ಈ 8 ಹೊಸ ವಾಟ್ಸಪ್ ಫೀಚರ್ಗಳು ಬಂದ್ಮೇಲೆ ನೀವು ಇನ್ನೂ ಏನೇನ್ ಮಾಡ್ಬೋದು ನೋಡಿ!

ವೀಡಿಯೋ ಕಾಲಿಂಗ್ ಮತ್ತೆ ಬರ್ತಿದೆ!

ಈಹೊತ್ತು ವಾಟ್ಸಪ್ ಇಲ್ದೇ ಇರೋ ಮೊಬೈಲೇ ಇಲ್ಲ. ಗುಡ್ ಮಾರ್ನಿಂಗಿಂದ ಹಿಡಿದು ಗುಡ್ ನೈಟ್ ತನಕ ಎಲ್ಲಾ ವಾಟ್ಸಾಪಲ್ಲೇ ನಡೆದೋಗುತ್ತೆ. ನಮ್ಮ ನಿಮ್ಮೆಲ್ಲರ ಲೈಫಲ್ಲಿ ಅಷ್ಟೆಲ್ಲಾ ಪ್ರಭಾವ ಬೀರಿರೋ ಆಪ್ ಇದು. ಕಾಲಕ್ಕೆ ತಕ್ಕಂತೆ ಹೊಸಹೊಸ ಬದಲಾವಣೆಗಳನ್ನ ಮಾಡ್ಕೋತಾ ಬರ್ತಿದೆ ವಾಟ್ಸಾಪ್. ಈಗ 10 ಹೊಸ ಫೀಚರ್ಗಳ ಜೊತೆಗೆ ವಾಟ್ಸಾಪ್ ಬರ್ತಿದೆ. ಒಂದೊಂದು ಫೀಚರ್ ಚಿಂದಿಯಾಗಿವೆ.

1. ಮಾತಾಡುವಾಗ ಮಧ್ಯೆ ಕಟ್ ಆಗೋದ್ರೆ 'ಕಾಲ್ ಬ್ಯಾಕ್' ಆಪ್ಷನ್ ಬಳಸಿ ಚಕ್ ಅಂತ ಕರೆ ಮಾಡ್ಬೋದು

ಇಷ್ಟ್ ದಿನ ವಾಟ್ಸಾಪ್ ಕಾಲ್ ಮಾಡ್ಬೇಕಾದ್ರೆ ಈ ಫೀಚರ್ ಇರ್ಲಿಲ್ಲ. ಯಾರ್ ಜೊತೆಗೋ ಇಂಪಾರ್ಟೆಂಟ್ ವಿಷಯ ಮಾತಾಡ್ತಿರ್ತೀರ. ಇದ್ದಕ್ಕಿದ್ದಂತೆ ಕಾಲ್ ಕಟ್ ಆಯ್ತು ಅಂದ್ಕೋಳ್ಳಿ. ಆಗ ಕಾಲ್ ಬ್ಯಾಕ್ ಆಪ್ಷನ್ ಇದ್ದಿದ್ರೆ ಚೆನ್ನಾಗಿತ್ತಲ್ಲಾ ಅಂತ ಅಂದ್ಕೋತಿದ್ರು. ಈಗ ಕಾಲ್ ಬ್ಯಾಕ್ ಫೀಚರ್ ಬಿಟ್ಟಿದ್ದಾರೆ. ವರ್ಶನ್ 2.16.189 ರಲ್ಲಿ ಈ ಫೀಚರ್ ಇದೆ. ಇದು ಆಂಡ್ರಾಯ್ಡ್ ಸೆಟ್ಗೆ ಮಾತ್ರ ಸಿಗ್ತಿದೆ. ಗೂಗಲ್ ಪ್ಲೇಸ್ಟೋರಲ್ಲಿ ಈ ವರ್ಶನ್ ಸಿಗಲ್ಲ. ಬೀಟಾ ವರ್ಶನಲ್ಲಿ ಮಾತ್ರ ಸಿಗುತ್ತೆ. ಎಪಿಕೆ ಮಿರರ್ ವೆಬ್‍ಸೈಟಿಂದ ಡೌನ್ಲೋಡ್ ಮಾಡ್ಕೋಬೋದು. ಮಜಾ ಮಾಡಿ.

