನ ಎರ್ರಾ ಬಿರ್ರಿ ತಿಂದರೆಪಾ ಅಂದರ ಮೈ ಒಳಗ ಕೊಲೆಸ್ಟರಾಲ್ ಪ್ರಮಾಣಾ ಬಂವ್ ಅಂತ ಏರತತಿ.

ಕೊಬರಿ ಎಣ್ಣೀನ ಕೋಲ್ ಆಗಿರೋ ಅಂತಾ ಜಗದಾಗ ಸ್ವಚ್ಚ ಇರೋ ಅಂತಾ ಡಬ್ಬಿ ಒಳಗ ಇಡಬೇಕ. ಇಲ್ಲಾ ಅಂದರ ಕೊಬರಿ ಎಣ್ಣೀಗೆ ಬೂಸ್ಟ್ ಹಿಡಕಂತತಿ ಏನರೆಪಾ…