ಹುಡುಗರಿಗೆ ಯಾವಾಗಲೂ ಡೌಟು: ನಾನು ಇಷ್ಟ ಪಡೋ ಹುಡುಗಿ ನನ್ನ ಇಷ್ಟಾ ಪಡ್ತಿದಾಳೋ ಇಲ್ಲವೋ ಅಂತ. ಗೊತ್ತಾಗೋದು ಹೇಗೆ ಅನ್ನೋದೇ ದೊಡ್ಡ ಪ್ರಶ್ನೆ. ಈ 14 ಸುಳಿವುಗಳೇನಾದರೂ ಸಿಕ್ಕರೆ ಅಳೂ ನಿನ್ನ ಥರಾನೇ ನಿನ್ನ ಇಷ್ಟ ಪಡ್ತಿದಾಳೆ ಅಂತ ಅರ್ಥ…

1. ನಿನ್ನ ಗೆಳೆಯರು ಅವ್ಳ ಮುಂದೆ ನಿನ್ನ ಹೆಸರು ಹೇಳಿದ್ರೆ ಅವ್ಳು ಕೆಂಪಗಾಗ್ತಾಳೆ

ಒಬ್ಬ ಹುಡ್ಗ ಹುಡ್ಗಿ ಗೊತ್ತಿಲ್ದಂಗೆ ಲವ್ ಮಾಡ್ತಿದಾರೆ ಅಂದ್ರೆ, ಮೊದ್ಲು ಗಮನ್ಸೋದೇ ಅವರ ಗೆಳೆಯರು. ಅವಳ ಹತ್ರ ನಿಮ್ಮಿಬ್ರ ಗೆಳೆಯರು ನಿನ್ನ ಹೆಸರು ಹೇಳಿದಾಗ ಅವ್ಳು ಕೆಂಪಗಾಗ್ತಾಳೆ.

2. ಗುಂಪಲ್ಲಿ ನಿನ್ನ ಹತ್ತಿರಾನೇ ಕೂತ್ಕೋತಾಳೆ

ಗೆಳೆಯರ ಗುಂಪಲ್ಲಿ ಅವ್ಳು ನಿನ್ನ ಹತ್ತಿರಾನೇ ಕೂತ್ಕೋತಾಳೆ. ಅವ್ಳು ಬೇಕಂತ ಮಾಡ್ದೇ ಇದ್ರೂ, ನಿನ್ನ ಹತ್ತಿರ ಇರಬೇಕು ಅಂತ ಅವ್ಳಿಗೆ ಇಷ್ಟ ಇರೋದು ಸ್ಪಷ್ಟವಾಗಿ ಗೊತ್ತಾಗತ್ತೆ.

3. ನೀನು ಹತ್ತಿರ ಬಂದ್ರೆ ನಾಚ್ಕೋತಾಳೆ

ನೀನು ಅವಳ ಹತ್ತಿರ ಹೋದ್ರೆ, ಸುಮ್ನೆ ಅವಳನ್ನ ನೋಡಿ ನಕ್ರೆ ನಾಚ್ಕೋತಾಳೆ.

4. ಬೇರೆ ಹುಡ್ಗೀರ ಮುಂದೆ ನಿನ್ನನ್ನು ಅಣಕಿಸ್ತಾಳೆ

ಬೇರೆ ಹುಡ್ಗೀರ ಹತ್ರ ನಿನ್ನನ್ನ ಆಡ್ಕೊಂಡು ಅಣಕಿಸ್ತಾ ಇರ್ತಾಳೆ. ಅವ್ಳು ನಿಜ್ವಾಗ್ಲೂ ನಿನ್ನನ್ನ ಇಷ್ಟ ಪಡ್ತಾ ಇಲ್ಲ ಅಂತ ಪ್ರಮಾಣ ಮಾಡ್ತಾಳೆ. ‘ಹಾಗೇನೂ ಇಲ್ಲ’ ಅಂತ ನುಲೀತಾಳೆ.

