ಅದೇ ಕಡೆಯಿಂದ ನಾನು ಊದಲ್ಲ!

ಒಂದು ದಿನ ಕೆಂಚ ತನ್ನ ಎತ್ತಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ತುಂಬ ಬೇಜಾರಾಯ್ತಂತೆ.

ಎತ್ತಿಗೆ ಮೆಳ್ಳಗಣ್ಣು ಬಂದುಬಿಟ್ಟಿದೆ.

ಸರಿ ಮಾಡಿಸಕ್ಕೆ ದೊಡ್ಡಾಸ್ಪತ್ರೆಗೆ ಕರ್ಕೊಂಡು ಹೋದ್ರೆ ಚೆನ್ನಾಗಿ ದುಡ್ಡು ಸುಲೀತಾರೆ ಅನ್ಕೊಂಡು ಹಳ್ಳೀಲೇ ಒಬ್ಬ ದನಿನ್ ಡಾಕ್ಟರ್ ಹತ್ರ ಕರ್ಕೊಂಡ್ ಹೋದ್ನಂತೆ. ಡಾಕ್ಟ್ರು ಎತ್ತಿನ ಕಣ್ಣು ನೋಡಿ ‘ಅಂಥದ್ದೇನೂ ಆಗಿಲ್ಲ, ಹೆದರ್ಕೋಬೇಡಿ’ ಅಂದನಂತೆ.

‘ಕೆಂಚ, ನೀನು ಮುಂದೆ ನಿಂತುಕೊಂಡು ಕಣ್ಣು ನೋಡ್ತಾ ಇರು, ನಾನು ಎತ್ತಿನ ತಿಕಕ್ಕೆ ಈ ಪೈಪ್ ಹಾಕಿ ಜೋರಾಗಿ ಗಾಳಿ ಊದ್ತೀನಿ. ಕಣ್ಣು ಸರಿ ಹೋದಾಗ ಹೇಳು’

ಕೆಂಚ ಡಾಕ್ಟ್ರು ಹೇಳಿದಂಗೆ ಮಾಡಿದನಂತೆ. ನಾಲ್ಕು ಸಲಿ ಊದಿದ ತಡ ಎತ್ತಿನ ಮೆಳ್ಳಗಣ್ಣು ಮಾಯ. ಕೆಂಚ ನೂರು ರೂಪಾಯಿ ಕೊಟ್ಟು ಎತ್ನ ಕರ್ಕೊಂಡು ಹೊರಟನಂತೆ.

ಹಂಗೇ ನಾಲ್ಕು ತಿಂಗಳು ಕಳಿದ ಮೇಲೆ ಒಂದು ದಿನ ಮತ್ತೆ ಮೆಳ್ಳಗಣ್ಣು ಕಾಣಿಸಿಕೊಳ್ತಂತೆ. ಕೆಂಚನಿಗೆ ಮತ್ತೆ ಬೇಜಾರು. ತಿರ್ಗಾ ಅದೇ ಡಾಕ್ಟರ್ನ ಕರಿಯಕ್ಕೆ ಮೊಬೈಲ್ ಎತ್ತುಕೊಂಡನಂತೆ. ಆದರೆ ಅವನ ಸಿಸ್ಯ ಸೀನ ‘ಬ್ಯಾಡ ತಡಿ’ ಅಂದನಂತೆ.

‘ಯಾಕ್ಲಾ?’

‘ಆ ಡಾಕ್ಟ್ರು ಮಾಡಿದ್ನ ನಾವೇ ಮಾಡಬೋದಲ್ಲ?’

‘ಹೌದು ಕಣ್ಲಾ, ನೀನು ತಿಕಕ್ಕೆ ಪೈಪ್ ಹಾಕಿ ಊದು, ನಾನು ಕಣ್ ನೋಡ್ತೀನಿ’ ಅಂದನಂತೆ ಕೆಂಚ.

ಅದಕ್ಕೆ ಸೀನ ಒಂದು ಪೈಪ್ ತೊಗೊಂಡು ಬಂದು ಎತ್ತಿನ ತಿಕಕ್ಕೆ ಸಿಕ್ಕಿಸಿ ನಾಲ್ಕು ಸಲ ಜೋರಾಗಿ ಊದಿದನಂತೆ. ಆದರೆ ಏನೂ ಆಗಲಿಲ್ಲ.

ಅದಕ್ಕೆ ಕೆಂಚ ‘ಥೂ ನನ್ ಮಗ್ನೆ ನಿಂಗೆ ಸರಿಯಾಗಿ ಊದಕ್ಕೆ ಬರಲ್ಲ, ಇಲ್ಲಿ ಬಾ’ ಅಂತ ಸೀನನ್ನ ಎತ್ತಿನ ಮುಖದ ಹತ್ತಿರ ನಿಲ್ಲಿಸಿ ತಾನು ಹಿಂದಕ್ಕೆ ಹೋದನಂತೆ.

ಆಮೇಲೆ ಎತ್ತಿನ ತಿಕದಿಂದ ಪೈಪ್ ತೆಗೆದು ಉಲ್ಟಾ ಮಾಡಿ ಸಿಕ್ಕಿಸಿ ಊದಕ್ಕೆ ಹೋಗ್ತಾನೆ... ಆಗ ಸೀನ ‘ಅಣ್ಣಾ ಇದ್ಯಾಕಣ್ಣ ಕಿತ್ತಿ ಉಲ್ಟಾ ಸಿಕ್ಕಿಸಿದೆ?’ ಅಂದನಂತೆ.

ಅದಕ್ಕೆ ಕೆಂಚ ಹೇಳ್ತಾನೆ - ‘ಲೋ ನನ್ ಮಗ್ನೆ, ನೀನು ಊದಿದ್ ಕಡೆಯಿಂದ ನಾನು ಊದದು ಸರಿಯಲ್ಲ ಅಂತ ನಿಂಗೆ ಗೊತ್ತಿಲ್ಲವೇನ್ಲಾ?’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: