http://codenread.com/wp-content/uploads/2015/02/smartphone-overheating.jpg

ಸ್ಮಾರ್ಟ್-ಫೋನುಗಳು ಅಂಗೈ ಅಗಲ ಇದ್ರೂ ಪ್ರೊಸೆಸಿಂಗ್ ಪವರ್ ತುಂಬಾ ಇರುತ್ತೆ. ಜೊತೆಗೆ ಬೇಗ ಚಾರ್ಜ್ ಆಗೋ ಥರ ಬ್ಯಾಟರಿಗಳ್ನ ಡಿಸೈನ್ ಮಾಡಿರ್ತಾರೆ. ಇದೆಲ್ಲದರಿಂದಾಗಿ ಫೋನುಗಳು ಬೇಗ ಬಿಸಿಯಾಗುತ್ತೆ. ಕೆಲವು ಹೈ ರಿಸೊಲ್ಯೂಷನ್ ವೀಡಿಯೋಗಳ್ನ ನೋಡ್ವಾಗ, ಸ್ವಲ್ಪ ಹೆಚ್ಚು ಪ್ರೊಸೆಸಿಂಗ್ ಬೇಕಾಗೋ ಗೇಮ್ಗಳನ್ನ ಆಡುವಾಗ ಬೇಗ ಬಿಸಿಯಾಗಿ ಬಿಡುತ್ತೆ. ಕೆಲವು ಸಲ ಇದು ಹಾರ್ಡ್ವೇರ್ ಸಮಸ್ಯೆಯಿಂದಾಗಿ ಆಗಿರ್ಬಹುದು. ಆದರೆ ಹೆಚ್ಚಿನ ಸಲ ನಮ್ಮ ತಪ್ಪಿಂದಾನೇ ಆಗಿರತ್ತೆ. ಈ 6 ಉಪಾಯಗಳಿಂದ ಸ್ಮಾರ್ಟ್-ಫೋನುಗಳು ಬಿಸಿಯಾಗೋದನ್ನ ತಪ್ಪಿಸ್ಬಹುದು.

1. ಮೊಬೈಲ್ ಕವರ್ ಉಪ್ಯೋಗಿಸ್ಬೇಡಿ

ಕವರ್ ಹಾಕೋದ್ರಿಂದಾಗಿ ಶಾಖ ಹೊರಗೆ ಬರೋಕೆ ಸಾಧ್ಯ ಆಗದೆ ಫೋನ್ ಬಿಸಿಯಾಗುತ್ತೆ. ಕವರ್ ಉಪ್ಯೋಗಿಸ್ದೆ ಇರೋದ್ರಿಂದ ಇದನ್ನ ತಕ್ಕಮಟ್ಟಿಗೆ ಕಡಿಮೆ ಮಾಡ್ಬಹುದು.

ಮೂಲ

2. ಚಾರ್ಜ್ ಮಾಡುವಾಗ ಫೋನನ್ನ ಹಾಸಿಗೆ, ಸೋಫಾ ಮೇಲಿಡ್ಬೇಡಿ

ಚಾರ್ಜ್ ಮಾಡುವಾಗ ಮೆತ್ತಗಿರೋ ವಸ್ತುಗಳ ಮೇಲಿಟ್ರೆ ಅದು ಶಾಖ ಹೀರ್ಕೊಂಡು ಫೋನ್ ಇನ್ನೂ ಬಿಸಿಯಾಗೋ ಚಾನ್ಸ್ ಜಾಸ್ತಿ. ಗಾಳಿ ಚೆನ್ನಾಗಿ ಆಡೋ ಹಾಗೆ ನೆಲದ ಮೇಲೋ ಮರದ ಟೇಬಲ್ ಮೇಲೋ ಇಟ್ರೆ ಶಾಖ ಕಡಿಮೆ ಆಗುತ್ತೆ.

ಮೂಲ

3. ರಾತ್ರಿಯೆಲ್ಲಾ ಚಾರ್ಜ್ ಮಾಡ್ಬೇಡಿ

ಫೋನನ್ನ ರಾತ್ರಿ ಚಾರ್ಜಿಗೆ ಹಾಕಿ ಮಲಗಿ ಬೆಳಗ್ಗೆ ಎದ್ದು ಚಾರ್ಜಿಂದ ತೆಗಿಯೋ ಅಭ್ಯಾಸ ಮಾಡ್ಕೋಬೇಡಿ. ಫೋನ್ ಓವರ್-ಚಾರ್ಜ್ ಆಗಿ ಬಿಸಿಯಾಗುತ್ತೆ. ಅಲ್ಲದೆ ಬ್ಯಾಟರಿ ಬಾಳಿಕೇನೂ ಬರಲ್ಲ. ಕೆಲವು ಫೋನುಗಳಲ್ಲಿ ಬ್ಯಾಟರಿ ಬಾಂಬ್ ಥರ ಸಿಡಿದಿದ್ದೂ ಇದೆ!

ಮೂಲ

4. ನಿಮ್ಮ ಮೊಬೈಲಿಗೆ ತಲೆಬಿಸಿ ಕೊಡ್ತಿರೋ ಆಪ್ಗಳನ್ನ ಕೊಲ್ಲಿ (ಅನ್ ಇನ್ಸ್ಟಾಲ್ ಮಾಡಿ)!

ಕೆಲವು ಆಪ್ಗಳು ಸುಮ್ನೆ ಪ್ರೊಸೆಸಿಂಗ್ ಪವರ್ ತಿಂತಿರುತ್ತೆ. ಬ್ಯಾಕ್ಗ್ರೌಂಡಲ್ಲಿ ಕೂತು ನಿಮ್ಮ ಫೋನಿಗೆ ತಲೆಬಿಸಿ ಕೊಡ್ತಿರುತ್ತೆ. ಅದನ್ನ ಹುಡುಕಿ ಅನ್-ಇನ್ಸ್ಟಾಲ್ ಮಾಡಿ.

ಮೂಲ

5. ಫೋನನ್ನ ಸೂರ್ಯನ ಬೆಳಕಿಗೆ ಸೀದಾ ಹಿಡೀಬೇಡಿ

ಬಿಸಿಲಿಗೆ ಹಿಡಿದ್ರೆ ಬಿಸಿಯಾಗೇ ಆಗುತ್ತೆ. ಅದಕ್ಕೇ ಬಿಸಿಲಿಗೆ ಹಿಡಿಯೋದನ್ನ ತಪ್ಪಿಸಿ. ಹಿಂದೆ ಓಡ್ತಿರೋ ಆಪ್ಗಳು ಫೋನನ್ನ ಇನ್ನೂ ಬಿಸಿ ಮಾಡ್ಬಿಡತ್ವೆ.

ಮೂಲ

6. ಒರಿಜಿನಲ್ ಚಾರ್ಜರ್ ಮತ್ತು ಬ್ಯಾಟರಿಗಳ್ನೇ ಉಪ್ಯೋಗ್ಸಿ

ನಿಮ್ಮ ಫೋನಿನ ಜೊತೆ ಬಂದ ಚಾರ್ಜರ್ ಆ ಫೋನಿನ ಬ್ಯಾಟರಿಗೆ ಸರಿಯಾಗಿರುತ್ತೆ. ನೀವು ಬೇರೆ ವ್ಯಾಟೇಜ್ ಇರೋ ಚಾರ್ಜರ್ ತೆಗೊಂಡ್ರೆ ಅದು ನಿಮ್ಮ ಫೋನಿನ ಬ್ಯಾಟರಿಗೆ ಸರಿ ಹೊಂದದೇ ಬಿಸಿಯಾಗುತ್ತೆ. ಹಾಗೆನೇ ಡೂಪ್ಲಿಕೇಟ್ ಬ್ಯಾಟರಿ ಹಾಕ್ಸಿದ್ರೂ ಅದು ಬಿಸಿಯಾಗುತ್ತೆ.

ಮೂಲ

ಗೊತ್ತಾಯ್ತಲ್ಲ? ಜೀವನ್ದಲ್ಲಿ ಇರೋ ತಲೆಬಿಸಿ ಜೊತೆ ಇದೊಂದು ಯಾಕ್ ಬೇಕು! ಫೋನ್ ಬಿಸಿಯಾಗದ ಹಾಗೆ ನೋಡ್ಕೊಳ್ಳಿ.