https://i.ytimg.com/vi/nmwgirgXLYM/maxresdefault.jpg

ದಿನ ಗಂಟೆಗಟ್ಟಲೆ ಜಿಮ್ಮು ಅದು ಇದು ಮಾಡಿ ಮೈ ಕೈ ನೋವ್ ಮಾಡ್ಕೊಂಡು ತೂಕ ಕಮ್ಮಿ ಮಾಡ್ಕೋಬೇಕು ಅಂತ ತಲೆ ಕೆಡುಸ್ಕೊಂಡು ಏನೇನೋ ಮಾಡ್ತಿರ್ತೀವಿ ಆದ್ರೆ ಅಷ್ಟೆಲ್ಲ ತಲೆ ಕೆಡುಸ್ಕೊಬೇಡಿ. ನಾವು ಇಲ್ಲಿ ಹೇಳಿರೋ ಥರ 4 ನಿಮಿಷ ಮಾಡಿ ಸಾಕು. ಮುಂದೆ ಓದಿ…

1. ಬಸ್ಕಿ ಹೊಡ್ಯೋದು

ಕಾಲು ಸ್ವಲ್ಪ ಅಗಲ ಮಾಡ್ಕೊಂಡು ಹಿಂಭಾಗಾನ ನಿದಾನಕ್ಕೆ ಕೆಳಕ್ಕೆ ಮಾಡಿ, ಅದೇ ಕುರ್ಚಿಮೇಲೆ ಕೂರ್ತೀರಲ್ಲ ಹಾಗೆ.

ನಿಮ್ಮ ಬೆನ್ನು ನೆಟ್ಟಗೆ ಇಟ್ಕೊಳಿ. ಮತ್ತೆ ಮಾಮೂಲಿ ಪೊಸಿಷನ್ನಿಗೆ ಬನ್ನಿ.

ಕಾಲು ಮತ್ತೆ ತೊಡೆಗೆ ಇದು ಒಳ್ಳೆ ವ್ಯಾಯಾಮ. ಈ ಥರ 60 ಸೆಕೆಂಡ್ ಮಾಡಿ ಸಾಕು.

ಮೂಲ

2. ಪುಶ್ ಅಪ್ಸ್ ಮಾಡೋದು

ಮೊದಲು ಪೊಸಿಷನ್ A ನಲ್ಲಿ ಭುಜಾನ ಅಗಲಿಸಿ ಇಟ್ಟ್ಕೊಳಿ ಆಮೇಲೆ ನಿದಾನಕ್ಕೆ ಕೈ ಮಡಚುತ್ತಾ ಕೆಳಗೆ B ಪೊಸಿಷನ್ನಿಗೆ ಹೋಗಿ.

ಇದನ್ನೇ ಮಾಡ್ತಾ ಇರಿ. ಎದೆ ಮತ್ತೆ ತೋಳಿನ ಬಲಕ್ಕೆ ಇದು ಸಿಕ್ಕಾಪಟ್ಟೆ ಒಳ್ಳೇದು.

ಈ ಥರ 30 ಸೆಕೆಂಡ್ ಮಾಡಿ ಸಾಕು. 

ಮೂಲ

3. ಬೆಟ್ಟ ಹತ್ತೊಥರ ಮಾಡೋದು

ಇದು ನಿಮ್ಗೆ ಹೊಟ್ಟೆ ಭಾಗದ ಕೊಬ್ಬು ಕರಗಿಸಕ್ಕೆ ಸಹಾಯ ಮಾಡತ್ತೆ.

ಮೊದ್ಲು ಒಂದು ಕಾಲು ಮುಂದಕ್ಕೆ ಮಾಡ್ತಾ ಮಂಡೀನಾ ಎದೆ ಹತ್ರಕ್ಕೆ ಬರೋತರ ಮಾಡಿ ಮತ್ತೆ ಕಾಲನ್ನ ಹಿಂದೆ ತೊಗೊಳ್ಳಿ. 

ಇನ್ನೊಂದು ಕಾಲಿಂದ ಮತ್ತೆ ಹೀಗೆ ಮಾಡಿ.

ಈ ಥರ 30 ಸೆಕೆಂಡ್ ಮಾಡಿ ಸಾಕು. 

ಮೂಲ

4. ಕಾಲನ್ನ ಮುಂದಕ್ಕೆ ಹಿಂದಕ್ಕೆ ಮಾಡೋದು

ನೆಟ್ಟಗೆ ನಿಂತ್ಕೊಳಿ. ಭುಜ ಅಗಲಿಸಿಕೊಂಡು ಸೊಂಟದ ಮೇಲೆ ಕೈ ಇಟ್ಕೊಂಡು ನಿಲ್ಲಿ.

ಒಂದು ಕಾಲು ಮಂಡಿ ಮಡಚಿ. ಹೇಗೆ ಅಂದ್ರೆ ಇನ್ನೊಂದು ಕಾಲಿನ ಮಂಡಿ ನೆಲಕ್ಕೆ ತಾಗಬೇಕು. ಫೋಟೋಲಿ ಪೊಸಿಶನ್ B. 

ಆದ್ರೆ ನಿಮ್ಮ ಬೆನ್ನನ್ನ ನೆಟ್ಟಗೆ ಇಟ್ಕೊಂಡಿರಬೇಕು. ಈ ಥರ 60 ಸೆಕೆಂಡ್ ಮಾಡಿ ಸಾಕು.

ಮೂಲ

5. ಜಂಪ್ ಮಾಡೋದು

ಇದನ್ನ ಮಿಲಟರಿ ಟ್ರೈನಿಂಗ್ನಲ್ಲಿ ಇರೋರು ಮಾಡ್ತಾರೆ. ಹೃದಯದ ಆರೋಗ್ಯಕ್ಕೆ ಒಳ್ಳೇದು.

ಮೊದ್ಲು ಪೊಸಿಶನ್ A ತರ ನಿಂತ್ಕೊಳಿ. ಆಮೇಲೆ ಪೊಸಿಶನ್ B ಗೆ ಬನ್ನಿ —- ಕೈ ಮೇಲೆತ್ತಿ. ಎರಡೂ ಕಾಲು ಅಗಲ ಮಾಡಿ.

ಈಗ ಜಂಪ್ ಮಾಡಕ್ಕೆ ಶುರು ಮಾಡಿ…ಜಂಪ್ ಮಾಡ್ತಾ ಮಾಡ್ತಾ ಕಾಲು ಅಗಲಿಸೋದು ಹಾಗೆ ಕೈ ಎತ್ತೋದು ಮಾಡಿ. ನಂತರ ಮತ್ತೆ ಕಾಲು ಹತ್ರ ತನ್ನಿ, ಕೈ ಕೆಳಗೆ ಬಿಡಿ.

ಈ ಥರ 60 ಸೆಕೆಂಡ್ ಮಾಡಿ ಸಾಕು.

ಮೂಲ

ಅಷ್ಟೇ ಸಾಕು. ದಿನನಿತ್ಯದ ಕೆಲ್ಸ ಮೈ ಬಗ್ಗಿಸಿ ನೀವೇ ಮಾಡಿ, ಸರ್ಯಾಗಿ ತಿನ್ನಿ. ಯಾಕೆ ಮೈನ್ಟೇನ್ ಆಗಲ್ಲ ಹೇಳಿ?