http://images.agoramedia.com/cs/eh/cs-heart-disease-gene-large.jpg?width=320&width=320

ಹಾರ್ಟಿನ ಬಗ್ಗೆ ಅವಾಗಾವಾಗ ಮಾತಾಡಿಕೆಂತನ ಇರ್ತವಿ. ಅದರ ಆರೋಗ್ಯದ ಬಗ್ಗೆ, ಹಾರ್ಟ ಕರಗ ವಿಚಾರಗುಳ ಬಗ್ಗೆ, ನನ್ನ ಹಾರ್ಟಿನ್ಯಾಗ ನೀನದಿ ಅಂತ ಲವರ್ಸ್ ಡೈಲಾಗು ಸೈತ ಹೊಡೀತಿರ್ತಾರ. ಾದರ ಖರೇ ಅಂದ್ರೂ ಹಾರ್ಟಿನ ಬಗ್ಗೆ ಎಸ್ಟೋ ಜನಕ್ಕ ಕೆಲವೊಂದ ವಿಚಾರ ಗೊತ್ತಿಲ್ಲ. ಇಲ್ಲೆದಾವು ನೋಡ್ರಿ ನಮ್ಮ ಹಾರ್ಟಿನ ಬಗ್ಗೆ 11 ಇಂಟರೆಸ್ಟಿಂಗ ವಿಚಾರಗುಳು.

1. ದೊಡ್ಡರ ಹಾರ್ಟಿನ ಸೈಜು ಎರಡ ಮುಷ್ಟಿ ಅಸ್ಟ ಇರ್ತತಿ, ಮಕ್ಕಳದು ಒಂದ ಮುಷ್ಟಿ ಅಸ್ಟಿರ್ತತಿ

2. ಒಂದ ದಿನಕ್ಕ ನಮ್ಮ ಹಾರ್ಟು 100000 ಸಲಾ ಡವಾಡವಾ ಅಂತ ಹೊಡಕಂತತಿ, ಸಾಯತಂಕಾ ಎವರೇಜ 250 ಕೋಟಿ ಸಲಾ ಹೊಡಕಂತತೆಂತ

3. ಬದಕಿರ ಅಸ್ಟ ದಿನ ನಮ್ಮ ಹಾರ್ಟು 16 ಲಕ್ಷ ಲೀಟರ ರಕ್ತಾನ ಪಂಪ ಮಾಡತತಿ, ಅಂದರ ಒಂದ 5 ಸೂಪರ್ ಟ್ಯಾಂಕರ್ ಹಡಗ ತುಂಬಿಸ ಅಸ್ಟ!

4. ಅಡಿಗಿ ಮನ್ಯಾಗಿರ ನಳಾನ 45 ವರ್ಷಾ ಆನ್ ಮಾಡಿ ಬಿಟ್ಟರ ಎಸ್ಟ ನೀರ ಹರದ ಹೊಕ್ಕತ್ಯೋ ಅಸ್ಟ ರಕ್ತಾನ ನಮ್ಮ ಹಾರ್ಟು ಒಂದ ಜೀವನದ ಟಾಯಮಿನ್ಯಾಗ ಪಂಪ ಮಾಡತತಿ

5. ಹಾರ್ಟು ತನಗ ತಾನ ಎಲೆಕ್ಟ್ರಿಕ್ ಎನರ್ಜಿ ತಯಾರಿಸಿಗೆಂತತಿ, ಹಂಗಾಗಿ ಅದ ನಮ್ಮ ದೇಹದಿಂದ ಬ್ಯಾರೇ ಆದರೈ ಸೈತ ಹೊಡಕಂತ ಇರ್ತತಿ, ಆಕ್ಸಿಜನ್ನು ಸಿಗವರೆಗೂ ಹೊಡಕಂತಿರತತಿ

6. ಹಾರ್ಟು ನಮ್ಮ ದೇಹದ 75 ಲಕ್ಷ ಕೋಟಿ ಸೆಲ್ಲಗೂಳಿಗೆ ರಕ್ತಾನ ಪಂಪ ಮಾಡತತಿ, ಕಾರ್ನಿಯಾಕ ಅಸ್ಟ ರಕ್ತ ಸಪ್ಲಾಯ್ ಆಗದಿಲ್ಲಂತ

7. ಹಾರ್ಟಿನ ನಾಕ ಕವಾಟಗುಳ ತಕ್ಕಳ್ಳದು ಮತ್ತ ಮುಚಿಗೆಳ್ಳದ್ರಿಂದ ಡವಾಡವಾ ಅಂತ ಸಪ್ಪಳ ಬರತತಿ

8. ಹಾರ್ಟು ಬಿಡುಗಡೆ ಮಾಡ ಶಕ್ತಿ 1-5 ವ್ಯಾಟ ಇರ್ತತಿ. 80 ವರ್ಷದೊಳಗ ಎವರೇಜ್ 2.5 ಗೀಗಾಔಲ ಶಕ್ತಿ ಉತ್ಪಾದನಾ ಮಾಡತತಿ, ಅಂದರ ಇದ 277kWh ಎಲೆಕ್ಟ್ರಿಸಿಟಿಗೆ ಸಮಾ ಅಂತ!

9. ತಾಯಿ ಹೊಟ್ಟ್ಯಾಗ ನಾಕ ವಾರದ ಮಗು ಆಗಿ ಇದ್ದಾಗಿಂದ ಹಾರ್ಟಿನ ಬಡತಾ ಸ್ಟಾರ್ಟ್ ಆಕ್ಕತಿ

10. ಗಂಡಸೂರ ಹಾರ್ಟಗಿಂತಾ ಹೆಂಗಸೂರ ಹಾರ್ಟ ಹೆಚಿಗಿ ಹೊಡಕಂತತಿ. ಗಂಡಸೂರದು ನಿಮಿಷಕ್ಕ 70 ಸಲಾ, ಹೆಂಗಸೂರದು 78 ಸಲಾ.

11. ನಾವ ನಿದ್ದಿ ಮಾಡಾಕತ್ತ್ಯಾಗ ಹಾರ್ಟಿನಿಂದ ಶ್ವಾಸಕೋಶಕ್ಕ ರಕ್ತ ಹೋಗಿ ಬರಾಕ ತಗಳ್ಳ ಟಾಯಮು 6 ಸೆಕೆಂಡು, ಮೆದಳು ಮತ್ತ ಬೆನ್ನಿನ ಭಾಗಕ್ಕ ಹೋಗಿ ಬರಾಕ 8 ಸೆಕೆಂಡು ಬೇಕಾಕ್ಕತಿ. ಕಾಲಿನ ಬಟ್ಟಿನ ತಂಕಾ ಹೋಗಿ ಬರಾಕ 16 ಸೆಕೆಂಡು ಸಾಕು.

ಹಾರ್ಟು ಅರಾಮಾಗಿ ಇರಬೇಕು ಅಂದರ…. ಪಾಲೀಸ ಮಾಡದ ಇರೋ ಅಂತಾ ಅಕ್ಕಿ, ಸಂಸ್ಕರಣಾ ಮಾಡದ ಇರೋ ಅಂತಾ ಆಹಾರ ತಿನ್ನದ ಛೊಲೋ. ಡೇಲಿ ವ್ಯಾಯಾಮ, ಯೋಗಾಸನ, ಧ್ಯಾನ, ಪ್ರಾಣಾಯಾಮ ಮಾಡದು ಹಾರ್ಟಿನ ಆರೋಗ್ಯಕ್ಕ ಛೊಲೋ. ವಿಟಾಮಿನ್ ಡಿ ಕೊರತಿ ಆಗದಂಗ ನೋಡಿಕೆರ್ರಿ. ನಿಮ್ಮ ಆಹಾರದಾಗ ಒಮೆಗಾ 3 ಫ್ಯಾಟಗುಳ ಹೆಚಿಗಿ ಇದ್ದರ ಯಾವ ಹಾರ್ಟಿನ ರೋಗಾನೂ ಹಂತೇಲೆ ಬರಂಗಿಲ್ಲ ಅನ್ನಾಕತ್ತ್ಯಾರ ಹಾರ್ಟಿನ ಡಾಕ್ಟರುಗುಳು.