http://host.urbo.com/image/upload/c_fill,f_jpg,g_face:center,q_auto,w_1000/v1503438171/dkxzonetj2eyhd2urhhz.jpg

"ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು… ಮನೆಯ ಸುತ್ತ ಹೂವ ರಾಶಿ ಹಾಕಿರಬೇಕು.." ಅನ್ನೋ ಹಳೇ ಕನ್ನಡ ಹಾಡಿನ ಸಾಲು ನೆನಪಿದೆ ತಾನೆ, ಅದು ಕೇವಲ ಹಾಡಿನ ಸಾಲಲ್ಲ ಜನ ಜಾತ್ರೆ ಮಧ್ಯೆ ಸಾಕಾಗಿರೋ ನಮ್ಮಂಥ ಎಷ್ಟೋ ಜನರ ಕನಸು. ಬೆಟ್ಟಾನೋ ದ್ವೀಪಾನೋ ದೂರದ ಪ್ರಶಾಂತವಾಗಿರೋ ಜಾಗದಲ್ಲಿ ಮನೆ ಮಾಡಿಕೊಂಡು ಬದುಕೋದರ ಸುಖಾನೇ ಬೇರೆ ಅನ್ನೋದು ಅಂತೆಕಂತೆ ಅಲ್ಲ ಬಿಡಿ.

ಮನೆಯಲ್ಲ ಸ್ವಾಮೀ ದ್ವೀಪ ಕೊಳ್ಳೋ ಜನ ಇದ್ದಾರೆ!

ಇನ್ನು ದುಡ್ಡಿರೋ ದೊಡ್ಡೋರೆಲ್ಲ ದ್ವೀಪಗಳನ್ನ ಕೊಂಡುಕೊಂಡು ಅಲ್ಲೇ ಒಂದು ಮನೆ ಸುತ್ತ ಹೂದೋಟ ಅಂತ ಮಾಡಿಕೊಂಡಿರೋ ಅಂತೆಕಂತೆ ಆಗಾಗ ಕೇಳ್ತಾನೇ ಇರ್ತೀವಿ.

host.urbo.com

ನ್ಯೂಯಾರ್ಕ್ ಹಾಗೆ ಒಂಟಾರಿಯೋ ಮಧ್ಯೆ ಇದೆ ಈ ದ್ವೀಪ.

ಸೆಂಟ್ ಲಾರೆನ್ಸ್ ನದಿಯಲ್ಲಿರೋ 1864 ದ್ವೀಪಗಳಲ್ಲಿ ಇದೂ ಒಂದು. ವಿಶೇಷ ಅಂದರೆ ಇಲ್ಲಿರೋ ಜಾಗ ಒಂದು ಮನೆ ಹಾಗೆ ಮರಕ್ಕೆ ಮಾತ್ರ ಸಾಕಾಗುತ್ತಂತೆ.

ದ್ವೀಪ ಅಂತ ಕರೆಯಕ್ಕೆ ಅಲ್ಲಿ ಒಂದಾದ್ರ್ರೂ ಮರ ಇರಬೇಕಂತೆ!

ನೀರ ಮಧ್ಯೆ ಒಂದು ಚದರ ಅಡಿ ಜಾಗ ನೀರಿಗಿಂತ ಎತ್ತರದಲ್ಲಿದ್ದು ಅಲ್ಲಿ ಒಂದಾದರೂ ಮರ ಇದ್ದರೆ ಆ ಜಾಗಾನಾ ದ್ವೀಪ ಅಂತಾರೆ.

ಈ ದ್ವೀಪ 3,300 ಚದರ ಅಡಿ ಜಾಗದಲ್ಲಿದೆ.

ಒಂದು ಶ್ರೀಮಂತ ಮನೆತನಕ್ಕೆ ಸೇರಿದೆ ಈ ದ್ವೀಪ.

ಈ ದ್ವೀಪನ ಕೊಂಡ ನಂತರ ಇಲ್ಲೊಂದು ಮನೆ ಮಾಡಿ ಮರ ನೆಟ್ಟಿದ್ದರಂತೆ. ಆಮೇಲೆ ಇದಕ್ಕೆ ಜಸ್ಟ್ ಇಂಗ್ಲಂಡ್ ರೂಂ ಐಲ್ಯಾಂಡ್ ಅಂತ ಹೆಸರಿಟ್ಟರಂತೆ.

3,300 ಚದರ ಅಡಿ ಜಾಗದಲ್ಲಿರೋ ಇದು ಗಿನ್ನೀಸ್ ಪುಸ್ತಕದಲ್ಲಿ ಅತೀ ಚಿಕ್ಕ ದ್ವೀಪ ಅಂತ ಜಾಗ ಗಿಟ್ಟಿಸಿದೆ!

ಸೈಜ್ ಲ್ಯಾಂಡ್ ಕುಟುಂಬದವರಿಗೆ ಇದು ರಜೇಲಿ ಕಾಲ ಕಳೆಯೋ ಜಾಗ ಆಗಿತ್ತು

ಇದಕ್ಕೆ ಮುಂಚೆ ಬಿಷಪ್ ರಾಕ್ ಅನ್ನೋ ಜಾಗ ಗಿನ್ನೀಸ್ ನಲ್ಲಿ ಮನುಷ್ಯ ವಾಸ ಇರೋ ಅತೀ ಚಿಕ್ಕ ದ್ವೀಪವಾಗಿತ್ತು. ೧೯೮೨ರಲ್ಲಿ ಬಿಷಪ್ ರಾಕ್ ನಲ್ಲಿರೋ ಲೈಟ್ ಹೌಸನ್ನ ಮನುಷ್ಯರಿಲ್ಲದ ಕಾರಣ ತಾಂತ್ರಿಕವಾಗಿ ಬಳಸಲಾಗುತ್ತಿತ್ತು. ಈಗಲ್ಲಿ ಜನ ವಾಸ ಇಲ್ಲಿ ಅನ್ನಿ.