ಕೆಂಚ ಒಂದು ದಿನ ರೇಡಿಯೋ ಮಿರ್ಚಿ ಕಾಲರ್ ಶೋಗೆ ಫೋನ್ ಮಾಡೇಬಿಟ್ಟ.

ಆರ್.ಜೆ. ಫೋನ್ ಎತ್ತುಕೊಂಡು ಕೇಳ್ತಾನೆ: ‘ಹಲೋ, ನಿಮ್ಮ ಹೆಸರು?’

ಕೆಂಚ: ‘ನಾನು ಮಾತಾಡ್ತಿರೋದು ಸರಿಯಾಗಿ ಕೇಳಿಸ್ತಾ ಇದ್ಯಾ?’

ಆರ್.ಜೆ.: ‘ಹೂಂ, ಹೇಳಿ…’

ಕೆಂಚ: ‘ರೇಡಿಯೋ ಕೇಳ್ತಿರೋ ನನ್ನ ಹೆಂಡ್ತೀಗೂ ಕೇಳಿಸ್ತಾ ಇದ್ಯಾ?’

ಆರ್.ಜೆ. (ಸ್ವಲ್ಪ ಗರಂ ಆಗಿ): ‘ಹೌದ್ರೀ, ನಿಮ್ಮ ಹೆಸರೇನು?’

ಕೆಂಚ: ‘ಲೇ ನಂಜಿ, ನಿಂಗೆ ನಾನು ಮಾತಾಡ್ತಿರೋದು ಕೇಳಿಸ್ತಾ ಇದ್ರೆ ಮೋಟರ್ ಆನ್ ಮಾಡೇ… ನಾನು ಮಾಡಿ ಮೇಲೆ ಬಚ್ಚಲುಮನೇಲಿ ಇದೀನಿ… ಟ್ಯಾಂಕಲ್ಲಿ ನೀರು ಖಾಲಿ ಆಗೋಗಿದೆ…’