5. ನಿನ್ನ ಹತ್ರ ಕಣ್ಣಲ್ಲಿ ಕಣ್ಣಿಟ್ಟು ಮಾತಾಡ್ತಾಳೆ

ನಿನ್ನ ಹತ್ರ ಮಾತಾಡ್ವಾಗ ಕಣ್ಣಲ್ಲಿ ಕಣ್ಣಿಟ್ಟು ಮಾತಾಡ್ತಾಳೆ. ನೀವು ಗಮನ ಕೊಟ್ರೆ ಅವ್ಳ ಹೃದಯದ ಭಾವನೇ ಎಲ್ಲಾ ಕಣ್ಣಲ್ಲಿ ಕಣ್ಣಿಟ್ಟು ನೋಡ್ಬಹ್ದು.

6. ನಿನ್ನ ಯಾವಾಗಲಾದರೂ ಒಮ್ಮೆಯಾದರೂ ಆತ್ಮೀಯವಾಗಿ ತಬ್ಕೋತಾಳೆ

ಅವ್ಳು ‘ನೀನು ಬರೀ ನನ್ನ ಗೆಳೆಯ’ ಅಂತ ಹೇಳ್ಕೊಂಡು ನಿನ್ನ ತಬ್ಗೊಂಡ್ರೂ, ಅದು ಬರೀ ಗೆಳೆತನ ಅಲ್ಲ ಅಂತ ನಿಂಗೇ ಗೊತ್ತಾಗತ್ತೆ.

7. ಎಲ್ಲಾ ಮಾತ್ನೂ ನಿನ್ನ ಸುತ್ತಾನೇ, ನಿನ್ನ ಬಗ್ಗೇನೇ ಆಡ್ತಾಳೆ

ಏನೇ ಮಾತಾಡ್ತಾ ಇದ್ರೂ, ನಿನ್ನ ಬಗ್ಗೆ, ನಿನ್ನ ಕೆಲ್ಸ, ನಿನ್ನ ಜೀವನ ಇದೇ ವಿಷ್ಯಗಳ ಬಗ್ಗೆ ಕೇಳ್ತಾಳೆ. ಬೇರೆ ಯಾವ್ದೋ ಹುಡ್ಗಿ ಹೆಸರು ಅವಳ ಮುಂದೆ ಹೇಳಿ ನೋಡಿ. ಮತ್ತೆ ಸಿಕ್ದಾಗ ಅದೇ ವಿಷ್ಯ ತೆಗೀತಾಳೆ. ಅವ್ಳು ಕುತೂಹಲದಿಂದ ಕುದೀತಾ ಇದಾಳೆ ಅಂದ್ರೆ, ನಿನ್ನನ್ನು ನಿಜ್ವಾಗ್ಲೂ ಇಷ್ಟ ಪಡ್ತಿದಾಳೆ ಅಂತ ಗೊತ್ತಾಗತ್ತೆ.

8. ನಿನ್ನ ಜೊತೆ ಒಬ್ಳೇ ಇರಬೇಕು ಅಂತ ಕಾಯ್ತಾ ಇರ್ತಾಳೆ

ನಿಂಗೆ ಹೆಂಗೆ ಅವಳ ಜೊತೆ ಇರಬೇಕು ಅಂತ ಇಷ್ಟಾ ಇರತ್ತೋ ಹಾಗೆ ಅವಳೂ ನಿನ್ನ ಹತ್ರ ಇರೋದಿಕ್ಕೆ ಹಾತೊರೀತಿರ್ತಾಳೆ.

9. ನೀನು ಹತ್ರ ಇದ್ರೆ, ನಿನ್ನನ್ನೇ ನೋಡ್ತಾ ಇರ್ತಾಳೆ

ನೀನು ಬೇರೆಯವ್ರ ಹತ್ತಿರ ಮಾತಾಡ್ತಾ ಇದ್ರೂ, ಅವಳು ನಿನ್ನನ್ನೇ ನೋಡ್ತಾ ಇರೋದು ನಿಂಗೇ ಅನುಭವ ಆಗತ್ತೆ.

10. ಹ್ಞೂಂ ಆಂತ್ಲೂ ಅನ್ನಲ್ಲ, ಊಹೂಂ ಅಂತ್ಲೂ ಅನ್ನಲ್ಲ

ಅವಳಿಗೆ ನಿನ್ನ ಬಗ್ಗೆ ಪ್ರೀತಿ ಇದೆ ಅಂತ ಬಾಯ್ಬಿಟ್ಟು ಹೇಳೋದಿಲ್ಲ. ಇಲ್ಲಾಂತಾನೂ ಹೇಳೋದಿಲ್ಲ. ಪ್ರೀತಿ ಪ್ರೇಮ ಅನ್ನೋ ವಿಷ್ಯ ಬಂದ್ರೆ, ಮಾತು ಮರೆಸಿ ಬೇರೆ ವಿಷ್ಯ ತೆಗೀತಾಳೆ.

