ನಾವಂತೂ ಕಂಡು ಎಷ್ಟೋ ವರ್ಷ ಆಗೋಯ್ತು… ಈಗಿನ ತಲೆಮಾರಿನೋರು ಪ್ರಕೃತಿಯ ಈ ಬೆರಗನ್ನ ಹೆಚ್ಚು ನೋಡೇ ಇಲ್ಲ. ಆದರೆ…

ಮೊನ್ನೆಮೊನ್ನೆ ಕರ್ನಾಟಕದ ಕೆಲವು ಕಡೆ ಆಲಿಕಲ್ಲು ಮಳೆ ಬಂತು, ಗೊತ್ತಾಯ್ತಾ?

ಆಲಿಕಲ್ಲು ಅಂದ್ರೆ ಏನೂಂತ ಗೊತ್ತಿಲ್ಲದೆ ಹೋದ್ರೆ ಇಲ್ಲಿ ನೋಡಿ (ಹಳೇ ವೀಡಿಯೋ):

ಈಸಲ ಹುಡುಗ್ರು ಆಲಿಕಲ್ಲು ಆಯ್ಕೊಂಡ್ ಮಜಾ ಮಾಡಿದ್ದೂ ಮಾಡಿದ್ದೇ!

pvec14shrhun5.jpgಪ್ರಜಾವಾಣಿ

ಬನ್ನಿ, ಈ ಆಲಿಕಲ್ಲಿನ ಬಗ್ಗೆ ಎಲ್ಲರಿಗೂ ಗೊತ್ತಿರಬೇಕಾದ ಕೆಲವು ವೈಜ್ಞಾನಿಕ ಸತ್ಯಗಳ್ನ ನೋಡೋಣ:

1. ಆಲಿಕಲ್ಲು ಸಾಮಾನ್ಯವಾಗಿ ಈಥರ ಚಿಕ್ಕದ್ದಾಗಿರುತ್ತೆ…

ಒಳ್ಳೇ ಬಟಾಣಿಯಿಂದ ನೆಲ್ಲೀಕಾಯಿ ಗಾತ್ರದ ವರೆಗೂ ಸಿಗುತ್ತೆ.

12729236_708695159266766_6127967490080646201_n.pngಮೂಲ

2. ಆದರೆ ಕೆಲವೊಮ್ಮೆ ಒಳ್ಳೇ ಬಿಡದಿ ತಟ್ಟೆ ಇಡ್ಲಿ ತರಹ ದೊಡ್ಡದಾಗೂ ಇರಬಹುದು!

ಇದು ತಲೇಮೇಲೆ ಬಿದ್ರೆ ಮುಗೀತು!

RecordHailstone2.jpgಮೂಲ

3. ಮಳೆ ತರಹ ಆಲಿಕಲ್ಲು ಕೂಡ ಹುಟ್ಟೋದು ಮೋಡದಲ್ಲಿ, ಆದರೆ ತುಂಬಾ ಬೇಸಿಗೆಯಲ್ಲಿ ಮಾತ್ರ

ನೀರು ಬದಲು ಐಸು ಬೀಳುತ್ತೆ, ಅಷ್ಟೆ.

summer.pngಮೂಲ

4. ನೆಲದಿಂದ 3-4 ಕಿಲೋಮೀಟರ್ ಮೇಲಕ್ಕೆ ಹೋದ್ರೆ ಅಲ್ಲಿ ಮೋಡದಲ್ಲಿ ಆವಿ ಐಸಾಗಿರುತ್ತೆ

ತುಂಬಾ ಬಿಸಿಲಿರೋ ದಿನ, ನೆಲದಿಂದ ಮೇಲ್ ಹೋಗ್ತಾ ಹೋಗ್ರಾ ತಣ್ಣಗೇ ಇರುತ್ತೆ. ನೀವು ನೆಲದಿಂದ ಒಂದು ಕಿಮಿ ಮೇಲ್ ಹೋದ್ರೆ, 10ಡಿಗ್ರೀ ತಣ್ಣಗಿರುತ್ತೆ! ಅಂದ್ರೆ, ಇಲ್ಲಿ 30 ಡಿಗ್ರೀ ಇದ್ರೆ, ಹತ್ ಕಿಮಿ ಮೇಲೆ 20 ಡಿಗ್ರೀ ಇರುತ್ತೆ. ಹಾಗೇ ಮೇಲ್ ಹೋಗ್ತಿದ್ರೆ 3-4 ಕಿ.ಮಿ. ಒಳಗೆ 0 ಡಿಗ್ರೀ ಆಗಿರುತ್ತೆ. ಒಂದು 10 ಕಿ.ಮಿ. ಮೇಲಕ್ಕೆ ಹೋದ್ರೆ -50ರಿಂದ -60ಡಿಗ್ರೀ  ಅಷ್ಟು ತಣ್ಣಗೆ ಕೊರೀತಾ ಇರುತ್ತೆ…!

davis_storm1_met[1]-8577.jpgಮೂಲ

5. ಮೋಡದಲ್ಲಿ ತುಂಬಿದ ಐಸು ಗಾತ್ರದಲ್ಲಿ ದೊಡ್ಡದಾದಮೇಲೆ ತನ್ನದೇ ತೂಕದಿಂದ ಕೆಳಗೆ ಬೀಳುತ್ತೆ… ಕರಗುತ್ತ…

ಮೋಡ ಸಾಕಷ್ಟು ತಣ್ಣಗಿದ್ದರೆ ನೆಲಕ್ಕೆ ಬರುವಾಗ ಇನ್ನೂ ಐಸಾಗೇ ಇರುತ್ತೆ.

Hail 6.jpgಮೂಲ

6. ಆಲಿಕಲ್ಲು, 5ಕಿಮೀ ಮೇಲಿರೋ ಮೋಡದಿಂದ ನೆಲಕ್ಕೆ ಬರೋಕ್ಕೆ ತಗೊಳ್ಳೋ ಟೈಮು ಬರೀ 90 ಸೆಕೆಂಡು

ನೀವ್ ಎಷ್ಟ್ ಫ಼ಾಸ್ಟಾಗಿ ಓಡಿದ್ರೂ ತಪ್ಪಿಸ್ಕೊಳಕ್ಕಾಗಲ್ಲ…

13606223304_919dbe5ede_b.jpgಮೂಲ

7. ಇದನ್ನ ತಿನ್ನಬಾರದು

ಆಲಿಕಲ್ ಮಳೇಲಿ ಬೆನೆಜ಼ಿನ್ ಮತೆ ಸೈಕ್ಲೋಹೆಕ್ಸೇನ್ ಅನ್ನೋ ಕೆಮಿಕಲ್ಲುಗಳು ಇರುತ್ವಂತೆ. ತಿನ್ಬೇಡಿ.

alikallu.pngಮೂಲ

ಹೊರಚಿತ್ರ: ಮೂಲ