ಕೈ ತುತ್ತು ಕೊಟ್ಟು, ಪ್ರೀತಿಯ ಅಪ್ಪುಗೆಯಿಂದ ಮಕ್ಕಳ ಜೀವನ ರೂಪಿಸುವ ಅಮ್ಮ ಮಾಡುವ ತ್ಯಾಗ ಒಂದಿಷ್ಟಲ್ಲ. ಮಕ್ಕಳು ಏನೇ ಮಾಡಲಿ ಹೇಗೆ ಇರಲಿ ಅವರ ಮೇಲಿನ ವಾತ್ಸಲ್ಯ ಸ್ವಲ್ಪನೂ ಕಡಿಮೆ ಆಗಲ್ಲ.

ಅಮ್ಮ ಅನ್ನೋ ದೇವತೆ ಎಲ್ಲವೂ ಆಗಬಲ್ಲಳು – ಅನಿವಾರ್ಯತೆ ಬಂದಾಗ ಅಪ್ಪ, ಅಕ್ಕ, ಮಗಳು, ತಂಗಿ – ಏನು ಬೇಕಾದರೂ ಆಗಬಲ್ಲಳು. ಅಪ್ಪನ ಸಿಡುಕಿನ ನಡುವೆ ಮಗುವಿಗೆ ಗೆಳತಿಯಾಗಿ ಗೊತ್ತಾಗದ ಹಾಗೆ ಎಲ್ಲ ನಿಭಾಯಿಸಿಕೊಂಡು ಕೂಡ ಹೋಗಬಲ್ಲಳು.

ಈ ಮುಂದಿನ 14 ಕೆಲಸಗಳನ್ನು ನಿಮ್ಮಮ್ಮ ಹೇಗೆ ಮಾಡ್ತಿದ್ಲು ಅಂತ ನೆನಪಿಸಿಕೊಳ್ಳಿ…

1. ಹೊಟ್ಟೆ ತುಂಬಿದ್ರೂ ‘ಇನ್ನೊಂದು ತುತ್ತು’ ಅಂತಾಳೆ, ಮಿಕ್ಕಿದ್ದನ್ನ ತಾನೇ ತಿಂತಾಳೆ.

kssvv

"ಇನ್ನೊಂದ್ ತುತ್ತು, ಇನ್ನೊಂದ್ ಸ್ವಲ್ಪ ತಿನ್ನು."

"ಅಮ್ಮಾ, ಬೇಡ, ನಂಗೆ ಸಾಕು, ಸಾಕು…"

2. ಸ್ಕೂಲಿಗೆ ಡಬ್ಬಿ ಹಾಕಿ ಕಳಿಸಿದ್ದು ತಿಂದಿದ್ಯಾ ಅಂತ ದಿನಾಗ್ಲೂ ಕೇಳ್ತಾಳೆ.

knightleyemma

"ತಿನ್ನದೆ ಬಾ ಇವತ್ತು, ಮಾಡ್ತೀನ್ ನಿಂಗೆ"

"ಏನಮ್ಮಾ ದಿನಾ ಇಷ್ಟೋಂದ್ ಹಾಕಿ ಕೊಡ್ತ್ಯಾ, ನಂಗೆ ತಿನ್ನಕ್ಕಾಗಲ್ಲಾ"

3. ಮಾರ್ಕ್ಸ್ ಕಡಿಮೆ ಬಂದಾಗ ಅಪ್ಪನಿಗೆ ಹೆಂಗೆ ಮುಖ ತೋರ್ಸದು ಅಂತ ನಿಮ್ಮ ಪ್ರಶ್ನೆ. ಆಗ ಅಪ್ಪನ ಎದುರು ನಿಂತ್ಕೊಳ್ಳಕ್ಕೆ, ಸೈನ್ ಹಾಕಕ್ಕೆ ಸಹಾಯ ಮಾಡ್ತಾಳೆ.

huffpost

"ಅಮ್ಮಾ, ಪ್ಲೀಸ್ ಇಲ್ಲಿ ನಿನ್ ಸೈನ್ ಹಾಕು"

"ಅಪ್ಪಂಗ್ ಗೊತ್ತಾದ್ರೆ ಏನ್ ಮಾಡೋದು"

4. ತನ್ನ ಆರೈಕೆಗಿಂತ ನಿಮ್ಮ ಆರೋಗ್ಯದ ಕಡೆಗೇ ಹೆಚ್ಚಿನ ಗಮನ ಕೊಡ್ತಾಳೆ.

weddings

ದಿನಕ್ಕ್ ಒಂದ್ ಸಲ ಆದ್ರೂ "ಅಮ್ಮಾ, ನೀ ಹೇಗಿದ್ಯಾ " ಅಂತ ನೀವು ಕೇಳಬಹುದಲ್ಲವೇ?

5. ಮೊಬೈಲ್ ಕೊಟ್ಟು ಮೆಸೇಜ್ ಮಾಡೋದ್ ಹೇಳ್ಕೊಟ್ರೆ ಮಾರನೆ ದಿನ "en tnde ivttu" ಅಂತ SMS ಕಳಿಸ್ತಾಳೆ

radarmediadevelopment

"ಅಮ್ಮಾ, ಫೋನಲ್ಲೂ ನನ್ನ ಹೊಟ್ಟೇದೇ ಚಿಂತೆ ನಿನಗೆ!"

6. ಅಮ್ಮ ಇದ್ದಾಗ ಅಲಾರಂ ಗಡಿಯಾರವೇ ಬೇಕಿಲ್ಲ. ನಿಮಗಿಂತ ಮುಂಚೆ ಯಾವಾಗಲೂ ಎದ್ದು ರೆಡಿ!

idiva

"ಏಳು, ಬೇಗ ಏದ್ದೇಳು, ಸ್ಕೂಲ್ಗೆ ಹೊತ್ತಾಯ್ತು" 

"ಇರಮ್ಮಾ , ಇನ್ನೊಂದ್ ಸ್ವಲ್ಪ ಹೊತ್ತು, ಏಳ್ತೀನಿ"

7. ಅಪ್ಪ ನಿಮ್ಮ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡ್ಕೊಂಡಾಗ ಎಲ್ಲ ಕೆಲ್ಸ ಬಿಟ್ಟು ಕಾಪಾಡಕ್ಕೆ ಓಡಿ ಬರ್ತಾಳೆ.

news

"ಅಬ್ಬ, ನಮ್ಮಮ್ಮ ಬಂದ್ಲು, ಸದ್ಯ ಬದುಕ್ದೆ"

8. ಅಪ್ಪಿ ತಪ್ಪಿ ಒಂದ್ ದಿನ ಮನೆಗೆ ಬರೋದು ಲೇಟ್ ಆದ್ರೆ ಒಂದೇ ಸಮನೆ ಫೋನ್ ಮಾಡ್ತಾಳೆ.

motivateme

"ಎಲ್ಲಿದ್ಯಾ, ಆರಾಮಾ? ಯಾಕ್ ಲೇಟು?"

"ಇರಮ್ಮ ಬಂದೆ, ಇವತ್ತು ಸ್ಪೆಶಲ್ ಕ್ಲಾಸ್ ಇತ್ತು"

9. ಏಷ್ಟೇ ಕೆಲ್ಸ ಇದ್ದ್ರೂ ರಾತ್ರಿ ಮಲ್ಕೊಬೇಕಾದ್ರೆ ನಿಮ್ ಪಕ್ಕ ಕೂತ್ಕೊಂಡು ನೀವ್ ಗೊಣ ಗೊಣ ಅಂದಿದಕ್ಕೆಲ್ಲಾ ಉತ್ತರ ಕೊಡ್ತಾಳೆ.

mashable

ನೀವು ದೊಡ್ಡವರಾಗಿ ನಿಮ್ ಕೆಲ್ಸದ್ ಬಗ್ಗೆ ಏನೂ ಅರ್ಥ ಆಗದೇ ಇದ್ರೂ ಅದರ ಬಗ್ಗೆ ನಿಮ್ಮ ಜೊತೆ ಮಾತಾಡ್ತಾಳೆ. ಬೆಟ್ಟದಷ್ಟಿರೋ ತನ್ನ ಕೆಲಸದ ಬಗ್ಗೆ ಯಾವತ್ತೂ ಹೇಳಲ್ಲ.

10. ನೀವು ನೈಟ್-ಔಟ್ ಮಾಡಿ ಓದ್ಬೇಕಾದ್ರೆ ನಿದ್ದೆ ಮಾಡ್ದೆ ಇರ್ಲಿ ಅಂತ ಎಷ್ಟು ಹೊತ್ತಿಗೆ ಬೇಕಾದರೂ ಕಾಫಿ ಮಾಡಿ ಕೊಡ್ತಾಳೆ.

hackingfamily

"ಓದ್ತಾ ಓದ್ತಾ ನಿದ್ದೆ ಮಾಡ್ಬೇಡ್ರೋ, ಕಾಫಿ ತೊಗೊಳ್ಳಿ … ಪ್ರತಿ ಒಂದ್ ಗಂಟೆಗೆ ಎದ್ದು ನೋಡ್ತಿನಿ, ಸರಿಯಾಗ್ ಓದಿ"

"ಆಯ್ತು ಅಮ್ಮಾ"

11. ನಿಮಗೆ ನೋವಾದಾಗ ತಾನು ಅತ್ತುಬಿಡುತ್ತಾಳೆ.

ibtimes

ತನ್ನ ನೋವು ಯಾರಿಗೂ ತೋರ್ಸಲ್ಲ.

12. ಏನೇ ತೊಂದ್ರೆ ಬರಲಿ, ನಿಮ್ಮ ಜೊತೆ ನಿಂತ್ಕೊಡು ಸಹಾಯ ಮಾಡ್ತಾಳೆ. ಆಗದೆ ಇದ್ರೂ ಪ್ರಯತ್ನ ಮಾಡ್ತಾಳೆ.

circleofmoms

ಪ್ರಪಂಚದಲ್ಲಿ ಯಾರ್ ನಿಮ್ ಕೈ ಬಿಟ್ರೂ ಅಮ್ಮ ಬಿಡಲ್ಲ ಅಲ್ವಾ?

13. ನಿಮ್ಗೆ ಏಷ್ಟೇ ಬೈದ್ರೂ, ಹೊಡೆದ್ರೂ, ನಿಮ್ಮನ್ನ ಯಾವತ್ತೂ ಇಷ್ಟ ಪಟ್ಟೇ ಪಡ್ತಾಳೆ.

chem11

"ಹೋಗ್ಲಿ ಬಿಡು ಮಗು, ಏನೋ ಬೈದ್ಬಿಟ್ಟೆ."

"ಆಯ್ತು ಬಿಡಮ್ಮ."

14. ನೀವು ಏಷ್ಟೇ ದೊಡ್ದವರಾದ್ರೂ, ನಿಮಗೆ ಮಕ್ಕಳಾದರೂ, ಅಮ್ಮನಿಗೆ ನೀವು ಮಕ್ಕಳೇ.

imgarcade

ಅಮ್ಮ ನಮ್ ಜೊತೆಗ್ ಏಷ್ಟು ದಿನ ಇದ್ದ್ರೂ ಸಾಲದು! ನೆನಪಾದಳಾ?

ಹೊರಚಿತ್ರ: supportindia