11. ನಿನ್ನ ಜೊತೆ ಮಾತಾಡ್ತಾ ಇದ್ರೆ, ಮಾತು ನಿಲ್ಸಕ್ಕೇ ರೆಡಿ ಇರಲ್ಲ

ನಿಂಜೊತೆ ಮಾತು ನಿಲ್ಸಕ್ಕೇ ರೆಡಿ ಇರಲ್ಲ. ವಾಟ್ಸ್ ಅಪ್ ನಲ್ಲಿ ಮೆಸೇಜ್ ಮಾಡ್ತಾ ಇದ್ರೆ, ಬೈ ಅಂತ ಹೇಳಿದ್ಮೇಲೂ ಇನ್ನೂ 10 ಮೆಸೇಜ್ ಇರತ್ತೆ. ನಿಂಗೆ ಹೇಳೋಂತ ವಿಷ್ಯ ಏನಾದ್ರೂ ಇದ್ದೇ ಇರತ್ತೆ.

12. ನಿನ್ನ ಹತ್ರ ಅವಳ ವಿಷ್ಯ ಎಲ್ಲಾ ಹೇಳ್ಕೊಳಕ್ಕೆ ಕಾಯ್ತಾ ಇರ್ತಾಳೆ

ಆಗಾಗ ನೀನು ಅವಳ ಬಗ್ಗೆ ಕೇಳ್ಬೇಕು ಅಂತ ಇಷ್ಟಪಡ್ತಾಳೆ. ಸ್ವಲ್ಪ ಅವಕಾಶ ಸಿಕ್ರೂ ಸಾಕು ಅವಳ ವಿಷ್ಯ ಎಲ್ಲಾ ಹೇಳ್ಕೋತಾಳೆ. ಅವಳ ಸಮಸ್ಯೆ ಎಲ್ಲಾ ನಿನ್ನ ಹತ್ರ ಹೇಳ್ಕೊಳ್ಳಕ್ಕೆ ಕಾಯ್ತಾ ಇರ್ತಾಳೆ.

13. ಬೇಕಂತ ನಿನ್ಮೇಲೆ ಕೋಪ ಮಾಡ್ಕೊತಾಳೆ

ಒಂದೊಂದ್ಸಲ ಕಾರಣಾನೇ ಇಲ್ದೆ ನಿನ್ನ ಮೇಲೆ ಕೋಪ ಮಾಡ್ಕೋತಾಳೆ. ಅವಳು ನಿಮ್ಮ ಗಮನ ಸೆಳ್ಯಕ್ಕೆ ಮಾಡೋ ಟ್ರಿಕ್ ಇದು.

14. ನಿನ್ನಲ್ಲಿ ತುಂಬಾ ಭರವಸೆ ಇದೆ ಅಂತ ತೋರಿಸ್ಕೋತಾಳೆ

ನಿನ್ನಲ್ಲಿ ತುಂಬಾ ಭರವಸೆ ಇದೆ ಅಂತ ತೋರಿಸ್ಕೋತಾಳೆ. ಅವಳ ಬಗ್ಗೆ ನಿಮಗೆ ಎಲ್ಲಾ ವಿಷ್ಯ ಹೇಳಕ್ಕೆ ರೆಡಿ ಇರ್ತಾಳೆ. ಅವಳ ಎಲ್ಲಾ ಗೆಳೆಯ ಗೆಳೆತಿಯರಿಗಿಂತ ನಿನ್ನಲ್ಲಿ ಹೆಚ್ಚು ನಂಬಿಕೆ ಇಟ್ಟಿರ್ತಾಳೆ.

‘ಜೀವ ಝಲ್ ಅಂದದೆ, ನಂಗೆ ಲವ್ ಆಗಿದೆ’ ಅಂತ ನೀನು ಅಂದ್ಕೊಳ್ಳೋ ಹಂಗೆ ಅವಳು ಅನ್ಕೋತಿದಾಳಾ? ಇನ್ನೇನು ಬಾಕಿ ‘ರೆಡ್ ರೋಸ್’ ಕೊಟ್ಟೇ ಬಿಡು ಮತ್ತೆ.