ಬೆಂಗಳೂರಲ್ಲಿ ಆಂಬುಲೆನ್ಸುಗಳು ಉಪಯೋಗವಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋದೇ.

ಟ್ರಾಫಿಕ್ ಹೀಗಿದ್ದರೆ…

stanford

ಆಂಬುಲೆನ್ಸ್ ಎಲ್ಲಿಗೆ ತಲುಪಬೇಕೋ ಅದಕ್ಕಿಂತ ಮುಂಚೆ ರೋಗಿ…. ಮುಂದೇ ಹೇಳಬೇಕಾಗಿಲ್ಲ ಬಿಡಿ.

ಈ ತೊಂದರೆ ಈಗ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ ಅಂತಾನೂ ಹೇಳಕ್ಕಾಗಲ್ಲ. ಬರ್ತಾ ಬರ್ತಾ ಹುಬ್ಬಳ್ಳಿ, ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ… ಹೀಗೆ ಹೆಚ್ಚು-ಕಡಿಮೆ ಎಲ್ಲಾ ಊರುಗಳಿಗೂ ಹರಡ್ತಾ ಇದೆ.

ಆದರೆ ಇಲ್ಲಿ ನೋಡಿ, ಹಾಲೆಂಡಿನ TU Delft ವಿವಿಯವರು ಈ ಸಮಸ್ಯೆಗೆ ಪರಿಹಾರ ಹುಡುಕಿಕೊಂಡಿದ್ದಾರೆ:

ಮೇಲಿನ ಚಿತ್ರದಲ್ಲಿ ವಯಸ್ಸಾದವನೊಬ್ಬನಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಹತ್ತಿರದಲ್ಲಿ ಆಸ್ಪತ್ರೆ ಗೀಸ್ಪತ್ರೆ ಇಲ್ಲ. ಡಾಕ್ಟರ್ರೂ ಇಲ್ಲ.

ಮಗಳು ಒಂದು ಫೋನ್ ಮಾಡ್ತಾಳೆ, ಅಲ್ಲಿಗೆ ಅವನ ಪಾಲಿಗೆ ದೇವರು ಹಾರಿಕೊಂಡು ಬರ್ತಾನೆ. ಅಲ್ಲ, ಬರತ್ತೆ. ಮುಂದೆ ಆ ವ್ಯಕ್ತೀನ ಮತ್ತೆ ಬದುಕಿಸಕ್ಕೆ ಏನು ಬೇಕೋ ಅದೆಲ್ಲಾ ಮಾಡುತ್ತೆ.

ಹೌದು, ಇದು ಡ್ರೋನ್ ಆಂಬುಲೆನ್ಸ್ ಅಥವಾ ಹಾರೋ ಆಂಬುಲೆನ್ಸ್.

ಈ ವೀಡಿಯೋ ನೋಡಿ, ಇದು ಹೇಗೆ ಕೆಲಸ ಮಾಡುತ್ತೆ ಅಂತ ಅರ್ಥವಾಗುತ್ತೆ. ಡಾಕ್ಟರ್ ಎಲ್ಲಿ ಅಂತೀರಾ? ಅಲ್ಲೇ ‘ಇದಾರೆ’, ನೋಡಿ:

ಇದು ಬೆಂಗಳೂರಂಥ ಊರಿಗೆ ಬೇಕೇ ಬೇಕು. ಅಲ್ಲವಾ?