ಒಬ್ಬ ತಮಿಳ ಕಾಡೊಳಗೆ ನಡ್ಕೊಂಡ್ ಹೋಗ್ತಾ ಇದ್ನಂತೆ.

ನಡೆದು ನಡೆದು ಸುಸ್ತಾಗಿ ಒಂದು ಕಡೆ ಕೂತ್ಕೊಂಡನಂತೆ. ಅವನ ಲಕ್ ನೋಡಿ – ಅಲ್ಲಿ ಒಂದು ಶಿಲಾಬಾಲಿಕೆ ಇತ್ತಂತೆ. ಹತ್ತಿರ ಹೋದಾಗ ಒಳಗಿನ ಹೆಂಗಸು ಅಳಕ್ಕೆ ಶುರು ಮಾಡಿದಳಂತೆ.

ಇವನು ಅವಳನ್ನ ಮುಟ್ಟಿದೇಟಿಗೆ ಕಲ್ಲು ಮಾಯ ಆಗಿ ದೇವತೆ ಒಬ್ಬಳು ಹೊರಕ್ಕೆ ಬಂದು ‘ಧನ್ಯವಾದ ಮಾನವನೇ! ನಿನಗೆ ಎರಡು ವರ ಕೊಡ್ತೀನಿ, ಕೇಳು’ ಅಂದಳಂತೆ.

ತಮಿಳ ದಂಗು. ‘ಏನು ಬೇಕಾದರೂ ಕೊಡ್ತೀಯಾ?’ ಅಂದನಂತೆ.

‘ಹ ಹ ಹ! ಹೌದು!’

‘ತುಂಬಾ ಬಾಯಾರಿಕೆ ಆಗಿದೆ, ಒಂದು ಬಾಟ್ಲು ಕಾವೇರಿ ನೀರು ಸಿಕ್ಕರೆ ಸದ್ಯಕ್ಕೆ ಸಾಕು’ ಅಂದನಂತೆ.

‘ಅಷ್ಟೇ ತಾನೆ, ತಥಾಸ್ತು!’ ಅಂದು ಒಂದು ಬಾಟ್ಲು ಕೈಗೆ ಕೊಟ್ಟು ಹೇಳಿದಳಂತೆ: ‘ನೀನು ನನಗೆ ಮರುಜನ್ಮ ಕೊಟ್ಟಿರೋದ್ರಿಂದ ಈ ಬಾಟ್ಲು ಇಟ್ಕೋ. ಇದರಿಂದ ನೀನು ಎಷ್ಟು ಕುಡಿದರೂ ಮತ್ತೆ ಕಾವೇರಿ ನೀರು ಹುಟ್ತಾನೇ ಇರುತ್ತೆ.’

ತಮಿಳನಿಗೆ ನಂಬಕ್ಕೇ ಆಗಲಿಲ್ಲವಂತೆ. ಒಮ್ಮೆ ಕುಡಿದು ಪರೀಕ್ಷೆ ಮಾಡಿ ನೋಡಿದನಂತೆ. ಅವಳು ಹೇಳಿದಂಗೆ ಅದರಲ್ಲಿ ಕಾವೇರಿ ನೀರು ಖಾಲೀನೇ ಆಗಲಿಲ್ಲವಂತೆ.

‘ಸರಿ, ನಾನೀಗ ದೇವಲೋಕಕ್ಕೆ ಹೋಗಬೇಕು, ನಿನ್ನ ಎರಡನೇ ವರ ಕೇಳು’ ಅಂದಳಂತೆ ದೇವತೆ.

ಅದಕ್ಕೆ ತಮಿಳ ಒಂದು ನಿಮಿಷಾನೂ ಯೋಚನೆ ಮಾಡದೆ ಹೇಳಿಬಿಟ್ಟನಂತೆ: ‘ಇನ್ನೊಂದು ಇಂಥದ್ದೇ ಬಾಟ್ಲು ಕೊಟ್ಟುಬಿಡು’.