1. ಸಂಖ್ಯೆಗಳು ಮೊದಲುಗೊಂಡಿದ್ದು ಭಾರತದಲ್ಲೇ

ಮೊದಲು ಯೂರೋಪ್ ಕಡೆಯೆಲ್ಲಾ ತುಂಬಾ ಕಷ್ಟವಾದ್ ರೋಮನ್ ನಂಬರ್ ಬಳಸ್ತಿದ್ರಂತೆ. ಅರಬರು ಇಂಡಿಯಾದಿಂದ ಕಲತ್ಕೊಂಡು ಹೋಗಿ ಯೂರೋಪಲ್ಲಿ ಹೊಸ ನಂಬರುಗಳನ್ನು ಬರೆಯೋದು ಕಲಿಸಿದರಂತೆ!

PostIT1.jpglaughingkidslearn

2. ಗಟ್ಟಿಯಾದ ಸ್ಟೀಲು

ಇಂಡಿಯಾದಲ್ಲಿ ಎಷ್ಟು ಚನ್ನಾಗಿರೋ ಸ್ಟೀಲ್ ಮಾಡ್ತಿದ್ರಂತೆ ಅಂದ್ರೆ ಪೋರಸ್ ಅನ್ನೋ ರಾಜನಿಗೆ ಅಲೆಕ್ಸಾಂಡರ್ ಹೋಗಿ ನಮ್ ಸ್ಟೀಲ್ ತೋರ್ಸಿ "ನಿಂಗೆ ಚಿನ್ನಬೆಳ್ಳಿ ಬೇಕೋ, ಈ ಸ್ಟೀಲ್ ಬೇಕೋ?’ ಅಂತ ಕೇಳಿದ್ರೆ, ಅವ್ನು ಸ್ಟೀಲ್ ಬೇಕು ಅಂದ್ನಂತೆ! ಮೊದಲ್ನೇ ಸಲ ಭಾರತದ ವುಟ್ಜ್ ಸ್ಟೀಲ್ ನೋಡ್ದಾಗ… ಗ್ರೀಕರು, ಪರ್ಶಿಯಾದೋರು, ಅರೀಬಿಯಾದೋರು, ರೋಮನ್ಸು ಎಲ್ಲಾರು ಸುಸ್ತಂತೆ!

ph-1.jpgoriental-arms

3. ತತ್ವಶಾಸ್ತ್ರ

ನಮ್ ವೇದಗಳಲ್ಲಿ ಹೇಳಿರೋ ಎಷ್ಟೋ ಫಿಲಾಸಫಿಗಳಿಂದ ಗ್ರೀಕ್ಸು ರೋಮನ್ಸು ಐಡಿಯಾಗಳನ್ನ ತೊಗೊಂಡಿದಾರಂತೆ. ಎಷ್ಟೋ ಜನ ತಕ್ಷಶಿಲಾ ಮತ್ತೆ ನಳಂದಾ ಯೂನಿವರ್ಸಿಟೀಲಿ ಬಂದು ಕಲ್ತಿದಾರಂತೆ.

puranas.gifharekrsna

4. ಹತ್ತಿ ಬಟ್ಟೆ

ಗೀಕ್ಸು ಅಷ್ಟೆಲ್ಲಾ ಗೊತ್ತು ಅಂತಾರಲ್ಲ, ಔರ್ಗೆ ಹತ್ತೀಲಿ ಬಟ್ಟೆ ಮಾಡೋ ಬಗ್ಗೆ ಗೊತ್ತಾಗಿದ್ದೇ ಇಂಡಿಯಾದಿಂದ ಅಂತೆ! ಅಲೆಕ್ಸಾಂಡರ್ ಯುದ್ಧಗಳನ್ನ ಮಾಡಿದ್ನಲ್ಲಾ, ಆವಾಗ್ಲೆ ಔರಿಗೆಲ್ಲಾ ಇಂಡಿಯಾದಲ್ಲಿ ಮಾಡಿದ್ ಬಟ್ಟೆಗಳು ಮೊದಲ್ನೇಸಾರಿ ಹಾಕ್ಕೊಳಕ್ ಸಿಕ್ಕಿದ್ದಂತೆ.  ಅದಕ್ ಮುಂಚೆ ಎಲ್ಲಾರೂ ಚರ್ಮದ್ ಬಟ್ಟೆನೇ ಹಾಕ್ಕೊತಿದ್ರಂತೆ!

9.jpgdsource

5. ಪ್ರಜಾ ಪ್ರಭುತ್ವ ವ್ಯವಸ್ಥೆ

ಅಥೆನ್ಸ್ ಅನ್ನೋ ದೇಶದಲ್ಲೇ ಮೊದಲು ಡೆಮಾಕ್ರಸಿ ಬಂದಿದ್ದು ಅಂತಾರಲ್ಲ, ಅದು ಸುಳ್ಳಂತೆ! ಇಂಡಿಯಾದಲ್ಲಿ ಅದಕ್ಕೂ ಮೊದಲಿಂದಾನೇ ಗಣ-ಸಂಘ, ಗಣ-ರಾಜ್ಯ ಎಲ್ಲಾ ಇತ್ತಂತೆ! 

village2.jpgharekrsna

6. ಚಂದ್ರನ ನೆಲದ ಮೇಲೆ ನೀರಿದೆ ಅಂತ ಕಂಡು ಹಿಡಿದಿದ್ದು

ಇಸ್ರೋದೋರು 2008-09 ರಲ್ಲಿ ಚಂದ್ರಯಾನ ಅಂತ ಒಂದು ಸ್ಯಾಟಲೈಟ್ ಬಿಟ್ರಲ್ಲ, ಅದ್ರಿಂದಾನೆ ಚಂದ್ರನ್ ಮೇಲೆ ನೀರಿದೆ ಅಂತ ಗೊತ್ತಾಗಿದ್ದಂತೆ!

chandrayaan1.jpgspaceflightnow

7. ಐನ್‍ಸ್ಟೈನರ ಕ್ವಾಂಟಮ್ ಸ್ಟಾಟಿಸ್‍ಟಿಕ್ಸ್

ಐನ್‍ಸ್ಟೈನ್ ಮತ್ತೆ ಬೇರೆ ಬೇರೆ ಜರ್ಮನ್ ಸೈನ್‍ಟಿಸ್ಟುಗಳು ಕೂಡಾ ನಮ್ ಉಪನಿಷತ್‍ಗಳನ್ನ ಓದಿದ್ರಂತೆ! ನ್ಯೂಕ್ಲಿಯಾರ್ ಟೆಕ್ನಾಲಜಿ, ಸ್ಪೇಸ್ ರಾಕೆಟ್ ಇದೆಲ್ಲಾ ಮಾಡಕ್ಕೆ ನಮ್ ಹಳೇ ಉಪನಿಷತ್ತಿಂದ ಐಡಿಯಾ ತಗೊಂಡಿದ್ರಂತೆ!

182e8b6.jpglicdn

8. ರೇಡಿಯೋ/ ದೂರವಾಣಿ

ನಾವೆಲ್ಲಾ ಓದ್ಬೇಕಾದ್ರೆ ರೇಡಿಯೋ ಕಂಡಿಡ್‍ದಿದ್ದು ಮಾರ್ಕೋನಿ ಅಂತ ಹೋಳ್ಕೊಡ್ತಿದ್ರಲ್ಲ, ಇಲ್ವಂತೆ. ಮಾರ್ಕೋನಿಗಿಂತ 2 ವರ್ಷ ಮುಂಚೆನೇ ನಮ್ ಜಗದೀಶ್ ಚಂದ್ರ ಬೋಸ್ ಅವ್ರು ರೇಡಿಯೋ ಮಾಡ್ ತೋರ್ಸಿದ್ರಂತೆ. ಈಗೀಗ ಗೊತ್ತಾಗಿರೋದು ಇದರ ಬಗ್ಗೆ.

radio.jpgcoolcleveland

9. ಸೊನ್ನೆ

ನೀವು ಎಕ್ಸಾಮಲ್ಲಿ ಸೊನ್ನೆ ತೊಗೊಂದ್ರೆ ಫ಼ೇಲು. ಆದ್ರೆ ಇವತ್ತು ಸೈನ್ಸ್ ಇಷ್ಟೊಂದು ಪಾಸ್ ಆಗಿದೆ ಅಂದ್ರೆ ಅದಕ್ ಕಾರಣ ಸೊನ್ನೆನೇ! ಹೂ.. ಸೊನ್ನೆ ಇಲ್ದೇ ಹೋಗಿದ್ದಿದ್ರೆ, ವಿಗ್ನಾನ ಇಷ್ಟು ಮುಂದ್‍ವರೆಯಕ್ ಆಗ್ತಾನೆ ಇರ್ಲಿಲ್ವಂತೆ! ಜಗತ್ತಿಗೆ ಈ ಸೊನ್ನೇನ ಕೊಟ್ಟಿದ್ದೇ ಭಾರತವಂತೆ!

zero_hour_cloc_450.jpgparliamentstreet

10. ನೀರು ಮತ್ತು ಚರಂಡಿ ವ್ಯವಸ್ಥೆ

ನಿಮಿಗೊಂದು ಶಾಕಿಂಗ್ ನೂಸ್ ಗೊತ್ತಾ? ಟಾಯ್ಲೆಟ್ಟಲಿ ಫ಼್ಲಶ್ ಮಾಡಿದ್ರೆ ನೀರು ಬರೋ ಸಿಸ್ಟಮ್ ಮೊದಲು ಯಾವಾಗ್ ಗೊತ್ತಾ ಮಾಡಿದ್ದು? 3000 ವರ್ಷದ್ ಹಿಂದೆ! ನೀರಿನ್ ಪೈಪು ಹಾಕೋದು, ಚರಂಡಿ ವ್ಯವಸ್ಥೆ ಮಾಡೋದು ಇದ್ರಲ್ಲೆಲ್ಲಾ ಇಂಡಿಯಾದೋರು ಮೊದಲಿಂದ ಮುಂದಿದ್ರಂತೆ. 

harappan_water_storageq.pngvaak-india

11. ಔಷಧಿ

ಆಯುರ್ವೇದದಲ್ಲಿ ಮೈಯ್ಯಲ್ಲೆಲ್ಲಾ ಇರೋ ನರ, ಮೂಳೆ, ಮಾಂಸ, ಎಲ್ಲಾಥರ ಸಮಸ್ಯೆಗಳ ಬಗ್ಗೆನೂ ಇದೆಯಂತೆ! ನೇಚರಿಂದ ಸಿಗೋ ವಸ್ತುಗಳಿಂದಾನೆ ಎಷ್ಟೊಂದು ಔಷಧಿಗಳನ್ನ ಮಾಡಿದ್ದಾರಂತೆ. 

home-remedies-lifebunny.com-HD-22.jpglifebunny

12. ಶಸ್ತ್ರಚಿಕಿತ್ಸೆ

ಆಪರೇಶನ್ನುಗಳನ್ನ ನಮ್ಮಲ್ಲಿ ‍2000 ವರ್ಷಗಳ ಹಿಂದೆನೇ ಮಾಡ್ತಿದ್ರಂತೆ. ಬರೀ ಚಿಕ್ಕಾ ಪುಟ್ಟದ್ದಲ್ಲ… ಅನಸ್ತೇಶಿಯಾ ಕೊಡೋದು, ಪ್ಲಾಸ್ಟಿಕ್ ಸರ್ಜರಿ ಮಾಡೋದು ಎಲ್ಲಾ ಮಾಡ್ತಿದ್ರಂತೆ. ಅವಾಗ ನಮ್ ಹತ್ರ ಇದ್ದಿದ್ದ್ ಟೂಲ್ಗಳು ಈಗ್ಲೂ ಫ಼ಾರಿನ್ನೋರು ಇನ್ನೂ ಕಂಡ್‍ಹಿಡ್ಯಕ್ಕಾಗಿಲ್ವಂತೆ!

ancient-surgery-by-sushruta-pv-mathew.jpgfineartamerica

13. ಎಲ್ಲಾ ಧರ್ಮದೋರೂ ಒಟ್ಟಿಗೆ ಚನ್ನಾಗಿರೋದು

ಎಲ್ಲಾ ಧರ್ಮದೋರೂ ಒಟ್ಟಿಗೆ ಚನ್ನಾಗಿರೋದೂ ನಮ್ ಸ್ಪೆಶಾಲಿಟಿ ಅಲ್ವ? ಜಗತ್ತು ಈ ವಿಶಯದಲ್ಲಿ ನಮ್ಮಿಂದ ಕಲಿಯೋದು ತುಂಬಾನೇ ಇದೆ. 

zonew_1414241274_725x725.jpgindiatimes

14. ಅಹಿಂಸೆ

ಸತ್ಯ, ಅಹಿಂಸೆ ಅನ್ನೋದು ಪುರಾತನ ಕಾಲದಿಂದ ಬ್ರಿಟೀಶರನ್ನ್ ಎದುರಿಸೋವರೆಗೂ ಎಲ್ಲಾ ಕಡೆ ಕಂಡು ಬಂದಿರೋ ಗುಣ ನಮ್ದು. ಪುಣ್ಯಕೋಟಿ ಕಥೆ ಕೇಳ್ಕೊಂಡ್ ಬೆಳೆಯೋರು ನಾವು… ಅಲ್ವಾ?

1000509261001_2033463483001_Mahatma-Gandhi-A-Legacy-of-Peace.jpgbiography

15. ಗಂಡು ಹೆಣ್ಣನ್ನು ಸಮನಾಗಿ ಕಾಣುವುದು

ಹಿಂದೆಯೆಲ್ಲಾ ಸ್ವಯಂವರ ಮಾಡ್ತಿದ್ರಂತೆ. ಅಂದ್ರೆ, ಮದುವೆ ಆಗ್ಬೇಕಂತಿರೋ ರಾಜಕುಮಾರರು ಸಾಲಾಗ್ ನಿಂತಿರ್ತಾರೆ/ಕೂತಿರ್ತಾರೆ, ರಾಜಕುಮಾರಿ ಕೈಯ್ಯಲ್ಲಿ ಹಾರ ಇರುತ್ತೆ. ಅವಳಿಗೆ ಯಾರ್ ಇಷ್ಟಾನೋ ಅವರ ಕೊರಳಿಗೆ ಹಾರ ಹಾಕ್ಬೋದು. ಹೆಣ್ ಮಕ್ಳಿಗೆ ಇಷ್ಟೊಂದು ಸ್ವಾತಂತ್ರ ಇತ್ತಲ್ವಾ ನಮ್ಮಲ್ಲಿ?

Damayanti_Choosing_a_Husband_by_Warwick_Goble.jpgwikimedia

ನಮ್ಮ ಕೊಡುಗೆಗಳ ಬಗ್ಗೆ ತಿರುಗಿ ನೋಡಿದ್ರೆ, ಸಕ್ಕತ್ ಹೆಮ್ಮೆ ಆಗತ್ತೆ… ಅಲ್ವಾ?