ಆಫೀಸು ಅಂದ್ಮೇಲೆ ಎಲ್ಲ ಥರದ ಜನಾನು ಇರ್ತಾರೆ. ಒಬ್ಬ ಕ್ರಿಯೇಟಿವ್, ಒಬ್ಬ ಫಾಸ್ಟ್, ಒಬ್ಬ ಓತ್ಲಾ, ಒಬ್ಬ ಬಯ್ಯೋನು, ಒಬ್ಬ ಬಯ್ಯಿಸಿಕೊಳ್ಳೋನ್ನು, ಒಬ್ಬ ಬಕೆಟ್ ರಾಜ… ಹೀಗೆ ಸುಮಾರ್ ಜನ ಇರ್ತಾರೆ. ಆದ್ರೆ ಯಾವ ಕೆಲಸ ಯಾವ ಸಮಯದಲ್ಲಿ ಆಗ್ಬೇಕು ಅಂತ ಡಿಸೈಡ್ ಆಗೋದು ಒಂದು ಮೀಟಿಂಗಲ್ಲಿ. ಆ ಮೀಟಿಂಗ್ ಯಾವತ್ತೂ ಸರಿಯಾಗಿ ಸರಿಯಾದ ಜನರ ಮಧ್ಯೆ ಆಗ್ಬೇಕು. ಅಂಥಾ ಮೀಟಿಂಗಲ್ಲಿ ಯಾರ್ ಯಾರ್ ಇರ್ಬೇಕು ಅನ್ನೋದನ್ನ ನಾವ್ ಹೇಳ್ತೀವಿ ನೋಡಿ.

1. ಒಬ್ಬ ಲೀಡರ್ ಇರಲೇಬೇಕು

ಲೀಡರ್, ಇವನಿಗೆ ಯಾರತ್ರ ಯಾವ ರೀತಿ ಯಾವ ಕೆಲಸ ಹೇಗೆ ತೆಗಿಸಬೇಕು ಅನ್ನೋದು ಗೊತ್ತಿರತ್ತೆ. ಇವನಿಗೆ ತಾಳ್ಮೆನೂ ಜಾಸ್ತಿ ಇರತ್ತೆ. ಹಾಗೆ ಎಲ್ಲರ ಮೇಲೆ ಒಂದು ಹಿಡಿತ ಕೂಡ ಇರತ್ತೆ

2. ಒಬ್ಬ ಟೀಮ್ ಪ್ಲೇಯರ್ ಇರಲೇಬೇಕು

ಇವನು ಯಾವ ತಂಡಕ್ಕೆ ಬೇಕಾದ್ರೂ ಒಗ್ಗಿಕೊಂಡು ಕೆಲಸ ಮಾಯಾದೋ ಚಾಲಾಕಿತನ ಇದ್ದವನಾಗಿರ್ತಾನೆ, ಮಾಡಿದ ಪ್ಲಾನ್ ಪ್ರಕಾರ ಸರಿಯಾಗಿ ಎಲ್ಲದನ್ನು ಮಾಡಿಕೊಂಡು ಹೋಗುವವನು ಇವನು. ಒಂದು ಮೀಟಿಂಗ್ ಅಂದ್ಮೇಲೆ ಈ ತರದ ಒಬ್ಬ ವ್ಯಕ್ತಿ ಇರಲೇಬೇಕು

3. ಒಬ್ಬ ಕ್ರಿಯೇಟಿವ್ ಮನುಷ್ಯ ಇರಲೇಬೇಕು

ಇವ್ನ್ ಹೆಂಗೆ ಅಂದ್ರೆ ಒಂದು ಸಮಸ್ಯೆಗೆ ಮೂರು ಪರಿಹಾರ ಕೊಡು ಅಂದ್ರೆ, ಕ್ರಿಯೇಟಿವ್ವಾಗಿ ನೂರ್ ಪರಿಹಾರ ಕೊಡ್ತಾನೆ. ಯಾವದೇ ಸಮಸ್ಯೆ ಆದ್ರೂ ಬೇರೆ ಬೇರೆ ರೀತಿ ಯೋಚನೆ ಮಾಡಿ ಸಮಸ್ಯೆ ಬಗೆಹರಿಸುವ ಐಡಿಯಾ ಕೊಡ್ತಾನೆ