2. ಬೇರೆ ಬೇರೆ ಫಾಂಟಲ್ಲಿ ಮೆಸೇಜ್ ಕಳಿಸ್ಬೋದು

ಅದೇ ಫಾಂಟ್ಗಳನ್ನ ನೋಡಿನೋಡಿ ಬೇಜಾರಾಗಿತ್ತು. ಈಗ ಹೊಸ ಫಾಂಟಲ್ಲಿ ಟೈಪ್ ಮಾಡ್ಬೋದು. ಆದರೆ ಇಲ್ಲಿ ಸ್ವಲ್ಪ ಕಿರಿಕಿರಿ ಇದೆ. ಹೊಸ ಫಾಂಟ್ ಬೇಕಾದ್ರೆ ಮೂರ್ ಸಲ (`) ಈ ಸಿಂಬಲನ್ನ ಒತ್ ಬೇಕು. ಎಲ್ಲಿಂದ ಎಲ್ಲಿತನಕ ಫಾಂಟ್ ಬದಲಾಯಿಸ್ಬೇಕೋ ಅಂದ್ಕೊಂಡಿದಿರೋ ಅಲ್ಲಿತನಕ ಒತ್ ಬೇಕು.

3. ಸೆಕ್ಯೂರಿಟಿ ಹೆಚ್ಚಾಗಿದೆ - ಬೇರೆಯೋರ ವಾಟ್ಸಾಪ್ ವ್ಯವಹಾರಾನ ಕದ್ದು ನೋಡೋದು/ಕೇಳೋದು ಇನ್ಮುಂದೆ ಕಷ್ಟ

ಈ ಫೀಚರ್ ಇರೋದ್ರಿಂದ (ಎಂಡ್-ಟು-ಎಂಡ್ ಎನ್‍ಕ್ರಿಷ್ಷನ್) ಮೆಸೇಜ್ ಕಳ್ಸೋರು ಮತ್ತೆ ಪಡೆಯೋರ ನಡುವೆ ಏನ್ ನಡೀತಿದೆ ಅನ್ನೋದನ್ನ ಮೂರನೇ ವ್ಯಕ್ತಿ ನೋಡೋಕಾಗಲ್ಲ. ಅಷ್ಟೇ ಅಲ್ಲ ವಾಟ್ಸಾಪ್ ಕಾಲ್‍ಗಳನ್ನೂ ಕೇಳೋಕಾಗಲ್ಲ. ವಾಟ್ಸಾಪಲ್ಲಿ ಕಾಲ್ ಮಾಡಿದ್ರೆ ಬೇರೆಯವರು ಅದನ್ನ ಕದ್ದು ಕೇಳಿಸ್ಕೋತಾರೆ ಅನ್ನೋ ಭಯ ಈಗಿಲ್ಲ. ಅಷ್ಟೊಂದು ಸೆಕ್ಯೂರಾಗಿದೆ ವಾಟ್ಸಾಪ್.

4. ಹಾಡುಗಳನ್ನ ಚಕ್ ಅಂತ ಶೇರ್ ಮಾಡ್ಕೊಳ್ಳೋಕ್ಕೆ ಅನುಕೂಲ ಆಗ್ಲಿ ಅಂತ 'ಮ್ಯೂಸಿಕ್ ಶೇರಿಂಗ್' ಬಂದಿದೆ

ಒಬ್ಬರ ಮೊಬೈಲಲ್ಲಿರೋ ಮ್ಯೂಸಿಕನ್ನು ಇನ್ನೊಬ್ಬರೊಂದಿಗೆ ಶೇರ್ ಮಾಡ್ಕೊಳ್ಳೋ ಫೀಚರನ್ನ ವಾಟ್ಸಾಪ್ ತರ್ತಿದೆ.  ಆದ್ರೆ ಇದನ್ನ ಆಂಡ್ರಾಯ್ಡ್ ಸೆಟ್ಗಳಿಗೆ ಬಿಡ್ತಿಲ್ಲ. ಕೇವಲ ಆಪಲ್ನ ಐಒಎಸ್ ಸೆಟ್ಗಳಿಗೆ ಮಾತ್ರ ಈ ಫೀಚರ್ ಸಿಗಲಿದೆ.

5. 'ಮೆನ್ಷನ್ಸ್" ಅನ್ನೋ ಫೀಚರ್ರು ಹೆಸರುಗಳನ್ನ ಬೇರೆ ಬೇರೆ ಬಣ್ಣದಲ್ಲಿ ತೋರಿಸುತ್ತೆ

ವಾಟ್ಸಾಪಲ್ಲಿ ಬರ್ತಿರೋ ಹೊಸ ಫೀಚರ್. ಇದು ಫೇಸ್ಬುಕಲ್ಲಿರೋ ಮೆನ್ಷನ್ ತರಾನೇ ವರ್ಕ್ ಮಾಡತ್ತೆ.  ಹೆಸರುಗಳನ್ನ ಬೇರೆಬೇರೆ ಕಲರ್ಸಲ್ಲಿ ತೋರಿಸುತ್ತೆ. ಒಂದ್ ಗ್ರೂಪಿಗೆ ಹೊಸಬರು ಜಾಯ್ನ್ ಆಗ್ಬೇಕಾದ್ರೆ ಕೇವಲ ಲಿಂಕ್ ಕಳ್ಸಿ ಅವ್ರನ್ನ ಸೇರಿಸ್ಕೊಳ್ಳೋಕೆ ಗ್ರೂಪ್ ಇನ್‍ವೈಟ್ಸ್ ಫೀಚರ್ ಬಳಸ್ಬೋದು.

6. ಇನ್ಮೇಲೆ ಅನಿಮೇಟೆಡ್ GIF ಫೈಲ್ಗಳನ್ನೂ ಕಳಿಸ್ಬೋದು

ಐಒಎಸ್ ಆಪ್ಗೆ ಇಷ್ಟ್ರಲ್ಲೇ ಅನಿಮೇಟೆಡ್ GIF ಸಪೋರ್ಟ್ ಮಾಡೋ ಫೀಚರ್ ಬಿಡ್ತಿದ್ದಾರೆ. ಐಒಎಸ್ ಬೀಟಾ ವರ್ಶನ್ 2.16.7.1 ರಲ್ಲಿ ಈ ಫೀಚರ್ ಇರುತ್ತೆ ಅಂತಿದ್ದಾರೆ. ಮೆಸೆಂಜರುಗಳಾದ WeChat, Line ಆಪ್ಗಳಲ್ಲಿ ಈ ಫೀಚರ್ ಈಗಾಗ್ಲೆ ಇದೆ. ಅದೇ ತರಾನೆ ಇದು.

7. ಇಮೋಜಿಗಳು ದೊಡ್ಡಾಗಿ ಕಾಣೋಹಾಗೆ ಮಾಡಿದಾರೆ

ಚಿಕ್ ಚಿಕ್ಕದಾದ ಇಮೋಜಿಗಳ್ನ ನೋಡಿನೋಡಿ ಬೇಜಾರಾಗಿದೆಯಾ. ಸ್ವಲ್ಪ ದಿನ ತಡ್ಕೊಳ್ಳಿ ದೊಡ್ ದೊಡ್ಡ ಇಮೋಜಿಗಳಿರೋ ಫೀಚರ್ ಬರ್ತಿದೆ. ಆಂಡ್ರಾಯ್ಡ್ ಸೆಟ್ಗಳಿಗೆ ಸಿಗೋದು ಡೌಟು. ಏನಿದ್ರೂ ಐಒಎಸ್ 10 ಸೆಟ್ಗಳಿಗೆ ಮಾತ್ರ ಅಂತಿದ್ದಾರೆ.

8. ಮತ್ತೆ ಬಿಡ್ತಿದ್ದಾರೆ ವಿಡಿಯೋ ಕಾಲಿಂಗ್ ಫೀಚರ್

ಮೇ ತಿಂಗ್ಳಲ್ಲೇ ಆಂಡ್ರಾಯ್ಡ್ ಸೆಟ್ಗಳಿಗೆ ಈ ಫೀಚರ್ ಬಿಡಲಾಗಿತ್ತು. ಆದ್ರೆ ಅಪ್‍ಡೇಟ್ಗಳಲ್ಲಿ ಈ ಫೀಚರ್ ಮಿಸ್ ಆಗಿತ್ತು. ಮತ್ತೆ ಈ ಫೀಚರ್ ಬಿಡ್ತಿದ್ದಾರಂತೆ. ಗೂಗಲ್ ಪ್ಲೇನಲ್ಲಿ ಬೀಟಾ ಟೆಸ್ಟಿಂಗ್ ವರ್ಶನ್ (v2.16.80) ಬಿಟ್ಟಾಗ ಈ ಫೀಚರ್ ಇತ್ತು. ಮುಂದಿನ ದಿನಗಳಲ್ಲಿ ಇದು ಇರುತ್ತೆ ಅಂತಿದ್ದಾರಪ್ಪ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಗ್ಯಾಸ್ ಸಿಲಿಂಡರ್ ಬಗ್ಗೆ ಈ ಒಂದು ಮುಖ್ಯವಾದ ವಿಷಯ ಎಲ್ಲರಿಗೂ ತುರ್ತಾಗಿ ಗೊತ್ತಾಗಬೇಕು

ಇಷ್ಟು ದಿನ ಯಾರೂ ಹೇಳೇ ಇಲ್ಲವಲ್ಲ, ಹೆಂಗೆ?

LPG ಸಿಲಿಂಡರ್ ಇಲ್ಲದೆ ಮನೇಲಿ ಅಡುಗೇನೇ ಇಲ್ಲ ಅನ್ನೋ ಪರಿಸ್ಥಿತಿ ಇದೆ.

ಆದರೆ ಈ‌ ಸಿಲಿಂಡರ್ಗಳು ಸ್ವಲ್ಪ ಡೇಂಜರ್ರೇ. ಏನಾದರೂ ತೊಂದರೆ ಆದರೆ ಸಿಲಿಂಡರ್ಗೆ ಬೆಂಕಿ ಹತ್ತಿ, ಅದು ಸಿಡಿದು ಅನಾಹುತ ಆಗೋ ಸಾಧ್ಯತೆ ಇರುತ್ತೆ.

ಆದರೆ ಈ ಸಿಲಿಂಡರ್ಗಳಿಗೂ ಒಂದು expiry date ಇರುತ್ತೆ ಅಂತ ನಿಮಗೆ ಗೊತ್ತಾ?

ಸಿಲಿಂಡರ್ ಒಳಗಿರೋ ಗ್ಯಾಸ್ ಬಗ್ಗೆ ಮಾತಾಡ್ತಿಲ್ಲ, ಬರೀ ಖಾಲಿ ಸಿಲಿಂಡರ್ ಬಗ್ಗೆ ಮಾತಾಡ್ತಿರೋದು. ಅದಕ್ಕೆ expiry date ಇರುತ್ತೆ ಅಂತ ನಿಮಗೆ ಗೊತ್ತಾ? Expiry date ಆಗೋಗಿರೋ ಸಿಲಿಂದರ್ ಉಪಯೋಗಿಸಿದರೆ ಏನಾದರೂ‌ ಅನಾಹುತ ಆಗೋ ಸಾಧ್ಯತೆ ಜಾಸ್ತಿ.

ಈ ಸಿಲಿಂಡರ್ಗಳು ಮಾರುಕಟ್ಟೇಲಿ ಸುಲಭವಾಗಿ ಸಿಗುತ್ತವೆ. ಖಾಲಿ ಆದರೆ ಅದನ್ನ ತುಂಬಿಸೋದು ವಾಡಿಕೆ. ಆದರೆ expiry date ಆಗಿದ್ದರೆ ಅದನ್ನ ತುಂಬಿಸಬಾರದು. ಆಗ ಅದರಿಂದ ಗ್ಯಾಸ್ ಸೋರಿಕೆ ಆಗಿ ಸಿಡಿಯೋ ಸಾಧ್ಯತೆ ಇರುತ್ತೆ. ಆದ್ದರಿಂದ ಡೇಟ್ ಆಗೋಗಿರೋ ಸಿಲಿಂಡರ್ಗಳ್ನ ಉಪಯೋಗಿಸಬಾರದು.

ಗ್ಯಾಸ್ ಅಂಗಡಿಯೋರು ಒಂದರ ಮೇಲೊಂದು ಸಿಲಿಂಡರ್ ಪೇರಿಸೋದು, ಅದನ್ನ ಎಸೆದಾಡೋದು, ಎಲ್ಲಾ ಮಾಡ್ತಾರೆ ನೋಡಿದೀರಿ ತಾನೇ?

ಮೂಲ

ಇದರಿಂದ ಸಿಲಿಂಡರ್ಗೆ ಏಟು ಬೀಳೋ ಸಾಧ್ಯತೆ ಇರುತ್ತೆ. ತುಂಬಾ ಉಜ್ಜಾಡಿ ಉಜ್ಜಾಡಿ ಮಾಡಿದಾಗ ಅದರಿಂದ ಗ್ಯಾಸ್ ಸೋರಿಕೆ ಆಗೋ‌ಸಾಧ್ಯತೆ ಇರುತ್ತೆ.

ಆದರೆ ಡೇಟ್ ಆಗಿದ್ಯೋ ಇಲ್ವೋ ಅಂತ ಕಂಡ್ ಹಿಡಿಯೋದು ಹೇಗೆ ಅಂತ ಸಾಮಾನ್ಯವಾಗಿ ಜನರಿಗೆ ಗೊತ್ತಿರಲ್ಲ. ಹೇಳ್ತೀವಿ ಕೇಳಿ.

ಸಿಲಿಂಡರ್ ಹಿಡಿ ಕೆಳಗೆ ಮೂರು ಸೈಡ್ ಪಟ್ಟಿ ಇರುತ್ತೆ. ಅದರಲ್ಲಿ ಒಳಕ್ಕೆ expiry dateನ ಒಂದು ಕೋಡ್ ಮಾಡಿ ಬರೆದಿರ್ತಾರೆ. ಆ ಕೋಡು A, B, C, ಅಥವಾ D ಇಂದ ಶುರು ಆಗಿ ಅದಾದಮೇಲೆ ಎರಡಂಕಿ ಸಂಖ್ಯೆ ಇರುತ್ತೆ. ಉದಾಹರಣೆಗೆ B13.

ಮೂಲ

ಇದರಿಂದ ಡೇಟ್ ಕಂಡ್ ಹಿಡಿಯೋದು ಸುಲಭ.

A, B, C, ಮತ್ತೆ D ಅನ್ನೋ ಇಂಗ್ಲಿಷ್ ಅಕ್ಷರಗಳು ತಿಂಗಳನ್ನ ಸೂಚಿಸುತ್ತವೆ. ಸಂಖ್ಯೆ ವರ್ಷ ಸೂಚಿಸುತ್ತೆ.

ಯಾವ ಅಕ್ಷರಕ್ಕೆ ಯಾವ ತಿಂಗಳು ಅಂತ ತಿಳಿದಿರಲಿ:

A - ಮಾರ್ಚ್

B - ಜೂನ್

C - ಸೆಪ್ಟೆಂಬರ್

D - ಡಿಸೆಂಬರ್

ಈಗ, ಉದಾಹರಣೆಗೆ ನಿಮ್ಮ ಸಿಲಿಂಡರ್ ಮೇಲೆ B-13 ಅಂತ ಬರೆದಿದ್ದರೆ ಅದರ expiry date ಜೂನ್ 2013. ಮೂರು ತಿಂಗಳ ಅಂದಾಜು ಸಾಕು ಅಂತ ಎಲ್ಲಾ ತಿಂಗಳಿಗೂ ಒಂದೊಂದು ಅಕ್ಷರ ಕೊಟ್ಟಿರಲ್ಲ.

ಕೆಲವರು ಈ expiry date ಕೋಡನ್ನ ಅಳಿಸಿ ತಮಗೆ ಬೇಕಾದ್ದು ಬರೆದುಕೊಳ್ತಾರೆ ಅಂತಾನೂ ವರದಿಗಳು ಬಂದಿವೆ. ಆದ್ದರಿಂದ ಮುಂದಿನ ಸಲ ಸಿಲಿಂಡರ್ ಬಂದಾಗ ಅದರ ಕೋಡ್ ಏನು ಅಂತ ನೋಡಿ.

ಮೂಲ

ಕೋಡ್ ಇರಬೇಕಾದ ಜಾಗದಲ್ಲಿ ಏನಾದರೂ ಗೀಚಿರೋದು, ಪೇಂಟ್ ಹಚ್ಚಿರೋದು, ತಿದ್ದಿರೋದು ಎಲ್ಲಾ ಆಗಿದ್ದರೆ ಮುಲಾಜಿಲ್ಲದೆ ವಾಪಸ್ ಕೊಟ್ಟುಬಿಡಿ. ಕಷ್ಟಕ್ಕೆ ಸಿಕಾಕೋಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: