ಕನ್ನಡ ಒಂದು ವಿಶೇಷವಾದ ಭಾಷೆ. ಅಲ್ಲ, ನಮ್ಮದು ಅಂತ ಮಾತ್ರ ಹೇಳ್ತಾ ಇಲ್ಲ, ಅದರ ಸೊಗಡೇ ಬೇರೆ. ಉದಾಹರಣೆಗೆ ನಾವು ‘ಕೈ’ ಅನ್ನೋ ಪದವನ್ನ ಹೇಗೆಲ್ಲ ಬಳಸ್ತೀವಿ ನೋಡಿ… ಈ ಜಾಗದಲ್ಲೆಲ್ಲ ಇಂಗ್ಲಿಷಲ್ಲಿ ‘hand' ಅನ್ನೋ ಪದವನ್ನಾಗಲಿ ಬೇರೆ ಭಾಷೆಯಲ್ಲಿ ಕೈ ಅನ್ನೋ ಪದವನ್ನಾಗಲಿ ಬಳಸಕ್ಕೆ ಬರಲ್ಲ. ಅದು ಆಯಾ ಭಾಷೆಯಲ್ಲಿ ತಪ್ಪಾಗುತ್ತೆ. ಆದರೆ ನಮ್ಮ ಭಾಷೆಯ ಸೊಗಡು ನೋಡಿ:

1) ಅನ್ನ ಬಡಿಸಕ್ಕೆ ಕೈ ಜೊತೆಗೆ ನಮಗೆ ಅನ್ನದ ‘ಕೈ’ ಬೇಕು

ಮೂಲ

2) ರೈಲುಗಳಿಗೆ ಸಿಗ್ನಲ್ ಕೊಡೋ ಈ ಗುರುತು ನಮಗೆ ‘ಕೈ’ಮರ

ಮೂಲ

3) ದೋಸೆ ಗೀಸೆ ಮಾಡಕ್ಕೆ ನಾವು ಉಪಯೋಗಿಸೋದು ಮೊಗಚೋ ‘ಕೈ’

ಮೂಲ

4) ಬೀಗ ತೆಗೆಯಕ್ಕೆ ಬೀಗದ ‘ಕೈ’ ಇಲ್ಲದೆ ಹೋದರೆ ಹೇಗೆ?

ಮೂಲ

5) ಯಾವುದಾದರೂ ಕೆಲಸ ನಮಗೆ ಆಗತ್ತೆ ಅಥವಾ ಆಗಲ್ಲ ಅಂದ್ರೆ ಸಾಲದು, ಅದು ನಮ್ಮ ‘ಕೈ’ಯಲ್ಲಿ ಆಗಬೇಕು ಅಥವಾ ಆಗದೆ ಇರಬೇಕು

ಮೂಲ

6) ಒಂದು ಸರ್ಕಲ್ ಬರೆಯಕ್ಕೆ ನಮಗೆ ‘ಕೈ’ವಾರ ಬೇಕು

ಮೂಲ

7) ಪರ್ಸನಲ್ ಲೋನ್ ಅನ್ನೋದು ನಮ್ಮ ಸಂಸ್ಕೃತಿಯಲ್ಲಿ ‘ಕೈ’ಸಾಲ

ಮೂಲ

8) ಎಷ್ಟೋ ಸಲ ನಮ್ಮಲ್ಲಿ ಹೊಡಿಯಲ್ಲ, ‘ಕೈ’ಮಾಡ್ತಾರೆ

ಮೂಲ

9) ಇನ್ನು ಬರ್ತೀನಿ ಅಂತ, ಮದುವೆ ಮಾಡ್ಕೋತೀನಿ ಅಂತ… ಹೀಗೆ ಒಂದಲ್ಲ ಒಂದು ಮಾತು ಕೊಟ್ಟು ‘ಕೈ’ ಕೊಡೋದಂತೂ ಸರ್ವೇ ಸಾಮಾನ್ಯ

ಮೂಲ

10) ನಾವು ಆಗೊಲ್ಲ ಅಂತ ಹಾಗೇ ಬಿಡಲ್ಲ, ‘ಕೈ’ ಬಿಡ್ತೀವಿ

ಮೂಲ

11) ಪೋಲಿ ಹುಡುಗ್ರು ಹುಡುಗೀರ್ಗೆ ‘ಕೈ’ ಬಿಡೋದು ಕೇಳಿರ್ತೀರಿ

ಮೂಲ

12) ನಮ್ಮಲ್ಲಿ ತಲುಪಬೇಕಾಗಿದ್ದು ಸುಮ್ಮನೆ ತಲುಪಲ್ಲ, ‘ಕೈ’ ಸೇರುತ್ತೆ

ಮೂಲ

13) ನಾವು ದೇವರು ದೊಡ್ಡೋರು ಯಾರಾದರೂ ಸಿಕ್ಕಾಗ ‘ಕೈ’ ಮುಗೀತೀವಿ

ಮೂಲ

14) ನಮ್ಮಲ್ಲಿ ‘ಕೈ’ ಹಿಡಿದರೆ ಮುಗೀತು ಕತೆ — ಮದುವೆ ಅಂತಾನೇ ಅರ್ಥ

ಮೂಲ

15) ನಾವು ಕೆಲಸದಲ್ಲಿ ಒಂದೊಂದ್ಸಲ ಸುಮ್ಮನೆ ತೊಡಗಿಕೊಳಲ್ಲ, ಅದಕ್ಕೆ ‘ಕೈ’ ಹಾಕ್ತೀವಿ

ಮೂಲ

16) ಬರೀ ಬಾಯಲ್ಲಿ ಹೇಳಿದ್ದು ಸಾಕಾಗದೆ ಇದ್ದಾಗ ‘ಕೈ’ಸನ್ನೆ ಮಾಡ್ತೀವಿ

ಮೂಲ

17) ನಾವು ಒಂದೊಂದ್ಸಲ ಕೊಡಿ ಅಂತ ಬೇಡ್ಕೊಳಲ್ಲ, ‘ಕೈ’ ಚಾಚ್ತೀವಿ ಅಥವಾ ‘ಕೈ’ ಒಡ್ಡುತೀವಿ

ಮೂಲ

18) ನಾವು ಎಷ್ಟೇ ಪ್ರಯತ್ನ ಪಟ್ಟರೂ ಒಂದೊಂದ್ಸಲ ಪರಿಸ್ಥಿತಿ ‘ಕೈ’ಮೀರಿ ಹೋಗುತ್ತೆ

ಮೂಲ

19) ಹಾಗೇ ಒಂದೊಂದ್ಸಲ ಪರಿಸ್ಥಿತಿಯಿಂದ ‘ಕೈಕೈ’ ಹಿಸುಕಿಕೊಳೋ ಹಾಗಾಗುತ್ತೆ

ಮೂಲ

20) ಕೆಲಸಕ್ಕೆ ಯಾವ ಅಂಗಾಂಗ ಬೇಕಾದರೂ ಸರಿ, ಬೇರೆಯೋರ್ ಜೊತೆ ಕೆಲಸದಲ್ಲಿ ‘ಕೈ’ ಜೋಡಿಸದೆ ಬೇರೆ ದಾರಿ ಇಲ್ಲ

ಮೂಲ

21) ನಮಗೇನಾದರೂ ಸಕ್ಕತ್ ಸಿಟ್ಟು ಬಂದ್ರೆ ಒಂದ್ ‘ಕೈ’ ನೋಡ್ಕೋತೀವಿ

ಮೂಲ

22) ಒಂದೊಂದ್ಸಲ ಬೇರೆಯೋರ್ ಕೈಯಲ್ಲಿ ಮಾಡ್ಸಕ್ಕಾಗಲ್ಲ ಅಂತ ನಾವೇ ‘ಕೈ’ಯಾರೆ ಮಾಡಿಬಿಡ್ತೀವಿ

ಮೂಲ

23) ಮನೇಲೇ ತರ್ಕಾರಿ ಗಿರ್ಕಾರಿ ಬೆಳೆಯೋ ಜಾಗಕ್ಕೆ ನಾವು ‘ಕೈ’ತೋಟ ಅಂತೀವಿ

ಮೂಲ

ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!

ಹೊರಚಿತ್ರದ ಮೂಲ