ಆನೆ ದೂರ ಇಡಕ್ಕೆ

ಕೆಂಚ ಬೆಂಗಳೂರಿಂದ ಮಂಗಳೂರಿಗೆ ಟ್ರೈನಲ್ಲಿ ಹೋಗ್ತಿರ್ತಾನೆ.

ಕಿಟಕಿ ಪಕ್ಕದ ಸೀಟು. ಕೂತ್ಕೊಂಡು ಪ್ರಜಾವಾಣಿ ಪೇಪರ್ನ ಚಿಕ್ಕ ಚಿಕ್ಕ ಚೂರು ಮಾಡಿ ಉಂಡೆ ಕಟ್ಟಿ ಹೊರಗೆ ಎಸೀತಿರ್ತಾನೆ.

ಪಕ್ಕದೋನು: ‘ಹೀಗ್ಯಾಕೆ ಮಾಡ್ತಿದೀರಿ?’

ಕೆಂಚ: ‘ಆನೆ ಬರದೆ ಇರಲಿ ಅಂತ’

ಅವನು: ‘ಆದ್ರೆ ಇಲ್ಲಿ ಆನೇನೇ ಇಲ್ಲವಲ್ಲ?’

ಕೆಂಚ: ‘ಹೌದು. ಇದು ತುಂಬ ಚೆನ್ನಾಗಿ ಕೆಲಸ ಮಾಡುತ್ತೆ.’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: