ಅವನು ನನ್ನ ಬೆಸ್ಟ್ ಫ್ರೆಂಡ್ ಅಲ್ಲ

ಕೆಂಚ ಸೋಮವಾರ ಪ್ಯಾಟೇಗೆ ಹೋದನಂತೆ.

ಅಲ್ಲಿ ಅವನ ದೂರದ ನೆಂಟ ಒಬ್ಬ ಸಿಕ್ಕಿ ಹೇಳಿದನಂತೆ: ‘ಪ್ರತಿ ಸೋಮವಾರ ಮಧ್ಯಾಹ್ನ ಇಷ್ಟು ಹೊತ್ತಿಗೆ ನಿನ್ನ ಬೆಸ್ಟ್ ಫ್ರೆಂಡ್ ಜೊತೆಗೆ ನಿನ್ನ ಹೆಂಡತಿ ನಿಮ್ಮ ಮನೇಲೇ ಚೆಲ್ಲು ಚೆಲ್ಲಾಗಿ ನಡ್ಕೋತಾಳೆ. ನೀನು ಆಫೀಸಲ್ಲಿ ಇರ್ತೀಯ, ಆದ್ದರಿಂದ ನಿನಗೆ ಇದೆಲ್ಲ ಗೊತ್ತಿಲ್ಲ’.

ಕೆಂಚ ನಿಜಾನಾ ಅಂತ ನೋಡಕ್ಕೆ ಮನೆಗೆ ವಾಪಸ್ ಹೋದನಂತೆ...

ಆಮೇಲೆ ನೆಮ್ಮದಿಯಿಂದ ಪ್ಯಾಟೇಗೆ ವಾಪಸ್ ಬಂದು ಆ ನೆಂಟಂಗೆ ಹೇಳಿದನಂತೆ: ‘ನೋಡು, ನಿನ್ನ ನಾಲಿಗೆ ಮೇಲೆ ಹಿಡಿತ ಇರಲಿ. ಏನೇನೋ ಬೊಗಳಬೇಡ. ಅವನು ನನ್ನ ಬೆಸ್ಟ್ ಫ್ರೆಂಡೂ ಅಲ್ಲ, ಏನೂ ಅಲ್ಲ. ಅವನು ಯಾರು ಅಂತಾನೇ ನನಗೆ ಗೊತ್ತಿಲ್ಲ.’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: