http://cdn2.momjunction.com/wp-content/uploads/2015/09/indian-diet-during-pregnancy.jpg

ಚೆನ್ನಾಗಿರಬೇಕು, ಆರೋಗ್ಯವಾಗಿರ್ಬೇಕು, ತೆಳ್ಳಗಿರಬೇಕು ಜಾಸ್ತಿ ಡಾಕ್ಟರ್ ಹತ್ರ ಹೋಗ್ಬಾರ್ದು ಯಾವ್ದು ಕಾಯಿಲೆ ಬರ್ಬಾರ್ದು ಅನ್ನೋದು ಪ್ರತಿ ಮನುಷ್ಯನ ಆಸೆ, ಆದ್ರೆ ಇದನ್ನ ಮುಕ್ಕಾಲ್ವಾಸಿ ಜನಕ್ಕೆ ಪೂರೈಸ್ಕೊಳಕ್ ಆಗ್ತಿಲ್ಲ. ದುಡಿದಿದ್ರಲ್ಲಿ ಅರ್ಧ ಡಾಕ್ಟರ್ ಬಿಲ್ಲಿಗೆ ಹೋಗತ್ತೆ, ಅದಕ್ಕೆ ನಾವ್ ಇಲ್ಲಿ ಹೇಳಿರೋದನ್ನ ದಿನಕ್ಕೆ ಒಂದರಂತೆ ಪಾಲಿಸಿದರೆ ಖಂಡಿತ ಡಾಕ್ಟರ್ ಬಿಲ್ ಕಮ್ಮಿ ಆಗತ್ತೆ.

1. ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚ ಕೊಬ್ಬರಿ ಎಣ್ಣೆ 

ಬೆಳಗ್ಗೆ ಖಾಲಿ ಹೊಟ್ಟೆಗೆ, ಒಂದು ಚಮಚ ಕೊಬ್ಬರಿ ಎಣ್ಣೆನಾ ಬಾಯಲ್ಲಿ 3 ನಿಮಿಷ ಇಟ್ಕೊಂಡು ಆಮೇಲೆ ನುಂಗಿ, ಪ್ರತಿದಿನ ಹೀಗೆ ಮಾಡಿದರೆ ನಿಮಗೆ ಕೆಲಸ ಮಾಡಿದಾಗ ಸುಸ್ತು ಅಂತ ಅನ್ನಿಸಲ್ಲ, ಮಂಡಿ ನೋವು, ಬೆನ್ನು ನೋವು ಕಮ್ಮಿ ಆಗತ್ತೆ.

2. ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಕಾಡು ನೆಲ್ಲಿಕಾಯಿ 

ದಿನ ತಿಂದ್ರೆ ಸ್ವಲ್ಪೇ ಸ್ವಲ್ಪ ದಿನದಲ್ಲಿ ಕೂದಲು ಉದುರುವುದು, ಕೂದಲಿನಲ್ಲಿ ಹೊಟ್ಟು ಇವೆಲ್ಲ ಕಮ್ಮಿ ಆಗತ್ತೆ 

ಮೂಲ

3. ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಎಳೆ ಬೆಳ್ಳುಳ್ಳಿ 

ಬಿಡದೆ ತಿಂಗಳು ಮಾಡಿದರೆ ಗ್ಯಾಸ್ಟ್ರಿಕ್ ಅನ್ನೋದು ನಿಮ್ಮ ಸುದ್ದಿಗೆ ಬರೋದೇ ಇಲ್ಲ, ಬಿ.ಪಿ ಸಮಸ್ಯೆ ಕೂಡ ಸರಿಹೋಗತ್ತೆ.

4. ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಎಲೆ ಒಂದೆಲಗ 

ಮರೆವು ಅನ್ನೋದು ನಿಮ್ಮನ್ನ ಮರೆತು ಬಿಡತ್ತೆ, ನೆನಪಿನ ಶಕ್ತಿ ಚೆನ್ನಾಗಿ ಜಾಸ್ತಿ ಆಗತ್ತೆ.

ಮೂಲ

5. ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿನೀರಿನ ಜೊತೆ ಜೇನುತುಪ್ಪ 

ಒಂದು ಲೋಟ ಬಿಸಿನೀರಿಗೆ ಒಂದು ಚಮಚ ಜೇನುತುಪ್ಪ ಹಾಕಿ ಕುಡೀರಿ, ನಿಮ್ಮ ದೇಹದ ಬೊಜ್ಜು, ನಿಮ್ಮ ತೂಕ ಸಕತ್ತಾಗಿ ಕಮ್ಮಿ ಆಗತ್ತೆ.

6. ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ನೀರಿಗೆ ಒಂದು ಚಮಚ ಅರಿಶಿಣ

ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ನೀರಿಗೆ ಒಂದು ಚಮಚ ಅರಿಶಿಣ ಹಾಕಿ ಕುಡಿದರೆ ಎಲ್ಲ ರೀತಿಯ ಹೊಟ್ಟೆ ಸಮಸ್ಯೆ, ಶ್ವಾಸಕೋಶದ ಸಮಸ್ಯೆ, ಮಂಡಿ ನೋವ್ವು, ಹೃದಯದ ಸಮಸ್ಯೆ ಎಲ್ಲ ಸರಿಹೋಗತ್ತೆ.

ಮೂಲ

7. ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚ ಅಗಸೆ ಬೀಜದ ಪುಡಿ 

ಇದನ್ನ 3 ತಿಂಗಳು ಮಾಡಿ, ಆಮೇಲಿಂದ ನಿಮ್ಮನ್ನ ಯಾರು ದಪ್ಪ ಇದೀರ ಅಂತ ಅನ್ನಲ್ಲ.

8. ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿನೀರಿಗೆ ನಿಂಬೆ 

ಪಾನಕ ಅಲ್ಲ, ಹಾಗಂತ ಲೇಮನ್ ಟೀ ಕೂಡ ಅಲ್ಲ, ಸಕ್ಕರೆ ಹಾಕ್ಬಾರ್ದು… ಇದನ್ನ ಕುಡೀರಿ ಹೃದಯದ ಸಮಸ್ಯೆ, ಶುಗರ್ ಖಾಯಿಲೆ ಕೂಡ ಕಂಟ್ರೋಲಿಗೆ ಬರತ್ತೆ.

ಮೂಲ

9. ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿ ನೀರಿಗೆ ಕರಿಬೇವು 

ತಲೆಕೂದಲನ್ನ ಬೇಗ ಬೆಳ್ಳಗಾಗಕ್ಕೆ ಬಿಡಲ್ಲ, ಬೊಜ್ಜು ಕಡಿಮೆ ಮಾಡತ್ತೆ.

10. ದಿನ ಬೆಳಿಗ್ಗೆ ಎದ್ದ ತಕ್ಷಣ ಅಂತೆಕಂತೆ

ಎದ್ದ ತಕ್ಷಣ ಪಾಸಿಟಿವ್ ವಿಚಾರಗಳು, ಪ್ರೇರಣೆ ನೀಡುವ ಬರಹ, ಒಳ್ಳೆ ಮಾಹಿತಿ ನೀಡುವ ಬರಹ… ಇದನ್ನ ಓದಿದರೆ ಮನಸ್ಸು ನೆಮ್ಮದಿಯಿಂದ ಇರತ್ತೆ. ತಲೆಕೆಡುವ ನ್ಯೂಸ್ನಿಂದ ಮುಕ್ತಿ ಸಿಗತ್ತೆ 🙂

ಮೂಲ