"ಈ ವರ್ಷ ಹೇರ್ ಸ್ಟೈಲ್ ಬೇರೆ ಮಾಡ್ಕೋಬೇಕು ಅಂತಿದ್ದೆ…ಆದ್ರೆ ಯಾವ್ ತರ ಅಂತ ಇನ್ನೂ ತೀರ್ಮಾನ ಮಾಡಕ್ಕಾಗಿಲ್ಲ" ಅಂತ ಯಾರೋ ಹೇಳಿದ್ದು ಕೇಳಿಸ್ತು, ಅದಕ್ಕೇ ಅಂಥವರಿಗೆ ಸಹಾಯ ಆಗೋಹಂಗೆ ಒಂದು ಪೋಸ್ಟ್ ಬರೆಯೋಣ ಅನ್ನಿಸಿತು.
ಧೈರ್ಯವಾಗಿ ಬೇರೆ ಏನಾದರೂ ಟ್ರೈ ಮಾಡೋಣ ಅನ್ನಿಸ್ತಾ ಇದ್ಯಾ? ಯೋಚ್ನೆ ಮಾಡಬೇಡಿ, ಈ ವರ್ಷ ಏನೆಲ್ಲಾ ಹೊಸ ಹೊಸ ಸ್ಟೈಲ್ ಮಾಡಬೋದು ಅಂತ ನಾವಿಲ್ಲಿ ಹೇಳಿದೀವಿ ನೋಡಿ, ಮಾಡ್ಕೊಳಿ, ಮಜಾ ಮಾಡಿ.
1. ಕುದುರೆ ಜುಟ್ಟು ಕುರುಚಲು ಗಡ್ಡ
ಇದೊಂತರ ಹೊಸ ಟ್ರೆಂಡ್ ಆಗಿದೆ. ಗಡ್ಡ ಬಿಟ್ಟು ಗಡ್ದಪ್ಪ ಫೇಮಸ್ಸಾಗಿದ್ದೆ, ಎಲ್ರು ಗಡ್ಡ ಬಿಡೋದು, ಜುಟ್ಟು ಕಟ್ಟೋದು.
ಹೆಣ್ಣಮಕ್ಳು ನಾವೇನ್ ಕಮ್ಮಿ ಅಂತ ಕೂದ್ಲು ಕಟ್ ಮಾಡ್ಕೊತಿದ್ದಾರೆ, ಗಂಡ ಮಕ್ಳು ನಾವೇನ್ ಕಮ್ಮಿ ಅಂತ ಉದ್ದ ಕೂದ್ಲು ಬಿಡ್ತಿದಾರೆ.
2. ಫುಟ್ಬಾಲ್ ಆಟಗಾರನ ಹೇರ್ ಸ್ಟೈಲ್
ಇದೀಗ ಬರಿ ಫುಟ್ಬಾಲ್ ಆಟಗಾರನ ಶೈಲಿ ಅಲ್ಲ. ಇದು ಎಲ್ಲರಿಗೂ ಚೆನ್ನಾಗಿ ಕಾಣತ್ತೆ, ಸಕತ್ತಾಗಿ ಕಾಣ್ಸತ್ತೆ ಟ್ರೈ ಮಾಡಿ
3. ಮಧ್ಯೆ ಸ್ಪೈಕ್ ಮಾಡಿ ಸೈಡೆಲ್ಲ ತೆಗಿಸೋದು
ಕಾಲೇಜಿಗೆ ಹೋಗೋ ಹುಡುಗರಿಗೆ ಸಕತ್ತಾಗಿ ಕಾಣತ್ತೆ, ಈ ತರ ಕಟಿಂಗ್ ಮಾಡಿಸಿಕೊಂಡ್ರೆ ಸ್ವಲ್ಪ ಚಿಕ್ಕವರ ಹಾಗೆ ಕಾಣ್ತೀರಿ
4. ಹೆಬ್ಬುಲಿ ಸಿನೆಮಾ ಸುದೀಪ್ ಹೇರ್ ಸ್ಟೈಲ್
ಅಬ್ಬಬ್ಬಾ ಯಾರ್ ನೋಡುದ್ರು ಇದೆ ತರ ಈಗ.
5. ವಿರಾಟ್ ಕೊಹ್ಲಿ ಸ್ಟೈಲ್
ಇದಪ್ಪ ಸ್ಟೈಲ್ ಅಂದ್ರೆ, ಈ ಸ್ಟೈಲ್ ಅದೆಷ್ಟ್ ಜನ ಹೆಣ್ಣ್ ಮಕ್ಕಳ ನಿದ್ದೆ ಹಾಳ್ ಮಾಡಿತೋ? ಪರ್ವಾಗಿಲ್ಲ ಸುಮಾರ್ ಹುಡುಗ್ರು ಉದ್ದಾರ ಆದ್ರು.
6. ತೆಂಗಿನ್ಕಾಯ್ ಮೇಲೆ ಚೂರ್ ಕೂದ್ಲು!
ಹೌದು ಬೇಸಿಗೇಗೆ ಸರಿಯಾಗಿರತ್ತೆ, ಸುತ್ತ ಬೋಳಿಸಿ ಮದ್ಯದಲ್ಲಿ ಸ್ವಲ್ಪ ಬಿಡಿ ಸಾಕು, ಚೆನಾಗು ಕಾಣತ್ತೆ ಆರಾಮಾಗು ಇರತ್ತೆ
7. ಕಲ್ಲಂಗಡಿ ಹಣ್ಣಿಗೆ ರೆಕ್ಕೆ
ಎಲ್ರಿಗೂ ಸೆಟ್ ಆಗಲ್ಲ, ಆದ್ರೆ ಸೆಟ್ ಆಗೋರಿಗೆ ತುಂಬಾ ಚೆನ್ನಾಗಿ ಕಾಣತ್ತೆ. ಯಾರಿಗ್ ಗೊತ್ತು ನಿಮಗೆ ಸೆಟ್ ಆಗಬೋದು, ಟ್ರೈ ಮಾಡಿ.
8. ಡೀಸೆಂಟ್ ಸ್ಟೈಲ್ ಇದು
ಸೈಡಲ್ಲಿ ಕಮ್ಮಿ ಇರಲಿ, ಮಧ್ಯೆ ಜಾಸ್ತಿ ಬಿಡಿ ನೀಟಾಗಿ ಬಾಚಿಕೊಳ್ಳಿ, ಚೆನ್ನಾಗಿ ಕಾಣತ್ತೆ
9. ಉದ್ದ ಕೂದಲು ಜಾಸ್ತಿ ಗಡ್ಡ
ಹೊಸ ಹೊಸ ಸಿನೆಮಾದಲ್ಲೆಲ್ಲ ಹೀಗೇನೆ, ಆದ್ರೆ ಚೆನ್ನಾಗಿ ಕಾಣತ್ತೆ ಕಣ್ರೀ
10. ಪೈನ್ ಆಪಲ್ ಹೇರ್ ಕಟ್
ಇದೇನು ವಿಚಿತ್ರವಾಗಿದೆ ಅಂತೀರಾ, ನಿಜ ಹೇಳ್ಬೇಕು ಅಂದ್ರೆ ಒಂತರಾ ಚೆನ್ನಾಗಿದೆ, ತುಂಬಾ ಜನ ಇಷ್ಟ ಪಡ್ತಿದಾರೆ