ಇಂಡಿಯಾ ದೇಶ ಪ್ರಜಾಪ್ರಭುತ್ವ ಇರೋ ದೇಶ ಅನ್ನೋದು ನಮಗೆಲ್ಲಾ ಗೊತ್ತಿರೋ ವಿಷ್ಯ. ಆ ಪ್ರಜಾ ಪ್ರಭುತ್ವ ನಡೆಯೋದೇ ಐದು ವರ್ಷಕ್ಕೊಂದ್ಸಲ ನಡ್ಯೋ ಎಲೆಕ್ಷನ್ನಿಂದ. ಆಥರ ಎಲೆಕ್ಷನ್ ನಡೆಸಕ್ಕೆ ಬೇಕಾದ ಅತ್ಯಂತ ಮುಖ್ಯವಾದ ವಸ್ತುಗಳಲ್ಲೊಂದು ವೋಟ್ ಹಾಕಿದಿವಿ ಅನ್ನೋ ಗುರುತಿಗೆ ಕೈಬೆರಳಿಗೆ ಹಾಕೋ ಇಂಕು… ಒಂದ್ಸಲ ವೋಟ್ ಹಾಕ್ದೋರು ಇನ್ನೊಂದ್ ವೋಟ್ ಹಾಕೋದನ್ನ ತಡೇಯೋಕ್ಕೆ ಅಂತಾನೇ ಈ ಇಂಕ್ ಮಾಡಿದ್ದು. ಈ ಇಂಕನ್ನ ಇಡೀ ಇಂಡಿಯಾದಲ್ಲಿ ಮಾಡೋದು ಒಂದೇ ಕಡೆ – ಕರ್ನಾಟಕದಲ್ಲಿ! ಏನಿದ್ರ ವಿಶೇಷ? ಬನ್ನಿ ತಿಳ್ಕೊಳಣ…

ವೋಟು ಹಾಕಿದಾಗ ಬೆರಳಿಗೆ ಹಾಕೋ ಈ ಇಂಕು ಒಂದ್ ಸಲ ಚರ್ಮದ ಮೇಲೆ ಬಿದ್ರೆ ಜಪ್ಪಯ್ಯ ಅಂದ್ರೂ ಹೋಗಲ್ಲ

ಇದ್ರಲ್ಲಿ ಸಿಲ್ವರ್ ನೈಟ್ರೇಟ್ ಇರುತ್ತೆ. ಅದು ಚರ್ಮದ ಮೇಲೆ ಬಿದ್ದಾಗ ಅಲ್ಟ್ರಾ ವಯಲೆಟ್ ಕಿರಣಗಳ ಜೊತೆ ಸೇರಿ ಕಲೆ ಉಂಟುಮಾಡುತ್ತೆ. ಆ ಕಲೆ ಏನ್ ಮಾಡಿದ್ರೂ ಹೋಗಲ್ಲ. ಅದು ಹೋಗ್ಬೇಕಾದ್ರೆ ಇರೋ ಚರ್ಮ ಹೋಗಿ ಹೊಸ ಚರ್ಮ ಬೆಳೀಬೇಕು.

ಮೂಲ

ಇಡೀ ಇಂಡಿಯಾದಲ್ಲಿ ಇದನ್ನ ತಯಾರಿಸೋದು ಮೈಸೂರ್ ಪೆಯಿಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ (MPVL) ಅನ್ನೋ ಕಂಪನಿ ಮಾತ್ರ!

ನ್ಯಾಶನಲ್ ಫಿಸಿಕ್ಸ್ ಲ್ಯಾಬರೆಟರಿ (NPL) ಮತ್ತು ನ್ಯಾಶನಲ್ ರಿಸರ್ಚ್ ಡೆವೆಲಪ್ಮೆಂಟ್ ಕಾರ್ಪೋರೇಶನ್ (NRDC) ಔರ್ಗಳ ಜೊತೆ ಕೆಲ್ಸ ಮಾಡಿ MPVL ಈ ಇಂಕನ್ನ ಕಂಡುಹಿಡಿದ್ರಂತೆ. ಇದರ ಬಗ್ಗೆ ಬೇರೆ ಯಾರಿಗೂ ಗೊತ್ತಿಲ್ಲವಂತೆ!

ಮೂಲ

ಇದನ್ನ ಮಾಡೋ ರೀತೀನ ಇವ್ರು ಬೇರೆ ಯಾರ್ಗೂ ಬಿಟ್ಕೊಡೋಹಾಗಿಲ್ವಂತೆ!

ಇದ್ರಲ್ಲಿ ಬಳಸೋ ಎಲ್ಲಾ ಕೆಮಿಕಲ್ಲೂ ಇಂಡಿಯಾದಲ್ಲೇ ಸಿಗುತ್ತೆ. ಆದ್ರೆ ಮಾಡೋ ಬಗೆ ಬೇರೆಯಾರ್ಗೂ ಗೊತ್ತಿಲ್ಲ.

ಮೂಲ

ಇದನ್ನ ಶುರು ಮಾಡ್ದೋರು ನಾಲ್ವಡಿ ಕೃಷ್ಣರಾಜ ಒಡೆಯರ್

1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಮೈಸೂರ್ ಲ್ಯಾಕ್ ಮತ್ತು ಪೆಯಿಂಟ್ ವರ್ಕ್ಸ್ ಲಿಮಿಟೆಡ್ ಅನ್ನೋ ಕಂಪನೀನ ಶುರು ಮಾಡಿದ್ರು. ಆಮೇಲೆ 1962ರಲ್ಲಿ ಇದಕ್ಕೆ ಮೈಸೂರ್ ಪೆಯಿಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ (MPVL) ಅನ್ನೋ ಹೆಸರು ಬಂತು.

ಮೂಲ

MPVL ಮೊದಲ್ನೇ ಸಲ ಇಂಕನ್ನ ಸಪ್ಲೈ ಮಾಡಿದ್ದು 1962ರ ಲೋಕಸಭೆ ಚುನಾವಣೇಲಿ

ಆಗ್ಲೇ ಕೇಂದ್ರ ಕಾನೂನು ಸಚಿವಾಲಯ, NPL, NRDC ಮತ್ತು MPVLಗಳ ಜೊತೇಲಿ ದೇಶಕ್ಕೆಲ್ಲಾ ಇಂಕ್ ಸಪ್ಲೈ ಮಾಡೋ ಒಪ್ಪಂದ ಮಾಡ್ಕೊಂಡ್ರು.

ಮೂಲ

ಬರೀ ಎಲೆಕ್ಷನ್ನಿಗಲ್ಲದೇ ಪಲ್ಸ್ ಪೋಲಿಯೋ ಯೋಜನೆಗೂ ಈ ಇಂಕನ್ನೇ ಬಳಸಲಾಗುತ್ತೆ

ಅಷ್ಟೇ ಅಲ್ಲ ಕ್ಯಾನ್ಸರ್ ಆಸ್ಪತ್ರೇಲಿ ಮೈಯ್ಯಲ್ಲಿ ಕ್ಯಾನ್ಸರ್ ಆಗಿರೋ ಜಾಗಾನ ಗುರುತು ಮಾಡಕ್ಕೆ ಇದೇ ಇಂಕನ್ನೇ ಬಳಸ್ತಾರಂತೆ.

ಮೂಲ

ಒಂದ್ಸಲ ಲೋಕಸಭೆ ಚುನಾವಣೆ ನಡೆದ್ರೆ ಸುಮಾರು 21 ಲಕ್ಷ ಲೀಟರಿಗಿಂತ ಜಾಸ್ತಿ ಇಂಕು ಬೇಕಾಗುತ್ತೆ!

ಇದನ್ನ ಬರೀ 60 ದಿನದಲ್ಲಿ ಪೂರೈಸ್ತಾರೆ ಇವ್ರು!!!

ಮೂಲ

1962ರಿಂದ ಇವತ್ತೊರೆಗೂ MPVLನವರೇ ಇಡೀ ಇಂಡಿಯಾಕ್ಕೆ ಇಂಕನ್ನ ತಲುಪಿಸ್ತಾ ಬಂದಿದಾರೆ, ಒಂದ್ಸಲಾನೂ ಲೇಟ್ ಆಗಿಲ್ಲ!

ಒಟ್ಟು 1.3 ಮಿಲಿಯನ್ ಚದುರ ಮೈಲಿ!  ಬೆಟ್ಟ ಗುಡ್ಡ ನದಿ ಬಯಲು ಮಂಜು ಕಾಡು ಎಲ್ಲಾ ಮೀರಿ ಹೊತ್ತಿಗೆ ಸರಿಯಾಗಿ ತಲುಪಿಸ್ತಾ ಬಂದಿದ್ದಾರೆ ಅಂದ್ರೆ ನಿಜ್ವಾಗ್ಲೂ ಗ್ರೇಟ್ ಅಲ್ವಾ?

ಮೂಲ

ಈ ಕಂಪನೀಲಿರೋರು ಬರೀ 65 ಜನ ಮಾತ್ರ!

ಯಪ್ಪಾ! ಎಂಥಾ ಉತ್ಪಾದನಾ ಸಾಮರ್ಥ್ಯ ನೋಡಿ!

ಮೂಲ

MPVL ಬರೀ ಇಂಡಿಯಾ ಒಳಗೆ ಮಾತ್ರ ಅಲ್ಲ, ಬೇರೆ ಬೇರೆ ದೇಶಗಳಿಗೂ ಇಂಕ್ ಸಪ್ಲೈ ಮಾಡ್ತಾರೆ!

ಸಿಂಗಾಪುರ್, ಡೆನ್ಮಾರ್ಕ್, ಟರ್ಕಿ, ದಕ್ಷಿಣ ಆಫ್ರಿಕಾ, ನೈಜೀರಿಯಾ, ನೇಪಾಳ, ಗಾನ, ಪಪುಆ-ನ್ಯೂ ಜಿನಿಯಾ, ಬರ್ಕಿನ ಫಾಸೊ, ಕ್ಯಾನಡಾ, ಟೊಗೋ, ಸಿಯೆರಾ ಲಿಯೋನೆ, ಮಲೇಶಿಯಾ, ಕಾಂಬೋಡಿಯಾ, ಹೀಗೇ ಹತ್ತಾರು ದೇಶಕ್ಕೆ ಸಪ್ಲೈ ಮಾಡ್ತಾರೆ.

ಮೂಲ

ಈ ಕಂಪನೀಲಿ ಶ್ರೀಕಂಠದತ್ತ ಒಡೆಯರ್ ಅವರದೂ ಪಾಲು ಇತ್ತಂತೆ!

ಈ ಕಂಪನಿ ಶೇರುಗಳಲ್ಲಿ 91.39% ಕರ್ನಾಟಕ ಸರ್ಕಾರದ್ದು,  ಉಳಿದದ್ದನ್ನ 1000 ಜನ ಕೊಂಡ್ಕೊಂಡಿದಾರೆ.

ಮೂಲ

ಇನ್ನೂ ಹೆಚ್ಚೆಚ್ಚು ಜನರ ಬೆರಳಿನ ಮೇಲೆ ಈ ಇಂಕನ್ನ ನೋಡಬೇಕು ಅನ್ನೋದು ಇವರಾಸೆಯಂತೆ!

ಪ್ರಜಾ ಪ್ರಭುತ್ವಕ್ಕೆ ಆಸರೆ ಆಗ್ತಾ ಇರೋದರ ಬಗ್ಗೆ ಇವರಿಗೆ ಹೆಮ್ಮೆ ಇದ್ಯಂತೆ.

ಮೂಲ

ಮಾಹಿತಿ: ಮೂಲ  ಹೊರಚಿತ್ರ: ಮೂಲ