ಹಾಗೆ ಇದಕ್ಕಿಂತ ಮುಖ್ಯ ಮೀಟಿಂಗಲ್ಲಿ ಯಾವ ರೀತಿ ವ್ಯಕ್ತಿ ಇರಬಾರದು ಅನ್ನೋದು. ಯಾವ ಗುಣ ಇರೋ ವ್ಯಕ್ತಿ ಇರಬಾರದು ಅನ್ನೋದನ್ನು ತಿಳ್ಕೊಳಿ ಇಲ್ಲಿ

1.ಆಗಲ್ಲ ಅಂತ ಅಲ್ಲಾಡಿಸೋರು

ಕೆಲವೊಬ್ರು ಇರ್ತಾರೆ, ನೀವೇನೇ ಐಡಿಯಾ ಕೊಟ್ರು ಇಲ್ಲಾರಿ ಇದು ವರ್ಕೌಟ್ ಆಗಲ್ಲ ಅಂತಾರೆ. ಇಂತ ನೆಗೆಟಿವ್ ಮಾತಾಡೋರು ಮೀಟಿಂಗಲ್ಲಿ ಇರ್ಬಾರ್ದು.

2. ತಯಾರೆ ಆಗಿರದ ಯಡವಟ್ಟುಗಳು

ಮೀಟಿಂಗು ಅಂತ ಅಂದ್ಮೇಲೆ ಅದಕ್ಕೆ ಅಂತ ಒಂದಿಷ್ಟು ವಿಷಯ ತಿಳ್ಕೊಂಡು ಹೋಗ್ಬೇಕು. ಯಾಕಂದ್ರೆ ವಿಚಾರ ಡಿಸ್ಕಸ್ ಮಾದಕ್ಕಿರತ್ತೆ, ಕೆಲವು ಸಮಸ್ಯೆಗೆ ಉತ್ತರ ಹುಡ್ಕಕ್ಕಿರತ್ತೆ. ಕೆಲವೊಬ್ಬರು ಹೇಗೆ ಬಂದಿರ್ತಾರೆ ಅಂದ್ರೆ… ಯಪ್ಪಾ ಅಂತವರು ಮೀಟಿಂಗಲ್ಲಿ ಇರಕ್ಕಿಂತ ಇರದಿದ್ದರೇನೇ ಒಳ್ಳೇದು

3. ಎಲ್ಲಾ ಗೊತ್ತು ಅನ್ನೋರು

ಇವ್ರು ಮೀಟಿಂಗನ್ನ ಕರ್ದಿರೋದೇ ನಾನು ಮಾತಾಡಕ್ಕೆ, ನಾನು ಮಾತಾಡ್ತೀನಿ ಎಲ್ಲರೂ ಕೇಳಿಸಿಕೊಳ್ಳುತ್ತಾರೆ ಅಂತ ಅಂದ್ಕೊಂಡಿರ್ತಾರೆ. ಎಲ್ಲಾದಕ್ಕೂ ನಂದು ಒಂದಿರ್ಲಿ ನಂಗೂ ಗೊತ್ತು ಅಂತ ಹೇಳ್ತಾನೆ ಇರ್ತಾರೆ. ಇಂತವರು ಕೂಡ ಮೀಟಿಂಗಲ್ಲಿ ಇರಬಾರದು

ಇದನ್ನೆಲ್ಲಾ ತಿಳ್ಕೊಂಡ್ರೆ ಯಾವ ರೀತಿ ಜನಗಳನ್ನ ನಾವು ಮೀಟಿಂಗಿಗೆ ಕರ್ಕೋಬೇಕು ಅನ್ನೋದು ಅರ್ಥ ಆಗಿ ನಮ್ಮ ಕೆಲಸ ಸುಲಭ ಆಗತ್ತೆ