ಮನುಷ್ಯಾ ಎಷ್ಟ ವಿಚಿತ್ರ ಅಂದರ ಅವ ಹಿಂಗ ಅದಾನ ಅಂತ ಇಲ್ಲಿವರೆಗೂ ಯಾರಿಂದಾನೂ ಹೇಳಾಕಾಗಿಲ್ಲ. ನಾವು ದಿನಾಲೂ ಮಕ್ಕೊಂತವಿ ಆದ್ರ ನಮ್ಮ ಮೆದುಳು ಮಕ್ಕೊಳಂಗಿಲ್ಲ. ನಮ್ಮನ್ನದು ಒಂದು ಸುಂದರವಾದ ಪ್ರಪಂಚಕ್ಕ ಕರಕೊಂಡ ಹೊಕ್ಕತಿ, ಅದು ಯಾವ್ದು ಅಂತ ಯೋಚನೆ ಮಾಡಾಕತ್ರಾ? ಅದೇ ರೀ…. ಕನಸು…! ರಾತ್ರಿ ಮಕ್ಕೊಂಡಾಗ ಬಿದ್ದ ಕನಸು ಮುಂಜಾನೆದ್ದ ಕೂಡ್ಲೆ ಮರ್ತೊಕ್ಕತಿ, ಆದ್ರ ಪೂರ್ತಿ ಮರ್ತಿರಂಗಿಲ್ಲ, ಅಲ್ಪ ಸ್ವಲ್ಪ ನೆನಪಿರ್ತತಿ. ನಿವೇನರ ಈ 12 ಥರದಾರ ಕನಸ ಕಂಡಿದ್ರ ಅದನ್ನ ಉದಾಸೀನ ಮಾಡ್ಬ್ಯಾಡ್ರಿ. ನಮ್ಮ ಗುಪ್ತ ಮನಸ್ಸು ನಮಗ ಬಿಳೋ ಕನಸಿನ ಮುಖಾಂತರ ಏನೇನೋ ಸೂಚನೆಗಳನ್ನ ನೀಡ್ತಿರ್ತತಿ. ಅದ ಏನು ಅಂತ ನೀವು ತಿಳ್ಕೊಬೇಕಾ? ಇಲ್ಲಿದೆ ಓದಿ……..

1. ಡಬ್ಬಿ = ರಹಸ್ಯಗಳಿರ್ತಾವು

ನಿಮ್ಮ ಕನಸಿನ್ಯಾಗ ಡಬ್ಬಿ ಬರಾಕತ್ತಿದ್ವಂದ್ರ ನೀವೇನೋ ಒಂದ ಮುಖ್ಯಾವಾದ ವಿಷಯಾನ ಮುಚ್ಚಿಟ್ಟಿರಿ ಅಂತ, ಇಲ್ಲಾ ಬ್ಯಾರೆ ಯಾರೋ ನಿಮ್ಮಿಂದ ವಿಷಯಾನ ಮುಚ್ಚಿಡಾಕತ್ತಾರಾ ಅನ್ನೊ ಸಂಶಯ ನಿಮಗ. ಒಂದ ವೇಳೆ ನೀವೆನರ ಕನಸಿನ್ಯಾಗ ಡಬ್ಬಿ ಮುಚ್ಚಳಾ ತಗದ್ರ, ನಿಮ್ಮೊಳಗಿನ ಗುಟ್ಟನ್ನ ಹೇಳ್ಕೊಳ್ಳಾಕ ನೀವು ತಯಾರಾಗಿದಿರಿ ಅಂತ ಅರ್ಥ. ಹಂಗ ಡಬ್ಬಿ ಮುಚ್ಚಳ ತಗದ ಮ್ಯಾಲೆ ಅದು ಖಾಲಿ ಡಬ್ಬ್ಯಾಗಿದ್ರ ನಿಮ್ಮ ಜೀವನದಾಗ ನೀವು ಬೆಸರ, ನಿರಾಸೆ ಅನುಭವಿಸಾಕತ್ತಿರಿ ಅಂಥ.

2. ಬೀಳ ಕನಸು = ಪರಿಸ್ಥಿತಿ ನಮ್ಮ ಕೈತಪ್ಪಿ ಹೊಂಟತಿ

ನಿಮಗ ಸೋಲಾಕತ್ತನಿ ಅಂತ ಭಯಾ ಆಗಾಕತ್ತಿದ್ರ, ನಿಮ್ಮ ಜೀವನದಾಗ ಯಾವುದಾದರೂ ಕಷ್ಟ ಎದುರಾಕ್ಕತಿ ಅಂತ ಅನಸಿದಾಗ ಹಿಂಗ ಕನಸು ಬೀಳ್ತಾವು. ಹಗಲೆಲ್ಲಾ ಇದ ಕನಸು ಬಿಳಾಕತ್ತಿದ್ರ ತಲಿ ಕೆಡಿಸ್ಕೊಬ್ಯಾಡ್ರಿ. ದಿನಾಲೂ ಸ್ವಲ್ಪ ಹೊತ್ತು ಯೋಗ, ಧ್ಯಾನ ಮಾಡಾಕ ಶುರು ಮಾಡ್ರಿ. ಹಿಂಗ ಮಾಡೋದ್ರಿಂದ ಮನಸ್ಸಿಗೂ, ಆರೋಗ್ಯಕ್ಕೂ ಒಳ್ಳೆದಾಕ್ಕತಿ.

3.  ಕಾಮಿ = ಹೆಣ್ಣು ಹತ್ರಾಕ್ಕಾಳ

ಕನಸಿನ್ಯಾಗ ಕಾಮಿ ಬಂದ್ರ ಚೊಲೋ ಅಂತ. ಯಾವುದೋ ಹೆಣ್ಣಿನ ಜತಿಗೆ ನಿಮ್ಮ ಮನಸ್ಸು ಕೋಡ್ಕೊಂತತಿ ಅನ್ನೋ ಸೂಚನೆಯನ್ನ ನೀಡ್ತತಿ. ಈ ಕನಸು ನಿಮ್ಮೊಳಗಿರೋ ವಿಶ್ವಾಸಾನ ಜಾಸ್ತಿ ಮಾಡ್ತತಿ. ಇದು ನಿಮಗ ಆಧ್ಯಾತ್ಮದ ಕಡೆಗೆ ಒಲವು ಬಂದತತಿ, ನಿಮಗೊಂತರಾ ಜ್ಞಾನೋದಯವಾಗಾಕತ್ತತಿ ಅನ್ನೋ ಭಾವನೆಯನ್ನ ಈ ಕನಸು ಹೇಳಿಕೊಡ್ತತಿ.

4. ಹಲ್ಲು = ಆರೋಗ್ಯಕ್ಕಿಂತ ಸೌಂಧರ್ಯಕ್ಕ ಹೆಚ್ಚಿನ ಪ್ರಾಧಾನ್ಯತೆ ಕೊಡ್ತಿರಿ

ಕನಸಿನ್ಯಾಗ ಹಲ್ಲ ಕಾಣ್ಸೋದು ಭಾಳ ವಿಚಿತ್ರ ಅನಸ್ತೈತಲ್ಲಾ? ಈ ಕನಸು ನಿಮಗ ವಯಸ್ಸಾಗಾಕತ್ತತಿ, ನೀವು ಸಾಯೋ ದಿನ ಹತ್ರಾಗಾಕತ್ತತಿ ಅನ್ನೋ ಹೆದರಿಕಿ ನಿಮ್ಮೊಳಗೈತಿ ಅಂತ ಹೇಳ್ತತಿ. ದಿನಾಲೂ ಸಂತೋಷವಾಗಿ, ಪೂರ್ತಿಯಾಗಿ, ಒಳ್ಳೆಯವರಾಗಿ ಕಾಲಾ ಕಳೀರಿ ಆವಾಗ ಇಂತಾ ಕನಸ ಬೀಳೊದು ಕಡಿಮಿಯಾಕ್ಕಾವು. ಈ ಕನಸು ನೀವು ನಿಮ್ಮ ಆರೋಗ್ಯಕ್ಕಿಂತ ನಿಮ್ಮ ಸೌಂಧರ್ಯಕ್ಕ ಜಾಸ್ತಿ ತಲಿಕೆಡಿಸ್ಕೊಳ್ಳೊ ವ್ಯಕ್ತಿ ಅನ್ನೊದನ್ನ ತಿಳಿಸ್ತೈತಿ.

5. ಇರುವೆ = ಕೂಡಿ ದುಡ್ಯಾದು ನಿಮಗ ಇಷ್ಟಾ

ಕನಸಿನ್ಯಾಗ ಇರಬಿ ಬಂದ್ರ ನಿಮಗ ಕಿರಿಕಿರಿ ಆಗಾಕತ್ತತಿ ಅಂತ ತಿಳಿಸಿ ಕೊಡ್ತತಿ. ಅಷ್ಟ ಅಲ್ಲ ನಿಮಗ ಬರೋ ತೊಂದ್ರೆಗಳನ್ನ ನೀವು ಭಾಳ ಜಲ್ದಿ ಸರಿಪಡಿಸ್ಕೊಬೇಕು, ದೊಡ್ಡದಾಗಾಕ ಬಿಡ್ಬಾರ್ದು ಅನ್ನೊ ಸೂಚನೆಯನ್ನ ನಿಮ್ಮ ಮನಸ್ಸು ನಿಮಗ ಕೊಡ್ತಿರ್ತೈತಿ. ಸ್ನೇಹ ಸಂಬಂಧಕ್ಕ ಹೆಚ್ಚಿಗೆ ಒತ್ತ ಕೊಡ್ತಿರಿ ಅನ್ನೊದನ್ನ ಈ ಕನಸು ಹೇಳ್ತತಿ.

6. ಕೂದಲಾ = ನಿಮಗ ಬಿಡುಗಡೆ (ಸ್ವಾತಂತ್ರ್ಯ) ಬೇಕಾಗಿರ್ತೈತಿ.

ಕನಸಿನ್ಯಾಗ ಕೂದಲಾ ಕಂಡತಂದ್ರ ನಿಮ್ಮ ದೇಹಾ ಅದನ್ನ ಬಯಸಾಕತ್ತತಿ ಅಂತ ಅರ್ಥ. ನೀವು ಒಬ್ಬ ಮನುಷ್ಯನಿಗೆ ಎಷ್ಟ ಮುಖ್ಯ (ದೈಹಿಕವಾಗಿ ಮತ್ತ ಮಾನಸಿಕವಾಗಿ) ಅನ್ನೊದನ್ನ ತಿಳ್ಕೊಳ್ಳೊದು ನಿಮ್ಮ ಆಸೆ ಆಗಿರ್ತೈತಿ. ನಿಮಗ ಕನಸಿನ್ಯಾಗ ಉದ್ದನ ಕೂದಲಾ ಬಿಟ್ಟಿರಂಗ ಕಾಣತಂದ್ರ ನಿಮಗ ಎಲ್ಲಾ ತೊಂದ್ರೆಗಳನ್ನು ಪಾರಾಗಿ ಹೋಗ್ಬೇಕು ಸ್ವತಂತ್ರವಾಗಿರ್ಬೇಕು ಅಂತ ನಿಮ್ಮ ಮನಸಿನ್ಯಾಗಿರ್ತೈತಿ.

7. ನೀರು = ದೊಡ್ಡ ಮಟ್ಟದ ಸಾಧನೆಯ ಗುರಿಯನ್ನ ಹೊಂದಿರ್ತೀರಿ.

ನೀವು ಗಂಡಾಂತರಗಳ ಬಗ್ಗೆ, ಕಷ್ಟಗಳ ಬಗ್ಗೆ ಆಗ್ಲೀ ತಲಿಕೆಡಿಸ್ಕೊಳ್ಲಂಗಿಲ್ಲ. ಎಂಥಾ ತೋಂದ್ರೆ ಎದುರಾದ್ರೂ ನೀವು ಅದನ್ನ ಎದರಸಾಕ ತಯಾರಾಗಿರ್ತೀರಿ ಅಂತ ನಿಮ್ಮ ಒಳಮನಸ್ಸು ಈ ಕನಸಿನ ಮುಖಾಂತರ ಹೇಳ್ತಿರ್ತೈತಿ. ನಿಮಗ ಬೇಕಾಗಿದ್ದನ್ನ ನೀವು ಪಡ್ಕೊಬೇಕಂದ್ರ ನೀವದಕ್ಕ ಪ್ರಯತ್ನಾ ಪಡಲೇಬೇಕು. ಹಂಗ ಯಾವ ತೊಂದ್ರೆ ತಾಪತ್ರಯಗಳಿಲ್ಲದೆ ನೆಮ್ಮದಿಯಾಗಿ ದಿನವನ್ನ ಕಳಿಬೇಕು ಅನ್ನೋದು ನಿಮ್ಮ ಇಷ್ಟಾ ಆಗಿರ್ತೈತಿ ಅನ್ನೊದು ಈ ಕನಸು ಹೇಳ್ತೈತಿ.

8. ಹಾರ್ಯಾಡೋ ಕನಸು = ತೊಂದ್ರೆಗಳು ದೂರಾಯ್ತು

ನೀವು ತೋಗೊಬೇಕಿದ್ದ ದೊಡ್ಡ ತಿರ್ಮಾನಾನ ಈಗ ನೀವು ತಗೊಬಹುದು. ಎಲ್ಲಾ ತೊಂದ್ರೆಗಳು ದೂರಾಗಿ ನಿಮ್ಮ ಮನಸ್ಸು ಹಳಾರಾಗಿರ್ತೈತಿ ಅನ್ನೊ ಸಂದೇಶಾನ ಇದು ಕೊಡ್ತೈತಿ. ಸಮಸ್ಯೆಗಳನ್ನ ಎದುರಿಸದೇ ದೂರಾ ಹೊಕ್ಕಾವು ಅಂತಲ್ಲ, ಸಮಸ್ಯೆಗಳನ್ನ ದಾಟಿ ಮ್ಯಾಲ ಹಾರೋದು ಅಂತ. ಸರಿಯಾದ ಟೈಮನ್ಯಾಗ ಸರಿಯಾದ ನಿರ್ಧಾರ ಮಾಡಿ ನೀವು ನಿಮ್ಮ ಸಮಸ್ಯೆಗಳಿಂದ ದೂರಾಗಿರ್ತೀರಿ.

9. ರೋಡ್  = ಸರಳತೆ ಕಲಿಬೇಕು

ಸುಮಾರು ರೋಡ್ ಕಾಣಿಸ್ಕೊಂಡ್ರ  ಜೀವನ ಕಷ್ಟಾಗೈತಿ ಅದನ್ನ ಜಲ್ದಿ ಎದುರಿಸಬೇಕು ಅಂತ.  ನೀವು ಉಗಿರಿನ್ಯಾಗ ಹೋಗೊದಕ್ಕ ಕೊಡಲಿ ತಗೋಳೊದನ್ನ ಬಿಡ್ಬೇಕು. ವಿಧಿ, ಹಣೆಬರಹ ಇಂತಾವುಗಳ ಮ್ಯಾಲೆ ಭಾಲ ನಂಬಿಕೆ ಇರೋರು ಚಿಂತಿ ಮಾಡ್ಬ್ಯಾಡ್ರಿ, ನಿಮ್ಮ ಜೀವನದ ಪ್ರತಿ ಕ್ಷಣಾನೂ ಸಂತೋಷದಿಂದ ಹೊಸದನ್ನ ಕಲ್ಕೊಂತ ಇರ್ರಿ.

10. ಮಣ್ಣು = ಸಮಸ್ಯೆಯಗೆ ಒಳಪಟ್ಟಿರಿ

ಇಷ್ಟ ಅಲ್ಲ. ನೀವೆಲ್ಲೆ ಸಿಕ್ಕಂಡಿರಿ ಅಲ್ಲಿಂದ ಬೇಗಾ ಹೋಗಿ ಹೋಸಾದೇನರ ಆರಂಭಿಸಿ ಅನ್ನೊ ಸೂಚನೆಯನ್ನ ನಿಮ್ಮ ಮನಸ್ಸು ನಿಮಗ ಕೋಡೋ ಸಂದೇಶ. ನಿಮ್ಮ ಕೆಲಸಗಳ್ಯಾವು ಸರಿಯಾಗಿ ಪೂರ್ತಿಯಾಗಿರ್ದೆ ಇರಬದು ಅದಕ್ಕ ನಿಮಗ ಎಲ್ಲೆ ಸಿಕ್ಕಂಡನಿ ಅನ್ನಂತ ಪರದಾಟ ಶುರುವಾಗೇತಿ ಅಂತ ಇದು ಹೇಳ್ತೈತಿ.

11. ಹಸಿರು ಬಣ್ಣ =  ಸಂತೋಷದಿಂದ ಇದ್ದಿರಿ

ನಿಮ್ಮ ಸ್ನೇಹಿತರು, ಸಂಬಂಧಿಕರು ಎಲ್ಲಾರು ನಿಮ್ಮನ್ನ ಭಾಳ ಇಷ್ಟ ಪಡ್ತಾರ ನೀವು ಸಹ ಅವರನ್ನ ಅಷ್ಟ ಇಷ್ಟ ಪಡ್ತೀರ್ತಿರಿ. ನೀವು ಇಂತಾದ್ರಾಗ ಭಾಳ ಖುಷಿ ಆಗಿರ್ತೀರಿ. ನೀವು ನಿಮ್ಮ ಮನಸ್ಸಿಗೆ ಇಷ್ಟ ಆಗ ಕೆಲಸಾನ ದಿನಾಲೂ ಮಾಡಿ ನೀವು ಒಳ್ಳೆಯ ಕೆಲಸಗಾರ, ಗೆಳೆಯ, ಪ್ರೇಮಿ ಎಲ್ಲಾ ಆಗಿರ್ತೀರ ಅಂತ ನಿಮ್ಮ ಮನಸು ನಿಮಗ ಹೇಳ ಮಾತಿದು.

12. ಜನಗಳ ಮುಂದ ಬೆತ್ತಲಾಗಿ ನಿತ್ಕೊಂಡಿರೋ ಕನಸು = ಜನ ಏನಂದ್ಕೊತಾರೆ ಅನ್ನೋ ಹೆದರಿಕೆ

ಈ ಹೆದರಿಕಿ ಹೋಗ್ಬೇಕಾದ್ರ ಭಾಳ ದಿನ ಬೇಕಾಕ್ಕೈತಿ. ಇದಕ್ಕ ನೀವು ಅಷ್ಟ ಶ್ರಮ ಪಡ್ಬೇಕಾಕ್ಕತಿ. ಬ್ಯಾರೇರ ಕಡೆ ನೀವು ನಿಮ್ಮ ಬಲಹೀನತೆಯನ್ನ ಹೇಳ್ಕೊಂಡಾಗ ಅಥವಾ ಬ್ಯಾರೇರಿಗೆ ನಿಮ್ಮ ದೌರ್ಬಲ್ಯದ ಬಗ್ಗೆ ಗೊತ್ತಾದ್ರ ಅಷ್ಟ ನಿಮ್ಮ ಋಣಾತ್ಮಕ ಭಾವನೆ ಹಾಗೂ ಯಾರ ಏನ ಅನ್ಕೋಂತಾರೋ ಅನ್ನಂತ ಹೆದರಿಕಿ ಹೋಕ್ಕತಿ. ನೀಮಗ ನೀವೇನು ಅಂತ ತಿಳ್ಕೊಂಡು ನಿಮ್ಮನ್ನ ನೀವು ಒಪ್ಪಕೊರ್ರಿ. ನೀವು ಇವತ್ತು ಬೆಳದಿರೊ ಮಟ್ಟಕ್ಕ ಹೆಮ್ಮೆ ಪಡ್ರಿ. ನಿಮ್ಮನ್ನ ನೀವು ಪ್ರೀತಿಸಿ ಅಂತ ನಿಮ್ಮ ಒಳ ಮನಸ್ಸು ನಿಮಗೆ ಸಂದೇಶ ಕೊಡ್ತೈತಿ.