ಈ ನಾಕುವರೆ ನಿಮಿಷದ ಆಡಿಯೋ ಕೇಳಿದ್ಮೇಲೆ, ಬೇರೇನೂ ಕೇಳದೇ 10 ನಿಮಿಷ ಅದೇ ಭಾವನೇಲೇ ಕಳದೋಗಣ ಅನ್ಸುತ್ತೆ. ವಿನಾಯಕ ಜೋಷಿ ಔರು ಈ ಆಡಿಯೋದಲ್ಲಿ ದೂರವಾಗಿರೋ ತಮ್ಮ ತಂದೆ ಜೊತೆ ಆಡಿರೋ ಮಾತು, ಔರ್ಗೆ ಔರ್ ತಂದೆ ಬಗ್ಗೆ ಇದ್ದ ಪ್ರೀತಿ ಗೌರವ ಎಷ್ಟು ಅಂತ ತೋರ್ಸುತ್ತೆ. ಜೀವನದ ಬೇರ್ಬೇರೆ ಸ್ಟೇಜಲ್ಲಿ ಒಬ್ಬ ಮಗನ ಲೈಫಲ್ಲಿ ಔನ ತಂದೆ ಜೊತೆಗಿಲ್ದೇ ಹೋದಾಗ ಮಗನ ಮನಸ್ಸಿನಲ್ಲಿ ಆಗೋ ತಳಮಳ, ತಂದೆ ಜೊತೆಗಿಲ್ದೇ ಹೋದ್ರೂ ಅವರ ನಡೆ-ನುಡಿಯನ್ನ ಬಾಳಲ್ಲಿ ಅಳವಡಿಸಿಕೊಂಡು ಮಗನಾದೋನು ಔರನ್ನ ಜೀವಂತವಾಗಿಟ್ಟುಕೊಂಡಿರೋ ಪರಿ… ಅಬ್ಬಬ್ಬ ಕೇಳ್ತಿದ್ರೆ ಕಣ್ಣಾಲಿ ಒದ್ದೆ ಆಗುತ್ತೆ, ಮನಸ್ಸು ತುಂಬಿ ಬರುತ್ತೆ.

ಮೂಲ

ಜೋಷಿ ಆವರ ಮಾತಿನ ಪದಗಳಲ್ಲಿ ಒಂದಿಷ್ಟು ಭಾವನೆಗಳು ಗೊತ್ತಾದ್ರೆ, ಅದರ ನೂರ್ಪಟ್ಟು ಅವರ ದನಿಯಲ್ಲೇ ಹೊರಬರುತ್ತೆ. ಆಳವಾದ ಅವರ ಗಡುಸು ಧ್ವನಿಯಲ್ಲಿ ಮೂಡಿಬರೋ ಭಾವನೆಗಳು ಎದೇಲಿ ಆಳವಾಗಿ ಉಳಿಯೋಹಾಗ್ ಮಾಡುತ್ತೆ. ನೀವೊಬ್ಬ ಒಳ್ಳೆ ತಂದೆ ಆಗ್ಬೇಕು, ಒಳ್ಳೆ ಮಗ ಆಗ್ಬೇಕು ಅನ್ನೋ ಆದರ್ಶಗಳು ನಿಮ್ಗೇ ಗೊತ್ತಿಲ್ದೇ ಮನಸಲ್ಲಿ ಬಿತ್ತಿಹೋಗುತ್ತೆ. ಮಾರನೇ ದಿನದ ಹೊತ್ತಿಗೆ ಈ ಆಡಿಯೋ ಡೈಲಾಗುಗಳು ನೆನಪಿಲ್ದೇ ಹೋದ್ರೂ ಅದರ ಫೀಲಿಂಗು ಹಾಗೇ ಉಳಿದುಬಿಡುತ್ತೆ. ಇದು ವಿನಾಯಕ ಜೋಷಿಯವ್ರು ಔರ್ ತಂದೆ ಬಗ್ಗೆ ಆಡಿರೋ ಮಾತುಗಳೇ ಇರ್ಬೋದು, ಆದ್ರೆ ತಂದೆಯಿಂದ ದೂರ ಆಗಿರೋ ಪ್ರತಿಯೊಬ್ಬ ಮಗನ ಮನಸ್ಸಲ್ಲೂ ಬರೋ ಮಾತುಗಳ ಪ್ರತಿಧ್ವನಿ ಈ ಆಡಿಯೋ ಅಂತಾನೇ ಹೇಳ್ಬೋದು…

ಇಲ್ಲಿದೆ ಆಡಿಯೋ… ಕೇಳಿ…

 
ಮಾಹಿತಿ, ಹೊರಚಿತ್ರ: ಮೂಲ