ಇನ್ನೊಂದು ಸಲಿ ಬೀಳಲ್ಲ

ಒಬ್ಬ ಕನ್ನಡಿಗ ತನ್ನ ತಮಿಳ ಫ್ರೆಂಡ್ ಜೊತೆ ಸಾಯಂಕಾಲ ಟೀವೀಲಿ ನ್ಯೂಸ್ ನೋಡ್ತಾ ಇದ್ದನಂತೆ.

ನ್ಯೂಸಲ್ಲಿ ಒಬ್ಬ ಹೆಂಗಸು 6ನೇ ಮಾಡಿಯಿಂದ ‘ಬಿದ್ದು ಸಾಯ್ತೀನಿ, ಬಿದ್ದು ಸಾಯ್ತೀನಿ’ ಅಂತ ಕೂಗ್ತಾ ಇದ್ದಳಂತೆ.

ಕನ್ನಡಿಗ ‘ಅವಳು ಬಿದ್ದೇ ಬೀಳ್ತಾಳೆ, ಚಾಲೆಂಜಾ?’ ಅಂದನಂತೆ.

‘ಚಾಲೆಂಜ್! ಅವಳು ಬೀಳಕ್ಕೆ ಚಾನ್ಸೇ ಇಲ್ಲ’ ಅಂದನಂತೆ ತಮಿಳ.

ಇಬ್ಬರೂ ಚಾಲೆಂಜ್ ಕಟ್ಟಿದರಂತೆ. ಅವಳು ಬಿದ್ದಳಂತೆ.

ಆಗ ಕನ್ನಡಿಗ ‘ನಾನು ನಿಂಗೆ ಮೋಸ ಮಾಡಿದೆ, ಸಾರಿ. ಮಧ್ಯಾಹ್ನದ ನ್ಯೂಸಲ್ಲಿ ನಾನು ಔಳು ಬೀಳೋದು ನೋಡಿದ್ದೆ’ ಅಂತ ಗಾಂಧಿಗಿರಿ ಮೆರೆದನಂತೆ.

ಅದಕ್ಕೆ ತಮಿಳ ಏನು ಹೇಳಿದ ಗೊತ್ತಾ? ‘ನಾನೂ ಮಧ್ಯಾಹ್ನ ನೋಡಿದ್ದೆ. ಆದ್ರೆ ಅವಳು ಇನ್ನೊಂದ್ ಸಲಿ ಬೀಳೋಷ್ಟು ಪೆದ್ದಿ ಅನ್ಕೊಂಡಿರಲಿಲ್ಲ.’

ಕನ್ನಡಿಗ ಸುಸ್ತು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: